For Quick Alerts
ALLOW NOTIFICATIONS  
For Daily Alerts

ಚಳಿಗಾಲ: ಈ ಗ್ಲಿಸರಿನ್ ಸೆರಮ್ ನೀವೇ ತಯಾರಿಸಿ ಬಳಿಸಿದರೆ ತ್ವಚೆ ಒಡೆಯುವ ಸಮಸ್ಯೆಯೇ ಇರಲ್ಲ

|

ಬೆಳಗ್ಗೆ ಎದ್ದಾಗ ಸುರಿಯುವ ಮಂಜು ನೋಡುವುದೇ ಆನಂದ... ಚುಮು-ಚುಮು ಚಳಿಯಲ್ಲಿ ಬೆಚ್ಚನೆಯ ಸ್ವೆಟರ್ ಅಥವಾ ಜರ್ಕಿನ್ ಹಾಕಿ, ತಲೆಗೆ ಮಪ್ಲರ್‌ ಸುತ್ತಿ ನಡೆದಾಡುವ ಆನಂದ ಸಿಗುವುದು ಚಳಿಗಾಲದಲ್ಲೇ, ಆದರೆ ಬೇಸರದ ಸಂಗತಿ ಅಂದ್ರೆ ಚಳಿಗಾಲ ಬಂತೆಂದರೆ ತ್ವಚೆಗೆ ಆಗಿ ಬರಲ್ಲ, ತ್ವಚೆ ಒಡೆಯಲು ಪ್ರಾರಂಭಿಸುತ್ತದೆ, ಇನ್ನು ಒಣ ತ್ವಚೆ ಇದ್ದರಂತೂ ಹೇಳುವುದೇ ಬೇಡ, ಪಾದಗಳು, ಕಾಲುಗಳು, ಅಂಗೈ ಒಡೆದು ರಕ್ತ ಬರಲಾರಂಭಿಸುತ್ತದೆ. ತುಟಿಗಳು ಒಡೆಯುವುದು, ಕೆನ್ನೆ ಒಡೆದು ನಗುವಾಗ ಒಂಥರಾ ಕಿರಿಕಿರಿ ಅನಿಸುವುದು. ಆದರೆ ನಾವಿಲ್ಲಿ ಈ ಚಳಿಗಾಲದಲ್ಲಿ ಈ ಕಿರಿಕಿರಿ ಏನೂ ಅನುಭವಿಸದೆ ಚಳಿಗಾಲವನ್ನು ಎಂಜಾಯ್‌ ಮಾಡಲು ಟಿಪ್ಸ್. ನಾವು ನೀಡಿರುವ ಸೌಂದರ್ಯ ಟಿಪ್ಸ್ ಪಾಲಿಸಿದರೆ ಹೆಚ್ಚು ಹಣವೂ ಖರ್ಚಾಗಲ್ಲ, ತ್ವಚೆ ಮೃದುವಾಗಿ ಇರುತ್ತದೆ, ಹೇಗೆ ಎಂದು ನೋಡೋಣ ಬನ್ನಿ...

ಚಳಿಗಾಲಕ್ಕೆ ಬೆಸ್ಟ್ ಗ್ಲಿಸರಿನ್... ಗ್ಲಿಸರಿನ್

ಚಳಿಗಾಲಕ್ಕೆ ಬೆಸ್ಟ್ ಗ್ಲಿಸರಿನ್... ಗ್ಲಿಸರಿನ್

ಗ್ಲಿಸರಿನ್ ಅಂಟು-ಅಂಟಾಗಿ ಅನುಸುವುದರಿಂದ ಗ್ಲಿಸರಿನ್ ಹಚ್ಚಲು ಇಷ್ಟವಾಗಲ್ಲ, ಆದರೆ ಗ್ಲಿಸರಿನ್ ಚಳಿಗಾಲದಲ್ಲಿ ತ್ವಚೆ ಆರೈಕೆಯಲ್ಲಿ ಸೂಪರ್. ಆದರೆ ಗ್ಲಿಸರಿನ್‌ ಅನ್ನು ಅಂಟು-ಟಂಟಾಗಿ ಇರದಂತೆ ಬಳಸುವುದು ಹೇಗೆ ಟ್ರಿಕ್ಸ್ ಇಲ್ಲಿದೆ ನೋಡಿ.

ಗ್ಲಿಸರಿನ್ ಸೆರಮ್ ಮಾಡುವುದು ಹೇಗೆ?

ಗ್ಲಿಸರಿನ್ ಸೆರಮ್ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ

100 ml ಗ್ಲಿಸರಿನ್‌

2 ಚಮಚ ನಿಂಬೆ ರಸ

30 ರಿಂದ 40 ml ರೋಸ್‌ ವಾಟರ್

10 ಡ್ರಾಪ್ಸ್ ವಿಟಮಿನ್‌ ಇ ಎಣ್ಣೆ

250 ml ಬಾಟಲಿ (ಸ್ಟೋರ್ ಮಾಡಲು)

ಮಾಡುವುದು ಹೇಗೆ:

ಮಾಡುವುದು ಹೇಗೆ:

ಸ್ಟೆಪ್ 1: ಒಂದು ಬೌಲ್‌ನಲ್ಲಿ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಸ್ಟೆಪ್‌ 2: ಈಗ ಮಿಶ್ರಣ ಮಾಡಿದ ಸೆರಮ್ ಅನ್ನು ಬಾಟಲಿನಲ್ಲಿ ಹಾಕಿ ಮುಚ್ಚಳ ಹಾಕಿ ತಂಪಾದ ಸ್ಥಳ (ರೂಮ್‌ ಉಷ್ಣತೆಯಲ್ಲಿ) ಇಡಿ.

ಸ್ನಾನ ಮಾಡುವ ಮುಂಚೆ ಹಾಗೂ ಮಲಗುವ ಮುಂಚೆ ಹಚ್ಚಿದರೆ ಒಳ್ಳೆಯ ಫಲಿತಾಂಶ ಕಾಣುವಿರಿ.

ತ್ವಚೆಯಲ್ಲಿ ಆಗುವ ಬದಲಾವಣೆಗಳು

ತ್ವಚೆಯಲ್ಲಿ ಆಗುವ ಬದಲಾವಣೆಗಳು

ನೀವು ಈ ಮಿಶ್ರಣ ಹಚ್ಚುತ್ತಾ ಬಂದರೆ ಒಂದು ತಿಂಗಳು ಆಗುವಷ್ಟರಲ್ಲಿ ನಿಮನ್ಮ ತ್ವಚೆ ಹೀಗಿರುತ್ತೆ

1. ಒಣ ತ್ವಚೆಯ ಸಮಸ್ಯೆ ಇರಲ್ಲ: ಬೆಳಗ್ಗೆ ಎದ್ದು ನೋಡಿದರೆ ಕೈ -ಕಾಲುಗಳಲ್ಲಿ ಡ್ರೈ ಪ್ಯಾಚ್‌ ಕಂಡು ಬರಲ್ಲ.

2. ಡಾರ್ಕ್ ಸರ್ಕಲ್ ಇರಲ್ಲ: ಇದರಲ್ಲಿ ವಿಟಮಿನ್ ಇ ಇರುವುದರಿಂದ , ತ್ವಚೆಗೆ ವಿಟಮಿನ್ ಸಿ ಕೂಡ ಇರುವುದರಿಂದ ಡಾರ್ಕ್‌ ಸರ್ಕಲ್ ಸಮಸ್ಯೆಯಿದ್ದರೂ ಅದೂ ಇಲ್ಲವಾಗುವುದು.

3. ಪಿಗ್ಮೆಂಟೇಷನ್ ಕಡಿಮೆಯಾಗುವುದು

ಪಿಗ್ಮೆಂಟೇಷನ್ ಇದ್ದರೆ ಈ ಸೆರಮ್ ಹಚ್ಚುತ್ತಿದ್ದರೆ ಅದು ಕೂಡ ಕಡಿಮೆಯಾಗುವುದು.

4. ತ್ವಚೆಯೂ ತುಂಬಾ ಮೃದುವಾಗುವುದು: ನೀವು ನಿಮ್ಮ ತ್ವಚೆಯನ್ನು ಮುಟ್ಟಿ ನೋಡಿದಾಗ ಮೊದಲಿಗಿಂತ ಸಾಫ್ಟ್ ಆದಂತೆ ಅನಿಸುವುದು.

5. ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುತ್ತೆ: ಈ ಮಿಶ್ರಣ ಹಚ್ಚುತ್ತಿದ್ದರೆ ಯಾವ ಮಾಯಿಶ್ಚರೈಸರ್ ಬೇಕಾಗಿಲ್ಲ, ತ್ವಚೆ ಮಾಯಿಶ್ಚರೈಸರ್ ಆಗಿರುತ್ತೆ.

ಕೊನೆಯದಾಗಿ: ಚಳಿಗಾಲದಲ್ಲಿ ಬಿಸಿ-ಬಿಸಿ ನೀರು ಮೈಗೆ ಹಾಕುವಾಗ ಹಿತ ಅನಿಸಿದರೂ ತ್ವಚೆಗೆ ಒಳ್ಳೆಯದಲ್ಲ, ಬಿಸಿ ನೀರು ತ್ವಚೆಯನ್ನು ಡ್ರೈಯಾಗಿಸುತ್ತೆ, ಆದ್ದರಿಂದ ಉಗುರು ಬೆಚ್ಚಗಿನ ನೀರು ಬಳಸಿ.

English summary

How Glycerin Serum Help To Treat Dry Skin Within A Month in kannada

How Glycerin Serum Help To Treat Dry Skin Within A Month in kannada, Read on...
Story first published: Saturday, December 11, 2021, 16:08 [IST]
X
Desktop Bottom Promotion