For Quick Alerts
ALLOW NOTIFICATIONS  
For Daily Alerts

ನಿಮ್ಮದು ಒಣ ತ್ವಚೆಯೇ ಅಥವಾ ನೀರಿನಂಶ ಕಡಿಮೆಯಾಗಿ ಒಣತ್ವಚೆಯಾಗಿದೆಯೇ ಕಂಡು ಹಿಡಿಯುವುದು ಹೇಗೆ?

|

ಒಣ ತ್ವಚೆ ಚಳಿಗಾಲದಲ್ಲಿ ಹೆಚ್ಚಿನವರನ್ನು ಕಾಡುವ ಸೌಂದರ್ಯ ಸಮಸ್ಯೆಯಾಗಿದೆ. ಆದರೆ ಕೆಲವೊಮ್ಮೆ ದೇಹದಲ್ಲಿ ನೀರಿನಂಶ ಕಡಿಮೆಯಾಗಿದ್ದಾಗ ತ್ವಚೆ ಒಣಗುವುದು. ಆಗ ಯಾವ ಕ್ರೀಮ್, ಲೋಷನ್‌ ಹಚ್ಚಿದರೂ ತ್ವಚೆ ಸಮಸ್ಯೆ ಹೋಗಲಾಡಿಸಲು ಸಾಧ್ಯವಾಗುವುದಿಲ್ಲ. ತ್ವಚೆ ಕಾಂತಿ ಹೆಚ್ಚಿಸಲು ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಲೇಬೇಕು. ಇನ್ನು ಕೆಲವರದ್ದು ಒಣತ್ವಚೆಯಾಗಿರುತ್ತದೆ, ಅಂಥವರು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರ ಜತೆಗೆ ಎಣ್ಣೆ, ಲೋಷನ್, ಮಾಯಿಶ್ಚರೈಸರ್ ಅಂತ ಹಚ್ಚಿ ತ್ವಚೆಯನ್ನು ಆರೈಕೆ ಮಾಡಬೇಕಾಗುತ್ತದೆ.

How To Find Out Dry Skin

ಇಲ್ಲಿ ನಾವು ನಿಮ್ಮದು ಒಣ ತ್ವಚೆಯೇ ಅಥವಾ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಒಣತ್ವಚೆ ಉಂಟಾಗಿದೆಯೇ ಎಂದು ಕಂಡು ಹಿಡಿಯುವುದು ಹೇಗೆ ಎಂದು ಹೇಳಿದ್ದೇವೆ. ಈ ಸಲಹೆ ನಿಮ್ಮ ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ ನೋಡಿ:

ನಿಮ್ಮ ತ್ವಚೆ ಒಣ ತ್ವಚೆಯೇ ಅಥವಾ ನೀರಿನಂಶ ಕಡಿಮೆಯಾಗಿರುವುದರಿಂದ ಒಣ ತ್ವಚೆ ಉಂಟಾಗಿದೆಯೇ ಎಂದು ಕೆಲವೊಂದು ಲಕ್ಷಣಗಳನ್ನು ನೋಡಿ ಕಂಡು ಹಿಡಿಯಬಹುದು:

ಒಣ ತ್ವಚೆಯ ಲಕ್ಷಣಗಳು

* ಮಂಕಾದ ತ್ವಚೆ
* ಇಡೀ ದೇಹದ ತ್ವಚೆಯಲ್ಲಿ ತೇವಾಂಶವಿರುವುದಿಲ್ಲ.
* ತ್ವಚೆಯಲ್ಲಿ ಹೊಳಪು ಕುಂದಿರುತ್ತದೆ
* ಕೆಲವರಿಗೆ ತ್ವಚೆ ತುಂಬಾ ಶುಷ್ಕವಾದಾಗ ನೋವು ಕೂಡ ಉಂಟಾಗುವುದು.
* ಅಲ್ಲಲ್ಲಿ ಕೆಂಪು ಪ್ಯಾಚ್ ಕಂಡು ಬರುತ್ತದೆ

ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತ್ವಚೆಯಲ್ಲಿ ಕಂಡು ಬರುವ ಲಕ್ಷಣಗಳು

* ತ್ವಚೆ ಮಂಕಾಗಿ ಕಾಣುವುದು
* ತುರಿಕೆ ಇರುತ್ತದೆ
* ಮುಖದಲ್ಲಿ ನೆರಿಗೆಗಳು ಎದ್ದು ಕಾಣುವುದು
* ಕಣ್ಣಿನ ಕೆಳಗೆ ಕಪ್ಪು ವರ್ತುಲ ಅಂದರೆ ಡಾರ್ಕ್‌ ಸರ್ಕಲ್ ಬೀಳುವುದು
* ತ್ವಚೆ ಬಿಗಿಯಾದ ಅನುಭವ ಉಂಟಾಗುವುದು
* ಉರಿ ಕಂಡು ಬರುವುದು
* ತ್ವಚೆ ತುಂಬಾ ಸೂಕ್ಷ್ಮವಾಗುವುದು
* ವಾತಾವರಣಕ್ಕೆ ತಕ್ಕಂತೆ ತ್ವಚೆ ಬಣ್ಣದಲ್ಲೂ ವ್ಯತ್ಯಾಸ ಉಂಟಾಗುವುದು.

ಒಣ ತ್ವಚೆಗೆ ಪ್ರಮುಖ ಕಾರಣಗಳು

1.ತಪ್ಪಾದ ಸೌಂದರ್ಯವರ್ಧಕಗಳನ್ನು ಬಳಸುವುದು

ಒಣತ್ವಚೆ ಎನ್ನುವುದು ತ್ವಚೆಯ ಒಂದು ಬಗೆಯಾಗಿದ್ದು, ಈ ತ್ವಚೆ ಇರುವವರು ಸಔಂದರ್ಯವರ್ಧಕಗಳನ್ನು ಆಯ್ಕೆ ಮಾಡುವಾಗ ತಮಗೆ ಸೂಕ್ತವಾದ ವಸ್ತುಗಳನ್ನು ಆಯ್ಕೆ ಮಾಡಬೇಕು. ಮುಖಕ್ಕೆ ಪೌಡರ್ ಬದಲು ಕ್ರೀಮ್‌ ಅದರಲ್ಲೂ ಮಾಯಿಶ್ಚರೈಸರ್ ಕ್ರೀಮ್ ಬಳಸುವುದು ಸೂಕ್ತ. ಎಣ್ಣೆ ತ್ವಚೆಗೆ ಹಚ್ಚುವ ಕ್ರೀಮ್‌ ಬಳಸುವುದರಿಂದ ತ್ವಚೆ ಮತ್ತಷ್ಟು ಒಣಗುವುದು. ಆದ್ದರಿಂದ ಕ್ರೀಮ್ ಆಯ್ಕೆ ಮಾಡುವಾಗ ಒಣ ತ್ವಚೆಗಾಗಿ ಮಾಡಿರುವ ಮಾಯಿಶ್ಚರೈಸರ್‌ ಬಳಸಿ. ಇನ್ನು ಬಾಡಿಲೋಷನ್‌ ಅನ್ನು ಯಾವುದೇ ಕಾರಣಕ್ಕೆ ಮುಖಕ್ಕೆ ಹಚ್ಚಬೇಡಿ.

2. ಹೆಚ್ಚು ಬಿಸಿಲಿನಲ್ಲಿ ಓಡಾಡುವುದು

ನೇರವಾಗಿ ಬಿಸಿಲಿಗೆ ಮೈ ಒಡ್ಡುವುದರಿಂದ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಡಿಮೆಯಾಗುವುದು. ತ್ವಚೆ ಕಾಂತಿಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು ಅವಶ್ಯಕ. ಆದರೆ ತುಂಬಾ ಹೊತ್ತು ಬಿಸಿಲಿನಲ್ಲಿ ನಿಂತು ಕೆಲಸ ಮಾಡಿದರೆ, ಓಡಾಡಿದರೆ ತ್ವಚೆ ಒಣಗುವುದು.

* ತುಂಬಾ ಬಿಸಿ-ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು

ತುಂಬಾ ಬಿಸಿ-ಬಿಸಿಯಾದ ನೀರನ್ನು ಮೈಗೆ ಹಾಕಿಕೊಳ್ಳುವುದರಿಂದ ಮೈ ಹಗುರವಾದ ಅನುಭವ ಉಂಟಾಗುತ್ತದೆ ಎಂದು ಕೆಲವರು ತುಂಬಾ ಬಿಸಿಯಾದ ನೀರನ್ನು ಹಾಕಿಕೊಳ್ಳುತ್ತಾರೆ. ಆದರೆ ತುಂಬಾ ಬಿಸಿಯಾದ ನೀರು ತ್ವಚೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ತ್ವಚೆಯನ್ನು ಮತ್ತಷ್ಟು ಒಣಗುವಂತೆ ಮಾಡುತ್ತದೆ. ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು.

ವಯಸ್ಸಾಗುತ್ತಿದ್ದಂತೆ

ವಯಸ್ಸಾದಂತೆ ತ್ವಚೆ ಒಣಗುವುದು ಸ್ವಾಭಾವಿಕ, ಆದರೆ ಮಾಯಿಶ್ಚರೈಸರ್ ಬಳಸುವುದರಿಂದ ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬಹುದು.

ಒಣ ತ್ವಚೆ ಇರುವವರು ಏನು ಮಾಡಬೇಕು?

ಎಕ್ಸ್‌ಫೋಲೆಟ್ ಮಾಡಿ

ಒಣ ತ್ವಚೆ ಇರುವವರು ಪ್ರತಿದಿನ ಮೈ ಸ್ಕ್ರಬ್ ಮಾಡಬೇಕು, ವಾರದಲ್ಲಿ ಎರಡು ಬಾರಿ ಎಕ್ಸ್‌ಫೋಲೆಟ್ ಮಾಡಬೇಕು. ಇದರಿಂದ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ನಿರ್ಜೀವ ತ್ವಚೆಯಿದ್ದರೆ ಅದು ತ್ವಚೆ ತೇವಾಂಶ ಹೀರಿಕೊಳ್ಳದಂತೆ ತಡೆ ಹಿಡಿಯುತ್ತದೆ.

ಸನ್‌ಸ್ಕ್ರೀನ್ ಬಳಸಿ

ಬಿಸಿಲಿನಲ್ಲಿ ಓಡಾಡುವಾಗ ತ್ವಚೆ ತುಂಬಾ ಒಣಗುವುದನ್ನು ತಡೆಗಟ್ಟಲು ಸನ್‌ಸ್ಕ್ರೀನ್‌ ಕೋಷನ್ ಬಳಸಿ.

ಧೂಮಪಾನ ಹಾಗೂ ಮದ್ಯಪಾನ ವರ್ಜಿಸಿ

ಧೂಮಪಾನ ಹಾಗೂ ಮದ್ಯಪಾನ ತ್ವಚೆಕಾಂತಿ ಹಾಳು ಮಾಡುತ್ತದೆ. ಹಾಗೂ ಧೂಮಪಾನಿಗಳಲ್ಲಿ ಅಕಾಲಿಕ ನೆರಿಗೆ ಸಮಸ್ಯೆ ಕೂಡ ಬೇಗನೆ ಕಾಡುತ್ತದೆ.

ಆರೋಗ್ಯಕರ ಆಹಾರ ಸೇವಿಸಿ

ಅಧಿಕ ನಾರಿನಂಶ ಹಾಗೂ ನೀರಿನಂಶವಿರುವ ಆಹಾರ ಸೇವಿಸಿ. ಜಂಕ್‌ಫುಡ್‌ಗಳಿಂದ ದೂರವಿರಿ. ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ತಿನ್ನಬೇಕು. ಸಾಕಷ್ಟು ನೀರು ಕುಡಿಯಬೇಕು.

ಸೌಂದರ್ಯವರ್ಧಕಗಳನ್ನು ಕೊಂಡುಕೊಳ್ಳುವಾಗ ಈ ಸಾಮಗ್ರಿ ಇದೆಯೇ ನೋಡಿ:

  • ಹೈಲುರಾನಿಕ್ ಆಮ್ಲ
  • ಗ್ಲಿಸರಿನ್
  • ಲೋಳೆಸರ
  • ಜೇನು
  • ಲ್ಯಾಕ್ಟಿಕ್ ಆಮ್ಲ
  • ಸಿಟ್ರಿಕ್ ಆಮ್ಲ
  • ಸೆರಾಮೈಡ್
  • ಗ್ಲೈಕೋಲಿಕ್ ಆಮ್ಲ

ಯಾವ ವಸ್ತುಗಳಿರುವ ಸೌಂದರ್ವರ್ಧಕ ಒಳ್ಳೆಯದಲ್ಲ?

*ಸುಗಂಧದ್ರವ್ಯ
* ಮದ್ಯ

English summary

Is Your Skin Dry Or Just Dehydrated? Know The Difference

The skin that you think is dry can actually be dehydrated and both of these are completely different things. So today, we talk about the difference between the two, take a look.
X
Desktop Bottom Promotion