For Quick Alerts
ALLOW NOTIFICATIONS  
For Daily Alerts

ತ್ವಚೆಯಲ್ಲಿ ಮೊಡವೆ, ನೆರಿಗೆ ತಡೆಗಟ್ಟುವಲ್ಲಿ ಬಿಸಿನೀರು ಹೇಗೆ ಸಹಕಾರಿ?

|

ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ, ಆದರೆ ಅದರ ಪ್ರಯೋಜನಗಳ ಬಗ್ಗೆ ಬಹುಶಃ ನೀವು ಊಹಿಸಿರಲಿಕ್ಕಿಲ್ಲ.

ತ್ವಚೆ ಚೆನ್ನಾಗಿರಬೇಕು ಎಂದು ನಾವೆಲ್ಲಾ ಸಾವಿರಾರು ರುಪಾಯಿ ಕ್ರೀಮ್, ಮಾಯಿಶ್ಚರೈಸರ್‌ಗೆ ಖರ್ಚು ಮಾಡುತ್ತೇವೆ, ಆದರೆ ಅವೆಲ್ಲದರ ಗುಣ ಬಿಸಿ ನೀರು ಕುಡಿಯುವುದರಿಂದ ಪಡೆಯಬಹುದು. ಬಿಸಿ ನೀರು ಜೀರ್ಣಕ್ರಿಯೆಗೂ ತುಂಬಾನೇ ಸಹಕಾರಿ.

ನಾವಿಲ್ಲಿ ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ಅದು ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಲು ಹೇಗೆ ಸಹಕಾರಿ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಿ, ಮೊಡವೆ ನಿಯಂತ್ರಿಸುತ್ತದೆ

ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಿ, ಮೊಡವೆ ನಿಯಂತ್ರಿಸುತ್ತದೆ

ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಇದು ನಿಮ್ಮ ದೇಹಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಬಿಸಿಯಾಗಲಿ, ತಣ್ಣೀರು ಆಗಲಿ ದಿನದಲ್ಲಿ 8 ಲೋಟ ನೀರು ಕುಡಿಯಲೇಬೇಕೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಬಿಸಿ ನೀರು ಕುಡಿಯುವುದರಿಂದ ಇನ್ನಷ್ಟು ಪ್ರಯೋಜನಕಾರಿ. ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತೆ, ಇದರಿಂದ ಮೊಡವೆ ನಿಯಂತ್ರಣ ಮಾಡುತ್ತೆ. ಅಲ್ಲದೆ ಬಿಸಿ ನೀರು ಜೀರ್ಣಕ್ರಿಯೆಗೂ ತುಂಬಾನೇ ಸಹಕಾರಿ. ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆರಸ ಹಾಗೂ ಸ್ವಲ್ಪ ಜೇನು ಹಾಕಿ ಕುಡಿಯುವುದರಿಂದ ಬೊಜ್ಜು ನಿಯಂತ್ರರಿಸಬಹುದು ಹಾಗೂ ತ್ವಚೆಯು ಬೇಗನೆ ಸುಕ್ಕುಗಟ್ಟುವುದನ್ನು ತಡೆಗಟ್ಟಬಹುದು.

ತ್ವಚೆಯ ಮಾಯಿಶ್ಚರೈಸರ್ ಕಾಪಾಡುತ್ತೆ

ತ್ವಚೆಯ ಮಾಯಿಶ್ಚರೈಸರ್ ಕಾಪಾಡುತ್ತೆ

ದಿನಾ ಬಿಸಿ ನೀರು ಕುಡಿಯುವುದರಿಂದ ಇದು ದೇಹದಲ್ಲಿ ನೀರಿನಂಶ ಕಾಪಾಡುತ್ತೆ, ಅಲ್ಲದೆ ಒಣ ತ್ವಚೆ ಇರುವವರು ಬಿಸಿ ನೀರು ಕುಡಿಯುವುದರಿಂದ ತ್ವಚೆ ತುಂಬಾ ಒಣಗುವುದನ್ನು ತಡೆಗಟ್ಟಬಹುದು. ಬಿಸಿ ನೀರು ಕುಡಿಯುವುದರಿಂದ ರಕ್ತ ಸಂಚಾರ ಚೆನ್ನಾಗಿರುತ್ತದೆ, ಇದರಿಂದ ತ್ವಚೆ ಬೇಗನೆ ಒಣಗುವುದಿಲ್ಲ.

ಬೇಗನೆ ಮುಪ್ಪಾಗುವುದಿಲ್ಲ

ಬೇಗನೆ ಮುಪ್ಪಾಗುವುದಿಲ್ಲ

ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ವರ್ಷ 40 ಆದರೂ 30 ಹರೆಯದವರಂತೆ ಕಾಣುತ್ತೀರಿ. ಬಿಸಿ ನೀರು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುವುದರಿಂದ ತ್ವಚೆ ಕಾಂತಿ ಕೂಡ ಹೆಚ್ಚುವುದು ಹಾಗೂ ಮುಖದಲ್ಲಿ ಬೇಗನೆ ನೆರಿಗೆ ಕೂಡ ಬೀಳುವುದರಿಂದ, ನಿಮ್ಮ ಬ್ಯೂಟಿ ಹೆಚ್ಚಿಸುವ ಸೀಕ್ರೆಟ್ ಗೊತ್ತಾಯ್ತಲ್ಲ?

ತ್ವಚೆ ಸೋಂಕಿನಿಂದ ರಕ್ಷಣೆ ಮಾಡುತ್ತದೆ

ತ್ವಚೆ ಸೋಂಕಿನಿಂದ ರಕ್ಷಣೆ ಮಾಡುತ್ತದೆ

ಬಿಸಿ ನೀರು ತ್ವಚೆಗೈ ಒಳ್ಳೆಯದು, ಜೀರ್ಣಕ್ರಿಯೆಗೂ ತುಂಬಾ ಸಹಕಾರಿ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದು ಜೀರ್ಣ ಪ್ರಕ್ರಿಯೆಗೆ ಸಹಕಾರಿ. ಇದು ಲಿವರ್‌ ಅನ್ನು ಶುದ್ದೀಕರಿಸುತ್ತದೆ, ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತೆ. ದೇಹದ ಒಳಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ತ್ವಚೆ ಸೋಂಕು ಉಂಟಾಗುವುದಿಲ್ಲ, ಅಂದರೆ ಅಲರ್ಜಿ, ಮೊಡವೆ ಮುಂತಾದ ಸಮಸ್ಯೆ ಇರುವುದಿಲ್ಲ.

English summary

Benefits of Drinking Warm Water for Skin in Kannada

Here are benefits of drinking warm water for skin, read on.
X
Desktop Bottom Promotion