For Quick Alerts
ALLOW NOTIFICATIONS  
For Daily Alerts

ಒಣ ತ್ವಚೆ ಸಮಸ್ಯೆಯೇ? ಈ ಫೇಸ್‌ಪ್ಯಾಕ್‌ ಒಳ್ಳೆಯದು

|

ನಮ್ಮ ಸೌಂದರ್ಯ ಕಾಪಾಡುವಲ್ಲಿ ಹಣ್ಣುಗಳ ಪಾತ್ರ ಪ್ರಮುಖವಾದದ್ದು. ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಬೇಕೆಂದರೆ ದಿನದಲ್ಲಿ ಕಡಿಮೆಯೆಂದರೂ ಎರಡು ಬಗೆಯ ಹಣ್ಣುಗಳನ್ನಾದರೂ ತಿನ್ನಬೇಕು. ಹಣ್ಣುಗಳು ತ್ವಚೆಗೆ ಅಗ್ಯತವಾದ ಪೋಷಕಾಂಶಗಳನ್ನು ಒದಗಿಸಿ ತ್ವಚೆಯನ್ನು ಆರೈಕೆ ಮಾಡುತ್ತದೆ. ಈ ಹಣ್ಣುಗಳನ್ನು ಫೇಸ್‌ ಪ್ಯಾಕ್ ರೀತಿ ಬಳಸಿದರೆ ಬಾಹ್ಯವಾಗಿ ತ್ವಚೆಯ ಆರೈಕೆ ಮಾಡುತ್ತದೆ.

fruit face packs to tackle dry skin

ಚಳಿಗಾಲ, ಬೇಸಿಗೆಗಾಲ, ಮಳೆಗಾಲ ಹೀಗೆ ಕಾಲಗಳು ಬದಲಾದಂತೆ ಮುಖದ ತ್ವಚೆಯ ಮೇಲೂ ಪ್ರಭಾವ ಬೀರುತ್ತದೆ. ಹಣ್ಣುಗಳ ಫೇಸ್ ಪ್ಯಾಕ್‌ ಎಲ್ಲಾ ಕಾಲದಲ್ಲೂ ತ್ವಚೆಯನ್ನು ರಕ್ಷಣೆ ಮಾಡಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ. ಇಲ್ಲಿ ನಾವು ನಿಮ್ಮ ತ್ವಚೆಯಲ್ಲಿ ತೇವಾಂಶ ಇರುವಂತೆ ಮಾಡಿ ಮುಖ ಸೌಂದರ್ಯ ಹೆಚ್ಚಿಸಲು 10 ಬಗೆಯ ಹಣ್ಣುಗಳ ಫೇಸ್‌ಪ್ಯಾಕ್‌ ರೆಸಿಪಿ ನೀಡಿದ್ದೇವೆ ನೋಡಿ:

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ, ಖನಿಜಾಂಶ ಒಣ ತ್ವಚೆ ಹೋಗಲಾಡಿಸಲು ತುಂಬಾ ಸಹಕಾರಿ. ಇದರಲ್ಲಿರುವ ವಿಟಮಿನ್ ಇ ಬಿಸಿಲಿನಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

ಬೇಕಾಗುವ ಸಾಮಗ್ರಿ

ಒಂದು ಬಾಳೆಹಣ್ಣು

ಒಂದು ಚಮಚ ತೆಂಗಿನೆಣ್ಣೆ

ಮಾಡುವ ವಿಧಾನ

* ಒಂದು ಬೌಲ್‌ನಲ್ಲಿ ಬಾಳೆಹಣ್ಣು ಹಾಕಿ ಮ್ಯಾಶ್‌ ಮಾಡಿ.

* ಅದಕ್ಕೆ ತೆಂಗಿನೆಣ್ಣೆ ಹಾಕಿ ಮಿಶ್ರ ಮಾಡಿ.

* ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 5-10 ನಿಮಿಷ ಬಿಡಿ.

* ಒಣಗಿದ ಮೇಲೆ ಹದ ಬಿಸಿ ನೀರಿನಿಂದ ಮುಖ ತೊಳೆದು ಒಣಗಿಸಿ.

* ನಂತರ ಮಾಯಿಶ್ಚರೈಸರ್ ಹಚ್ಚಿ.

* ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.

ಆ್ಯಪಲ್ ಫೇಸ್‌ ಪ್ಯಾಕ್‌

ಆ್ಯಪಲ್ ಫೇಸ್‌ ಪ್ಯಾಕ್‌

ಆ್ಯಪಲ್‌ನಲ್ಲಿ ವಿಟಮಿನ್ ಸಿ ಇದ್ದು ಮುಖದಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ. ಕೊಲೆಜಿನ್ ಮುಖದ ಅಂದವನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿ. ಅದರಲ್ಲೂ ಆ್ಯಪಲ್ ಜೊತೆ ಜೇನು ಮಿಶ್ರ ಮಾಡಿ ಫೇಸ್‌ಪ್ಯಾಕ್ ಹಚ್ಚಿದರೆ ಮುಖದ ಅಂದ ಹೆಚ್ಚುವುದು.

ಬೇಕಾಗುವ ಸಾಮಗ್ರಿ

* ಒಂದು ಚಮಚ ತುರಿದ ಸೇಬು

* ಒಂದು ಚಮಚ ಜೇನು

ಬಳಸುವ ವಿಧಾನ

* ಒಂದು ಬೌಲ್‌ನಲ್ಲಿ ತುರಿದ ಸೇಬು ಹಾಕಿ ಅದರಲ್ಲಿ ಜೇನು ಮಿಶ್ರ ಮಾಡಿ. ಸೇಬು ಪೇಸ್ಟ್ ರೀತಿಯಾಗಲಿ.

* ಈಗ ಆ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ.

* ಹಚ್ಚಿದ ಬಳಿಕ 30 ನಿಮಿಷ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ.

ದ್ರಾಕ್ಷಿಯ ಫೇಸ್‌ಪ್ಯಾಕ್

ದ್ರಾಕ್ಷಿಯ ಫೇಸ್‌ಪ್ಯಾಕ್

ವೈನ್‌ ಫೇಸ್‌ಪ್ಯಾಕ್ ಕೇಳಿರುತ್ತೀರಿ. ಅದೇ ರೀತಿ ದ್ರಾಕ್ಷಿಯ ಫೇಸ್‌ಪ್ಯಾಕ್‌ ಕೂಡ ತುಂಬಾ ಒಳ್ಳೆಯದು. ದ್ರಾಕ್ಷಿಯ ಫೇಸ್‌ಪ್ಯಾಕ್‌ ಆಲೀವ್‌ ಎಣ್ಣೆ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಒಣ ತ್ವಚೆ ಸಮಸ್ಯೆ ಇಲ್ಲವಾಗುವುದು. ಮುಖದ ನುಣುಪು ಹೆಚ್ಚುವುದು.

ಬೇಕಾಗುವ ಸಾಮಗ್ರಿ

* ಒಂದು ಹಿಡಿಯಷ್ಟು ದ್ರಾಕ್ಷಿ

* ಒಂದು ಚಮಚ ಆಲೀವ್ ಎಣ್ಣೆ

ಬಳಕೆಯ ವಿದಾನ

* ಒಂದು ಬೌಲ್‌ಗೆ ದ್ರಾಕ್ಷಿ ಹಾಕಿ ಮ್ಯಾಶ್‌ ಮಾಡಿ, ಆಲೀವ್ ಎಣ್ಣೆ ಹಾಕಿ ಮಿಶ್ರ ಮಾಡಿ.

* ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ.

* ನಂತರ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ.

ಇದನ್ನು ವಾರಕ್ಕೊಮ್ಮೆ ಮಾಡಿ.

ಸ್ಟ್ರಾಬೆರ್ರಿ ಫೇಸ್‌ ಪ್ಯಾಕ್

ಸ್ಟ್ರಾಬೆರ್ರಿ ಫೇಸ್‌ ಪ್ಯಾಕ್

ಸ್ಟ್ರಾಬೆರ್ರಿ ಫೇಸ್‌ ಪ್ಯಾಕ್ ಮುಖಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಇಲಾಜಿಕ್ ಆಮ್ಲ ತ್ವಚೆಯನ್ನು ಮೃದುವಾಗಿಸುತ್ತದೆ ಹಾಗೂ ತ್ವಚೆ ಒಣಗದಂತೆ ತಡೆಯುತ್ತದೆ.

ಬೇಕಾಗುವ ಸಾಮಗ್ರಿ

3-4 ಹಣ್ಣಾದ ಸ್ಟ್ರಾಬೆರ್ರಿ

1 ಚಮಚ ಜೇನು

ಬಳಕೆಯ ವಿಧಾನ

* ಒಂದು ಬೌಲ್‌ನಲ್ಲಿ ಸ್ಟ್ರಾಬೆರ್ರಿ ಹಾಕಿ ಹಿಸುಕಿ. ಅದರ ರಸಕ್ಕೆ ಜೇನು ಹಾಕಿ ಮಿಶ್ರ ಮಾಡಿ.

* ಈಗ ಈ ಮಿಶ್ರಣದಿಂದ ಮುಖಕ್ಕೆ ಮಸಾಜ್‌ ಮಾಡಿ 15-20 ನಿಮಿಷ ಬಿಡಿ.

* ನಂತರ ಮುಕ ತೊಳೆಯಿರಿ.

* ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.

ಕಿತ್ತಳೆಯ ಫೇಸ್‌ಪ್ಯಾಕ್‌

ಕಿತ್ತಳೆಯ ಫೇಸ್‌ಪ್ಯಾಕ್‌

ಕಿತ್ತಳೆ ಹಣ್ಣು ಅದರ ಸಿಪ್ಪೆ ಎಲ್ಲವೂ ಮುಖದ ತ್ವಚೆ ಆರೈಕೆಗೆ ಒಳ್ಳೆಯದು. ಮೊಡವೆ ಇದ್ದರೆ ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿದ ಅದರ ಫೇಸ್‌ಪ್ಯಾಕ್‌ ಬಳಸುತ್ತಿದ್ದರೆ ಮೊಡವೆ ಕಲೆಗಳು ಬೇಗನೆ ಇಲ್ಲವಾಗುವುದು. ಒಣ ತ್ವಚೆ ಹೋಗಲಾಡಿಸಲು ಕಿತ್ತಳೆಯ ಫೇಸ್‌ಪ್ಯಾಕ್ ಹೀಗೆ ಮಾಡಿ...

ಬೇಕಾಗುವ ಸಾಮಗ್ರಿ

ಒಂದು ಚಮಚ ಕಿತ್ತಳೆ ರಸ

2 ಚಮಚ ಲೋಳೆಸರ ರಸ

ಬಳಸುವ ವಿಧಾನ

* ಒಂದು ಬೌಲ್‌ನಲ್ಲಿ ಈ ಎರಡು ಸಾಮಗ್ರಿ ಮಿಶ್ರ ಮಾಡಿ, ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬನ್ನಿ ಮುಖದ ತ್ವಚೆ ಒಣಗುವುದಿಲ್ಲ, ನೋಡಲು ಕೂಡ ಆಕರ್ಷಕವಾಗಿ ಕಾಣುವುದು.

ದಾಳಿಂಬೆ ಫೇಸ್‌ ಪ್ಯಾಕ್‌

ದಾಳಿಂಬೆ ಫೇಸ್‌ ಪ್ಯಾಕ್‌

ದಾಳಿಂಬೆ ಹಣ್ಣು ಬಳಸಿ ಕೂಡ ಫೇಸ್‌ಪ್ಯಾಕ್‌ ಮಾಡಬಹುದು ಗೊತ್ತೇ? ಅದರಲ್ಲೂ ಒಣ ತ್ವಚೆಯವರು ಈ ಫೇಸ್‌ಪ್ಯಾಕ್‌ ಬಳಸಿದರೆ ಅತ್ಯುತ್ತಮವಾದ ಪ್ರಯೋಜನವನ್ನು ಪಡೆಯಬಹುದು.

ಬೇಕಾಗುವ ಸಾಮಗ್ರಿ

1 ಚಮಚ ದಾಳಿಂಬೆ ರಸ

ಅರ್ಧ ಚಮಚ ಕಡಲೆ ಹಿಟ್ಟು

ಬಳಸುವ ವಿಧಾನ:

* ಈ ಮಿಶ್ರಣವನ್ನು ಒಂದು ಬೌಲ್‌ನಲ್ಲಿ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2 ಬಾರಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.

ಪಪ್ಪಾಯಿ ಫೇಸ್‌ಪ್ಯಾಕ್

ಪಪ್ಪಾಯಿ ಫೇಸ್‌ಪ್ಯಾಕ್

ಮುಖದ ಆರೈಕೆಯಲ್ಲಿ ಪಪ್ಪಾಯಿ ಫೇಸ್‌ಪ್ಯಾಕ್ ತುಂಬಾ ಪರಿಣಾಮಕಾರಿ. ಈ ಪಪ್ಪಾಯಿ ಫೇಸ್‌ಪ್ಯಾಕ್‌ ಮುಖದ ಬಿಳುಪು ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ. ಪಪ್ಪಾಯಿ ಫೇಸ್‌ ಪ್ಯಾಕ್‌ ರೆಸಿಪಿ

ಬೇಕಾಗುವ ಸಾಮಗ್ರಿ

1 ಚಮಚ ಮ್ಯಾಶ್‌ ಮಾಡಿದ ಪಪ್ಪಾಯಿ

1 ಚಮಚ ಜೇನು

1 ಚಮಚ ಮೊಸರು

ಬಳಸುವ ವಿಧಾನ:

* ಒಂದು ಬೌಲ್‌ನಲ್ಲಿ ಪಪ್ಪಾಯಿ, ಜೇನು, ಮೊಸರು ಹಾಕಿ ಮಿಶ್ರ ಮಾಡಿ.

* ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಈ ರೀತಿ ವಾರದಲ್ಲಿ 1-2 ಬಾರಿ ಮಾಡಿ.

ಬೆಣ್ಣೆ ಹಣ್ಣಿನ ಫೇಸ್‌ಮಾಸ್ಕ್

ಬೆಣ್ಣೆ ಹಣ್ಣಿನ ಫೇಸ್‌ಮಾಸ್ಕ್

ಬೆಣ್ಣೆ ಹಣ್ಣು ಮುಖದ ಆರೈಕೆ ಹೇಗೆ ಮಾಡುತ್ತದೆ ಎಂದು ಬಳಸಿದವರಿಗೆ ಗೊತ್ತಿರುತ್ತದೆ. ಇದನ್ನು ಪಾರ್ಲರ್‌ಗಳಲ್ಲಿ ಕೂಡ ಹೆಚ್ಚಾಗಿ ಬಳಸುತ್ತಾರೆ. ಈ ಫೇಸ್‌ಪ್ಯಾಕ್ ತ್ವಚೆಯನ್ನು ತುಂಬಾ ಮೃದುವಾಗಿಸುತ್ತದೆ.

ಬೇಕಾಗುವ ಸಾಮಗ್ರಿ

ಅರ್ಧ ಬೆಣ್ಣೆಹಣ್ಣು

1 ಚಮಚ ತೆಂಗಿನೆಣ್ಣೆ

ಬಳಸುವ ವಿಧಾನ:

* ಬೆಣ್ಣೆಹಣ್ಣನ್ನು ಕೈಯಿಂದಲೇ ಚೆನ್ನಾಗಿ ಹಿಸುಕಿ, ಅದಕ್ಕೆ ತೆಂಗಿನೆಣ್ಣೆ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 25 ನಿಮಿಷ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

* ಈ ರೀತಿ ವಾರದಲ್ಲಿ 2-3 ಬಾರಿ ಮಾಡಿ ಒಣ ತ್ವಚೆ ಸಮಸ್ಯೆ ಇಲ್ಲವಾಗುವುದು.

ಕಿವಿ ಫೇಸ್‌ ಪ್ಯಾಕ್‌

ಕಿವಿ ಫೇಸ್‌ ಪ್ಯಾಕ್‌

ಕಿವಿ ಹಣ್ಣು ಕೂಡ ಒಣತ್ವಚೆಯವರ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿರುವ ಅಮೈನೋ ಆಮ್ಲ ತ್ವಚೆ ಮಂಕಾಗುವುದನ್ನು ತಡೆಗಟ್ಟಿ ಕಾಂತಿಯನ್ನು ನೀಡುತ್ತದೆ.

ಬೇಕಾಗುವ ಸಾಮಗ್ರಿ

3-4 ಪೀಸ್‌ ಕಿವಿ ಹಣ್ಣು

ಅರ್ಧ ಬೆಣ್ಣೆ ಹಣ್ಣು

ಬಳಕೆಯ ವಿಧಾನ

ಈ ಎರಡು ಹಣ್ಣನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ.

* ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನು ವಾರದಲ್ಲಿ 3-4 ಬಾರಿ ಮಾಡಿ.

English summary

Fruit Face Packs To Tackle Dry Skin

While you carry on your winter skincare routine, you can tackle the dryness by treating your skin with some nourishing and moisturising homemade fruit face packs
Story first published: Saturday, January 11, 2020, 16:21 [IST]
X
Desktop Bottom Promotion