For Quick Alerts
ALLOW NOTIFICATIONS  
For Daily Alerts

ಕಿತ್ತಳೆ ಸಿಪ್ಪೆಯ ಪುಡಿಯಿಂದ ಫೇಶಿಯಲ್‌ ಮಾಸ್ಕ್ ಮಾಡುವುದು ಹೇಗೆ?

|

ಕಿತ್ತಳೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಸೌಂದರ್ಯಕ್ಕೂ ಅಷ್ಟೇ ಒಳ್ಳೆಯದು. ಕಿತ್ತಳೆ ಸಿಪ್ಪೆ ಸುಲಿಯುವಾಗ ಆ ಸಿಪ್ಪೆಯನ್ನು ಒಂದು ಕಸ ಎಂದು ಪರಿಗಣಿಸಿ ಎಸೆದು ಬಿಡುತ್ತೇವೆ. ಆದರೆ ಆ ಸಿಪ್ಪೆಯಲ್ಲಿ ನಿಮ್ಮ ಸೌಂದರ್ಯ ರಕ್ಷಣೆ ಮಾಡುವ ಗುಣಗಳ ಬಗ್ಗೆ ತಿಳಿದ ಮೇಲೆ ಅದನ್ನು ಬಿಸಾಡಲು ಯೋಚಿಸುವಿರಿ.

Orange Peel Mask

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ನೀವು ನಿಮ್ಮ ತ್ವಚೆ ಆರೈಕೆಯಲ್ಲಿ ಬಳಸಬಹುದಾಗಿದೆ. ಇದನ್ನು ಫೇಸ್‌ಮಾಸ್ಕ್ ಆಗಿ ಬಳಸಿ ಮೊಡವೆ, ತ್ವಚೆಯಲ್ಲಿರುವ ಜಿಡ್ಡಿನಂಶ ತೆಗೆಯಬಹುದಾಗಿದೆ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ಅದರ ಜತೆಗೆ ಮನೆಯಲ್ಲಿ ಸಿಗುವ ಸೌಂದರ್ಯವರ್ಧಕ ವಸ್ತುಗಳನ್ನು ಬಳಸಿ ತ್ವಚೆ ಆರೈಕೆ ಮಾಡಬಹುದಾಗಿದೆ. ಇಲ್ಲಿ ನಾವು ಹೆಚ್ಚಿನ ದುಡ್ಡು ಖರ್ಚು ಮಾಡದೆ ಕಿತ್ತಳೆ ಸಿಪ್ಪೆ ಬಳಸಿ ನಿಮ್ಮ ಸೌಂದರ್ಯ ಸಮಸ್ಯೆ ಹೋಗಲಾಡಿಸಿ ಅಂದ ಹೆಚ್ಚಿಸುವುದು ಹೇಗೆ ಎಂದು ಟಿಪ್ಸ್ ನೀಡಿದ್ದೇವೆ ನೋಡಿ.

ಕಿತ್ತಳೆ ಸಿಪ್ಪೆಯ ಗುಣಗಳು

1. ಮೊಡವೆ ಹೋಗಲಾಡಿಸುತ್ತದೆ

1. ಮೊಡವೆ ಹೋಗಲಾಡಿಸುತ್ತದೆ

ಕಿತ್ತಳೆ ಸಿಪ್ಪೆಯಲ್ಲಿ ಕೂಡ ವಿಟಮಿನ್ ಸಿ ಇದ್ದು ಇದರ ಸಿಪ್ಪೆಯನ್ನು ಪುಡಿ ಮಾಡಿ ಅದನ್ನು ರೋಸ್‌ ವಾಟರ್‌ನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಮೊಡವೆ ಕಡಿಮೆಯಾಗುತ್ತದೆ, ಇನ್ನು ಮುಖದಲ್ಲಿ ಕಪ್ಪು ಕಲೆಗಳು ಇದ್ದಿದ್ದರೆ ಅದನ್ನು ಹೋಗಲಾಡಿಸಲು ಕಿತ್ತಳೆ ಸಿಪ್ಪೆಯ ಮಾಸ್ಕ್ ಹಚ್ಚಬಹುದು.

ಕಿತ್ತಳೆ ಸಿಪ್ಪೆಯ ಮಾಸ್ಕ್‌ ಮುಖದಲ್ಲಿರುವ ಎಣ್ಣೆಯಂಶವನ್ನು ತೆಗೆಯುವುದರಿಂದ ಮೊಡವೆ ನಿಯಂತ್ರಣ ಮಾಡುತ್ತದೆ ಅಲ್ಲದೆ ಕಿತ್ತಳೆ ಸಿಪ್ಪೆ ಮಾಸ್ಕ್ ಮೊಡವೆಯ ಕಲೆ ಹೋಗಲಾಡಿಸುತ್ತದೆ.

2. ಮುಖದ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡುತ್ತದೆ

2. ಮುಖದ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡುತ್ತದೆ

ಮುಖದಲ್ಲಿ ಬ್ಲ್ಯಾಕ್‌ ಹೆಡ್ಸ್‌, ವೈಟ್‌ ಹೆಡ್ಸ್, ನಿರ್ಜೀವ ತ್ವಚೆ ಇದ್ದಿದ್ದರೆ ಮುಖದ ಕಾಂತಿ ಮಂಕಾಗುವುದು. ಇನ್ನು ಮುಖದಲ್ಲಿರುವ ರಂಧ್ರಗಳಲ್ಲಿ ಜಿಡ್ಡಿನಂಶ ಸೇರಿದ್ದರೆ ಮುಖ ಮಂಖಾಗುವುದು. ಕಿತ್ತಳೆ ಸಿಪ್ಪೆಯನ್ನು ಹಾಲಿನ ಜತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ಈ ರೀತಿ ವಾರದಲ್ಲಿ 3 ಬಾರಿ ಮಾಡುತ್ತಾ ಬಂದರೆ ತ್ವಚೆಯಲ್ಲಿರುವ ಕೊಳೆಯಂಶ ಹೋಗುವುದರಿಂದ ಮುಖದ ಅಂದ ಹೆಚ್ಚುವುದು.

3. ತ್ವಚೆ ಮಂಕಾಗಿದೆಯೇ?

3. ತ್ವಚೆ ಮಂಕಾಗಿದೆಯೇ?

ನಿಮಗೆ ತ್ವಚೆ ಮಂಕಾಗಿದೆ, ಏನೂ ಹಚ್ಚಿದರೂ ಕಾಂತಿಯುತವಾಗಿ ಕಾಣುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಾದರೆ ಕಿತ್ತಳೆ ಸಿಪ್ಪೆಯ ಮಾಸ್ಕ್ ಹಚ್ಚಿ ನೋಡಿ. ಮಾಸ್ಕ್‌ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದು ನಂತರ ಮಾಯಿಶ್ಚರೈಸರ್‌ ಹಚ್ಚಿದರೆ ನಿಮ್ಮ ಮುಖದ ತ್ವಚೆಯ ತಾಜಾತನ ಹೆಚ್ಚುವುದು, ಇದರಿಂದ ಆಕರ್ಷಕವಾಗಿ ಕಾಣುವಿರಿ.

4. ತ್ವಚೆ ರಕ್ಷಣೆ ಮಾಡಿ, ಕಾಂತಿ ಹೆಚ್ಚಿಸುತ್ತದೆ

4. ತ್ವಚೆ ರಕ್ಷಣೆ ಮಾಡಿ, ಕಾಂತಿ ಹೆಚ್ಚಿಸುತ್ತದೆ

ನಾವು ದಿನನಿತ್ಯ ಓಡಾಡುವಾಗ ಮುಖದಲ್ಲಿ ದೂಳು, ಇತರ ರಾಸಾಯನಿಕಗಳು ಬಂದು ಕೂರುತ್ತದೆ, ಇದರಿಂದ ತ್ವಚೆ ಹಾಳಾಗುವುದು. ಇನ್ನು ನಾವು ಹಚ್ಚುವ ಮೇಕಪ್‌ನಲ್ಲೂ ಕೂಡ ರಾಸಾಯನಿಕ ಇರುತ್ತದೆ. ರಾಸಾಯನಿಕಗಳಿಂದ ಮುಖದ ರಕ್ಷಣೆ ಮಾಡುವಲ್ಲಿ ಕಿತ್ತಳೆ ಸಿಪ್ಪೆ ತುಂಬಾ ಸಹಕಾರಿಯಾಗಿದೆ.

ಇನ್ನು ಇದನ್ನು ಮಾಸ್ಕ್‌ ಬಳಸುವುದರಿಂದ ತ್ವಚೆ ಕಾಂತಿ ಹೆಚ್ಚುವುದು.

5. ಯೌವನದ ಕಳೆ ನೀಡುತ್ತದೆ

5. ಯೌವನದ ಕಳೆ ನೀಡುತ್ತದೆ

ಇದರಲ್ಲಿರುವ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಮುಖ ಎಣ್ಣೆ-ಎಣ್ಣೆಯಾಗುವುದನ್ನು ತಡೆಗಟ್ಟುತ್ತದೆ, ಅಲ್ಲದೆ ತ್ವಚೆಯಲ್ಲಿ ಯೌವನದ ಕಳೆ ಬೇಗನೆ ಮಾಸದಂತೆ ತ್ವಚೆ ರಕ್ಷಣೆ ಮಾಡುತ್ತದೆ. ಎಣ್ಣೆ ತ್ವಚೆ ಹೋಗಲಾಡಿಸಲು ಕಿತ್ತಳೆ ಸಿಪ್ಪೆಯ ಪುಡಿಯನ್ನು ರೋಸ್‌ ವಾಟರ್ ಜತೆ ಮಿಕ್ಸ್ ಮಾಡಿ ಹಚ್ಚಿ. ಸಾಮಾನ್ಯ ತ್ವಚೆ ಹಾಗೂ ಒಣ ತ್ವಚೆಯವರು ಹಾಲಿನಲ್ಲಿ ಮಿಶ್ರ ಮಾಡಿ ಹಚ್ಚಿ ತ್ವಚೆ ರಕ್ಷಣೆ ಮಾಡಬಹುದು.

ಕಿತ್ತಳೆ ಸಿಪ್ಪೆಯ ಪುಡಿ ಬಳಸಿ ಮಾಸ್ಕ್‌ ಮಾಡುವ 11 ವಿಧಾನ ನಿಮಗೆ ನೀಡಿದ್ದೇವೆ. ಇವುಗಳಲ್ಲಿ ನಿಮಗೆ ಇಷ್ಟವಾದ ಮಾಸ್ಕ್ ಮಾಡಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

1. ಕಿತ್ತಳೆ ಸಿಪ್ಪೆಯ ಪುಡಿ, ಚಂದನ, ರೋಸ್‌ ವಾಟರ್

1. ಕಿತ್ತಳೆ ಸಿಪ್ಪೆಯ ಪುಡಿ, ಚಂದನ, ರೋಸ್‌ ವಾಟರ್

ಮೊಡವೆ ಇರುವವರು ಈ ಫೇಸ್‌ ಮಾಸ್ಕ್‌ ಬಳಸುವುದು ಒಳ್ಳೆಯದು. ಇದನ್ನು ಆಸ್ಟ್ರಿಜೆಂಟ್ ಸಾಮಗ್ರಿಯಾದ ರೋಸ್‌ ವಾಟರ್ ಜತೆ ಮಿಕ್ಸ್ ಮಾಡಿದರೆ ಮೊಡವೆ ಹೋಗಲಾಡಿಸಲು ತುಂಬಾ ಒಳ್ಳೆಯದು.

ಬೇಕಾಗುವ ಸಾಮಗ್ರಿ

* 1 ಚಮಚ ಕಿತ್ತಳೆ ಸಿಪ್ಪೆ ಪಡಿ

* 2 ಚಮಚ ಚಂದನ ಪುಡಿ

* ರೋಸ್‌ ವಾಟರ್

ಬಳಸುವ ವಿಧಾನ:

* ಒಂದು ಬೌಲ್‌ನಲ್ಲಿ ಈ ಮೂರು ವಸ್ತುಗಳನ್ನು ಮಿಶ್ರ ಮಾಡಿ ಪೇಸ್ಟ್ ರೀತಿ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ಹೀಗೆ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ಮುಖದ ಅಂದ ಹೆಚ್ಚುವುದು.

 2. ಕಿತ್ತಳೆ ಸಿಪ್ಪೆಯ ಪುಡಿ ಹಾಲು, ತೆಂಗಿನಕಾಯಿ ಎಣ್ಣೆ

2. ಕಿತ್ತಳೆ ಸಿಪ್ಪೆಯ ಪುಡಿ ಹಾಲು, ತೆಂಗಿನಕಾಯಿ ಎಣ್ಣೆ

ಈ ಮಾಸ್ಕ್ ಒಣ ತ್ವಚೆಯವರಿಗೆ ತುಂಬಾ ಒಳ್ಳೆಯದು. ಇದು ತ್ವಚೆಯ ಮಾಯಿಶ್ಚರೈಸರ್ ಹೆಚ್ಚಿಸಿ ಕಾಂತಿ ನೀಡುತ್ತದೆ.

ಬೇಕಾಗುವ ಸಾಮಗ್ರಿ

1 ಚಮಚ ಕಿತ್ತಳೆ ಪುಡಿ

2 ಚಮಚ ಹಾಲು

1 ಚಮಚ ತೆಂಗಿನೆಣ್ಣೆ

ಬಳಸುವ ವಿಧಾನ

ಈ ಮೂರು ವಸ್ತುಗಳನ್ನು ಒಂದು ಬೌಲ್‌ನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಈ ರೀತಿ ವಾರದಲ್ಲಿ 1-2 ಬಾರಿ ಮಾಡುತ್ತಾ ಬಂದರೆ ಸಾಕು.

3. ಕಿತ್ತಳೆ ಸಿಪ್ಪೆಯ ಪುಡಿ ಮತ್ತು ನಿಂಬೆರಸ

3. ಕಿತ್ತಳೆ ಸಿಪ್ಪೆಯ ಪುಡಿ ಮತ್ತು ನಿಂಬೆರಸ

ಮುಖವನ್ನು ಕ್ಲೆನ್ಸ್ ಮಾಡಲು ಅಂದರೆ ಮುಖದಲ್ಲಿರುವ ಜಿಡ್ಡಿನಂಶ ಹಾಗೂ ಕೊಳೆ ತೆಗೆಯಲು ಈ ಮಾಸ್ಕ್ ತುಂಬಾ ಸಹಕಾರಿ. ಇದು ಮುಖದ ಮೃದುತ್ವ ಕೂಡ ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ

2 ಚಮಚ ಕಿತ್ತಳೆ ಸಿಪ್ಪೆಯ ಪುಡಿ

1 ಚಮಚ ನಿಂಬೆರಸ

ಬಳಸುವ ವಿಧಾನ

ಈ ಎರಡು ಪುಡಿಯನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು.

ಕಿತ್ತಳೆ ಸಿಪ್ಪೆಯ ಪುಡಿ, ಮೊಸರು, ಜೇನು

ಕಿತ್ತಳೆ ಸಿಪ್ಪೆಯ ಪುಡಿ, ಮೊಸರು, ಜೇನು

ತ್ವಚೆ ತುಂಬಾ ಮಂಕಾಗಿದ್ದರೆ ಮುಖದಲ್ಲಿ ಕಾಂತಿ ಹೆಚ್ಚಿಸಲು ಈ ವಿಧಾನ ಬಳಸುವುದು ಒಳ್ಳೆಯದು. ಇದು ತ್ವಚೆಯ ತೇವಾಂಶ ಕಾಪಾಡಿ ಮುಖದ ಅಂದವನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ

2 ಚಮಚ ಕಿತ್ತಳೆ ಸಿಪ್ಪೆಯ ಪುಡಿ

1 ಚಮಚ ಮೊಸರು

ಅರ್ಧ ಚಮಚ ಜೇನು

ಮಾಡುವ ವಿಧಾನ

ಈ ಮೂರನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಇಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ವಾರದಲ್ಲಿ 2-3 ಬರಿ ಮಾಡಿದರೆ ಸಾಕು ಮುಖದ ಕಾಂತಿ ಹೆಚ್ಚುವುದು.

ಕಿತ್ತಳೆ ಸಿಪ್ಪೆಯ ಪುಡಿ ಹಾಗೂ ಮೊಟ್ಟೆಯ ಬಿಳಿ

ಕಿತ್ತಳೆ ಸಿಪ್ಪೆಯ ಪುಡಿ ಹಾಗೂ ಮೊಟ್ಟೆಯ ಬಿಳಿ

ಮೊಟ್ಟೆಯ ಬಿಳಿ ಮುಖಕ್ಕೆ ಅತ್ಯುತ್ತಮವಾದ ಮಾಸ್ಕ್‌ ಆಗಿದೆ. ಅದರ ಜತೆಗೆ ಕಿತ್ತಳೆ ಸಿಪ್ಪೆಯ ಪುಡಿ ಕೂಡ ಸೇರಿಸಿದಾಗ ಮುಖದ ಕಾಂತಿಗೆ ಮತ್ತಷ್ಟು ಒಳ್ಳೆಯದು.

ಈ ಮಾಸ್ಕ್‌ಗೆ ಬೇಕಾಗುವ ಸಾಮಗ್ರಿ

1 ಚಮಚ ಕಿತ್ತಳೆ ಸಿಪ್ಪೆಯ ಪುಡಿ

1 ಬಿಳಿ ಮೊಟ್ಟೆ

ಮಾಡುವ ವಿಧಾನ

ಒಂದು ಬೌಲ್‌ನಲ್ಲಿ ಈ ಎರಡು ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಕಿತ್ತಳೆ ಸಿಪ್ಪೆಯ ಪುಡಿ ಹಾಗೂ ಲೋಳೆಸರ

ಕಿತ್ತಳೆ ಸಿಪ್ಪೆಯ ಪುಡಿ ಹಾಗೂ ಲೋಳೆಸರ

ಲೋಳೆಸರ ಮೈಕಾಂತಿ ಹೆಚ್ಚಿಸಿ ತ್ವಚೆಯನ್ನು ಮೃದುವಾಗಿಸುತ್ತದೆ, ಕಿತ್ತಳೆ ಸಿಪ್ಪೆಯ ಪುಡಿ ಮುಖದಲ್ಲಿರುವ ಕೊಳೆಯಶ ತೆಗೆಯುವಲ್ಲಿ ಸಹಕಾರಿ. ಈ ಮಾಸ್ಕ್‌ ಅನ್ನು ಎಲ್ಲಾ ಬಗೆಯ ತ್ವಚೆಯವರು ಕೂಡ ಬಳಸಬಹುದು.

ಬೇಕಾಗುವ ಸಾಮಗ್ರಿ

ಅರ್ಧ ಚಮಚ ಕಿತ್ತಳೆ ಸಿಪ್ಪೆಯ ಪುಡಿ

1 ಚಮಚ ತಾಜಾ ಲೋಳೆಸರ

ಬಳಸುವ ವಿಧಾನ

ಈ ಎರಡು ಮಿಶ್ರಣವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಿರಿ

English summary

Benefits Of Orange Peel And How To Use For skin Care

Orange Peel is very good for skin care. There are various ways you can use the powder to enrich your skin. Here are tips to use, Take a look.
Story first published: Thursday, December 19, 2019, 13:00 [IST]
X
Desktop Bottom Promotion