For Quick Alerts
ALLOW NOTIFICATIONS  
For Daily Alerts

ನಯವಾದ ಹಾಗೂ ಆಕರ್ಷಕ ತ್ವಚೆಗಾಗಿ ಇಲ್ಲಿದೆ 5 ಕಾಫಿ ಸ್ಕ್ರಬ್ಸ್

|

ನಿತ್ಯ ನಮ್ಮ ದಿನದ ಮೊದಲ ಕ್ಷಣ ಆರಂಭವಾಗುವುದೇ ಒಂದು ಕಪ್ ಬಿಸಿ ಕಾಫಿ ಸರ್ರ್ರ್ ಎಂದು ಹೀರಿದ ಮೇಲೆಯೇ. ಕೇವಲ ನಮ್ಮ ಮನೆ ಅಥವಾ ನಮ್ಮ ಪಕ್ಕದ ಮನೆ ಅಥವಾ ನಮ್ಮ ಏರಿಯಾದಲ್ಲಿ ಮಾತ್ರ ಹೀಗಿರಬಹುದು ಎಂದುಕೊಂಡರೆ ಅದು ತಪ್ಪು. ನಮ್ಮ ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಇತರೆ ದೇಶಗಳಲ್ಲಿ ಎಲ್ಲಾ ಕಡೆಯೂ ಇದೇ ರೀತಿ ನಡೆಯುತ್ತಿದೆ. ಕಾಫಿಯನ್ನು ಯಾರು ಸಹ ಕಷ್ಟಪಟ್ಟು ಕುಡಿಯುವುದಿಲ್ಲ.

ಬದಲಾಗಿ ಇಷ್ಟ ಪಟ್ಟು ಕುಡಿಯಲೇಬೇಕು ಇಂದು ಕುಡಿಯುತ್ತಾರೆ. ಕಾಫಿಯ ಪರಿಮಳಭರಿತ ಸ್ವಾದ ಜನರ ಮೇಲೆ ಅಷ್ಟೊಂದು ಗಾಡವಾದ ಪ್ರಭಾವ ಬೀರಿದೆ. ಬೆಳಗಿನ ಸಮಯದಲ್ಲಿ ಉಪಹಾರಕ್ಕೆ ಮುಂಚೆ ಕಾಫಿ ಕುಡಿಯದೆ ಹೋದರೆ ಅಂದಿನ ದಿನ ಸಂಪೂರ್ಣ ಆಲಸ್ಯ, ಬೇಸರ ಜೀವನದಲ್ಲಿ ಏನೋ ಕಳೆದುಕೊಂಡಂತಹ ಅನುಭವ ಉಂಟಾಗುತ್ತಿರುತ್ತದೆ. ಇದರ ಜೊತೆಗೆ ಸಣ್ಣದಾಗಿ ಪ್ರಾರಂಭವಾಗುವ ತಲೆನೋವು ಯಾವುದೇ ಕೆಲಸವನ್ನು ಮಾಡಲು ಮನಸ್ಸಿಲ್ಲದಂತೆ ಮಾಡಿಬಿಡುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಕಾಫಿಯಲ್ಲಿ ಕಂಡುಬರುವ ಕೆಫಿನ್ ಅಂಶ ಎಂದು ಹೇಳಬಹುದು.

ಹೌದು, ಕೆಫೇನ್ ಅಂಶದ ಪ್ರಭಾವ ನಮ್ಮ ಮೆದುಳು ಮತ್ತು ನಮ್ಮ ದೇಹದ ಮೇಲೆ ಉಂಟಾಗುವುದರಿಂದ ನಮಗೆ ಸಾಕಷ್ಟು ಅನುಕೂಲವಾಗಲಿದೆ. ನಮ್ಮ ಆರೋಗ್ಯ ರಕ್ಷಣೆ ಆಗುವುದರ ಜೊತೆಗೆ ತಮ್ಮ ಚರ್ಮದ ಭಾಗದಿಂದ ಸತ್ತ ಜೀವಕೋಶಗಳ ನಿವಾರಣೆ ಸಹ ಉಂಟಾಗುತ್ತದೆ. ಇದರಿಂದ ನಮ್ಮ ಚರ್ಮದ ಸೌಂದರ್ಯ ಹೆಚ್ಚಾಗುವುದು ಮಾತ್ರವಲ್ಲದೆ ತ್ವಚೆಯ ಮೇಲೆ ಕಂಡು ಬರುವ ಕಡು ಕಪ್ಪು ಕಲೆಗಳು, ಸುಕ್ಕುಗಳು, ಸಣ್ಣ ಸಣ್ಣ ಗೀರುಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಮನೆಯಿಂದ ಹೊರಹೋದ ಸಂದರ್ಭದಲ್ಲಿ ಮೈಮೇಲೆ ಬೀಳುವ ಸೂರ್ಯನ ಹಾನಿಕಾರಕ ರಶ್ಮಿಗಳು ನಮ್ಮ ಚರ್ಮದ ಮೇಲ್ಭಾಗದಲ್ಲಿ ಪ್ರಭಾವ ಬೀರಿ ತ್ವಚೆಯ ಹೊಳಪನ್ನು ಕಡಿಮೆ ಮಾಡುತ್ತವೆ.

ಆದರೆ ಕಾಫಿಯಲ್ಲಿ ಕಂಡುಬರುವ ಕೆಫೀನ್ ಅಂಶ ತನ್ನ ಆಂಟಿ-ಆಕ್ಸಿಡೆಂಟ್ ಸಂಯುಕ್ತಗಳ ಪ್ರಭಾವದಿಂದ ದೇಹದಲ್ಲಿನ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ತಡೆದು ನಿಮ್ಮ ಸೌಂದರ್ಯ ರಕ್ಷಣೆ ಮಾಡುತ್ತದೆ. ಹಾಗಾಗಿಯೇ ಇಂದಿಗೂ ಸಹ ಬಹುತೇಕ ಕಾಸ್ಮೆಟಿಕ್ ಕಂಪನಿಗಳು ತಮ್ಮ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ನೈಸರ್ಗಿಕವಾದ ಕಾಫಿ ಅಂಶಗಳನ್ನು ಬಳಕೆ ಮಾಡಿ ಜನರಿಗೆ ಅಡ್ಡ ಪರಿಣಾಮಗಳು ಇಲ್ಲದಂತಹ ಉತ್ಪನ್ನಗಳು ಸಿಗುವಂತೆ ಮಾರುಕಟ್ಟೆಗೆ ಪರಿಚಯ ಮಾಡುತ್ತಿವೆ.

ಕಾಫಿ ಬೀಜಗಳನ್ನು ಅಥವಾ ಕಾಫಿ ಪುಡಿಯನ್ನು ನಮ್ಮ ತ್ವಚೆಯ ಸೌಂದರ್ಯ ವೃದ್ಧಿಗೆ ನಾವು ಬೇರೆ ಬೇರೆ ರೀತಿಗಳಲ್ಲಿ ಬಳಕೆ ಮಾಡಬಹುದು. ಈಗ ಒಂದೊಂದಾಗಿ ಅವುಗಳನ್ನು ನೋಡೋಣ:

 1. ಕಾಫಿ ಮತ್ತು ದಾಲ್ಚಿನ್ನಿಯ ಸ್ಕ್ರಬ್ : -

1. ಕಾಫಿ ಮತ್ತು ದಾಲ್ಚಿನ್ನಿಯ ಸ್ಕ್ರಬ್ : -

ಕಾಫಿಯಲ್ಲಿ ನಮ್ಮ ಚರ್ಮದ ಅನುಕೂಲತೆಗೆ ತಕ್ಕಂತೆ ಎಕ್ಸ್ಪೋ ಲೇಟರ್ ಗುಣಲಕ್ಷಣಗಳಿವೆ. ಅದರಂತೆ ನಮ್ಮ ಚರ್ಮದ ಮೇಲಿನ ಸತ್ತ ಜೀವಕೋಶಗಳ ನಿವಾರಣೆ ಮಾಡುವ ಮೂಲಕ ತುಂಬಾ ಮೃದುವಾದ ಮತ್ತು ಹೊಳಪಿನ ಚರ್ಮ ನಮ್ಮದಾಗುವಂತೆ ಮಾಡುತ್ತದೆ. ಕೇವಲ ಮೊದಲ ಬಾರಿ ಬಳಕೆ ಮಾಡಿದ ನಂತರದಲ್ಲಿ ಕಾಫಿಯ ಪ್ರಭಾವ ನಿಮಗೆ ಗೊತ್ತಾಗಲಿದೆ. ಇದರ ಜೊತೆಗೆ ಕಾಫಿ ನಿಮ್ಮ ಮುಖ ಹಾಗೂ ದೇಹದ ಚರ್ಮದ ಭಾಗದಿಂದ ಅತಿಯಾದ ಎಣ್ಣೆಯ ಅಂಶವನ್ನು ತೆಗೆದು ಹಾಕಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ದಾಲ್ಚಿನ್ನಿ ನಿಮ್ಮ ತ್ವಚೆಯ ಮೇಲೆ ಯಾವುದೇ ರೀತಿಯ ಸೋಂಕುಗಳು ಅಥವಾ ಚರ್ಮದ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಬೇಕಾಗಿರುವ ಸಾಮಗ್ರಿಗಳು : -

1 ಕಪ್ ಗ್ರೌಂಡ್ ಕಾಫಿ

2 ಟೀಚಮಚ ದಾಲ್ಚಿನ್ನಿ ಪುಡಿ

3 ಟೇಬಲ್ ಚಮಚ ತಾಜಾ ತೆಂಗಿನ ಎಣ್ಣೆ

1 ಕಪ್ ಸಕ್ಕರೆ

ತಯಾರು ಮಾಡುವ ವಿಧಾನ : -

ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ. ಈಗ ನಿಮ್ಮ ಬಳಿ ಇರುವ ಎಲ್ಲಾ ಪದಾರ್ಥಗಳನ್ನು ಬೌಲ್ ನಲ್ಲಿ ಹಾಕಿ ಮಿಶ್ರಣ ಮಾಡುವುದರೊಂದಿಗೆ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಆನಂತರದಲ್ಲಿ ಎಣ್ಣೆಯಲ್ಲಿ ಕಾಫಿ ಸಂಪೂರ್ಣವಾಗಿ ಕರಗಿ ಬೆರೆತುಹೋಗಿದೆ ಎಂಬುದರ ಬಗ್ಗೆ ಆಲೋಚನೆ ಮಾಡಿ. ಸಂಪೂರ್ಣವಾಗಿ ಈ ಮಿಶ್ರಣ ತಣ್ಣಗಾದನಂತರ ಒಂದು ಗಾಳಿಯಾಡದ ಕಂಟೈನರ್ ನಲ್ಲಿ ಹಾಕಿ ಎತ್ತಿಡಿ. ನಿಮಗೆ ಬೇಕಾದ ಸಂದರ್ಭದಲ್ಲಿ ಅಂದರೆ ದಿನ ಬಿಟ್ಟು ದಿನ ಸ್ನಾನ ಮಾಡುವಾಗ ಇದನ್ನು ನಿಮ್ಮ ಮೈ ಗೆ ಹಚ್ಚಿಕೊಳ್ಳಬಹುದು.

2. ಕಾಫಿ ಮತ್ತು ರೋಸ್ ವಾಟರ್ ಫೇಸ್ ಸ್ಕ್ರಬ್ : -

2. ಕಾಫಿ ಮತ್ತು ರೋಸ್ ವಾಟರ್ ಫೇಸ್ ಸ್ಕ್ರಬ್ : -

ರೋಸ್ ವಾಟರ್ ಬಳಕೆ ಮಾಡುವುದರಿಂದ ನಿಮ್ಮ ಚರ್ಮಕ್ಕೆ ಸಾಕಷ್ಟು ಅನುಕೂಲವಿದೆ. ಏಕೆಂದರೆ ರೋಸ್ ವಾಟರ್ ನಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಸಾಕಷ್ಟಿವೆ. ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಚರ್ಮದ ಮೇಲೆ ಉಂಟಾಗುವ ಮೊಡವೆಗಳು ಮತ್ತು ಚರ್ಮವ್ಯಾಧಿಗಳನ್ನು ಗುಣಪಡಿಸಿ ಚರ್ಮದ ಕಿರಿಕಿರಿಯನ್ನು ತಪ್ಪಿಸುವಂತಹ ಗುಣಸ್ವಭಾವಗಳು ರೋಸ್ ವಾಟರ್ ನಲ್ಲಿ ನಿಮಗೆ ಕಾಣಸಿಗುತ್ತದೆ. ಇದರ ಜೊತೆಗೆ ರೋಜ್ ವಾಟರ್ ನಿಮ್ಮ ತ್ವಚೆಯನ್ನು ಸ್ವಚ್ಛ ಮಾಡುವ ಅತ್ಯದ್ಭುತ ಕ್ಲೀನ್ಸರ್ ಆಗಿ ಕೆಲಸ ಮಾಡುತ್ತದೆ. ನಿಮ್ಮ ತ್ವಚೆಯ ಮೇಲಿನ ಕೊಳಕು ಮತ್ತು ಅತಿಯಾದ ಎಣ್ಣೆಯಂಶವನ್ನು ತೆಗೆದುಹಾಕಿ ಚರ್ಮದ ಮೇಲಿನ ಸಣ್ಣ ಸಣ್ಣ ರಂಧ್ರಗಳನ್ನು ಸ್ವಚ್ಛ ಮಾಡುತ್ತದೆ.

ನಿಮಗೆ ಬೇಕಾಗಿರುವ ಸಾಮಗ್ರಿಗಳು : -

1 ಕಪ್ ಗ್ರೌಂಡ್ ಕಾಫಿ

2 ಟೀ ಚಮಚ ರೋಜ್ ವಾಟರ್

ತಯಾರು ಮಾಡುವ ವಿಧಾನ : -

ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಗ್ರೌಂಡ್ ಕಾಫಿ ಮತ್ತು ರೋಸ್ ವಾಟರ್ ಎರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಮುಖ ಹಾಗೂ ದೇಹದ ಚರ್ಮದ ಮೇಲೆ ಇದನ್ನು ಹಚ್ಚಿ ಮಸಾಜ್ ಮಾಡಿ. ಸುಮಾರು 20 ನಿಮಿಷಗಳ ಕಾಲ ಇದನ್ನು ಒಣಗಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದು ಸ್ವಚ್ಛ ಮಾಡಿಕೊಳ್ಳಿ.

3. ಕಾಫಿ ಮತ್ತು ಅಲೋವೆರಾ ಸ್ಕ್ರಬ್ : -

3. ಕಾಫಿ ಮತ್ತು ಅಲೋವೆರಾ ಸ್ಕ್ರಬ್ : -

ಚಳಿಗಾಲದಲ್ಲಿ ಮತ್ತು ಬೇಸಿಗೆಗಾಲದಲ್ಲಿ ನಮ್ಮ ಚರ್ಮದ ರಕ್ಷಣೆಗೆ ನಿಲ್ಲುವ ಏಕೈಕ ನೈಸರ್ಗಿಕ ವಸ್ತು ಎಂದರೆ ಅದು ಅಲೋವೆರಾ. ಎಲ್ಲಾ ಪ್ರಕಾರದ ಚರ್ಮಗಳಿಗೂ ಇದು ಅತ್ಯಂತ ಮಹತ್ವವಾಗಿ ಕೆಲಸ ಮಾಡುತ್ತದೆ. ಅಲೋವೆರಾ ದಲ್ಲಿ ಅನೇಕ ರೀತಿಯ ವಿಟಮಿನ್ ಅಂಶಗಳು ಸಿಗಲಿವೆ. ಪ್ರಮುಖವಾಗಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶಗಳು ಇದರಲ್ಲಿ ಹೆಚ್ಚಾಗಿದ್ದು, ಚರ್ಮದ ಪೌಷ್ಟಿಕಾಂಶಗಳನ್ನು ಕಾಪಾಡುವ ಮೂಲಕ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಜೊತೆಗೆ ಅಲೋವೆರಾದಲ್ಲಿ ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವ ಗುಣಲಕ್ಷಣಗಳು ಕಂಡುಬರುತ್ತವೆ. ಎಣ್ಣೆಯ ಪ್ರಕಾರದ ಚರ್ಮ ಹೊಂದಿರುವವರಿಗೆ ಇದು ಬಹಳಷ್ಟು ಅನುಕೂಲಕಾರಿ.

ನಿಮಗೆ ಬೇಕಾಗಿರುವ ಸಾಮಗ್ರಿಗಳು : -

ಒಂದು ಕಪ್ ಗ್ರೌಂಡ್ ಕಾಫಿ

5 ಟೀಚಮಚ ಅಲೋವೆರಾ ಜೆಲ್

ತಯಾರು ಮಾಡುವ ವಿಧಾನ : -

ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಮೇಲಿನ ಪದಾರ್ಥಗಳನ್ನು ಮಿಶ್ರಣ ಮಾಡಿ ನಿಮ್ಮ ಮುಖದ ಭಾಗದ ತ್ವಚೆಯ ಮೇಲೆ ಮತ್ತು ದೇಹದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿ. ಸುಮಾರು 10 ರಿಂದ 15 ನಿಮಿಷಗಳು ಹಾಗೆ ಇದನ್ನು ಒಣಗಲು ಬಿಟ್ಟು 15 ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.

4. ಕಾಫಿ ಮತ್ತು ಜೇನು ತುಪ್ಪವನ್ನು ಫೇಸ್ ಸ್ಕ್ರಬ್ ಮತ್ತು ಬಾಡಿ ಸ್ಕ್ರಬ್ ಆಗಿ ಬಳಕೆ ಮಾಡುವುದು : -

4. ಕಾಫಿ ಮತ್ತು ಜೇನು ತುಪ್ಪವನ್ನು ಫೇಸ್ ಸ್ಕ್ರಬ್ ಮತ್ತು ಬಾಡಿ ಸ್ಕ್ರಬ್ ಆಗಿ ಬಳಕೆ ಮಾಡುವುದು : -

ಜೇನು ತುಪ್ಪ ನಿಮಗೆಲ್ಲ ತಿಳಿದಿರುವ ಹಾಗೆ ಒಂದು ಅತ್ಯದ್ಭುತ ತ್ವಚೆಯ ಮಾಯಿಶ್ಚರೈಸರ್. ಒಣ ಚರ್ಮ ಮತ್ತು ಕಲೆಗಳನ್ನು ಹೊಂದಿದ ಚರ್ಮದ ಮೇಲೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಆಂಟಿ - ಬ್ಯಾಕ್ಟೀರಿಯಲ್ ಗುಣ - ಲಕ್ಷಣಗಳನ್ನು ಇದು ಹೆಚ್ಚಾಗಿ ಒಳಗೊಂಡಿದೆ. ನಿಮ್ಮ ಚರ್ಮದ ಸೋಂಕುಗಳನ್ನು ಮತ್ತು ಚರ್ಮದ ಕಿರಿಕಿರಿಯನ್ನು ತನ್ನ ಗುಣ - ಲಕ್ಷಣಗಳಿಂದ ದೂರಗೊಳಿಸುತ್ತದೆ. ಸೌಂದರ್ಯ ತಜ್ಞರ ಪ್ರಕಾರ ಜೇನುತುಪ್ಪವನ್ನು ನಿಮ್ಮ ಮುಖದ ಮೇಲೆ ಹಚ್ಚುವುದರಿಂದ ಚಳಿಗಾಲದಲ್ಲಿ ನಿಮ್ಮ ಚರ್ಮದ ತೇವಾಂಶ ಹಾಗೆ ಉಳಿದು ನಿಮ್ಮ ತ್ವಚೆಗೆ ಅಗತ್ಯವಾಗಿ ಬೇಕಾದ ನೀರಿನ ಅಂಶ ಸಿಗಲಿದೆ.

ಬೇಕಾಗಿರುವ ಸಾಮಗ್ರಿಗಳು : -

4 ಟೀ ಚಮಚ ಗ್ರೌಂಡ್ ಕಾಫಿ

1 ಕಪ್ ಹಾಲು

2 ಟೀ ಚಮಚ ಜೇನು ತುಪ್ಪ

ತಯಾರು ಮಾಡುವ ವಿಧಾನ : -

ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದರಲ್ಲಿ ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರು ಮಾಡಿಕೊಳ್ಳಿ. ಯಾವುದೇ ಗಂಟು ಸಿಗದಂತೆ ಕಲಸಿಕೊಳ್ಳಿ. ನಿಮ್ಮ ಮುಖ ಮತ್ತು ದೇಹದ ಮೇಲೆ ಈ ಪೇಸ್ಟ್ ಅನ್ನು ಸ್ನಾನ ಮಾಡುವ ಸಂದರ್ಭದಲ್ಲಿ ವೃತ್ತಾಕಾರವಾಗಿ ಮಸ್ಸಾಜ್ ಮಾಡಿ. ಸುಮಾರು 15 ನಿಮಿಷಗಳು ಇದನ್ನು ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಿ.

5. ಕಾಫಿ ಮತ್ತು ಶಿಯಾ ಬಟರ್ : -

5. ಕಾಫಿ ಮತ್ತು ಶಿಯಾ ಬಟರ್ : -

ತ್ವಚೆಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಒದಗಿಸುವ ಆಹಾರ ಪದಾರ್ಥ ಎಂದರೆ ಅದು ಶಿಯಾ ಬಟರ್. ಇದರಲ್ಲಿ ಅಪಾರ ಪ್ರಮಾಣದ ವಿಟಮಿನ್ ಅಂಶಗಳು ಸಿಗುತ್ತವೆ ಉದಾಹರಣೆಗೆ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ F ಇದರ ಜೊತೆಗೆ ಅಗತ್ಯ ಪ್ರಮಾಣದ ಫ್ಯಾಟಿ ಆಸಿಡ್ ಅಂಶಗಳು ಮತ್ತು ಇತರ ಪೌಷ್ಟಿಕ ಸತ್ವಗಳು ಸಿಗುತ್ತವೆ. ಕೊರಜನ್ ವಂಶದ ಉತ್ಪತ್ತಿಯಲ್ಲಿgfgfg ಇದು ಹೆಚ್ಚು ನೆರವಾಗುವುದರೊಂದಿಗೆ ನಿಮ್ಮ ತ್ವಚೆಯನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ಮಾಡುತ್ತದೆ.

ನಿಮಗೆ ಬೇಕಾಗಿರುವ ಸಾಮಗ್ರಿಗಳು : -

4 ಟೀ ಚಮಚ ಗ್ರೌಂಡ್ ಕಾಫಿ

4 ಟೀ ಚಮಚ ಶಿಯಾ ಬಟರ್

ಒಂದು ಟೀ ಚಮಚ ತೆಂಗಿನೆಣ್ಣೆ

ತಯಾರು ಮಾಡುವ ವಿಧಾನ : -

ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕರಗಿಸಿದ ತೆಂಗಿನ ಎಣ್ಣೆಯನ್ನು ಮತ್ತು ಇನ್ನಿತರ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಹದದಲ್ಲಿ ಪೇಸ್ಟ್ ಬರುವ ಹಾಗೆ ಇದನ್ನು ಚೆನ್ನಾಗಿ ಕಲಸಿ ನಿಮ್ಮ ಮುಖ ಹಾಗೂ ದೇಹದ ಮೇಲೆ ನಯವಾಗಿ ಮಸಾಜ್ ಮಾಡಿ ಸುಮಾರು 10 ರಿಂದ 15 ನಿಮಿಷಗಳು ಇದನ್ನು ಹಾಗೆ ಗಾಳಿಯಲ್ಲಿ ಒಣಗಲು ಬಿಟ್ಟು ನಂತರ ಸ್ನಾನ ಮಾಡಿ.

ಕಾಫಿ ಸ್ಕ್ರಬ್ ಗಳನ್ನು ನಿಮ್ಮ ದೇಹದ ಚರ್ಮದ ಸೌಂದರ್ಯಕ್ಕೆ ಮತ್ತು ಆರೋಗ್ಯಕ್ಕೆ ಬಳಸಲು ಮುಂದಾದರೆ ನಿಮಗೆ ರಾಸಾಯನಿಕ ಅಂಶಗಳಿಂದ ಎದುರಾಗುವ ಅಡ್ಡಪರಿಣಾಮಗಳ ಭಯ ಇರುವುದಿಲ್ಲ. ಆದರೂ ಕೂಡ ಒಮ್ಮೆ ನಿಮ್ಮ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ.

English summary

DIY Coffee Scrubs For Soft And Supple Skin

Here is 5 DIY Coffee Scrubs for soft and supple skin, read on...
X