For Quick Alerts
ALLOW NOTIFICATIONS  
For Daily Alerts

ಜೆಲ್‌ ಕ್ಲೆನ್ಸರ್‌ VS ಕ್ರೀಮ್ ಕ್ಲೆನ್ಸರ್‌: ನಿಮ್ಮ ತ್ವಚೆಗೆ ಯಾವುದು ಒಳ್ಳೆಯದು?

|

ನೀವು ಜೆಲ್‌ ಕ್ಲೆನ್ಸರ್‌ ಬಳಸುತ್ತಿದ್ದೀರಾ, ಕ್ರೀಮ್ ಕ್ಲೆನ್ಸರ್‌ ಬಳಸುತ್ತಿದ್ದೀರಾ? ಇವುಗಳಲ್ಲಿ ಯಾವ ಕ್ಲೆನ್ಸರ್ ಒಳ್ಳೆಯದು ಎಂಬುವುದು ಗೊತ್ತೇ? ಇಲ್ಲ ಅಂದ್ರೆ ಇಲ್ಲಿದೆ ನೋಡಿ ಮಾಹಿತಿ:

ಮೊದಲಿಗೆ ಕ್ಲೆನ್ಸರ್ ಕಾರ್ಯವೇನು ಎಂದು ನೋಡೋಣ:

ನೀವು ಮುಖಕ್ಕೆ ಮೇಕಪ್ ಬಳಸುತ್ತೀರಾ? ಮೇಕಪ್‌ ಅಂದ್ರೆ ಗಾಢವಾಗಿ ಹಚ್ಚುವುದು ಶಿಮ್ಮರ್, ಫೌಂಡೇಷನ್ ಅಂತಲ್ಲ, ನೀವು ಮುಖಕ್ಕೆ ಕ್ರೀಮ್ ಹಚ್ಚುತ್ತೀರಿ ತಾನೆ? ಹಾಗಾದರೆ ನೀವು ಕ್ಲೆನ್ಸರ್ ಬಳಸಲೇಬೇಕು. ಮುಖದಲ್ಲಿರುವ ಮೇಕಪ್ ತೆಗೆಯಲು ತ್ವಚೆ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ವಿಧಾನ ಕ್ಲೆನ್ಸರ್ ಬಳಸುವುದು. ಕ್ಲೆನ್ಸರ್ ತ್ವಚೆ ಡ್ರೈಯಾಗುವುದನ್ನು ತಡೆಗಟ್ಟುತ್ತದೆ, ತ್ವಚೆಯಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತದೆ. ಆದ್ದರಿಂದ ಪ್ರತಿದಿನ ಕ್ಲೆನ್ಸರ್ ಬಳಸಲೇಬೇಕು.

ಕ್ಲೆನ್ಸರ್ ಪ್ರಯೋಜನಗಳು
* ದಿನಾ ದೂಳಿನಲ್ಲಿ ಓಡಾಡುವಾಗ ಮುಖದಲ್ಲಿ ಕೊಳೆ, ದೂಳು ಕೂತಿರುತ್ತದೆ, ಅದನ್ನು ತ್ವಚೆಯ ಆಳದಿಂದ ತೆಗೆಯಲು ಸಹಕಾರಿ.
* ತ್ವಚೆ ತುಂಬಾ ಡ್ರೈಯಾಗುವುದನ್ನು ತಡೆಯುತ್ತದೆ
* ಡೆಡ್‌ಸ್ಕಿನ್ ಹೋಗಲಾಡಿಸುತ್ತೆ
* ಕ್ಲೆನ್ಸರ್ ಬಳಸಿ ಮುಖ ತೊಳೆದರೆ ತ್ವಚೆ ಮಾಯಿಶ್ಚರೈಸರ್‌

ಕ್ಲೆನ್ಸರ್ ಬಗೆಗಳು

ಜೆಲ್ ಕ್ಲೆನ್ಸರ್

ಜೆಲ್ ಕ್ಲೆನ್ಸರ್

ಕ್ಲೆನ್ಸರ್‌ ಅಂದ್ರೆ ನೊರೆ ಬರಬೇಕು ಆಗಲೇ ಮುಖದಲ್ಲಿರುವ ಜಿಡ್ಡಿನಂಶ, ಕೊಳೆ ತೆಗೆಯಲು ಸಾಧ್ಯ ಎಂದು ಜನ ಅಂದುಕೊಳ್ಳುತ್ತಾರೆ. ಆದರೆ ಜೆಲ್‌ ಕ್ಲೆನ್ಸರ್‌ನಲ್ಲಿ ಈ ರೀತಿ ಯಾವುದೇ ನೊರೆ ಬರುವುದಿಲ್ಲ, ಟ್ರಾನ್ಸ್‌ಪರೆಂಟ್ ಆಗಿರುತ್ತದೆ. ಇದರಲ್ಲಿ ಮುಖ ಸ್ವಚ್ಛ ಮಾಡಿದಾಗ ಮೈಲ್ಡ್ ಕ್ಲೆನ್ಸಿಂಗ್‌ ಅನುಭವ ಉಂಟಾಗುವುದು.

ಇದು ಮೈಲ್ಡ್ ಕ್ಲೆನ್ಸರ್‌ ಎಂದ ಮಟ್ಟಿಗೆ ತ್ವಚೆಯನ್ನೂ ಸಂಪೂರ್ಣ ಕ್ಲೀನ್‌ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ತ್ವಚೆ ಆಳದಿಂದಲೂ ಕ್ಲೆನ್ಸ್ ಮಾಡುತ್ತದೆ. ಅಲ್ಲದೆ ಜೆಲ್ ಕ್ಲೆನ್ಸರ್ ಬಳಸುವುದರಿಂದ ತ್ವಚೆಯ pH ಬ್ಯಾಲೆನ್ಸ್ ಮಾಡಬಹುದು.

ಯಾರಿಗೆ ಇದು ಒಳ್ಳೆಯದು?

ನಿಮ್ಮದು ತುಂಬಾ ಸೆನ್ಸಿಟಿವ್ ತ್ವಚೆಯಾಗಿದ್ದರೆ ಜೆಲ್‌ ಕ್ಲೆನ್ಸರ್ ಒಳ್ಳೆಯದು. ಇನ್ನು ತುಂಬಾ ಡ್ರೈ ತ್ವಚೆಯಾಗಿದ್ದರೂ ಈ ಜೆಲ್‌ ಕ್ಲೆನ್ಸರ್ ಒಳ್ಳೆಯದು. ಮೊಡವೆ ಇದ್ದರೆ ಜೆಲ್‌ ಕ್ಲೆನ್ಸರ್ ಪರಿಣಾಮಕಾರಿ.

ಆ್ಯಂಟಿಸೆಪ್ಟಿಕ್, ಆ್ಯಂಟಿಆ್ಯಕ್ನೆ ಫಾರ್ಮುಲಾಗಳನ್ನೂ ಇದರಲ್ಲಿ ಸುಲಭವಾಗಿ ಸೇರಿಸಬಹುದು. ಈ ಕ್ಲೆನ್ಸರ್ ಸಾಮಾನ್ಯವಾಗಿ ಎಲ್ಲಾ ಬಗೆಯ ತ್ವಚೆಗೆ ಹೊಂದಿಕೊಳ್ಳುತ್ತದೆ.

ಕ್ರೀಮ್ ಕ್ಲೆನ್ಸರ್

ಕ್ರೀಮ್ ಕ್ಲೆನ್ಸರ್

ಕ್ರೀಮ್ ಕ್ಲೆನ್ಸರ್‌ ಆಗಿ ಕ್ಲೆನ್ಸರ್ ಲೋಷನ್, ಕ್ಲೆನ್ಸರ್ ಮಿಲ್ಕ್‌, ಕ್ರೀಮಿ ಟೆಕ್ಷರ್‌ನಲ್ಲಿರುತ್ತದೆ. ಇದು ತ್ವಚೆಯಲ್ಲಿ ಮಾಯಿಶ್ಚರೈಸರ್ ಉಳಿಸುವಂತೆ ಮಾಡುತ್ತದೆ. ಕೊಳೆ ಹಾಗೂ ಮೇಕಪ್‌ ತೆಗೆಯಲು ಇದು ತುಂಬಾ ಪರಿಣಾಮಕಾರಿ.

ಆದರೆ ನಿಮಗೆ ಇದು ಬಳಸಿದಾಗ ತುಂಬಾ ಕ್ಲೀನ್‌ ಆಗಿದೆ ಅನಿಸದೇ ಹೋಗಬಹುದು.

ಇದು ಯಾರಿಗೆ ಒಳ್ಳೆಯದು?

ಕ್ರೀಮ್ ಕ್ಲೆನ್ಸರ್ ತುಂಬಾನೇ ಮಾಯಿಶ್ಚರೈಸರ್ ಆಗಿರುವುದರಿಂದ ನಿಮ್ಮ ತ್ವಚೆ ತುಂಬಾನೇ ಡ್ರೈಯಾಗಿದ್ದರೆ ನಿಮಗೆ ಬೆಸ್ಟ್. ಇನ್ನು ಸೆನ್ಸಿಟಿವ್ ತ್ವಚೆಯವರಿಗೂ ಈ ಕ್ಲೆನ್ಸರ್ ಒಳ್ಳೆಯದು.

ಯಾರಿಗೆ ಇದು ಒಳ್ಳೆಯದಲ್ಲ: ನಿಮ್ಮದು ಆಯಿಲ್ ತ್ವಚೆ ಅಥವಾ ಮೊಡವೆ ಇರುವ ತ್ವಚೆಯಾದರೆ ಕ್ರೀಮ್ ಕ್ಲೆನ್ಸರ್ ನಿಮಗೆ ಸೂಕ್ತವಲ್ಲ.

ಈಗ ನಿಮ್ಮ ತ್ವಚೆಗೆ ಯಾವ ಕ್ಲೆನ್ಸರ್ ಒಳ್ಳೆಯದು ಎಂಬ ಸ್ಪಷ್ಟ ಮಾಹಿತಿ ಸಿಕ್ಕಿರಬೇಕು ಅಲ್ವಾ?

ನೀವು ತಪ್ಪಾಗಿ ಕ್ಲೆನ್ಸರ್ ಬಳಸುತ್ತಿದ್ದರೆ ನಿಮಗೆ ಸೂಕ್ತವಾದ ಕ್ಲೆನ್ಸರ್ ಬಳಸಲು ಪ್ರಾರಂಭಿಸಿ, ಅತ್ಯುತ್ತಮವಾದ ಫಲಿತಾಂಶ ದೊರೆಯುವುದು.

ಇನ್ನೂ ಹೆಚ್ಚಿನ ಮಾಹಿತಿಗೆ ನೀವು ನಿಮ್ಮ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

English summary

Gel cleanser Vs cream cleanser: Which One Is Better in Kannada

Gel cleanser Vs cream cleanser: Which One Is Better To You Skin, Read on...
X
Desktop Bottom Promotion