For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಬಳಿಕ ತುರಿಕೆ, ಉರಿಯಾಗುವುದು ತಪ್ಪಿಸಲು ಈ ಉಪಾಯ ಬೆಸ್ಟ್

|

ಅನ್‌ವಾಂಟೆಡ್‌ ಹೇರ್‌ ಅಂದ್ರೆ ಬೇಡದ ಕೂದಲನ್ನು ತೆಗೆಯಲು ಹಲವಾರು ವಿಧಾನಗಳಿವೆ, ಆದರೆ ಅತೀ ಹೆಚ್ಚು ಬಳಕೆ ಮಾಡುವುದು ವ್ಯಾಕ್ಸಿಂಗ್‌ ಹಾಗೂ ರೇಝರ್. ಅದರಲ್ಲೂ ವ್ಯಾಕ್ಸಿಂಗ್‌ ನೋವು ಬೇಡ ಎನ್ನುವವರಿಗೆ ಬೆಸ್ಟ್ ಆಪಕ್ಷನ್‌ ಅಂದ್ರೆ ರೇಝರ್.

ರೇಝರ್ ಬಳಸುವಾಗ ನೋವಾಗಲ್ಲ, ಆದರೆ ಅದರ ನಂತರ ಒಂದೆರಡು ದಿನದಲ್ಲಿ ಕಿರಿಕಿರಿ ಸ್ಟಾರ್ಟ್ ಆಗುತ್ತದೆ. ತುರಿಸಲಾರಂಭಿಸುತ್ತದೆ, ಕೆಲವರಿಗೆ ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡು ಬರುವುದು, ಇದು ಮತ್ತೂ ಹಿಂಸೆ.

how to use razor for shaving

ನೀವು ರೇಝರ್ ಬಳಸುತ್ತಿದ್ದರೆ ಈ ವಿಧಾನದ ಮೂಲಕ ಕಿರಿಕಿರಿ ತಡೆಗಟ್ಟಬಹುದು ನೋಡಿ:

* ರೇಝರ್‌ ಗುಣಮಟ್ಟ ಮುಖ್ಯ: ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ರೇಝರ್ ಲಭ್ಯವಿದೆ. ದುಬಾರಿ ಬೆಲೆಯದ್ದೇ ಬಳಸಬೇಕೆಂದೇನಿಲ್ಲ, ಆದರೆ ಗುಣಮಟ್ಟದ ರೇಝರ್ ಬಳಸಬೇಕು. ತುಂಬಾ ಲೋಕಲ್‌ ರೇಝರ್ ಬಳಿಸಿದರೆ ಶೇವಿಂಗ್ ಬಳಿಕ ತ್ವಚೆ ಅಲರ್ಜಿ ಮುಂತಾದ ಸಮಸ್ಯೆ ಹೆಚ್ಚುವುದು. ಆದ್ದರಿಂದ ಸೂಕ್ತವಾದ ರೇಝರ್ ನಿಮ್ಮ ಆಯ್ಕೆ ಆಗಿರಲಿ. ಇನ್ನು ತುಂಬ ಹಳೆಯ ರೇಝರ್ ಬಳಸಬೇಡಿ.

* ಶೇವಿಂಗ್ ಮಾಡುವ ಮುನ್ನ ತ್ವಚೆಯನ್ನು ಮೃದುವಾಗಿಸಿ
ನೀವು ಶೇವಿಂಗ್‌ ಮಾಡುವ ಮುನ್ನ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿ, ಇದರಿಂದ ತ್ವಚೆ ಮೃದುವಾಗುವುದು. ಇದರಿಂದ ಕ್ಲೀನ್‌ ಆಗಿ ಶೇವ್‌ ಮಾಡಬಹುದು.

* ಶೇವಿಂಗ್‌ ಮಾಡಿದ ತಕ್ಷಣ ಉಗುರು ಬೆಚ್ಚಗಿನ ನೀರಿನ ಸ್ನಾನ
ಶೇವಿಂಗ್‌ ಮಾಡಿದ ಮೇಲೆ ಉಗುರು ಬೆಚ್ಚಗಿನ ನೀರಿನ ಸ್ನಾನ ಮಾಡಿ, ಶವರ್ ಅಡಿಯಲ್ಲಿ ನಿಂತರ ಇನ್ನೂ ಒಳ್ಳೆಯದು. ಇನ್ನು ಶೇವಿಂಗ್‌ ಮಾಡುವಾಗ ಸೋಪ್‌ ಅಥವಾ ಶೇವಿಂಗ್‌ ಕ್ರೀಮ್ ಬಳಸಿ.

ಶೇವಿಂಗ್‌ ಮಾಡಿದ ಬಳಿಕ ಮಾಯಿಶ್ಚರೈಸರ್ ಹಚ್ಚಿ
ಶೇವಿಂಗ್ ಮಾಡಿದ ಮೇಲೆ ಸ್ನಾನ ಮುಗಿಸಿ ಆ ಭಾಗಕ್ಕೆ ಮಾಯಿಶ್ಚರೈಸರ್ ಹಚ್ಚಿ, ಇದರಿಂದ ತ್ವಚೆ ಉರಿ, ನವೆ ಉಂಟಾಗುವುದು, ತುರಿಕೆ ಬರುವುದು ಮುಂತಾದ ಸಮಸ್ಯೆ ತಡೆಗಟ್ಟಬಹುದು.

ಇತರ ಪ್ರಮುಖ ಟಿಪ್ಸ್
ಒಂದು ರೇಝರ್ ತುಂಬಾ ಬಾರಿ ಬಳಸಬೇಡಿ
ಒಂದು ರೇಝರ್ ಅನ್ನು ತಿಂಗಳುಗಟ್ಟಲೆ ಬಳಸಬೇಡಿ. ಒಂದು ರೇಝರ್‌ ಅನ್ನು ಹೆಚ್ಚೆಂದರೆ 5-7 ಬಾರಿ ಬಳಸಬಹುದು, ಅದಕ್ಕಿಂತ ಹೆಚ್ಚಿನ ಬಾರಿ ಬಳಸಿದರೆ ತ್ವಚೆಗೆ ಹಾನಿಯಾಗುವುದು.

* ಮತ್ತೊಂದು ಪ್ರಮುಖವಾದ ಟಿಪ್ಸ್ ಅಂದ್ರೆ ರೇಝರ್ ಅನ್ನು ಕೂದಲು ಬೆಳೆಯುವ ಉಲ್ಟಾ ಡೈರೆಕ್ಷನ್‌ಗೆ ಹಿಡಿದು ಶೇವ್ ಮಾಡಿ.

English summary

How to Deal With After Shave Irritation In Kannada

Using razor: Here are tips to deal with irritation after shave, read on..
Story first published: Thursday, December 1, 2022, 19:57 [IST]
X
Desktop Bottom Promotion