For Quick Alerts
ALLOW NOTIFICATIONS  
For Daily Alerts

ಫಳಫಳ ಹೊಳೆಯುವ ಕೊರಿಯನ್ನರ ತ್ವಚೆ ನಿಮ್ಮದಾಗಬೇಕೆ ಈ ಟಿಪ್ಸ್ ಅನುಸರಿಸಿ

|

ಎಲ್ಲರೂ ಸೌಂದರ್ಯದ ಗೀಳನ್ನು ಹೊಂದಿದ್ದೇವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ, ಅದರಲ್ಲೂ ಮಹಿಳೆಯರು. ಆಕರ್ಷಕ ಚರ್ಮವನ್ನು ಹೊಂದಲು ತರಾವರಿ ಮನೆಮದ್ದುಗಳು, ಚಿಕಿತ್ಸೆಗಳ ಮೊರೆ ಹೋಗುತ್ತೇವೆ. ಭಾರತೀಯರು ಸಹ ತಮ್ಮ ಸೌಂದರ್ಯ ಕಾಪಾಡಲು ಹಲವು ರೀತಿಯಲ್ಲಿ ಕಾಳಜಿವಹಿಸುತ್ತಾರೆ, ಆದರೆ ಈ ಕಾಳಜಿ ದೇಶದಿಂದ ದೇಶಕ್ಕೆ ಭಿನ್ನ ವಿರುತ್ತದೆ. ಬೇರೆ ಬೇರೆ ದೇಶಗಳಲ್ಲಿ ತಮ್ಮದೇ ಆದ ರೀತಿ ಸೌಂದರ್ಯ ಕಾಪಾಡಲು ಸರಳೋಪಾಯಗಳನ್ನು ಅನುಸರಿಸುತ್ತಾರೆ. ಹಾಗೆಯೇ, ಕೊರಿಯನ್ ದೇಶದವರ ಸೌಂದರ್ಯ, ಅವರ ಚರ್ಮದ ಕಾಂತಿ ನಿಜಕ್ಕೂ ಎಂಥವರನ್ನು ಆಕರ್ಷಿಸುತ್ತದೆ.

ಏಕೆಂದರೆ, ಕೊರಿಯನ್ ಚರ್ಮದ ಆರೈಕೆ ಅಷ್ಟು ಸುಲಭವಲ್ಲ. ನಿಜ ಹೇಳಬೇಕೆಂದರೆ ಇವರ ದಿನಚರಿಯೇ ಇವರ ಚರ್ಮದ ಆರೋಗ್ಯದ ಗುಟ್ಟು. ಇದು ಹಲವು ಹಂತಗಳನ್ನು ಒಳಗೊಂಡಿದ್ದು, ಇವರಂಥಾ ಹೊಳಪಿನ ಚರ್ಮಕ್ಕಾಗಿ ಸಮಯ, ಸಮರ್ಪಣೆ ಮತ್ತು ತಾಳ್ಮೆ ಅತ್ಯಗತ್ಯ. ಇಲ್ಲಿ ಹಲವಾರು ಉತ್ಪನ್ನಗಳ ಬಳಕೆ ಇದೆ, ಆದರೆ ಪ್ರತಿಯೊಂದೂ ಉತ್ಪನ್ನವೂ ಚರ್ಮದ ಕಾಳಜಿಗೆ ಒಂದು ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತದೆ. ಪ್ರತಿಯೊಂದು ಉತ್ಪನ್ನವು ತನ್ನದೇ ಅದ ನಿರ್ದಿಷ್ಟ ಸ್ಥಿರತೆ, ಪ್ರಯೋಜನಗಳು ಮತ್ತು ಉದ್ದೇಶವನ್ನು ಹೊಂದಿದೆ. ಇವುಗಳ ನಡುವೆ ಅವುಗಳನ್ನು ಸರಿಯಾಗಿ ತ್ವಚೆಗೆ ಹಚ್ಚುವುದು ಸಹ ಕಾಳಜಿಯ ಪರಿಣಾಮಕಾರಿತ್ವದ ಕೀಲಿಯಾಗಿದೆ.

Korean Skin Care

ಕೆಳಗೆ ವಿವರಿಸಲಾದ ಹಂತಗಳಲ್ಲಿ ನೀವು ಸಹ ನಿಮ್ಮ ತ್ವಚೆಯನ್ನು ಆರೈಕೆ ಮಾಡಿದರೆ ಖಂಡಿತವಾಗಿಯೂ ಕೆಲವೇ ತಿಂಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ನೀವು ಪಡೆಯುತ್ತೀರಿ. ಕೆಲವು ದಿನಗಳ ಬಳಿಕ ಮೇಕಪ್ ಇಲ್ಲದೆಯೇ ನಿಮ್ಮ ಚರ್ಮವು ಅದ್ಭುತವಾಗಿ ಕಾಣುವಂತೆ ಮಾಡುತ್ತದೆ.

ಮುಂದೆ ಲೇಖನದಲ್ಲಿ ನಾವು ನಿಮಗೆ ಕೊರಿಯನ್ ತ್ವಚೆಯನ್ನು ಹೊಂದುವುದು ಹೇಗೆ?, ಇದನ್ನು ಹೊಂದಲು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು?, ಆಹಾರ ಕ್ರಮ ಹೇಗಿರಬೇಕು, ಬೆಳಗಿನಿಂದ ರಾತ್ರಿಯವರೆಗಿನ ಹಲವು ಹಂತಗಳ ಕೊರಿಯನ್ ತ್ವಚೆಯ ಆರೈಕೆ ದಿನಚರಿಯನ್ನು ನೋಡೋಣ.

1. ಮುಖವನ್ನು ನೀರಿನಿಂದ ತೊಳೆಯಿರಿ

1. ಮುಖವನ್ನು ನೀರಿನಿಂದ ತೊಳೆಯಿರಿ

ನೀವು ಬೆಳಗ್ಗೆ ಎಚ್ಚರವಾದ ಕೂಡಲೇ ಮುಖವನ್ನು ನೀರಿನಿಂದ ತೊಳೆಯಿರಿ. ಈ ವೇಳೆ ಯಾವುದೇ ಕ್ಲೆನ್ಸರ್ ಬಳಸಬೇಡಿ. ನೀರು ನಿಮ್ಮ ಚರ್ಮವನ್ನು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ ಹಾಗೂ ರಾತ್ರಿಯ ಸಮಯದಲ್ಲಿ ಚರ್ಮದ ಮೇಲೆ ನೆಲೆಗೊಂಡಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಇದು ನಿಮ್ಮ ಚರ್ಮವನ್ನು ತಾಜಾ ಆಗಿಡಲು ಸಹಕರಿಸುತ್ತದೆ.

2. ಟೋನರ್ ಅನ್ನು ಅನ್ವಯಿಸಿ

2. ಟೋನರ್ ಅನ್ನು ಅನ್ವಯಿಸಿ

ನಿಮ್ಮ ಮುಖವನ್ನು ನೀರಿನಿಂದ ತೊಳೆದ ನಂತರ, ಟೋನರನ್ನು ಹಚ್ಚಿಕೊಳ್ಳಿ. ಹತ್ತಿಯಿಂದ ಟೋನರ ವರ್ತುಲಾಕಾರದಲ್ಲಿ ನಯವಾಗಿ ಹಚ್ಚಿ. ಟೋನರ್ ನಿಮ್ಮ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ನಂತರ ನೀವು ತ್ವಚೆಗೆ ಬಳಸುವ ಯಾವುದೇ ಇತರ ಪ್ರಾಡಕ್ಟ್‌ಗಳನ್ನು ಸಹ ಸಮವಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ.

3. ಎಸೆನ್ಸ್ ಹಚ್ಚಿರಿ

3. ಎಸೆನ್ಸ್ ಹಚ್ಚಿರಿ

ಸೀರಮ್, ಟೋನರ್ ಮತ್ತು ಮಾಯಿಶ್ಚರೈಸರ್ ಮಿಶ್ರಣವಾಗಿರುವ ಎಸೆನ್ಸ್ ಅನ್ನು ತ್ವಚೆಗೆ ನಿತ್ಯ ಹಚ್ಚುವುದು ಕೊರಿಯನ್ ತ್ವಚೆ ಪಡೆಯಲು ಬಹಳ ಮುಖ್ಯವಾಗಿದೆ. ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮದ ಕೋಶಗಳನ್ನು ಪೋಷಿಸುತ್ತದೆ. ಅಲ್ಲದೇ, ಮುಂದಿನ ಹಂತದ ಮೇಕಪ್‌ಗೆ ಇದು ನಿಮ್ಮ ತ್ವಚೆಯನ್ನು ಸಿದ್ಧಪಡಿಸುತ್ತದೆ. ಆದರಿಂದ, ಈ ಮಿಶ್ರಣದ ಎಸೆನ್ಸ್ ಅನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ವೃತ್ತಾಕಾರದಲ್ಲಿ ಹಚ್ಚಿರಿ. ಆದರೆ, ನಿಮ್ಮ ಬೆರಳುಗಳಿಂದ ಒತ್ತಡ ಹಾಕಬೇಡಿ.

4. ಆಂಪೌಲ್ ಬಳಸಿ

4. ಆಂಪೌಲ್ ಬಳಸಿ

ಆಂಪೌಲ್ ಸಹ ಎಸೆನ್ಸ್ ಮತ್ತು ಸೀರಮ್‌ಗೆ ಹೋಲುತ್ತವೆ. ನಿಮ್ಮ ಮುಖದ ಮೇಲೆ ಕೆಲವು ಹನಿ ಆಂಪೌಲ್ ಗಳನ್ನು ಅನ್ವಯಿಸಿ ನಂತರ ಬೆರಳುಗಳಿಂದ ನಿಧಾನವಾಗಿ ಸಂಪೂರ್ಣ ಮುಖಕ್ಕೆ ಹಚ್ಚಿರಿ.

5. ಸೀರಮ್ ಅನ್ನು ಹಚ್ಚಿ

5. ಸೀರಮ್ ಅನ್ನು ಹಚ್ಚಿ

ನಿಮ್ಮ ಚರ್ಮದ ಸಮಸ್ಯೆಗಳನ್ನು ಪರಿಹರಿಸುವ ಸೀರಮ್ ಅನ್ನು ಕೊರಿಯನ್ ತ್ವಚೆಯ ಕಾಳಜಿಗೆ ಬಳಸುತ್ತಾರೆ. ತ್ವಚೆಯ ನೆರಿಗೆ ಹೆಚ್ಚುವುದು, ಚರ್ಮದ ಇತರೆ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿ. ಕಪ್ಪು ಕಲೆಗಳು, ಹೈಪರ್‌ ಪಿಗ್ಮೆಂಟೇಶನ್, ಶುಷ್ಕತೆ, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನಿ ಇದು ನಿವಾರಿಸುತ್ತದೆ. ಬಟಾಣಿ ಗಾತ್ರದ ಸೀರಮ್ ಅನ್ನು ತೆಗೆದುಕೊಂಡು ನಯವಾಗಿ ಮುಖದಾದ್ಯಂತ ಹಚ್ಚಿರಿ.

6. ಐ ಕ್ರೀಮ್ ಬಳಸಿ

6. ಐ ಕ್ರೀಮ್ ಬಳಸಿ

ನಿಮ್ಮ ಕಣ್ಣುಗಳ ಸುತ್ತಲಿನ ಪ್ರದೇಶವು ಸೂಕ್ಷ್ಮವಾದದ್ದು. ಇದನ್ನು ಸಾಮಾನ್ಯ ಕ್ರೀಮ್‌ಗಳು ಮತ್ತು ಸೀರಮ್‌ಗಳು ಬಳಕೆಗೆ ಬರುವುದಿಲ್ಲ. ದಿನವಿಡೀ ನಿಮ್ಮ ಕಣ್ಣನ್ನು ರಕ್ಷಿಸಲು ಅದಕ್ಕೆ ಅಗತ್ಯ ಕ್ರೀಮ್‌ ಅವಶ್ಯಕ. ಇದಕ್ಕಾಗಿ ನಿತ್ಯ ಕಣ್ಣಿನ ಕ್ರೀಮ್‌ ಅನ್ನು ಕಣ್ಣುಗಳ ಸುತ್ತಲು ಹಚ್ಚಿರಿ.

7. ಮಾಯಿಶ್ಚರೈಸರ್ ಅನ್ನು ಅನ್ವಯಿಸಿ

7. ಮಾಯಿಶ್ಚರೈಸರ್ ಅನ್ನು ಅನ್ವಯಿಸಿ

ಕಣ್ಣಿನ ಕ್ರೀಮ್‌ ಹಚ್ಚಿದ ನಂತರ ಮುಖದ ಮೇಲೆ ಮಾಯಿಶ್ಚರೈಸರ್ ಅನ್ನು ಒಂದು ಪದರ ಹಚ್ಚಿರಿ. ಮಾಯಿಶ್ಚರೈಸರ್ ದಿನವಿಡೀ ನಿಮ್ಮ ಚರ್ಮದ ಶುಷ್ಕತೆಯನ್ನು ಕಾಪಾಡುತ್ತದೆ. ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ನೀರಿನ ಅಂಶ ಹೆಚ್ಚಿರುವ ಮಾಯಿಶ್ಚರೈಸರ್ ಅನ್ನು ಬಳಸಿ ಮತ್ತು ನೀವು ಒಣ ಚರ್ಮವನ್ನು ಹೊಂದಿದ್ದರೆ ಕ್ರೀಮ್ ಆಧಾರಿತ ಮಾಯಿಶ್ಚರೈಸರ್ ಅನ್ನು ಬಳಸಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಮಾಯಿಶ್ಚರೈಸರ್ ಅನ್ನು ನಿಧಾನವಾಗಿ ಮಸಾಜ್ ಮಾಡಿ.

8. ಸನ್‌ಸ್ಕ್ರೀನ್ ಹಚ್ಚಿರಿ

8. ಸನ್‌ಸ್ಕ್ರೀನ್ ಹಚ್ಚಿರಿ

ಯುವಿ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸುವುದು ಅತ್ಯಗತ್ಯ. ಈ ಎಲ್ಲಾ ಹಂತಗಳನ್ನು ನೀವು ಪೂರ್ಣಗೊಳಿಸಿದ ನಂತರ ಸನ್‌ಸ್ಕ್ರೀನ್ ಲೋಷನ್ ಅನ್ನು ಹಚ್ಚುವುದನ್ನು ಮರೆಯಬೇಡಿ. ಇದು ಕಪ್ಪು ಕಲೆಗಳು, ಟ್ಯಾನಿಂಗ್, ಬಿಸಿಲು, ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಕನಿಷ್ಠ 30 ಎಸ್‌ಪಿಎಫ್ ಹೊಂದಿರುವ ಉತ್ಪನ್ನವನ್ನು ಆಯ್ಕೆ ಮಾಡಿ.

ಸಾಮಾನ್ಯವಾಗಿ ಹೊರಗಿನಿಂದ ಮನೆಗೆ ಮರಳಿದ ನಂತರ ನಿಮ್ಮ ಚರ್ಮದ ಬಗ್ಗೆ ಕಾಳಜಿ ಮಾಡುವುದು ಅತ್ಯಗತ್ಯ. ಚರ್ಮಕ್ಕೂ ಸಹ ಉಸಿರಾಡಲು ಮತ್ತು ಎಲ್ಲಾ ಕ್ರೀಮ್‌ ಗಳಿಂದ ಮುಕ್ತಿ ಪಡೆದು ರಾತ್ರಿಯ ವೇಳೆ ಪುನಃಸ್ಥಾಪನೆ ಪ್ರಕ್ರಿಯೆಗೆ ತಯಾರಿಸಲು ಅವಕಾಶ ನೀಡಬೇಕು. ಇದಕ್ಕೆ ಕೊರಿಯನ್‌ ತ್ವಚೆಯ ಕಾಳಜಿಯಲ್ಲಿ ಯಾವ ರೀತಿ ಇದೆ ಎಂದು ಮುಂದೆ ತಿಳಿಯೋಣ:

1. ಶುದ್ಧ ಎಣ್ಣೆಯಿಂದ ಮುಖವನ್ನು ಸ್ವಚ್ಚಗೊಳಿಸಿ

1. ಶುದ್ಧ ಎಣ್ಣೆಯಿಂದ ಮುಖವನ್ನು ಸ್ವಚ್ಚಗೊಳಿಸಿ

ಹೊರಗಿನಿಂದ ಬಂದ ಕೂಡಲೇ ನಿಮ್ಮ ಮುಖದ ಮೇಲೆ ಸಂಗ್ರಹವಾಗಿರುವ ಕೊಳಕು, ಮೇದೋಗ್ರಂಥಿಗಳ ಸ್ರಾವ ಮತ್ತು ಕಲ್ಮಶಗಳನ್ನು ನೀವು ತೆಗೆಯಬೇಕು. ಶುದ್ಧೀಕರಣ ಎಣ್ಣೆಯನ್ನು ಬಳಸುವುದರಿಂದ ಕೊಳೆಯನ್ನು ಎಣ್ಣೆಯು ಬಂಧಿಸುತ್ತದೆ ಮತ್ತು ನಿಮ್ಮ ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸತ್ತದೆ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಎಣ್ಣೆಯನ್ನು ಚೆನ್ನಾಗಿ ಮಸಾಜ್ ಮಾಡಿ. ಒದ್ದೆಯಾದ ಹತ್ತಿಯಿಂದ ನಿಧಾನವಾಗಿ ಒರೆಸುವ ಮೂಲಕ ಎಣ್ಣೆಯನ್ನು ತೆಗೆಯಿರಿ. ನಿಮ್ಮ ಚರ್ಮದಿಂದ ಮೇಕಪ್ ಮತ್ತು ಕೊಳಕು ಹೊರಬರುವುದನ್ನು ನೀವೇ ನೋಡಬಹುದು.

2. ಜೆಂಟಲ್ ಫೋಮಿಂಗ್ ಕ್ಲೆನ್ಸರ್‌ನಿಂದ ಕ್ಲೀನ್‌

2. ಜೆಂಟಲ್ ಫೋಮಿಂಗ್ ಕ್ಲೆನ್ಸರ್‌ನಿಂದ ಕ್ಲೀನ್‌

ನಿಮ್ಮ ಮುಖವನ್ನು ಎಣ್ಣೆ ಶುದ್ಧೀಕರಿಸಿ ಮೇಕಪ್ ಮತ್ತು ಕೊಳೆಯನ್ನು ತೆಗೆದ ನಂತರ, ಮತ್ತೆ ತ್ವಚೆಯನ್ನು ಸ್ವಚ್ಛಗೊಳಿಸಲು ಸೌಮ್ಯವಾದ ಫೋಮಿಂಗ್ ಕ್ಲೆನ್ಸರ್ ಅನ್ನು ಬಳಸಿ. ಇದಕ್ಕಾಗಿ ಸ್ವಲ್ಪ ಕ್ಲೆನ್ಸರ್‌ಗೆ ನೀರು ಸೇರಿಸಿ ಮುಖಕ್ಕೆ ಹಚ್ಚಿ ನಂತರ ತೊಳೆಯಿರಿ.

3. ಎಫ್ಫೋಲಿಯೇಟ್

3. ಎಫ್ಫೋಲಿಯೇಟ್

ಈಗ ಹೇಳಲಿರುವ ಪ್ರಕ್ರಿಯೆಯನ್ನು ಹೆಚ್ಚೆಂದರೆ ವಾರಕ್ಕೆ ಎರಡು ಬಾರಿ ಮಾತ್ರ ಮಾಡಬಹುದು, ಹೆಚ್ಚು ಪುನರಾವರ್ತಿಸಬಾರದು. ನಿಮ್ಮ ಮುಖದಿಂದ ಸತ್ತ ಚರ್ಮದ ಕೋಶಗಳು ಮತ್ತು ಕಲ್ಮಶಗಳನ್ನು ತೆಗೆಯಲು ಎಫ್ಫೋಲಿಯೇಶನ್ ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದ ಟೋನ್ ಅನ್ನು ಸಮಗೊಳಿಸುತ್ತದೆ ಮತ್ತು ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಎಕ್ಸ್‌ಫೋಲಿಯಂಟ್ ಅಂಶವುಳ್ಳ ಸ್ಕ್ರಬ್‌ ಅನ್ನು ಬಳಸಿ ತ್ವಚೆಯನ್ನು ಸ್ವಚ್ಚಗೊಳಿಸಿಕೊಳ್ಳಿ.

4. ಟೋನರ್, ಎಸೆನ್ಸ್, ಆಂಪೌಲ್ ಮತ್ತು ಸೀರಮ್ ಹಚ್ಚಿರಿ

4. ಟೋನರ್, ಎಸೆನ್ಸ್, ಆಂಪೌಲ್ ಮತ್ತು ಸೀರಮ್ ಹಚ್ಚಿರಿ

ರಾತ್ರಿಯ ಹೊತ್ತು ನಿಮ್ಮ ಮುಖದ ಚರ್ಮದ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ಟೋನರ್ ಅನ್ನು ಹಾಗೂ ಇಡೀ ರಾತ್ರಿ ನಿಮ್ಮ ಚರ್ಮವನ್ನು ಹೈಡ್ರೀಕರಿಸುವುದಕ್ಕಾಗಿ ಎಸೆನ್ಸ್ ಅನ್ನು ಹಚ್ಚಿರಿ. ಈ ಹಂತವನ್ನು ಎಂದಿಗೂ ತಪ್ಪಿಸಬೇಡಿ. ನಂತರ ಚರ್ಮವನ್ನು ಪುನರುತ್ಪಾದಿಸಲು ಆಂಪೌಲ್ ಹಾಗೂ ನಿಮ್ಮ ತ್ವಚೆಯ ಕಾಳಜಿಗೆ ತಕ್ಕಂತೆ ಸೀರಮ್ ಅನ್ನು ಆಯ್ಕೆ ಮಾಡಿಹಚ್ಚಿಕೊಳ್ಳಿ. ಅಂತಿಮವಾಗಿ ಮಾಯ್ಚರೈಸರ್ ಹಚ್ಚಿ, ಇದು ನಿಮ್ಮ ತ್ವಚೆಯ ಶುಷ್ಕತೆ ಕಾಪಾಡಲು ಸಹಕಾರಿ.

ನಿಮ್ಮ ಚರ್ಮವನ್ನು ಕೊರಿಯನ್ ತ್ವಚೆಯಂತೆ ಆರೋಗ್ಯವಾಗಿಡಲು ಅನುಸರಿಸಬಹುದಾದ ಕೆಲವು ಸಿಂಪಲ್‌ ಸಲಹೆಗಳು:

1. ಶುಷ್ಕತೆ ಕಾಪಾಡಿ

1. ಶುಷ್ಕತೆ ಕಾಪಾಡಿ

ನಿಮ್ಮ ದೇಹ ಮತ್ತು ಚರ್ಮದ ಶುಷ್ಕತೆ ಕಾಪಾಡುವುದು ಅತೀ ಅಗತ್ಯ. ಕೆಲವು ಬಾಹ್ಯ ವಸ್ತುಗಳು ನಿಮ್ಮ ತ್ವಚೆಯ ಶುಷ್ಕತೆ ಕಾಪಾಡಿದರೆ, ಇದಕ್ಕೆ ಪೂರಕವಾಗಿ ಕೆಲವು ಆಂತರಿಕ ಜಲಸಂಚಯನವನ್ನು ಸಹ ದೇಹಕ್ಕೆ ಒದಗಿಸಬೇಕಾಗುತ್ತದೆ. ಅದು ಯಾವುದೇ ರೂಪದಲ್ಲಾಗಿರಬಹುದು. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ, ರುಚಿಯಾದ ಚಹಾವನ್ನು ಸೇವಿಸಬಹುದು ಅಥವಾ ಹಣ್ಣುಗಳ ರಸ ಇತರೆ.

2. ವಿಶ್ರಾಂತಿ

2. ವಿಶ್ರಾಂತಿ

ನಿಮಗೆ ನೀವೇ ದಣಿವು ಮಾಡಿಕೊಳ್ಳಬೇಡಿ, ಬದಲಾಗಿ ನಿಮಗೆ ನೀವೇ ಕೊಂಚ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಳ್ಳಿ. ನೀವು ಒತ್ತಡಕ್ಕೊಳಗಾದರೆ ಅದು ನಿಮ್ಮ ಚರ್ಮದ ಮೇಲೆ ಪ್ರತಿಫಲಿಸುತ್ತದೆ. ವಿಶ್ರಾಂತಿ ಪಡೆಯಲು ಅತ್ಯುತ್ತಮ ಮಾರ್ಗವೆಂದರೆ ನಿದ್ದೆ. ನೀವು ನಿದ್ದೆ ಮಾಡುವಾಗ ನಿಮ್ಮ ದೇಹವು ಪುನಃಸ್ಥಾಪನೆಯಾಗುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ (ದೈಹಿಕ ಮತ್ತು ಮಾನಸಿಕ ಎರಡೂ) ಮತ್ತು ಇದು ನಿಮ್ಮ ಚರ್ಮಕ್ಕೂ ಪ್ರಯೋಜನ.

3. ಚೆನ್ನಾಗಿ ತಿನ್ನಿರಿ

3. ಚೆನ್ನಾಗಿ ತಿನ್ನಿರಿ

ತಾಜಾ ತರಕಾರಿಗಳು, ಧಾನ್ಯಗಳು, ಮಾಂಸ, ಡೈರಿ ಉತ್ಪನ್ನ ಮತ್ತು ಮೀನುಗಳನ್ನು ಸಾಧ್ಯವಾದಷ್ಟು ಸೇವಿಸಿ. ಜೀವಸತ್ವಗಳು ಮತ್ತು ಪ್ರೋಬಯಾಟಿಕ್‌ಗಳು ಹೆಚ್ಚು ಇರುವ ಆಹಾರಕ್ಕೆ ಆದ್ಯತೆ ನೀಡಿ. ಕಾರಣ, ಇದು ಚರ್ಮ ಮತ್ತು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಮೀನು ಮತ್ತು ಮಾಂಸ ಕಾಲಜನ್ ಅನ್ನು ಹೊಂದಿದ್ದು, ಇದು ನಿಮ್ಮ ಚರ್ಮವನ್ನು ತಾರುಣ್ಯ ಮತ್ತು ಆರೋಗ್ಯಕರವಾಗಿರಿಸಲು ಸಹಕಾರಿ. ಊಟದ ನಂತರ ಸಿಹಿ ತಿನ್ನಲು ಬಯಸಿದರೆ, ಸಕ್ಕರೆ ತಿಂಡಿಯ ಬದಲಾಗಿ ಹಣ್ಣುಗಳನ್ನು ಸೇವಿಸಿ.

4. ಚರ್ಮವನ್ನು ಎಫ್ಫೋಲಿಯೇಟ್ ಮಾಡಿ

4. ಚರ್ಮವನ್ನು ಎಫ್ಫೋಲಿಯೇಟ್ ಮಾಡಿ

ಇದು ನಿಮ್ಮ ಮುಖದ ಚರ್ಮಕ್ಕೆ ಮಾತ್ರವಲ್ಲದೆ ನಿಮ್ಮ ಇಡೀ ದೇಹಕ್ಕೂ ಅನ್ವಯಿಸುತ್ತದೆ. ನಿಮ್ಮ ದೇಹದಲ್ಲಿರುವ ಸತ್ತ ಚರ್ಮದ ಕೋಶಗಳಿಂದ ವಾರಕ್ಕೆ ಒಮ್ಮೆಯಾದರೂ ಎಫ್ಫೋಲಿಯೇಟ್ ಮಾಡುವ ಮೂಲಕ ಹೊರಹಾಕಲು ಪ್ರಯತ್ನಿಸಿ.

5. ಸೂರ್ಯನಿಂದ ರಕ್ಷಣೆ ಎಂದಿಗೂ ಮರೆಯಬೇಡಿ

5. ಸೂರ್ಯನಿಂದ ರಕ್ಷಣೆ ಎಂದಿಗೂ ಮರೆಯಬೇಡಿ

ಹೊರಗೆ ಮೋಡ ಕವಿದಿದ್ದರೂ ಮಳೆಯಾಗಿದ್ದರೂ ಇದನ್ನು ಮಾತ್ರ ಎಂದಿಗೂ ಮರೆಯಬಾರದು. ಯುವಿ ಕಿರಣಗಳು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತವೆ ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆದ್ದರಿಂದ, ಸನ್‌ಸ್ಕ್ರೀನ್ ಬಳಕೆ ಎಂದಿಗೂ ತಪ್ಪಿಸಬೇಡಿ.

ಸೂಚನೆ: ಮೇಲೆ ಹೇಳಲಾಗಿರುವ ವಿಧಾನವನ್ನು ತಜ್ಞ ವೈದ್ಯರು ಸೂಚಿಸಿದ್ದರೂ, ನಿಮ್ಮ ತ್ವಚೆಗೆ ಹೊಂದುವ ಉತ್ಪನ್ನಗಳನ್ನು ನೀವು ವೈದ್ಯರನ್ನು ಭೇಟಿ ಮಾಡಿಯೇ ಪಡೆಯುವುದು ಸೂಚ್ಯ. ಅಲ್ಲದೇ, ಈ ಪ್ರಕ್ರಿಯೆ ನಿಮ್ಮ ತ್ವಚೆಗೆ ಒಪ್ಪುತ್ತದೆಯೇ, ಇದನ್ನು ಪಾಲಿಸಬಹುದೇ ಎಂಬುದರ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.

English summary

Korean Skin Care Routine For Morning And Night

We have all seen that Korean women seem to follow a very strict skincare regime, which shows up on the quality of their skin. Their skin seems to age a lot slower than the rest of us. Read more
Story first published: Friday, January 17, 2020, 10:25 [IST]
X
Desktop Bottom Promotion