For Quick Alerts
ALLOW NOTIFICATIONS  
For Daily Alerts

ನಿಮ್ಮ ತ್ವಚೆ ಪ್ರಕಾರ ಮುಖಕ್ಕೆ ಸ್ಕ್ರಬ್ಬಿಂಗ್ ಹೇಗೆ ಮಾಡಬೇಕು?

|

ನಮ್ಮ ತ್ವಚೆಯ ಹೊರಪದರದ ಜೀವಕೋಶಗಳು ಸಾಯುತ್ತಿರುತ್ತವೆ ಹಾಗೂ ಈ ಸ್ಥಳದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಆದರೆ ಸತ್ತ ಜೀವಕೋಶಗಳು ಒಣಪುಡಿಯ ರೂಪದಲ್ಲಿ ಹೊರಪದರಕ್ಕೆ ಅಂಟಿಕೊಂಡಿರುತ್ತವೆ. ಇವು ಅಷ್ಟು ಸುಲಭವಾಗಿ ಚರ್ಮದಿಂದ ಉದುರುವುದಿಲ್ಲ. ಇದನ್ನು ಕಾಳಜಿಯಿಂದ ನಿವಾರಿಸಬೇಕಾಗುತ್ತದೆ. ಈ ಕ್ರಿಯೆಗೆ ಎಕ್ಸ್‌ಫೋಲಿಯೇಶನ್ ಎಂದು ಕರೆಯುತ್ತಾರೆ. ಈ ಕ್ರಿಯೆಯಿಂದ ತ್ವಚೆಯ ಆರೋಗ್ಯವೂ ಕಾಪಾಡಿದಂತಾಗುತ್ತದೆ ಹಾಗೂ ತ್ವಚೆಯ ಕಾಂತಿಯೂ ಹೆಚ್ಚುತ್ತದೆ. ಆದರೆ ಈ ಕ್ರಿಯೆ ತ್ವಚೆಯ ಬಗೆಯನ್ನು ಆಧರಿಸಿ ಹೇಗೆ ಮತ್ತು ಎಷ್ಟು ಸಮಯದ ಅಂತರಗಳಲ್ಲಿ ನಿರ್ವಹಿಸಬೇಕಾಗುತ್ತದೆ ಎಂದು ನಿರ್ಧರಿಸಬೇಕಾಗುತ್ತದೆ.

ಚರ್ಮವೈದ್ಯರು ಈ ಬಗ್ಗೆ ನೀಡುವ ವಿವರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ತೈಲಯುಕ್ತ, ಒಣ ಅಥವಾ ಸೂಕ್ಷ್ಮಸಂವೇದಿ ತ್ವಚೆಗಳಿಗಾಗಿ ಎಕ್ಸ್‌ಫೋಲಿಯೇಶನ್ ಮಾಡುವುದು ಹೇಗೆ ಎಂಬುದನ್ನು ನೋಡೋಣ:

ಅಷ್ಟಕ್ಕೂ ಎಫ್ಫೋಲಿಯೇಶನ್ ಮಾಡುವ ಅಗತ್ಯವಾದರೂ ಏನು

ಅಷ್ಟಕ್ಕೂ ಎಫ್ಫೋಲಿಯೇಶನ್ ಮಾಡುವ ಅಗತ್ಯವಾದರೂ ಏನು

ತ್ವಚೆಗೆ ಅಗತ್ಯವಾದ ಮಸಾಜ್ ನೀಡುವುದರ ಹೊರತಾಗಿ,ತ್ವಚೆಯ ಮೇಲ್ಮೈಯಲ್ಲಿ ಸಿಕ್ಕಿಹಾಕಿಕೊಳ್ಳಬಹುದಾದ ಸತ್ತ ಚರ್ಮದ ಒಣ ಜೀವಕೋಶಗಳನ್ನು ತೆಗೆದುಹಾಕುವುದು ಎಕ್ಸ್‌ಫೋಲಿಯೇಶನ್ ಕ್ರಿಯೆಯ ಉದ್ದೇಶವಾಗಿದೆ, ಇದು ಮುಚ್ಚಿಹೋಗಿರುವ ರಂಧ್ರಗಳು, ಒರಟು ವಿನ್ಯಾಸ ಮತ್ತು ಚರ್ಮದ ಕಾಂತಿರಹಿತ ನೋಟಕ್ಕೆ ಕಾರಣವಾಗುತ್ತದೆ ತಜ್ಞರು ವಿವರಿಸುತ್ತಾರೆ.

ಪ್ರತಿ 30 ದಿನಗಳಿಗೊಮ್ಮೆ ಚರ್ಮವು ತನ್ನನ್ನು ತಾನೇ ನವೀಕರಿಸಿಕೊಳ್ಳುತ್ತದೆಯಾದರೂ, ಸತ್ತ ಜೀವಕೋಶಗಳು ಇನ್ನೂ ನಮ್ಮ ಚರ್ಮಕ್ಕೆ ಅಂಟಿಕೊಳ್ಳಬಹುದು. ಹೀಗೆ ಅಂಟಿಕೊಂಡಿರುವ ಜೀವಕೋಶಗಳನ್ನು ತೆಗೆದುಹಾಕಲು ಎಕ್ಸ್‌ಫೋಲಿಯೇಶನ್ ಕ್ರಿಯೆ ಸಹಾಯ ಮಾಡುತ್ತದೆ.

ಎಕ್ಸ್‌ಫೋಲಿಯೇಶನ್ ಕ್ರಿಯೆಯಿಂದ ಹೊಸ ಜೀವಕೋಶಗಳ ಹುಟ್ಟುವಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವಾಗುತ್ತದೆ. ಅಲ್ಲದೇ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ತ್ವಚೆಯ ರಚನೆಗೆ ಅಗತ್ಯವಾದ ಮೂಲವಸ್ತುವಾದ ಕೊಲ್ಯಾಜೆನ್ ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಕ್ಸ್‌ಫೋಲಿಯೇಶನ್ ಕ್ರಿಯೆಯಿಂದ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಕಪ್ಪು ಕಲೆಗಳ ಗೋಚರತೆಯನ್ನೂ ಕಡಿಮೆ ಮಾಡುತ್ತದೆ.

ಎಫ್ಫೋಲಿಯಂಶನ್ ಕ್ರಿಯೆಯ ವಿಧಗಳು:

ಎಫ್ಫೋಲಿಯಂಶನ್ ಕ್ರಿಯೆಯ ವಿಧಗಳು:

ಎಫ್ಫೋಲಿಯಂಶನ್ ಕ್ರಿಯೆ ಎರಡು ವಿಧಗಳಲ್ಲಿ ನಡೆಸಬಹುದು. ಇವೆಂದರೆ ಭೌತಿಕ ಮತ್ತು ರಾಸಾಯನಿಕ ವಿಧಗಳು. ಸತ್ತ ಚರ್ಮದ ಕೋಶಗಳನ್ನು ನಿವಾರಿಸಲು ಇವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಆಧರಿಸಿ ಈ ವಿಧಗಳನ್ನಾಗಿ ವಿಂಗಡಿಸಲಾಗಿದೆ.

ಎಕ್ಸ್‌ಫೋಲೆಟ್ ಸಾಮಗ್ರಿ ಹೇಗಿರಬೇಕು

ಎಕ್ಸ್‌ಫೋಲೆಟ್ ಸಾಮಗ್ರಿ ಹೇಗಿರಬೇಕು

ಎಕ್ಸ್‌ಫೋಲಿಯೇಶನ್ ಕ್ರಿಯೆ ನಡೆಸುವ ಸಾಮಾಗ್ರಿಗಳನ್ನು ಎಕ್ಸ್‌ಫೋಲಿಯೆಂಟ್ ಎಂದು ಕರೆಯುತ್ತಾರೆ. ಭೌತಿಕ ಎಕ್ಸ್‌ಫೋಲಿಯಂಟ್‌ಗಳು ಕೆಲವು ರೀತಿಯ ಒರಟು ವಸ್ತುಗಳನ್ನು ಒಳಗೊಂಡಿರುತ್ತವೆ, ಅದು ಸತ್ತ ಜೀವಕೋಶಗಳನ್ನು ಅಡಿಗೆ ಸೋಡಾ ಅಥವಾ ಸಕ್ಕರೆಯಂತಹ ಒರಟು ಪುಡಿಗಳನ್ನು ಕೊಂಚ ಒತ್ತಡದಿಂದ ಈ ಜೀವಕೋಶಗಳನ್ನು ಉಜ್ಜಿ ತೆಗೆಯುವುದಾಗಿದೆ. . ಆದರೆ ದೈಹಿಕ ಎಕ್ಸ್‌ಫೋಲಿಯಂಟ್‌ಗಳು ಎಲ್ಲರಿಗೂ ಸೂಕ್ತವಾಗುವುದಿಲ್ಲ, ವಿಶೇಷವಾಗಿ ಸೂಕ್ಷ್ಮ, ತೆಳ್ಳನೆಯ ತ್ವಚೆಯನ್ನು ಹೊಂದಿರುವ ಅಥವಾ ಮೊಡವೆ ಅಥವಾ ಉರಿಯೂತದ ನಂತರದ ತ್ವಚೆಯಲ್ಲಿ ಕಲೆ ಉಳಿದುಕೊಳ್ಳುವಂತಹ ತ್ವಚೆಯ ವ್ಯಕ್ತಿಗಳಿಗೆ ಈ ವಿಧಾನ ಸೂಕ್ತವಲ್ಲ.

"ಪ್ಯೂಮಿಸ್ ಕಲ್ಲು, ಆಕ್ರೋಟಿನ ಕವಚ, ಮರಳು, ಸಿಲಿಕಾ ಮತ್ತು ಇತರ ಗಟ್ಟಿಯಾದ ಅಥವಾ ತೀಕ್ಷ್ಣವಾದ ತುಂಡುಗಳು ಚರ್ಮದಲ್ಲಿ ಸೂಕ್ಷ್ಮ ಗಾಯಗಳನ್ನು ಉಂಟುಮಾಡಬಹುದು, ಇದು ತ್ವಚೆಗೆ ಉರಿ, ಉರಿಯೂತ ಮತ್ತು ಉರಿಯೂತದ ನಂತರದ ಚರ್ಮದ ವರ್ಣದ್ರವ್ಯದ ಬದಲಾವಣೆಗಳು ಮತ್ತು ಗಾಯದ ಗುರುತುಗಳಿಗೂ ಕಾರಣವಾಗಬಹುದು. ಚರ್ಮವನ್ನು ಉಜ್ಜುವ ಈ ಸಾಮಾಗ್ರಿಗಳನ್ನು ಸ್ಕ್ರಬ್ ಎಂದು ಕರೆಯುತ್ತಾರೆ.

ಒಂದು ವೇಳೆ ಸ್ಕ್ರಬ್ ಗಳಿಂದ ಉಜ್ಜಿಕೊಳ್ಳುವ ವಿಧಾನ ನಿಮಗೆ ಇಷ್ಟವಾಗುತ್ತಿದ್ದರೆ ಈ ವಿಧಾನವನ್ನು ತಿಂಗಳಿಗೆ ಒಂದು ಅಥವಾ ಎರಡು ಬಾರಿಗೆ ಸೀಮಿತಗೊಳಿಸಬೇಕು. ಸಕ್ಕರೆ, ಅತಿ ನುಣುಪಾದ ಜೇಡಿ ಅಥವಾ ಕಾಫಿಪುಡಿ ಮೊದಲಾದವು ಉತ್ತಮ ಸ್ಕ್ರಬ್ ಗಳಾಗಿವೆ. ಕೆಲವರು ಅಡುಗೆ ಸೋಡಾ ಪುಡಿಯನ್ನೂ ಸ್ಕ್ರಬ್ ರೀತಿಯಲ್ಲಿ ಬಳಸುತ್ತಾರೆ. ಆದರೆ ಇದು ಚರ್ಮದ ಉರಿಯನ್ನು ಹೆಚ್ಚಿಸುವ ಮತ್ತು ತ್ವಚೆಯನ್ನು ಕೆಂಪಗಾಗಿಸುವ ಕಾರಣದಿಂದ ಈ ಆಯ್ಕೆ ಒಳ್ಳೆಯದಲ್ಲ ಎಂದು ಚರ್ಮ ವೈದ್ಯರು ಎಚ್ಚರಿಸುತ್ತಾರೆ.

ರಾಸಾಯನಿಕ ಎಫ್ಫೋಲಿಯಂಟುಗಳು

ರಾಸಾಯನಿಕ ಎಫ್ಫೋಲಿಯಂಟುಗಳು

ರಾಸಾಯನಿಕ ಎಕ್ಸ್‌ಫೋಲಿಯಂಟ್‌ಗಳು ಆಮ್ಲಗಳಾಗಿದ್ದು ಅದು ಜೀವಕೋಶಗಳ ನಡುವಿನ ಸಂಪರ್ಕವನ್ನು ಸಡಿಲಗೊಳಿಸುತ್ತದೆ, ಇದರಿಂದಾಗಿ ಅವು ನಿಧಾನವಾಗಿ ಸಡಿಲಗೊಂಡು ಸುಲಭವಾಗಿ ಕಳಚಿಕೊಳ್ಳುತ್ತವೆ. ಭೌತಿಕ ಕ್ಸ್‌ಫೋಲಿಯಂಟ್‌ಗಳು ತ್ವಚೆಗೆ ಹೆಚ್ಚು ಹಾನಿಕರವಾಗಬಹುದು. ಆದರೆ ತ್ವಚೆಯ ಬಗೆಯನ್ನು ಆಧರಿಸಿ ಸೂಕ್ತ ರಾಸಾಯನಿಕಗಳನ್ನು ಬಳಸಿ ಮಾಡುವ ಎಕ್ಸ್‌ಫೋಲಿಯೇಶನ್ ಕ್ರಿಯೆ ಸುರಕ್ಷಿತ ಮತ್ತು ಫಲಪ್ರದವಾಗಿರುತ್ತವೆ. ಅನಾನಾಸು ಮತ್ತು ಪೊಪ್ಪಾಯಿ ಮೊದಲಾದ ಹಣ್ಣಿನ ಕಿಣ್ವಗಳಾದ ಆಲ್ಫಾ ಹೈಡ್ರಾಕ್ಸಿ ಆಮ್ಲ (Alpha Hydroxy Acids (AHAs)) ಗಳು ಹೆಚ್ಚು ಸುರಕ್ಷಿತವಾಗಿವೆ.

ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಬಳಸುವ AHAಗಳಲ್ಲಿ ಗ್ಲೈಕೋಲಿಕ್ ಮತ್ತು ಲ್ಯಾಕ್ಟಿಕ್ ಆಮ್ಲ ಸೇರಿವೆ. ಈ ರಾಸಾಯನಿಕಗಳು ಸೌಮ್ಯವಾದ, ಘರ್ಷಣೆ-ರಹಿತ ಎಫ್ಫೋಲಿಯಂಟ್ಗಳಾಗಿ ವರ್ತಿಸುತ್ತವೆ, ಇದು ಕೋಶಗಳ ವಹಿವಾಟನ್ನು ಸುಗಮಗೊಳಿಸುತ್ತದೆ, ಪರಿಣಾಮವಾಗಿ ಚರ್ಮವು ನಯವಾಗಿ ಮತ್ತು ಪ್ರಕಾಶಮಾನವಾಗಿ ಕಾಣುತ್ತದೆ.

ಎಕ್ಸ್‌ಫೋಲಿಯೇಟಿಂಗ್‌ನ ಮೂಲಗಳು ಎಲ್ಲರಿಗೂ ಸಮಾನವಾಗಿದ್ದರೂ, ನೀವು ಆರಿಸಬೇಕಾದ ಆವರ್ತನ ಮತ್ತು ಪದಾರ್ಥಗಳು ಚರ್ಮದ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತವೆ.

ಒಣ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುವ ವಿಧಾನ:

ಒಣ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುವ ವಿಧಾನ:

ನೀವು ಒಣ ಚರ್ಮವನ್ನು ಹೊಂದಿದ್ದರೆ, ಅದು ಹೆಚ್ಚು ದುರ್ಬಲವಾಗಿರುವುದರಿಂದ ಮತ್ತು ಸುಲಭವಾಗಿ ಹರಿದು ಹೋಗುವುದರಿಂದ ಅತಿಯಾಗಿ ಎಫ್ಫೋಲಿಯೇಟ್ ಮಾಡದಂತೆ ಚ್ಚರವಹಿಸಿ.

ಒಣ ಚರ್ಮವುಳ್ಳವರು ವಾರದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಎಕ್ಸ್‌ಫೋಲಿಯೇಟ್ ಮಾಡುವಂತೆ ಚರ್ಮವೈದ್ಯರು ಶಿಫಾರಸ್ಸು ಮಾಡುತ್ತಾರೆ, ನಿಮ್ಮ ಚರ್ಮಕ್ಕೆ ಇನ್ನೂ ಅಗತ್ಯವಿದೆ ಎಂದು ಖಚಿತವಾಗಿ ಅನ್ನಿಸಿದರೆ ಗರಿಷ್ಟ ಮೂರು ಬಾರಿ ನಿರ್ವಹಿಸಿಕೊಳ್ಳಬಹುದು, ಇದಕ್ಕಿಂತ ಹೆಚ್ಚು ಬಾರಿ ಸಲ್ಲದು.

ಚರ್ಮಕ್ಕೆ ಘಾಸಿಯುಂಟುಮಾಡುವ ಹಾಕುವ ಮಣಿಗಳು ಅಥವಾ ಧಾನ್ಯಗಳನ್ನು ತಪ್ಪಿಸಿ. ಒಣ ಚರ್ಮವು ಈಗಾಗಲೇ ಹೆಚ್ಚು ದುರ್ಬಲವಾಗಿರುತ್ತದೆ, ಆದ್ದರಿಂದ ಭೌತಿಕ ಎಕ್ಸ್‌ಫೋಲಿಯೇಶನ್ ವಿಧಾನ ಒಣಚರ್ಮದ ವ್ಯಕ್ತಿಗಳಿಗೆ ಸೂಕ್ತವಲ್ಲ.

ಬದಲಿಗೆ ಈ ವ್ಯಕ್ತಿಗಳು ಸೌಮ್ಯವಾದ AHAಗಳನ್ನು ಬಳಸಿ ರಾಸಾಯನಿಕ ಎಕ್ಸ್‌ಫೋಲಿಯೇಶನ್ ಮಾಡಿಕೊಳ್ಳುವುದು ಸೂಕ್ತ. ಈ ವ್ಯಕ್ತಿಗಳಿಗೆ ಸೂಕ್ತವಾದ AHAಗಳೆಂದರೆ:

ಗ್ಲೈಕೊಲಿಕ್ ಆಮ್ಲ

ಲ್ಯಾಕ್ಟಿಕ್ ಆಮ್ಲ

ಮ್ಯಾಂಡೆಲಿಕ್ ಆಮ್ಲ

ಪೈರುವಿಕ್ ಆಮ್ಲ

ಈ ಚರ್ಮದ ಸುಗಮಕಾರಿಗಳು ಚರ್ಮದ ರಚನೆಯನ್ನು ನಿರ್ಮಿಸುವ ಕೊಲ್ಯಾಜೆನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು. ಹಾಗೂ AHAಗಳು ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಇದು ಚರ್ಮದ ವಿನ್ಯಾಸವನ್ನು ಸುಗಮಗೊಳಿಸಲು ಸಹ ಸಹಾಯ ಮಾಡುತ್ತದೆ ಎಂದು ಚರ್ಮವೈದ್ಯರು ಅಭಿಪ್ರಾಯ ಪಡುತ್ತಾರೆ.

ಒಣ ಚರ್ಮವನ್ನು ಎಫ್ಫೋಲಿಯೇಟ್ ಮಾಡಿದ ನಂತರ, ಸೆರಾಮೈಡ್ಸ್ ಅಥವಾ ಹೈಲುರಾನಿಕ್ ಆಮ್ಲದಂತಹ ತೇವಾಂಶವನ್ನು ಉಳಿಸಿಕೊಳ್ಳುವ ಪದಾರ್ಥಗಳೊಂದಿಗೆ ತೇವಕಾರಕ ಅಥವಾ ಮಾಯಿಶ್ಚರೈಸರ್ ಗಳನ್ನು ಬಳಸಿ ಎಂದು ಚರ್ಮವೈದ್ಯರು ಸಲಹೆ ಮಾಡುತ್ತಾರೆ. ಬಳಿಕ ಬಿಸಿಲಿಗೆ ಹೋಗಬೇಕಾದರೆ SPF 30 ಇರುವ ಸನ್‌ಸ್ಕ್ರೀನ್ ಹಚ್ಚಿಕೊಂಡೇ ಹೋಗುವುದು ಅಗತ್ಯವಾಗಿದೆ.

ತೈಲಯುಕ್ತ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದು ಹೇಗೆ

ತೈಲಯುಕ್ತ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದು ಹೇಗೆ

ತೈಲಯುಕ್ತ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದರಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಬಹುದು ಮತ್ತು ಮೊಡವೆಗಳು ಬಾರದಂತೆ ತಡೆಯಬಹುದು.

ತೈಲಯುಕ್ತ ಚರ್ಮವುಳ್ಳವರು ಸಾಮಾನ್ಯವಾಗಿ ವಾರದಲ್ಲಿ ಮೂರು ಬಾರಿ ಎಫ್ಫೋಲಿಯೇಶನ್ ಅನ್ನು ಸಹಿಸಿಕೊಳ್ಳುತ್ತಾರೆ. ಮೊಡವೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಒಂದು ರೀತಿಯ ಆಮ್ಲವಾದ ಸ್ಯಾಲಿಸಿಲಿಕ್ ಆಮ್ಲವನ್ನು ಬಳಸುವಂತೆ ಚರ್ಮವೈದ್ಯರು ಸಲಹೆ ಮಾಡುತ್ತಾರೆ.

ತೈಲಯುಕ್ತ ಚರ್ಮವು ಸತ್ತ ಚರ್ಮದ ಕೋಶಗಳ ರಚನೆಯ ಹೆಚ್ಚುವರಿ ಪದರವನ್ನು ಹೊಂದಿರುವುದರಿಂದ, ಇದು ಹಲ್ಲುಜ್ಜುವಿಕೆಯಂತಹ ಉಜ್ಜುವಿಕೆಯಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಆದರೆ, ಎಣ್ಣೆಯುಕ್ತ ಚರ್ಮವುಳ್ಳ ಜನರು ಕಠಿಣವಾದ ಶುದ್ಧೀಕರಣ ಉತ್ಪನ್ನಗಳನ್ನು ಅಥವಾ ಮೊಡವೆಗಳಿಗೆ ಹಚ್ಚುವ ಔಷಧಿಗಳ ಬಳಕೆಯಿಂದ ಚರ್ಮವನ್ನು ಇನ್ನಷ್ಟು ಒಣಗಿಸುವ ಬಗ್ಗೆ ಎಚ್ಚರದಿಂದಿರಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

ಕೆಲವೊಮ್ಮೆ ತ್ವಚೆ ಅತಿಯಾಗಿ ಒಣಗಿದರೂ ಇದನ್ನು ಸರಿಪಡಿಸುವ ಪ್ರತಿಕ್ರಿಯೆಯಾಗಿ ಹೆಚ್ಚಿನ ತೈಲ ಉತ್ಪಾದನೆಯಾಗುತ್ತದೆ. , ಆದ್ದರಿಂದ ರಕ್ಷಣಾತ್ಮಕ ಚರ್ಮದ ತಡೆಗೋಡೆಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಚರ್ಮದ ಈ ತೈಲ ತಾತ್ಕಾಲಿಕವೇ ಅಥವಾ ಸದಾ ಎದುರಾಗುತ್ತದೆಯೇ ಎಂಬ ಬಗ್ಗೆ ಗಮನ ನೀಡಿ ಎಂದು ತಜ್ಞರು ಎಚ್ಚರಿಸುತ್ತಾರೆ.

ಸೂಕ್ಷ್ಮಸಂವೇದಿ ತ್ವಚೆಯನ್ನು ಎಫ್ಫೋಲಿಯೇಟ್ ಮಾಡುವುದು ಹೇಗೆ

ಸೂಕ್ಷ್ಮಸಂವೇದಿ ತ್ವಚೆಯನ್ನು ಎಫ್ಫೋಲಿಯೇಟ್ ಮಾಡುವುದು ಹೇಗೆ

ಅತ್ಯಂತ ಸೂಕ್ಷ್ಮ ಸಂವೇದಿ ತ್ವಚೆ ಅಥವಾ ಮೊಡವೆ ಮತ್ತು ಸೂಕ್ಷ್ಮ ಗೀರುಗಳಿರುವ ವ್ಯಕ್ತಿಗಳು ಚರ್ಮವನ್ನು ಮತ್ತಷ್ಟು ಕೆರಳಿಸದಂತೆ ಎಕ್ಸ್‌ಫೋಲಿಯೇಟ್ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಲೂ ಬಯಸಬಹುದು. ವಿಶೇಷವಾಗಿ ರೋಸಾಸಿಯಾ (rosacea) ಎಂಬ ಸ್ಥಿತಿ ಇರುವ ವ್ಯಕ್ತಿಗಳ ಮುಖದ ಮೇಲೆ ಮತ್ತು ಸುತ್ತಮುತ್ತಲಿನ ಚರ್ಮ ಬಣ್ಣ ಬಳಿದಂತೆ ಕಂಪಗಾಗಿರುತ್ತದೆ ಹಾಗೂ ಕೆಲವೊಮ್ಮೆ ಗಾಢ ಕೆಂಪು ಬಣ್ಣವನ್ನೂ ಪಡೆಯಬಹುದು.

ಈ ಸ್ಥಿತಿ ಇರದ ಇತರ ಸೂಕ್ಷ್ಮಸಂವೇದಿ ತ್ವಚೆಯ ವ್ಯಕ್ತಿಗಳು ತಮ್ಮ ಇಡೀ ಮುಖವನ್ನು ಎಫ್ಫೋಲಿಯೇಟ್ ಮಾಡುವ ಮೊದಲು, ಸೂಕ್ಷ್ಮ ಚರ್ಮ ಹೊಂದಿರುವವರು ಪ್ಯಾಚ್ ಟೆಸ್ಟ್ ಅಥವಾ ದೇಹದ ಇತರ, ಅಂದರೆ ಮುಖದಿಂದ ದೂರವಿರುವ ಭಾಗಕ್ಕೆ ಈ ಪ್ರಸಾದನವನ್ನು ಹಚ್ಚಿ ಯಾವುದೇ ಅಲರ್ಜಿ ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕು. ಈ ಪ್ರಸಾದನಕ್ಕೆ ನಿಮ್ಮ ತ್ವಚೆ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಖಚಿತಪಡಿಸಲು ಇಪ್ಪತ್ತನಾಲ್ಕು ಘಂಟೆಗಳಾದರೂ ಕಾಯಬೇಕು.

ಒಂದು ವೇಳೆ ಈ ಭಾಗದಲ್ಲಿ ತುರಿಕೆ, ಕೆಂಪಗಾಗುವುದು, ಉರಿ ಅಥವಾ ಯಾವುದೇ ಬಗೆಯ ಅಲರ್ಜಿಯ ಸೂಚನೆಗಳು, ನೀರುಗುಳ್ಳೆಗಳು ಕಾಣಿಸಿಕೊಂಡರೆ ಇದು ನಿಮ್ಮ ಸೂಕ್ಷ್ಮ ಸಂವೇದಿ ತ್ವಚೆಗೆ ಈ ಪ್ರಸಾದನ ಸೂಕ್ತವಲ್ಲ ಎಂದು ಖಚಿತವಾಗುತ್ತದೆ. ಎಂದಿಗೂ ಇದನ್ನು ಬಳಸದಿರಿ.

ಒಂದು ವೇಳೆ ಯಾವುದೇ ಅಲರ್ಜಿಯ ಲಕ್ಷಣಗಳು ತೋರದೇ ಇದ್ದಲ್ಲಿ ಇದನ್ನು ಸಂಪೂರ್ಣವಾಗಿ ಸುರಕ್ಷಿತ ಎಂದು ಈಗಲೂ ಖಚಿತವಾಗಿ ಹೇಳಲು ಸಾಧ್ಯವಾಗದು. ಹಾಗಾಗಿ ವಾರಕ್ಕೆ ಒಮ್ಮೆ ಅಥವಾ ಗರಿಷ್ಟ ಎರಡು ಬಾರಿ ಮಾತ್ರವೇ, ಮಿತ ಪ್ರಮಾಣದಲ್ಲಿ ಹಚ್ಚಿಕೊಳ್ಳಬೇಕು ಎಂದು ತಜ್ಞರು ವಿವರಿಸುತ್ತಾರೆ.

ಸೂಕ್ಷ್ಮ ಸಂವೇದಿ ತ್ವಚೆಯುವುಳ್ಳವರಿಗೆ ಲ್ಯಾಕ್ಟಿಕ್ ಆಮ್ಲವು ಉತ್ತಮ ರಾಸಾಯನಿಕ ಎಫ್ಫೋಲಿಯಂಟ್ ಆಗಿದೆ ಏಕೆಂದರೆ ಇದು ಸೌಮ್ಯ ಮತ್ತು ಕಡಿಮೆ ಉರಿಯನ್ನು ಉಂಟು ಮಾಡುತ್ತದೆ. ಸೂಕ್ಷ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಮತ್ತೊಂದು ಉತ್ತಮ ಆಯ್ಕೆ ಸೋನಿಕ್ ಶುದ್ಧೀಕರಣ ಸಾಧನವಾಗಿದೆ (sonic cleansing device).

ಸೂಸೂಕ್ಷ್ಮ ಸಂವೇದಿ ತ್ವಚೆಯುವುಳ್ಳವರು ಭೌತಿಕ ಎಫ್ಫೋಲಿಯಂಟ್ ಗಳನ್ನು ತಪ್ಪಿಸಬೇಕು ಏಕೆಂದರೆ ಅವು ಚರ್ಮವನ್ನು ಮತ್ತಷ್ಟು ಕೆರಳಿಸಬಹುದು.

ಎಫ್ಫೋಲಿಯೇಟಿಂಗ್ ಅನ್ನು ಯಾವಾಗ ನಿಲ್ಲಿಸಬೇಕು?

ಎಫ್ಫೋಲಿಯೇಟಿಂಗ್ ಅನ್ನು ಯಾವಾಗ ನಿಲ್ಲಿಸಬೇಕು?

ಒಣ, ಎಣ್ಣೆಯುಕ್ತ ಮತ್ತು ಸೂಕ್ಷ್ಮತೆಯು ಚರ್ಮದ ಪ್ರಕಾರದ ವಿಧಗಳಾಗಿವೆ. ನಿಮ್ಮ ಚರ್ಮವನ್ನೇ ಹೋಲುವ ಇನ್ನೊಬ್ಬ ವ್ಯಕ್ತಿಗೆ ಯಾವುದು ಸೂಕ್ತವಾಗುತ್ತದೆಯೋ ಅದು ನಿಮಗೆ ಸೂಕ್ತವಾಗದೇ ಇರಬಹುದು. ಹಾಗಾಗಿ ಪ್ರತಿ ವ್ಯಕ್ತಿಯೂ ತನಗೆ ಸೂಕ್ತವಾದ ಪ್ರಸಾದನ ಮತ್ತು ವಿಧವನ್ನು ಖಚಿತಪಡಿಸಿಕೊಂಡು ಮುಂದೆಯೂ ಇದೇ ಪ್ರಕಾರದ ಪ್ರಸಾದನಗಳನ್ನೇ ಬಳಸಬೇಕು.

ನಿಮ್ಮ ಎಕ್ಸ್‌ಫೋಲಿಯಂಟ್ ಒಳ್ಳೆಯದಕ್ಕಿಂತ ಹೆಚ್ಚಾಗಿ ಹಾನಿ ಮಾಡುತ್ತಿದೆಯೇ ಎಂದು ತಿಳಿಯಲು, ಅದನ್ನು ಬಳಸಿದ ನಂತರ ನಿಮ್ಮ ಚರ್ಮವು ಹೇಗೆ ಕಾಣುತ್ತದೆ ಮತ್ತು ನಿಮಗೆ ಹೇಗೆ ಅನುಭವವಾಗುತ್ತಿದೆ ಎಂಬುದರ ಬಗ್ಗೆ ಗಮನ ಕೊಡಿ. ಮುಖಕ್ಕೆ ಎಫ್ಫೋಲಿಯಂಟ್ ಅನ್ನು ಬಳಸಿದ ನಂತರ ಚರ್ಮವು ಸುಮಾರು ಹತ್ತು ನಿಮಿಷಗಳ ಕಾಲ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುವುದು ಸಾಮಾನ್ಯವಾಗಿದೆ. ರಾಸಾಯನಿಕ ಎಫ್ಫೋಲಿಯಂಟುಗಳಿಗೆ ಸಂಬಂಧಿಸಿದಂತೆ, ಹಚ್ಚಿದ ಬಳಿಕ ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಸಂವೇದನೆ ಎದುರಾಗುವುದು ಸಾಮಾನ್ಯವಾಗಿದೆ, ಆದರೆ ಉತ್ಪನ್ನವನ್ನು ತೊಳೆದ ನಂತರ ಅದು ಪೂರ್ಣವಾಗಿ ತ್ವಚೆಯಿಂದ ನಿವಾರಣೆಯಾಗಲೇಬೇಕು.

ಆದರೂ, ನೀವು ಈ ಕೆಳಗಿನ ಯಾವುದೇ ತ್ವಚೆಯ ತೊಂದರೆಯ ಲಕ್ಷಣಗಳನ್ನು ಅನುಭವಿಸಿದರೆ, ಸಾಧ್ಯವಾದಷ್ಟು ಬೇಗ ಎಫ್ಫೋಲಿಯಂಟ್ ಅನ್ನು ಬಳಸುವುದನ್ನು ನಿಲ್ಲಿಸಿ:

ತುರಿಕೆ

ಉರಿಯೂತ

ನಿರಂತರ ಕೆಂಪಗಾಗಿಯೇ ಇರುವುದು

ಬೆಂಕಿ ಬಿದ್ದಂತೆ ಉರಿಯುವುದು

ಚರ್ಮದಲ್ಲಿ ಸತತ ತುರಿಕೆ

ಈ ರೋಗಲಕ್ಷಣಗಳು ಅತಿಯಾದ ಬಳಕೆ, ಚರ್ಮದ ಅಲರ್ಜಿ ಅಥವಾ ಉರಿಯೂತ ಉಂಟುಮಾಡುವ ಕಾಂಟ್ಯಾಕ್ಟ್ ಡರ್ಮಟೈಟಿಸ್‌ನಿಂದಾಗಿರಬಹುದು - ಅಲರ್ಜಿಯಲ್ಲದ ಚರ್ಮದ ಪ್ರತಿಕ್ರಿಯೆಯು ಉತ್ಪನ್ನವು ಚರ್ಮದ ಹೊರ ಪದರವನ್ನು ಹಾನಿಗೊಳಿಸಿದಾಗ ಸಂಭವಿಸುತ್ತದೆ. ಬಳಕೆಯನ್ನು ನಿಲ್ಲಿಸಿದ ನಂತರ ರೋಗಲಕ್ಷಣಗಳು ತಾವಾಗಿಯೇ ಪರಿಹರಿಸದಿದ್ದರೆ, ಸಮಸ್ಯೆಯನ್ನು ನಿರ್ಧರಿಸಲು ಚರ್ಮರೋಗ ವೈದ್ಯರೊಂದಿಗೆ ಸಮಾಲೋಚಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ.

ಕೊನೆಯದಾಗಿ:

ವಿವಿಧ ರೀತಿಯ ಚರ್ಮದ ಪ್ರಕಾರಗಳಿಗಾಗಿ ರಾಸಾಯನಿಕ ಮತ್ತು ಭೌತಿಕ ಎಫ್ಫೋಲಿಯಂಟುಗಳನ್ನು ವಿನ್ಯಾಸಗೊಳಿಸಲಾಗಿದೆ. ಮತ್ತು ನೀವು ಯಾವ ರೀತಿಯ ಚರ್ಮದ ಪ್ರಕಾರವನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಇದಕ್ಕೆ ಸೂಕ್ತವಾದ ಪ್ರಸಾದನವನ್ನು ಮತ್ತು ಅದನ್ನು ಎಷ್ಟು ಬಾರಿ ಬಳಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ.

ಒಣ ಚರ್ಮ: ವಾರಕ್ಕೆ ಒಂದರಿಂದ ಎರಡು ಬಾರಿ ರಾಸಾಯನಿಕ ಎಫ್ಫೋಲಿಯಂಟ್ ಬಳಸಿ.

ತೈಲಯುಕ್ತ ಚರ್ಮ: ವಾರಕ್ಕೆ ಮೂರು ಬಾರಿ ರಾಸಾಯನಿಕ ಅಥವಾ ಭೌತಿಕ ಎಫ್ಫೋಲಿಯಂಟ್ ಬಳಸಿ.

ಸೂಕ್ಷ್ಮ ಸಂವೇದಿ ತ್ವಚೆ: ವಾರಕ್ಕೆ ಒಂದರಿಂದ ಎರಡು ಬಾರಿ ರಾಸಾಯನಿಕ ಎಫ್ಫೋಲಿಯಂಟ್ ಬಳಸಿ, ಗರಿಷ್ಠ. ಎಫ್ಫೋಲಿಯೇಟ್ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸುವುದನ್ನೂ ನೀವು ಆಯ್ಕೆ ಮಾಡಬಹುದು.

ನಿಮ್ಮ ದಿನಚರಿಯಲ್ಲಿ ಎಕ್ಸ್‌ಫೋಲಿಯಂಟ್ ಅನ್ನು ಸೇರಿಸಲು ಈ ಮಾರ್ಗಸೂಚಿಗಳು ನಿಮಗೆ ಸಹಾಯ ಮಾಡಬಹುದಾದರೂ, ನಿಮ್ಮ ತ್ವಚೆಗೆ ಯಾವುದು ಅತ್ಯುತ್ತಮ ಎನ್ನುವುದನ್ನು ಅನುಭವದ ಬಳಿಕವೇ ಖಚಿತ ನಿರ್ಧಾರಕ್ಕೆ ಬರುವುದು ಉತ್ತಮ. ಈ ಮೂಲಕ ನಿಮಗೆ ಒಗ್ಗದ ಪ್ರಸಾದನದ ಬಳಕೆ ಅಥವಾ ವಿಧವನ್ನು ಬಳಸಿ ತ್ವಚೆಯ ಸ್ಥಿತಿ ಉಲ್ಬಣಗೊಳ್ಳುವುದರಿಂದ ತಪ್ಪಿಸಬಹುದು.

English summary

How to Exfoliate Your Face Based on Your Skin Type, According to Dermatologists

Here are how to exfoliate your face based on your skin, read on, according to Dermatologists, read on,
X