For Quick Alerts
ALLOW NOTIFICATIONS  
For Daily Alerts

ಈ ಬ್ಯೂಟಿ ಟಿಪ್ಸ್ ಪಾಲಿಸಿದರೆ ನೀವು ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುವಿರಿ

|

ಕೆಲವರನ್ನು ನೋಡಿದಾಗ ವಯಸ್ಸು 40 ಆದರೂ 25ರ ಹರೆಯದವರಂತೆ ಕಾಣುತ್ತಾರೆ. ಅವರು ಸೆಲೆಬ್ರಿಟಿಗಳಾದರೆ ಅವರಿಗೇನು ತುಂಬಾ ದುಡ್ಡಿದೆ, ದುಬಾರಿ ಕ್ರೀಮ್, ಫೇಶಿಯಲ್ ಮಾಡಿಸಿ ಹಾಗೇ ಕಾಣಿಸ್ತಾ ಇದ್ದಾರೆ ಎಂದು ಜನರು ಆಡಿಕೊಳ್ಳುತ್ತಾರೆ. ಆದರೆ ನೀವು ಸೌಂದರ್ಯದ ವಿಷಯದಲ್ಲಿ ಕೆಲವೊಂದು ಶಿಸ್ತು ರೂಢಿಸಿಕೊಂಡರೆ ನೀವೂ ಕೂಡ ಯೌವನ ಕಳೆ ಕುಂದದಂತೆ ನಿಮ್ಮ ಸೌಂದರ್ಯದ ರಕ್ಷಣೆ ಮಾಡಬಹುದು.

Beuaty Tips To Keep Your Skin Young And Beautiful

ಇನ್ನು ನೀವು ತ್ವಚೆಯನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ನಿಮ್ಮ ಪರಿಚಿತ ಚರ್ಮರೋಗ ತಜ್ಞರ ಬಳಿ ಕೇಳಿ ನೋಡಿ, ಅವರು ಈ ಕೆಳಗಿನ ಸಲಹೆಗಳನ್ನು ನೀಡಬಹುದು. ಆದ್ದರಿಂದ ನೀವು ಅಂದವಾಗಿ ಕಾಣ ಬಯಸುವುದಾದರೆ ಈ ಟಿಪ್ಸ್ ಪಾಲಿಸಿ:

ಸ್ವಚ್ಛವಾದ ದಿಂಬು ಬಳಸಿ

ಸ್ವಚ್ಛವಾದ ದಿಂಬು ಬಳಸಿ

ತಲೆಯ ಎಣ್ಣೆ ಜಿಡ್ಡು, ಇನ್ನು ಬೆವರಿನ ಅಂಶ ನಿಮ್ಮ ದಿಂಬು ಕವರ್‌ನಲ್ಲಿ ಇದ್ದರೆ ಅದರಿಂದ ಮೊಡವೆ, ಅಲರ್ಜಿ ಮುಂತಾದ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನಿಮ್ಮ ದಿಂಬು ಕವರ್‌ ಸ್ವಚ್ಛವಾಗಿರಬೇಕು. ಇನ್ನು ಮೊಡವೆ ಸಮಸ್ಯೆ ಇದ್ದರೆ ಆದರ ನಿವಾರಣೆಗೆ ದಿಂಬುವಿನ ಸ್ವಚ್ಚತೆ ಕಡೆ ತುಂಬಾನೇ ಗಮನ ನೀಡಬೇಕು.

ನಿಮ್ಮ ತಟ್ಟೆಯಲ್ಲಿ ಬಣ್ಣ-ಬಣ್ಣದ ಆಹಾರವಿರಲಿ'

ನಿಮ್ಮ ತಟ್ಟೆಯಲ್ಲಿ ಬಣ್ಣ-ಬಣ್ಣದ ಆಹಾರವಿರಲಿ'

ಬಣ್ಣ-ಬಣ್ಣದ ಆಹಾರ ಎಂದರೆ ಆರೋಗ್ಯಕರ ಆಹಾರ ಹಾಗೂ ತರಕಾರಿಗಳಿರಲಿ. ಇದು ನಿಮ್ಮ ತ್ವಚೆಗೆ ಅಗ್ಯತವಾದ ಪೋಷಕಾಂಶ ನಿಡುತ್ತದೆ. ಇದರಿಂದ ನಿಮ್ಮ ತ್ವಚೆ ಶುಭ್ರವಾಗಿ, ಹೊಳಪಾಗಿ ಕಾಣುವುದು.

ಫೋನ್‌ನ ಸ್ವಚ್ಛತೆ ಕಡೆ ಗಮನ ಹರಿಸಿ

ಫೋನ್‌ನ ಸ್ವಚ್ಛತೆ ಕಡೆ ಗಮನ ಹರಿಸಿ

ಫೋನ್‌ನಲ್ಲಿ ಕಣ್ಣಿಗೆ ಕಾಣದ ತುಂಬಾ ಬ್ಯಾಕ್ಟಿರಿಯಾ ಇರುತ್ತದೆ. ನೀವು ಪೋನ್‌ ಅನ್ನು ಕೆನ್ನೆಗೆ ಒತ್ತಿ ಹಿಡಿದು ಮಾತನಾಡಬೇಡಿ, ಅಲ್ಲಿದೆ ಇಯರ್‌ಫೋನ್ ಅನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ.

 ಸಕ್ಕರೆ ಕಡಿಮೆ ಮಾಡಿ

ಸಕ್ಕರೆ ಕಡಿಮೆ ಮಾಡಿ

ನೀವು ಸಕ್ಕರೆಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದಷ್ಟೂ ಮುಖದಲ್ಲಿ ನೆರಿಗೆ ಬೇಗನೆ ಬೀಳುವುದು ಎಂಬುವುದು ನೆನಪಿರಲಿ. ಜ್ಯೂಸ್‌ಗೆ ಸಕ್ಕರೆ ಹಾಕದೆ ಕುಡಿಯಿರಿ, ಟೀ, ಕಾಫಿಗೂ ಸಕ್ಕರೆ ಕಡಿಮೆ ಮಾಡಿ, ಸಕ್ಕರೆ ಬದಲಿಗೆ ಬೆಲ್ಲ ಬಳಸಿ.

 ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡಿ

ಸೂರ್ಯನ ಕಿರಣಗಳಿಂದ ರಕ್ಷಣೆ ಮಾಡಿ

ಬಿಸಿಲಿನಲ್ಲಿ ಹೆಚ್ಚು ಓಡಾಡುವಾಗ ಕೊಡೆ ಹಿಡಿದು ಓಡಾಡುವುದು ಅಥವಾ ಸನ್‌ಸ್ಕ್ರೀನ್‌ ಲೋಷನ್ ಹಚ್ಚಿ. ಅಧಿಕ ಬಿಸಿಲಿನಲ್ಲಿ ಓಡಾಡಿದರೆ ನೆರಿಗೆ ಬೇಗನೆ ಬೀಳುವುದು.

ವಿಟಮಿನ್‌ಗಳ ಕೊರತೆಯಾಗಬಾರದು

ವಿಟಮಿನ್‌ಗಳ ಕೊರತೆಯಾಗಬಾರದು

ನಿಮ್ಮ ತ್ವಚೆ ಅಂದವಾಗಿ ಇರಬೇಕು ಎಂದರೆ ನಿಮ್ಮ ದೇಹಕ್ಕೆ ಎಲ್ಲಾ ಬಗೆಯ ವಿಟಮಿನ್‌ಗಳು ಪೂರೈಕೆಯಾಗಬೇಕು. ಅದಕ್ಕಾಗಿ ಹಣ್ಣು, ತರಕಾರಿ ಸೇವನೆ ಅಧಿಕ ಮಾಡಬೇಕು. ಕಾರ್ಬ್ಸ್, ಮಾಂಸಾಹಾರ ಇವುಗಳ ಸೇವನೆ ಕಡಿಮೆ ಮಾಡಿ. ಮೀನು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು.

ಬಿಸಿ ಬಿಸಿ ನೀರು ಮೈಗೆ ಹಾಕಬೇಡಿ

ಬಿಸಿ ಬಿಸಿ ನೀರು ಮೈಗೆ ಹಾಕಬೇಡಿ

ಕೆಲವರಿಗೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ನಿಮ್ಮ ತ್ವಚೆಗೆ ಒಳ್ಳೆಯದಲ್ಲ. ಬಿಸಿ ನೀರಿನ ಸ್ನಾನ ನಿಮ್ಮ ತ್ವಚೆಯಲ್ಲಿನ ಮಾಯಿಶ್ಚರೈಸರ್ ತೆಗೆದು, ತ್ವಚೆಯನ್ನು ಡ್ರೈಯಾಗಿಸುತ್ತದೆ.

ಸರಿಯಾದ ಸೌಂದರ್ಯ ವರ್ಧಕ ಬಳಸಿ

ಸರಿಯಾದ ಸೌಂದರ್ಯ ವರ್ಧಕ ಬಳಸಿ

ನೀವು ಕಾಲಕ್ಕೆ ತಕ್ಕ ಹಾಗೂ ನಿಮ್ಮ ತ್ವಚೆಗೆ ತಕ್ಕ ಸೌಂದರ್ಯವರ್ಧಕ ಸಾಧನ ಬಳಸಬೇಕು. ನಿಮ್ಮ ಫ್ರೆಂಡ್ ಬಳಸುವ ಕ್ರೀಮ್ ನಿಮ್ಮ ತ್ವಚೆಗೆ ಹೊಂದಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸೌಂದರ್ಯ ವರ್ಧಕ ಕ್ರೀಮ್ ಕೊಳ್ಳುವಾಗ ನಿಮ್ಮ ಆಯಿಲ್ ಸ್ಕಿನ್ ಆಗಿದ್ದರೆ ಅದಕ್ಕೆ ತಕ್ಕ ಕ್ರೀಮ್ ಬಳಸಬೇಕು. ಡ್ರೈ ಸ್ಕಿನ್‌ನವರು ತ್ವಚೆಯ ಮಾಯಿಶ್ಚರೈಸರ್ ಹೆಚ್ಚಿಸುವ ಕ್ರೀಮ್ ಬಳಸಬೇಕು.

ಈ ಟಿಪ್ಸ್ ಪಾಲಿಸಿದರೆ ನಿಮ್ಮ ತ್ವಚೆ ತುಂಬಾ ಚೆನ್ನಾಗಿರುತ್ತದೆಎ ಹಾಗೂ ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತೀರಿ,

English summary

Beuaty Tips To Keep Your Skin Young And Beautiful

Beuaty tips to keep your skin young and beautiful, read on,
Story first published: Thursday, March 25, 2021, 14:05 [IST]
X
Desktop Bottom Promotion