For Quick Alerts
ALLOW NOTIFICATIONS  
For Daily Alerts

ಮುಖದ ಹೊಳಪಿಗಾಗಿ ಏನು ಮಾಡುತ್ತಿದ್ದೇನೆ ಎಂಬ ಸೀಕ್ರೆಟ್ ಹೇಳಿದ ಕರೀನಾ

|

ಕೊರೊನಾ ಕಾಟ ಶುರುವಾಗಿದ್ದೇ ಜನರ ಜೀವನಶೈಲಿಯೇ ಬದಲಾಗಿದೆ. ಹೊರಗಡೆ ರೆಸ್ಟೋರೆಂಟ್‌ಗಳ ಊಟ ಬಯಸುತ್ತಿದ್ದವರು ಮನೆಯಲ್ಲಿಯೇ ರೆಸ್ಟೋರೆಂಟ್‌ ರುಚಿಯ ಊಟ ತಯಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಸೌಂದರ್ಯವರ್ಧನೆಗಾಗಿ ಬ್ಯೂಟಿ ಪಾರ್ಲರ್‌ಗೆ ಸುರಿಯುತ್ತಿದ್ದವರು ಹೋಮ್‌ಮೇಡ್‌ ಫೇಶಿಯಲ್‌, ಫೇಸ್‌ ಸ್ಕ್ರಬ್ ಮೊರೆ ಹೋಗಿದ್ದಾರೆ.

ಮುಖದ ಹೊಳಪಿಗಾಗಿ ಏನು ಮಾಡುತ್ತಿದ್ದೇನೆ ಎಂಬ ಸೀಕ್ರೆಟ್ ಹೇಳಿದ ಕರೀನಾ
Kareena Kapoor Khan’s Homemade Face Mask Recipe

ಹೊರಗಡೆ ಹೋದರೆ ಎಲ್ಲಿ ಕೊರೊನಾ ಬರುತ್ತೋ ಎಂದು ಯಾರೂ ರಿಸ್ಕ್‌ ತೆಗೆದುಕೊಳ್ಳಲು ಬಯಸುತ್ತಿಲ್ಲ. ಆದ್ದರಿಂದ ಮನೆಮದ್ದುಗಳ ಪ್ರಯೋಗ ಹೆಚ್ಚಾಗಿದೆ. ಸೌಂದರ್ಯ ವೃದ್ಧಿಗೆ ಮನೆಯಲ್ಲಿಯೇ ಕೆಲವೊಂದು ರೆಸಿಪಿಗಳನ್ನು ಮಾಡಿ ಹಚ್ಚುತ್ತಿದ್ದಾರೆ.

ಇನ್ನು ಸೆಲೆಬ್ರಿಟಿಗಳು ಕೂಡ ಸೌಂದರ್ಯವೃದ್ಧಿಗೆ ಕೆಲವೊಂದು ರೆಸಿಪಿಗಳನ್ನು ಶೇರ್‌ ಮಾಡುತ್ತಿದ್ದಾರೆ. ಇವೆಲ್ಲಾ ಈ ಸಮಯದಲ್ಲಿ ಸೌಂದರ್ಯ ರಕ್ಷಣೆಗೆ ತುಂಬಾ ಸಹಕಾರಿಯಾಗಿವೆ. ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಕೆಲವು ದಿನಗಳ ದಿನ ತಮ್ಮ ಕೂದಲಿನ ರಕ್ಷಣೆಗಾಗಿ ಅವರ ಅಮ್ಮ ಹೇಳಿ ಕೊಟ್ಟ ಬ್ಯೂಟಿ ಸೀಕ್ರೆಟ್‌ ಹಂಚಿಕೊಂಡಿದ್ದರು. ಇದೀಗ ಕರೀನಾ ತಾವು ಮುಖದ ಹೊಳಪಿಗಾಗಿ ಏನು ಮಾಡುತ್ತಿದ್ದೇನೆ ಎಂಬ ಸೀಕ್ರೆಟ್‌ ಹಂಚಿಕೊಂಡಿದ್ದಾರೆ.

ಅತ್ಯುತ್ತಮವಾದ ಫೇಸ್‌ ಪ್ಯಾಕ್‌ ಎಂದ ಕರೀನಾ

ಅತ್ಯುತ್ತಮವಾದ ಫೇಸ್‌ ಪ್ಯಾಕ್‌ ಎಂದ ಕರೀನಾ

ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯೂಟಿ ಸೀಕ್ರೆಟ್‌ ರೆಸಿಪಿ ಹಂಚಿಕೊಂಡಿರುವ ಕರೀನಾ ಅತ್ಯುತ್ತಮ ಫೇಸ್‌ ಪ್ಯಾಕ್ ತಿಳಿಸಿದ ಗೆಳತಿ ನಿಶಾ ಸರೀನ್‌ಗೂ ಧನ್ಯವಾದ ಹೇಳಿದ್ದಾರೆ. ಕರೀನಾ ಹಂಚಿಕೊಂಡಿರುವ ಫೇಸ್‌ಪ್ಯಾಕ್‌ ತುಂಬಾ ಸರಳವಾಗಿದೆ ಹಾಗೂ ಇದನ್ನು ಬಳಸಿದರೆ ತ್ವಚೆ ಹೊಳಪು ಹೆಚ್ಚುವುದಾಗಿ ಹೇಳಿಕೊಂಡಿದ್ದಾರೆ. ಬನ್ನಿ ಆ ಫೇಸ್‌ ಪ್ಯಾಕ್ ಮಾಡುವುದು ಹೇಗೆ ಎಂದು ನೋಡೋಣ

ಫೇಸ್‌ ಪ್ಯಾಕ್‌ ರೆಸಿಪಿ

ಫೇಸ್‌ ಪ್ಯಾಕ್‌ ರೆಸಿಪಿ

2 ಹನಿ ವಿಟಮಿನ್ ಇ ಎಣ್ಣೆ

ಚಿಟಿಕೆಯಷ್ಟು ಅರಿಶಿಣ ಪುಡಿ

ಶ್ರೀಗಂಧದ ಪುಡಿ

ಈ ಮೂರು ಸಾಮಗ್ರಿ ಹಾಲಿನೊಂದಿಗೆ ಮಿಶ್ರ ಮಾಡಿ ಹಚ್ಚಿ 20 ನಿಮಿಷ ಬಿಡಬೇಕು.

ಇದರಿಂದ ತ್ವಚೆ ಸುಂದರವಾಗುವುದು, ಹೊಳಪು ಹೆಚ್ಚುವುದು.

ವಿಟಮಿನ್ ಇ ಪ್ರಯೋಜನಗಳು

ವಿಟಮಿನ್ ಇ ಪ್ರಯೋಜನಗಳು

ವಿಟಮಿನ್‌ ಇ ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ತ್ವಚೆಯನ್ನು ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡುತ್ತದೆ. ನೆರಿಗೆ ಬೀಳದಂತೆ ರಕ್ಷಣೆ ಮಾಡುತ್ತದೆ. ಒಣ ತ್ವಚೆ ಸಮಸ್ಯೆ ಹೋಗಲಾಡಿಸುತ್ತದೆ ಹಾಗೂ ತ್ವಚೆ ನುಣಪಾಗಿ ಇರುವಂತೆ ಮಾಡುತ್ತದೆ.

ಚಂದನ

ಚಂದನ

ಚಂದನದ ಪುಡಿ ಮುಖದ ಕಾಂತಿ ಹೆಚ್ಚಿಸುವುದರ ಜೊತೆಗೆ ಮೊಡವೆ ಸಮಸ್ಯೆ ಕಡಿಮೆ ಮಾಡುತ್ತದೆ. ತ್ವಚೆ ಟ್ಯಾನ್‌ ಆಗಿದ್ದರೆ ಹೋಗಲಾಡಿಸುತ್ತದೆ, ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ, ಮುಖ ಆಕರ್ಷಕವಾಗಿ ಕಾಣುವಂತೆ ಮಾಡುವುದು.

ಅರಿಶಿಣ

ಅರಿಶಿಣ

ಅರಿಶಿಣ ಕೂಡ ತ್ವಚೆ ರಕ್ಷಣೆ ತುಂಬಾ ಒಳ್ಳೆಯದು, ಇದರಿಂದ ಮುಖದ ಹೊಳಪು ಹೆಚ್ಚುವುದು, ಮೊಡವೆ ಕಡಿಮೆಯಾಗುವುದು, ಮುಖದಲ್ಲಿರುವ ಕಪ್ಪು ಕಲೆಗಳು ಇಲ್ಲವಾಗುವುದು. ಇದನ್ನು ಬಳಸುವುದರಿಂದ ಮುಖದಲ್ಲಿ ಯೌವನದ ಕಳೆ ಕಾಪಾಡಬಹುದು.

ಈ ಮೂರರ ಮಿಶ್ರಣ ಇನ್ನಷ್ಟು ಪರಿಣಾಮಕಾರಿಯಾಗಿದ್ದು ಇದನ್ನು ಹಚ್ಚುವ ಮೂಲಕ ಫೇಶಿಯಲ್‌ ಮಾಡಿದ ಹೊಳಪನ್ನು ಪಡೆಯಬಹುದು. ಈ ಬ್ಯೂಟಿ ರೆಸಿಪಿ ತುಂಬಾ ಪರಿಣಾಮಕಾರಿಯಾಗಿದೆ ಎಂದು ನಿಮಗೂ ಅನಿಸುತ್ತಿದೆ ಅಲ್ವಾ? ಹಾಗಾದರೆ ಟ್ರೈ ಮಾಡಿ ನೋಡಿ, ಖಂಡಿತ ಕರೀನಾಗೆ ಥ್ಯಾಂಕ್ಸ್ ಹೇಳುವಿರಿ.

English summary

Kareena Kapoor Khan’s Homemade Face Mask Recipe

In the post, Kareena could be seen wearing the mask on her face and that must have piqued the curiosity of all you beauty lovers.Here are those face mask recipe
X
Desktop Bottom Promotion