For Quick Alerts
ALLOW NOTIFICATIONS  
For Daily Alerts

ಮುಖ ಗುಲಾಬಿಯಂತೆ ಕಾಂತಿಯುತವಾಗಬೇಕೇ? ಈ ಮನೆಮದ್ದುಗಳನ್ನು ಅನುಸರಿಸಿ

|

ಮುಖದ ಮೇಲೆ ಗುಲಾಬಿಯಂತಹ ಕಾಂತಿ ಇರಬೇಕೆಂಬುದು ಎಲ್ಲರ ಬಯಕೆ. ಇಂತಹ ಪಿಂಕಿಶ್ ಕಾಂತಿಗಾಗಿ, ಆಂತರಿಕ ಹಾಗೂ ಬಾಹ್ಯ ಚಿಕಿತ್ಸೆಯಿಂದ ತ್ವಚೆಯನ್ನು ಪೋಷಿಸುವುದು ಅವಶ್ಯಕ. ಅದಕ್ಕಾಗಿ ಕೆಲವು ಮನೆಮದ್ದುಗಳನ್ನು ಬಳಸಿ, ನೈಸರ್ಗಿಕ ಹೊಳಪನ್ನು ಪಡೆಯಬಹುದು. ಹಾಗಾಗಿ ಇಂದು ನಾವು ಅಂತಹ ಪರಿಣಾಮಕಾರಿ ಸಲಹೆಗಳ ಬಗ್ಗೆ ತಿಳಿಸಲಿದ್ದೇವೆ.

ಗುಲಾಬಿಯಂತಹ ಕಾಂತಿಗಾಗಿ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

1. ರೋಸ್ ವಾಟರ್:

1. ರೋಸ್ ವಾಟರ್:

ದಿನಕ್ಕೆ ಎರಡರಿಂದ ಮೂರು ಬಾರಿ ಮುಖಕ್ಕೆ ರೋಸ್ ವಾಟರ್ ಹಚ್ಚಿ. ಹತ್ತಿಯ ಸಹಾಯದಿಂದ ಅಥವಾ ಅದನ್ನು ಫೇಸ್ ಪ್ಯಾಕ್‌ನಲ್ಲಿ ಮಿಶ್ರಣ ಮಾಡುವ ಮೂಲಕ ನೇರವಾಗಿ ಮುಖದ ಮೇಲೆ ಹಚ್ಚಿ. ಇದು ಉತ್ತಮ ರೀತಿಯಲ್ಲಿ ಲಾಭ ನೀಡುತ್ತದೆ. ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮುಖದ ಮೇಲೆ ಸ್ಪ್ರೇ ಮಾಡುವುದು ಉತ್ತಮ ಮಾರ್ಗವಾಗಿದೆ.

2. ಬೀಟ್ರೂಟ್ ಜ್ಯೂಸ್:

2. ಬೀಟ್ರೂಟ್ ಜ್ಯೂಸ್:

ವಾರದಲ್ಲಿ ಮೂರು ದಿನ ಬೀಟ್ ಜ್ಯೂಸ್ ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಮುಖದ ಮೇಲೆ ಗುಲಾಬಿ ಬಣ್ಣವನ್ನು ಕಾಣಬಹುದು. ಬೀಟ್ರೂಟ್ ಜ್ಯೂಸ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವು ನಿಮ್ಮ ಮುಖ ಹಾಗೂ ದೇಹದ ಮೇಲೆ ಗೋಚರಿಸುತ್ತದೆ. ಇದನ್ನು ಬೆಳಿಗ್ಗೆ ಅಥವಾ ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದು.

3. ಬೀಟ್ರೂಟ್ ಪೌಡರ್:

3. ಬೀಟ್ರೂಟ್ ಪೌಡರ್:

ಬೀಟ್ರೂಟ್ ಪುಡಿಗೆ ಮೊಸರು ಅಥವಾ ರೋಸ್ ವಾಟರ್ ಅನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ವಾರಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡುತ್ತೀರಿ.

ಬೀಟ್ರೂಟ್ ಪೌಡರ್ ಮಾಡುವುದು ಹೇಗೆ?:

ಬೀಟ್ರೂಟ್ ಅನ್ನು ತುರಿದು, ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಇದರಿಂದ ಅದು ತುಂಬಾ ಗಟ್ಟಿಯಾಗುತ್ತದೆ. ಎರಡು-ಮೂರು ದಿನ ಪೂರ್ತಿ ಆರಿದ ನಂತರ ಮಿಕ್ಸಿಯಲ್ಲಿ ಚೆನ್ನಾಗಿ ಪುಡಿಮಾಡಿ. ಈಗ ಬೀಟ್ರೂಟ್ ಪುಡಿ ಬಳಕೆಗೆ ಸಿದ್ಧವಾಗಿದೆ.

4. ಗುಲಾಬಿ ದಳಗಳು:

4. ಗುಲಾಬಿ ದಳಗಳು:

ಗುಲಾಬಿ ಬಣ್ಣದ ಛಾಯೆಯನ್ನು ಪಡೆಯಲು ಗುಲಾಬಿ ದಳಗಳನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಆದ್ದರಿಂದ ಇದಕ್ಕಾಗಿ ಗುಲಾಬಿ ದಳಗಳನ್ನು ಎರಡರಿಂದ ಮೂರು ನಿಮಿಷಗಳ ಕಾಲ ಹಸಿ ಹಾಲಿನಲ್ಲಿ ನೆನೆಸಿಡಿ. ನಂತರ ಅದನ್ನು ಕೈಗಳಿಂದ ಉಜ್ಜುವ ಮೂಲಕ ಮುಖದ ಮೇಲೆ ಹಚ್ಚಿ. ಚೆನ್ನಾಗಿ ಹಚ್ಚಿದ ನಂತರ 5-10 ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ಸ್ಕ್ರಬ್ ಮಾಡಿ ತೆಗೆಯಿರಿ. ಮುಖವು ಗುಲಾಬಿ ಬಣ್ಣವನ್ನು ಪಡೆಯುತ್ತದೆ ಮತ್ತು ಚರ್ಮವು ಮೃದುವಾಗುತ್ತದೆ.

5. ಸೌತೆಕಾಯಿ :

5. ಸೌತೆಕಾಯಿ :

ರಾತ್ರಿ ಮಲಗುವ ಮೊದಲು ಸೌತೆಕಾಯಿರಸ ಹಿಂಡಿ ಅದನ್ನು ಮುಖಕ್ಕೆ ಹಚ್ಚಿ. ಸೌತೆ ಕಾಯಿ ಮುಖದ ಕಾಂತಿಗೆ ಒಂದು ಸೂಪರ್ ಫುಡ್. ಸೌತೆಕಾಯಿ ಸಾರ ಚರ್ಮಕ್ಕೆ ತಂಪಿನ ಅನುಭವ ನೀಡುತ್ತದೆ. ತ್ವಚೆಯ ನೀರಿನ ಮಟ್ಟವನ್ನು ಹೆಚ್ಚಿಸಿ, ಉರಿ ಕಡಿಮೆ ಮಾಡುತ್ತದೆ. ಅರ್ಧ ಸೌತೆಕಾಯಿ ಕಟ್ ಮಾಡಿ ಅದರ ರಸ ತೆಗೆದು ಒಂದು ಹತ್ತಿ ಉಂಡೆಯ ನೆರವಿನಿಂದ ಮುಖಕ್ಕೆ ಹಚ್ಚಬಹುದು.

6. ಹೆಸರುಬೇಳೆ ಮತ್ತು ಹಾಲು:

6. ಹೆಸರುಬೇಳೆ ಮತ್ತು ಹಾಲು:

ಹಸಿ ಹಾಲಿನಲ್ಲಿ 30 ನಿಮಿಷಗಳ ಕಾಲ ಹೆಸರುಬೇಳೆಯನ್ನು ನೆನೆಸಲು ಹಾಕಿ. ಬಳಿಕ ಅದನ್ನು ರುಬ್ಬಿಕೊಳ್ಳಿ. ಇದಕ್ಕೆ ಸ್ವಲ್ಪ ಕಯೋಲಿನ್ ಪೌಡರ್ ಹಾಕಿ. ಮುಖಕ್ಕೆ ಹಚ್ಚಿ ಮತ್ತು 20 ನಿಮಿಷ ಹಾಗೆ ಬಿಡಿ. ನಂತರ ತೊಳೆಯುವುದರಿಂದ, ಮುಖದ ಕಾಂತಿ ಹೆಚ್ಚುವುದು.

English summary

Home Remedies to Get Pink Glow on the Face in Kannada

Here we talking about Home Remedies to Get Pink Glow on the Face in Kannada, read on
X
Desktop Bottom Promotion