For Quick Alerts
ALLOW NOTIFICATIONS  
For Daily Alerts

Beauty tips: ನಿತ್ಯ ಈ ಫೇಸ್‌ ಯೋಗ ಮಾಡಿದರೆ ನಿಮ್ಮ ಮುಖ ಆಕರ್ಷಕವಾಗಿ ಹೊಳೆಯುತ್ತದೆ

|

ಮೊಡವೆಯುಕ್ತ, ಹೊಳೆಯುವ, ಕಲೆರಹಿತ ತ್ವಚೆ ಪಡೆಯಲು ಯಾರಿಗೆ ತಾನೆ ಇಷ್ಟವಿಲ್ಲ. ಈ ಎಲ್ಲಾ ಪ್ರಯೋಜನಗಳನ್ನು ಯಾವುದೇ ರಾಸಾಯನಿಕ ಕ್ರೀಮ್‌ಗಳಿಲ್ಲದೆ, ಮನೆಮದ್ದನ್ನು ಅನ್ವಯಿಸದೆ ಪಡೆಯಬಹುದು. ಅದು ಹೇಗೆ ಸಾಧ್ಯ ಎಂದರೆ ಫೇಸ್‌ ಯೋಗಾಸನ.

Easy Face Yoga Poses For Glowing & Healthy Skin in Kannada

ಫೇಸ್‌ ಯೋಗಾಸನದಿಂದ ಹೊಳೆಯುವ ಕಾಂತಿಯುತ ತ್ವಚೆಯೇ ಎನ್ನಬಹುದು, ಹೌದು ಎಂದು ಈಗಾಗಲೇ ಹಲವು ಸೌಂದರ್ಯ ತಜ್ಞರು ಸಾಬೀತುಪಡಿಸಿದ್ದಾರೆ. ಫೇಸ್ ಯೋಗವು ಕೆಲವು ಸರಳವಾದ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ, ಅದು ನಿಮ್ಮ ಮುಖದ ಸ್ನಾಯುಗಳನ್ನು ಉತ್ತೇಜಿಸಲು ಮತ್ತು ನಿಮಗೆ ಹೊಳಪನ್ನು ನೀಡುವ ರಕ್ತ ಪರಿಚಲನೆಯನ್ನು ಸುಧಾರಿಸಲು ಕೆಲವು ವಿಧಾನಗಳಲ್ಲಿ ನಿಮ್ಮ ಮುಖವನ್ನು ಮಸಾಜ್ ಮಾಡಲು ಅಥವಾ ಸ್ಪರ್ಶಿಸಲು ಅಗತ್ಯವಿರುತ್ತದೆ.

ತಜ್ಞರ ಪ್ರಕಾರ ನಾವು ಈ ಕೆಳಗೆ ಹೇಳಲಿರುವ ಕೆಲವು ಮುಖದ ಯೋಗಾಸನಗಳನ್ನು ಮಾಡುವುದರಿಂದ ನಿಮ್ಮ ಮುಖ ಹೊಳೆಯುವ, ಮೊಡವೆಯುಕ್ತ, ಆಕರ್ಷಕ ಅಂದವನ್ನು ಹೊಂದಬಹುದು. ಹೇಗೆ ಮುಂದೆ ನೋಡೋಣ:

1. ಬಲೂನ್ ಭಂಗಿ

1. ಬಲೂನ್ ಭಂಗಿ

ಬಲೂನ್ ಭಂಗಿಯ ಈ ವ್ಯಾಯಾಮವನ್ನು ಮಾಡುವುದರಿಂದ ನಿಮ್ಮ ಕೆನ್ನೆಯ ಭಾಗಕ್ಕೆ ರಕ್ತ ಪರಿಚಲನೆಯು ಹೆಚ್ಚಿತ್ತದೆ, ಇದು ನಿಮ್ಮ ಮುಖದ ಮೇಲೆ ಮಂದತನದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಮೊಡವೆ ಮತ್ತು ಕಲೆಗಳನ್ನು ತಡೆಯುತ್ತದೆ.

ಈ ಯೋಗ ಭಂಗಿಯನ್ನು ಮಾಡಲು, ನೀವು ಆಳವಾದ ಉಸಿರನ್ನು ತೆಗೆದುಕೊಳ್ಳಬೇಕು ಮತ್ತು ನಿಮ್ಮ ಬಾಯಿಯನ್ನು ನಿಮಗೆ ಸಾಧ್ಯವಾದಷ್ಟು ಗಾಳಿಯಿಂದ ತುಂಬಿಸಬೇಕು. ಯಾವುದೇ ನಿಶ್ವಾಸವನ್ನು ತಡೆಗಟ್ಟಲು ನಿಮ್ಮ ಬಾಯಿಯನ್ನು ಎರಡು ಬೆರಳುಗಳಿಂದ ಮುಚ್ಚಿ ಮತ್ತು ಕನಿಷ್ಠ 30 ಸೆಕೆಂಡುಗಳ ಕಾಲ ಈ ಭಂಗಿಯನ್ನು ಹಿಡಿದುಕೊಳ್ಳಿ. 2-3 ಬಾರಿ ಪುನರಾವರ್ತಿಸಿ.

2. ಮೈಂಡ್‌ಫುಲ್‌ನೆಸ್‌ ಭಂಗಿ

2. ಮೈಂಡ್‌ಫುಲ್‌ನೆಸ್‌ ಭಂಗಿ

ಈ ಮುಖದ ಯೋಗಾಸನವು ತಲೆನೋವು, ಒತ್ತಡ-ಸಂಬಂಧಿತ ಹಾಗೂ ಮೈಗ್ರೇನ್‌ ಸಂಬಂಧಿಸಿದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೊಡವೆ ಪೀಡಿತ ಚರ್ಮ ಸೇರಿದಂತೆ ನಿಮ್ಮ ಅರ್ಧದಷ್ಟು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಆದ್ದರಿಂದ, ಈ ವ್ಯಾಯಾಮದಿಂದ ನೀವು ಒತ್ತಡದಿಂದ ಉಂಟಾಗುವ ಮೊಡವೆಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.

ಈ ಭಂಗಿಗಾಗಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಬೆರಳ ತುದಿಯಿಂದ ನಿಮ್ಮ ಹಣೆ ಮತ್ತು ಕಣ್ಣುಗಳನ್ನು ಉಜ್ಜಿಕೊಳ್ಳಿ. ಮೊದಲು ನಿಮ್ಮ ಬೆರಳನ್ನು ನಿಮ್ಮ ಹಣೆಯ ಮಧ್ಯಭಾಗದಲ್ಲಿ ಇರಿಸಿ ಮತ್ತು ನಂತರ ಸ್ವಲ್ಪ ಒತ್ತಡದಿಂದ ಅದನ್ನು ಕೆಳಕ್ಕೆ ಸರಿಸಿ. ಮುಂದೆ, ಒಂದು ಬೆರಳನ್ನು ತೆಗೆದುಕೊಂಡು ನಿಮ್ಮ ಕಣ್ಣನ್ನು ವೃತ್ತಾಕಾರದ ಚಲನೆಯಲ್ಲಿ ಉಜ್ಜಿಕೊಳ್ಳಿ, ಮೊದಲು ಪ್ರದಕ್ಷಿಣಾಕಾರವಾಗಿ ಮತ್ತು ನಂತರ ವಿರೋಧಿ ಪ್ರದಕ್ಷಿಣಾಕಾರವಾಗಿ ನಿಧಾನವಾಗಿ ಉಜ್ಜಿರಿ.

3. ಸರಳ ಟ್ಯಾಪಿಂಗ್ ಭಂಗಿ

3. ಸರಳ ಟ್ಯಾಪಿಂಗ್ ಭಂಗಿ

ಕೊರಿಯನ್ನರ ಸೌಂದರ್ಯದ ಗುಟ್ಟೇ ಇದು ಎಂಬುದು ಇತ್ತೀಚೆಗೆ ಎಲ್ಲರಿಗೂ ತಿಳಿದ ವಿಷಯವೇ, ಮುಖದ ಮೇಲೆ ಸರಳವಾಗಿ ನಿತ್ಯ ಟ್ಯಾಪಿಂಗ್ ಮಾಡುವುದರಿಂದ ತ್ವಚೆ ಆಕರ್ಷಕವಾಗಿ ಕಾಣುತ್ತದೆ, ಆದ್ದರಿಂದ ಇದನ್ನು ಏಕೆ ನೀವು ಪ್ರಯತ್ನಿಸಬಾರದು. ಮುಖವನ್ನು ಟ್ಯಾಪಿಂಗ್ ಮಾಡುವ ಈ ಅಭ್ಯಾಸವು ಸಂಪೂರ್ಣ ಮುಖಕ್ಕೆ ರಕ್ತ ಪರಿಚಲನೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಅದು ನಿಮ್ಮ ಮುಖಕ್ಕೆ ಅತ್ಯಂತ ತ್ವರಿತ ಮತ್ತು ಸುಲಭವಾದ ಹೊಳಪನ್ನು ತರುತ್ತದೆ!

ಅಲ್ಲದೆ, ಮುಖದ ಟ್ಯಾಪಿಂಗ್ ಅನ್ನು ನಿಯಮಿತವಾದ ಮಾಡುವುದರಿಂದ ಚರ್ಮ ಬೇಗ ವಯಸ್ಸಾಗುವುದರ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ.

ಈ ವ್ಯಾಯಾಮಕ್ಕಾಗಿ ನೀವು ಮಾಡಬೇಕಾಗಿರುವುದು ನಿಮ್ಮ ಬೆರಳುಗಳ ತುದಿಯಿಂದ ನಿಮ್ಮ ಇಡೀ ಮುಖವನ್ನು ನಿಧಾನವಾಗಿ ಸ್ಪರ್ಶಿಸುವುದು. ನಿಮ್ಮ ಮುಖಕ್ಕೆ ಲೋಷನ್ ಅನ್ನು ಅನ್ವಯಿಸುವಾಗ ನೀವು ಇದನ್ನು ಅಭ್ಯಾಸ ಮಾಡಬಹುದು.

English summary

Easy Face Yoga Poses For Glowing & Healthy Skin in Kannada

Here we are discussing about Easy Face Yoga Poses For Glowing & Healthy Skin in Kannada. Read more.
Story first published: Wednesday, October 26, 2022, 15:20 [IST]
X
Desktop Bottom Promotion