For Quick Alerts
ALLOW NOTIFICATIONS  
For Daily Alerts

ಮುಖಕ್ಕೆ ಪ್ರಯೋಜನ ಸಿಗದ ಸ್ಕಿನ್ ಕೇರ್ ಉತ್ಪನ್ನಗಳನ್ನು ಎಸೆಯಬೇಡಿ, ಪರ್ಯಾಯವಾಗಿ ಹೀಗೆ ಬಳಸಬಹುದು!

|

ಕೆಲವೊಮ್ಮೆ ನಾವು ಆಸೆ ಪಟ್ಟು ಕೊಂಡ ಸೌಂದರ್ಯ ಉತ್ಪನ್ನಗಳನ್ನು ಕೊಳ್ಳುತ್ತೇವೆ. ಆದರೆ ಅದನ್ನು ಬಳಸಿದಾಗಲೇ ತಿಳಿಯುವುದು ಅದು ನಮ್ಮ ತ್ವಚೆಗೆ ಸರಿಯಾದುದು ಅಲ್ಲವೆಂಬುದು. ಆದರೆ ಅದನ್ನು ಎಸರೆಯಲು ಮನಸ್ಸಾಗದೇ ಮುಂದೆ ಎಂದಾದರೂ ಬಳಸೋಣ ಎಂದು ಕಬೋರ್ಡ್ ನಲ್ಲಿ ಎತ್ತಿಟ್ಟವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಏಕೆಂದರೆ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಕೊಂಡ ಪ್ರಾಡಕ್ಟನ್ನು ನೀರು ಪಾಲು ಮಾಡಲು ಯಾರಿಗೂ ಇಷ್ಟವಾಗುವುದಿಲ್ಲ. ಅಂತಹವರಿಗಾಗಿ ಆ ಉತ್ಪನ್ನಗಳನ್ನು ಮುಖದ ಬದಲಿಗೆ ಬೇರೆ ಯಾವ ತರ ಬಳಸಬಹುದು ಎಂಬುದನ್ನು ಈ ಕೆಳಗೆ ನೀಡಿದ್ದೇವೆ.

ನಿಮ್ಮ ಮುಖಕ್ಕೆ ಕೆಲಸ ಮಾಡದ ತ್ವಚೆ ರಕ್ಷಣೆಯ ಉತ್ಪನ್ನಗಳನ್ನು ಪುನರಾವರ್ತಿಸುವ ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಫೇಸ್ ಮಾಯಿಶ್ಚರೈಸರ್ಗಳು:

ಫೇಸ್ ಮಾಯಿಶ್ಚರೈಸರ್ಗಳು:

ಇದರ ಪುನರ್ ಬಳಕೆ ಬಹಳ ಸುಲಭವಾದದ್ದು. ಏಕೆಂದರೆ ನಿಮ್ಮ ಮುಖದ ಮೇಲೆ ಕೆಲಸ ಮಾಡದ ಫೇಸ್ ಕ್ರೀಮ್‌ಗಳು ನಿಮ್ಮ ಬಳಿ ಇದ್ದರೆ, ಅದನ್ನು ದೇಹದ ಮೇಲೆ ಬಳಸಬಹುದು. ನಿಮ್ಮ ದೇಹವು ಕೂಡ ಮುಖದಷ್ಟೇ ಆರೈಕೆ ಪಡೆಯಲು ಅರ್ಹವಾಗಿದೆ ಎಂಬುದನ್ನು ಎಂದಿಗೂ ಮರೆಯಬಾರದು. ಜೊತೆಗೆ ಅವುಗಳನ್ನು ಕೈಯ ಮಾಯಿಶ್ಚರೈಸರ್ಗಳಾಗಿ ಬಳಸಬಹುದು. ನಿಮ್ಮ ಕೈಗಳನ್ನು ತೊಳೆದ ನಂತರ ಅವುಗಳನ್ನು ಕೈಗಳಿಗೆ ಹಚ್ಚಬಹುದು.

ಆಯಿಲ್ ಕ್ಲೆನ್ಸರ್:

ಆಯಿಲ್ ಕ್ಲೆನ್ಸರ್:

ಆಯಿಲ್ ಕ್ಲೆನ್ಸರ್ ನ ಪ್ರಮುಖ ಕಾರ್ಯವೆಂದರೆ ನಿಮ್ಮ ಮುಖದಲ್ಲಿ ಉಳಿದಿರುವ ಮೇಕಪ್ ತೆಗೆದುಹಾಕುವುದು. ಇದೇ ರೀತಿಯ ಕೆಲಸಕ್ಕಾಗಿ ನಿಮ್ಮ ಉಳಿದ ಆಯಿಲ್ ಕ್ಲೆನ್ಸರ್ ಸಹ ಬಳಸಿಕೊಳ್ಳಬಹುದು. ಅದೇಗೆ ಎಂದರೆ ಈ ಆಯಿಲ್ ಕ್ಲೆನ್ಸರ್ ನ್ನು ಮೇಕಪ್ ಬ್ರಶ್ ಗಳನ್ನು ಕ್ನೀನ್ ಮಾಡಲು ಸಹ ಬಳಸಿಕೊಳ್ಳಬಹುದು. ಜೊತೆಗೆ ನಿಮ್ಮ ಬಟ್ಟೆಗಳಿಂದ ಡಿಯೋಡರೆಂಟ್ ಗುರುತುಗಳನ್ನು ತೆಗೆದುಹಾಕಲು ಆಯಿಲ್ ಕ್ಲೆನ್ಸರ್ಗಳನ್ನು ಬಳಸಬಹುದು. ಶೇವಿಂಗ್ ಕ್ರೀಮ್‌ಗಳಿಗೆ ಇದು ಉತ್ತಮ ಪರ್ಯಾಯವಾಗಿದೆ. ಒನಗಿದ ಮುಖದ ಮೇಲೆ ಎರಡು ಹನಿಗಳನ್ನು ಹಾಕಿ, ಶೇವ್ ಮಾಡಬಹುದು.

ಫೇಸ್ ಆಯಿಲ್ ಗಳು:

ಫೇಸ್ ಆಯಿಲ್ ಗಳು:

ಸ್ಕ್ವಾಲೇನ್ ಎಣ್ಣೆ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆಗಳು ಇನ್ನೂ ಅನೇಕ ಫೇಸ್ ತೈಲಗಳನ್ನು ನಮ್ಮ ತಲೆಗೆ ಬಳಸಬಹುದು. ನಿಮ್ಮ ನೆತ್ತಿಗೆ ಸರಿಹೊಂದದ ಎಣ್ಣೆಯನ್ನು ನಿಮ್ಮ ಕಾಲುಗಳು, ಕೈಗಳು ಮತ್ತು ಉಗುರುಗಳ ಮೇಲೆ ಬಳಸಬಹುದು. ಇದು ಚರ್ಮಕ್ಕೆ ಆಳವಾದ ಪೋಷಣೆಯನ್ನು ನೀಡಲು ಸಹಾಯ ಮಾಡುತ್ತದೆ.

ಕೆಮಿಕಲ್ ಎಕ್ಸ್‌ಫೋಲಿಯೇಟರ್‌ಗಳು:

ಕೆಮಿಕಲ್ ಎಕ್ಸ್‌ಫೋಲಿಯೇಟರ್‌ಗಳು:

ನಿಮ್ಮ ಮುಖಕ್ಕೆ ಕೆಲಸ ಮಾಡದ ಬಹಳಷ್ಟು ರಾಸಾಯನಿಕ ಎಕ್ಸ್‌ಫೋಲಿಯೇಟರ್‌ಗಳನ್ನು ಪ್ರಯತ್ನಿಸಿರಬೇಕು. ಅದು ಕೆಲಸ ಮಾಡದಿದ್ದಾಗ ಈ ಎಕ್ಸ್‌ಪೋಲಿಯೇಟರ್ ಗಳನ್ನು ನಿಮ್ಮ ದೇಹದ ಮೇಲಿನ ಉಬ್ಬುಗಳನ್ನು ತೆಗೆದುಹಾಕಲು ಚರ್ಮದ ಮೇಲೆ ಬಳಸಬಹುದು ಜೊತೆಗೆ ಅಂಡರ್ ಆರ್ಮ್ ನ ದುರ್ವಾಸನೆಯನ್ನು ದೂರಮಾಡಲು ಕೆಮಿಕಲ್ ಎಕ್ಸ್‌ಫೋಲಿಯೇಟರ್‌ಗಳನ್ನು ನಿಮ್ಮ ಅಂಡರ್‌ಆರ್ಮ್‌ಗಳಿಗೂ ಬಳಸಬಹುದು. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ಶೀಟ್ ಮಾಸ್ಕ್:

ಶೀಟ್ ಮಾಸ್ಕ್:

ಫೇಸ್ ಶೀಟ್ ಮಾಸ್ಕನ್ನು ನಿಮ್ಮ ಕಾಲುಗಳ ಮೇಲೆ ಬಳಸಬಹುದು. ಮುಖದಂತೆ ನಿಮ್ಮ ಪಾದಗಳಿಗೂ ಸಹ ತೇವಾಂಶದ ಅಗತ್ಯವಿರುತ್ತದೆ. ಏಕೆಂದರೆ ನಿಮ್ಮ ಮುಖಕ್ಕೆ ಸರಿಯಾಗಿ ಪರಿಣಾಮ ಅಥವಾ ದುಷ್ಪರಿಣಾಮ ಬೀರಿದ ಈ ಶೀಟ್ ಮಾಸ್ಕ ಗಳು ನಿಮ್ಮ ಕಾಲಿಗೆ ಸರಿಹೊಂದುತ್ತವೆ. ಕಾಲಿನ ಚರ್ಮವು ಮುಖದ ಚರ್ಮಕ್ಕಿಂತ ದಪ್ಪವಾಗಿರುವುದರಿಂದ ನಿಮ್ಮ ಕಾಲುಗಳಿಗೆ ಏನೂ ತೊಂದರೆ ಆಗುವುದಿಲ್ಲ. ನಿಮ್ಮ ಶೀಟ್ ಮಾಸ್ಕನ್ನು ನಿಮ್ಮ ಕಾಲುಗಳ ಮೇಲೆ ಹಾಕಿ, ಅದರ ಮೇಲೆ ಸಾಕ್ಸ್ ಧರಿಸಿ. ನಯವಾದ ಹೈಡ್ರೀಕರಿಸಿದ ಪಾದಗಳು ಮರುದಿನ ನಿಮಗಾಗಿ ಕಾಯುತ್ತಿರುತ್ತವೆ.

English summary

How to Repurpose Skincare Products in Kannada

Here we talking abput How to Repurpose Skincare Products in Kannada, read on
Story first published: Monday, June 28, 2021, 13:07 [IST]
X
Desktop Bottom Promotion