For Quick Alerts
ALLOW NOTIFICATIONS  
For Daily Alerts

ಚರ್ಮ ರೋಗ ತಜ್ಞರ ಬಳಿ ಈ ವಿಚಾರಗಳನ್ನು ಮುಚ್ಚಿಡಲೇಬೇಡಿ

|

ನೀವು ಚರ್ಮರೋಗ ತಜ್ಞರ ಬಳಿ ಅಪಾಯಿಂಟ್ಮೆಂಟ್‌ ಫಿಕ್ಸ್ ಮಾಡಿದ್ದರೆ ಅವರನ್ನು ಭೇಟಿ ಮಾಡುವಾಗ ಯಾವ 5 ವಿಷಯಗಳನ್ನು ಮರೆಯೇಬಾರದು, ಯಾವ 5 ವಿಚಾರಗಳ ಬಗ್ಗೆ ಮರೆಮಾಚಬಾರದು ಎಂದು ತಿಳಿದಿದ್ದರೆ ಒಳ್ಳೆಯದು.

Dos and Don’ts while Visiting a Dermatologist In Kannada

ನೀವು ಈ ರೀತಿ ಮಾಡುವುದರಿಂದ ಅವರಿಗೆ ನಿಮ್ಮ ಸಮಸ್ಯೆ ಬಗ್ಗೆ ಅರಿತು ಸೂಕ್ತ ಸಲಹೆ-ಸೂಚನೆಗಳನ್ನು ನೀಡಲು ನೆರವಾದೀತು. ನಿಮ್ಮ ತ್ವಚೆ ತಜ್ಞರ ಬಳಿ ಮಾತನಾಡುವಾಗ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಏನು ಮಾಡಬೇಕು?

ಈ ಹಿಂದೆ ತೋರಿಸಿದ ಪ್ರಿಸ್ಕ್ರಪ್ಷನ್ ಇದ್ದರೆ ತಗೊಡು ಹೋಗಿ. ಅದು ತ್ವಚೆಗೆ ಸಂಬಂಧಿಸಿದ ಸಮಸ್ಯೆಯೇ ಆಗಿರಬೇಕಾಗಿಲ್ಲ. ಥೈರಾಯ್ಡ್, ಮಧುಮೇಹ, ಅತ್ಯಧಿಕ ರಕ್ತದೊತ್ತಡ ಮುಂತಾದಗಳ ರಿಪೋರ್ಟ್ ಇದ್ದರೆ ತೆಗೆದುಕೊಂಡು ಹೋಗಿ. ಇದು ಅವರಿಗೆ ನಿಮ್ಮ ಆರೋಗ್ಯ ಸ್ಥಿತಿ ಬಗ್ಗೆ ತಿಳಿಯಲು ಬಹಳಷ್ಟು ಸಹಾಯವಾದೀತು.

ಮುಕ್ತವಾಗಿ ಮಾತನಾಡಿ

ಕೆಲವೊಂದು ಸಮಸ್ಯೆ ಹೇಳಿಕೊಳ್ಳಲು ಹಿಂಜರಿಕೆಯಾಗಬಹುದು, ಆದರೆ ಮುಕ್ತವಾಗಿ ಮಾತನಾಡಿ. ಅವರ ಬಳಿ ಏನೂ ಮರೆಮಾಚಬೇಡಿ.

ನಿಮ್ಮ ಆಹಾರಶೈಲಿ ಹಾಗೂ ಲೈಫ್‌ಸ್ಟೈಲ್ ಬಗ್ಗೆ ಹೇಳಿಕೊಳ್ಳಿ

ಕೆಲವೊಮ್ಮೆ ಅವರೇ ಕೇಳುತ್ತಾರೆ. ಅವರು ನಿಮಗೆ ಏನು ತಿನ್ನಬೇಕು, ಏನು ತಿನ್ನಬಾರದು ಎಂಬುವುದರ ಬಗ್ಗೆ ಹೇಳುತ್ತಾರೆ. ಅವರು ಹೇಳದಿದ್ದರೆ ನಿಮಗೆ ಏನಾದರೂ ಸಂಶಯವಿದ್ದರೆ ಕೇಳಲು ಹಿಂಜರಿಕೆ ಬೇಡ.

ತ್ವಚೆ ಆರೈಕೆಗೆ ಏನು ಮಾಡುತ್ತಿದ್ದೀರಿ ಎಂಬುವುದರ ಬಗೆ ಕೂಡ ಕೇಳಿ

ನೀವು ಯಾವ ಬಗೆಯ ಸ್ಕಿನ್‌ ಕೇರ್ ಪ್ರಾಡೆಕ್ಟ್ ಬಳಸುತ್ತಿದ್ದೀರಾ ಎಂಬುವುದರ ಬಗ್ಗೆ ಕೂಡ ಹೇಳಿ, ಅವರು ನಿಮಗೆ ಸರಿಯಾದ ಪ್ರಾಡೆಕ್ಟ್ ಸೂಚಿಸಬಹುದು.

ಚರ್ಮ ರೋಗ ತಜ್ಞರ ಬಳಿ ಹೋಗುವಾಗ ಮೇಕಪ್‌ ಹಾಕಬೇಡ

ನೀವು ಮೇಕಪ್ ಬಳಸದೇ ಇದ್ದರೆ ಅವರಿಗೆ ನಿಮ್ಮ ತ್ವಚೆಯನ್ನು ಪರೀಕ್ಷಿಸಲು ಸುಭವಾಗುವುದು. ನೀವು ಯಾವ ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದೀರಾ? ಈ ಎಲ್ಲಾ ಮಾಹಿತಿ ನೀಡಿ.

ಕುಟುಂಬ ವೈದ್ಯಕೀಯ ಮಾಹಿತಿ ನೀಡಲು ಹಿಂದೇಟು ಹಾಕಬೇಡಿ

ಕೆಲವೊಂದು ಆರೋಗ್ಯ ಸಮಸ್ಯೆ ವಂಶವಾಹಿಯಾಗಿ ಬರುತ್ತದೆ, ಆದ್ದರಿಂದ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ನಿಮಗೆ ಆದಂತೆ ಆಗಿದ್ದರೆ ಆ ಬಗ್ಗೆ ಮಾಹಿತಿ ನೀಡಿ.

ಪ್ರಶ್ನೆ ಕೇಳಲು ಭಯಬೇಡ

ಕೆಲವರಿಗೆ ನಾನು ಏನಾದರೂ ಕೇಳಿದರೆ ತಜ್ಞರಿಗೆ ಏನು ಅನುಭವಿಸಬಹುದೋ ಎಂಬ ಅಳುಕಿನಿಂದ ಏನೂ ಪ್ರಶ್ನೆ ಕೇಳುವುದಿಲ್ಲ, ಹಾಗೇ ಮಾಡಬೇಡಿ, ನಿಮಗೆ ಏನು ಸಂಶಯವುದೆಯೋ ಅದರ ಬಗ್ಗೆ ಮುಕ್ತವಾಗಿ ಕೇಳಿ, ಇದರಿಂದ ನಿಮಗೆ ಸಾಕಷ್ಟು ಸಮಧಾನವಾಗುತ್ತದೆ.

ಏನು ಮಾಡಬಾರದು?
ನೀವು ಒಬ್ಬ ತಜ್ಞರನ್ನು ಭೇಟಿಯಾಗಲು ತೀರ್ಮಾನಿಸಿದ ಮೇಲೆ ಪದೇ-ಪದೇ ತಜ್ಞರನ್ನು ಬದಲಾಯಿಸಬೇಡಿ. ಕೆಲವೊಮ್ಮೆ ನಮ್ಮ ಸಮಸ್ಯೆಗೆ ಒಂದು ಬಾರಿಗೆ ಪರಿಹಾರ ಸಿಗದೇ ಹೋಗಬಹುದು, ಒಂದೆಡರು ಬಾರಿ ಹೋದಾಗ ಅವರೂ ಔಷಧ ಬದಲಾಯಿಸಿಕೊಡುತ್ತಾರೆ, ಇಲ್ಲಾ ಬೇರೆ ವೈದ್ಯರಿಗೆ ರೆಫರ್ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳನ್ನು ಬೇಗನೆ ಹೋಗಲಾಡಿಸಬಹುದು.

English summary

Dos and Don’ts while Visiting a Dermatologist In Kannada

Skin Care Tips: Dos and Don’ts while Visiting a Dermatologist, read on....
Story first published: Tuesday, November 22, 2022, 17:00 [IST]
X
Desktop Bottom Promotion