For Quick Alerts
ALLOW NOTIFICATIONS  
For Daily Alerts

ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು

|

ಹಣ್ಣುಗಳು ನಿಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಚರ್ಮ ಆರೋಗ್ಯಕರವಾಗಿರುವುದಲ್ಲದೇ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಅಷ್ಟೇ ಈ ಹಣ್ಣುಗಳಿಂದ ಫೇಸ್ ಮಾಸ್ಕ್ ತಯಾರಿಸಿ, ನಿಮ್ಮ ಮುಖಕ್ಕೆ ಹಚ್ಚಬಹುದು. ಅಂತಹ ಹಣ್ಣುಗಳಲ್ಲಿ ಒಂದು ಹಣ್ಣು ಬಾಳೆಹಣ್ಣು.
ಬಾಳೆಹಣ್ಣು ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಒಳ್ಳೆಯದು. ಇದು ತಿನ್ನಲು ರುಚಿಕರವಾಗಿಲ್ಲದಿದ್ದರೂ, ಬಾಳೆಹಣ್ಣು ಕೆಲವು ಪ್ರಬಲ ಸೌಂದರ್ಯ ಪ್ರಯೋಜನಗಳನ್ನು ಸಹ ಹೊಂದಿವೆ. ಇದು ನಿಮ್ಮ ಚರ್ಮ ಮತ್ತು ಕೂದಲನ್ನು ಸುಂದರವಾಗಿಸುತ್ತದೆ. ಈ ಹಣ್ಣಿನಲ್ಲಿ ಪ್ರಬಲವಾದ ಉತ್ಕರ್ಷಣ ನಿರೋಧಕಗಳು, ಫೈಟೊಕೆಮಿಕಲ್ಸ್ ಮತ್ತು ತೇವಾಂಶ ಇದ್ದು ಅದು ನಿಮ್ಮ ಚರ್ಮವನ್ನು ಪೋಷಿಸುತ್ತದೆ ಮತ್ತು ಪುನರ್ಯೌವನಗೊಳಿಸುತ್ತದೆ.

Banana Face Masks Recipes For Glowing Skin In Kannada

ಕಲೆಗಳು, ಗುರುತುಗಳು, ಗುಳ್ಳೆಗಳು ಮತ್ತು ಮೊಡವೆಗಳನ್ನು ತೊಡೆದುಹಾಕಲು ಮತ್ತು ನಿಮ್ಮ ಚರ್ಮಕ್ಕೆ ಕಾಂತಿಯುತ ಹೊಳಪನ್ನು ತರಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ಹಣ್ಣು ಹಣೆಯ ರೇಖೆಗಳು ಮತ್ತು ಸುಕ್ಕುಗಳನ್ನು ತೊಡೆದುಹಾಕುವ ಮೂಲಕ ನಿಮ್ಮನ್ನು ಯುವಕರನ್ನಾಗಿ ಮಾಡುತ್ತದೆ. ಈ ಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದ್ದು, ಇವುಗಳಲ್ಲಿರುವ ವಿಟಮಿನ್ ಎ, ಬಿ, ಸಿಗಳು ನಿಮ್ಮ ಚರ್ಮದ ಮೇಲೆ ಅದ್ಭುತಗಳನ್ನು ಮಾಡುತ್ತದೆ.

ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಈ ಅದ್ಭುತ ಹಣ್ಣನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ನಾವು ಬಹಿರಂಗಪಡಿಸುತ್ತೇವೆ. ನಿಮಗಾಗಿ ಕೆಲವು ಬಾಳೆಹಣ್ಣಿನ ಫೇಸ್ ಮಾಸ್ಕ್ ಗಳು ಇಲ್ಲಿವೆ.

ಬಾಳೆಹಣ್ಣಿನ ಫೇಸ್ ಮಾಸ್ಕ್ ಗಳು ಹೀಗಿವೆ:

ಮುಖದ ಕಲೆಗಳನ್ನು ತೊಡೆದುಹಾಕಲು ಈ ಮಾಸ್ಕ್:

ಮುಖದ ಕಲೆಗಳನ್ನು ತೊಡೆದುಹಾಕಲು ಈ ಮಾಸ್ಕ್:

ಮೊಡವೆಗಳ ತ್ವಚೆಯನ್ನು ಮತ್ತು ಮುಖದಲ್ಲಿನ ಕಲೆಗಳನ್ನು ಸರಿಯಾಗಿ ಹೋಗಲಾಡಿಸಲು ಬಯಸುವಿರಾ? ಅದಕ್ಕಾಗಿ ಬಳಸಿ ಈ ಬಾಳೆಹಣ್ಣಿನ ಫೇಸ್ ಮಾಸ್ಕ್.ಇದು ನಿಮ್ಮ ತ್ವಚೆಯಲ್ಲಿನ ಎಲ್ಲಾ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ ಮತ್ತು ಬ್ರೇಕೌಟ್ಸ್ಗಳನ್ನು ತಡೆಯುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಬಾಳೆಹಣ್ಣನ್ನು ಬಿಡಿಸಿ, ಅದಕ್ಕೆ ಒಂದು ಟೀ ಚಮಚ ಅರಿಶಿನವನ್ನು ಬೆರೆಸಿ, ಸುಮಾರು 3 ಚಮಚ ಮೊಸರು ಸೇರಿಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ. ಈ ಮುಖವಾಡವು ಗುಳ್ಳೆಗಳು ಮತ್ತು ಮೊಡವೆಗಳ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಕಲೆಗಳನ್ನು ಕಡಿಮೆ ಮಾಡುತ್ತದೆ.

ಮುಖದ ಕಪ್ಪುಕಲೆ ಹೋಗಲಾಡಿಸಲು ಬಳಸಿ ಈ ಮಾಸ್ಕ್:

ಮುಖದ ಕಪ್ಪುಕಲೆ ಹೋಗಲಾಡಿಸಲು ಬಳಸಿ ಈ ಮಾಸ್ಕ್:

ಬಾಳೆಹಣ್ಣು ನಿಮ್ಮ ತ್ವಚೆಯನ್ನು ಬಿಳಿಯಾಗಿಸುವ ಲಕ್ಷಣ ಹೊಂದಿದೆ. ಆದ್ದರಿಂದ ನಿಮ್ಮ ಮುಖದಲ್ಲಿನ ಕಪ್ಪುಕಲೆಯನ್ನು ಮಸುಕಾಗಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಬಾಳೆಹಣ್ಣಿನ ತಿರುಳನ್ನು ತೆಗೆದುಕೊಂಡು ತಲಾ ಒಂದು ಚಮಚ ನಿಂಬೆ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಅರ್ಧ ಘಂಟೆಯ ನಂತರ ತೊಳೆಯಿರಿ. ಇದು ನಿಮ್ಮ ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ ಮತ್ತು ಹೊಳೆಯುವ ಮುಖವನ್ನು ನೀಡುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ನಿಮ್ಮ ಚರ್ಮಕ್ಕೆ ಕಾಂತಿ ನೀಡಿ, ಹೊಳೆಯುವಂತೆ ಮಾಡುತ್ತದೆ.

ಮುಖದ ಹೊಳಪಿಗೆ ಬಳಸಿ ಈ ಮಾಸ್ಕ್:

ಮುಖದ ಹೊಳಪಿಗೆ ಬಳಸಿ ಈ ಮಾಸ್ಕ್:

ಮುಖದ ಮೇಲೆ ಕಾಂತಿ ಮತ್ತು ಹೊಳಪನ್ನು ನೋಡಲು ಯಾರು ಬಯಸುವುದಿಲ್ಲ ಹೇಳಿ? ಎಲ್ಲರಿಗೂ ಇಷ್ಟ ಈ ಕಾಂತಿಯುತ ತ್ವಚೆ. ಅದಕ್ಕಾಗಿ ಬಾಳೆಹಣ್ಣು ನಿಮಗೆ ಸಹಾಯ ಮಾಡಲಿದೆ. ಬಾಳೆಹಣ್ಣುಗಳು ಪೊಟ್ಯಾಸಿಯಮ್ ಮತ್ತು ವಿಟಮಿನ್ ಇ ಮತ್ತು ಸಿ ಯ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಇದಕ್ಕಾಗಿ ನೀವು, ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಹಸಿ ಹಾಲು ಮತ್ತು ರೋಸ್ ವಾಟರ್ ನೊಂದಿಗೆ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಅರ್ಧ ಘಂಟೆಯವರೆಗೆ ಬಿಡಿ. ತಣ್ಣೀರಿನಿಂದ ತೊಳೆಯಿರಿ. ಫಲಿತಾಂಶದಿಂದ ನಿಮಗೆ ಆಶ್ಚರ್ಯವಾಗುತ್ತದೆ.

ಚರ್ಮವನ್ನು ಎಕ್ಸ್ ಫೋಲೀಯೇಟ್ ಮಾಡಲು ಈ ಮಾಸ್ಕ್:

ಚರ್ಮವನ್ನು ಎಕ್ಸ್ ಫೋಲೀಯೇಟ್ ಮಾಡಲು ಈ ಮಾಸ್ಕ್:

ಬಾಳೆಹಣ್ಣು ನಿಮ್ಮ ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳನ್ನು ನಿಧಾನವಾಗಿ ತೆಗೆದು ಸ್ವಚ್ಚವಾಗಿ ಮತ್ತು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ ನೀವು ಬಾಳೆಹಣ್ಣನ್ನು ಮ್ಯಾಶ್ ಮಾಡಿ ತೆಂಗಿನ ಹಾಲು ಮತ್ತು ಓಟ್ ಮೀಲ್ ನೊಂದಿಗೆ ಬೆರೆಸಿ ನಯವಾದ ಪೇಸ್ಟ್ ಮಾಡಿ. ನಿಮ್ಮ ಚರ್ಮದ ಮೇಲ್ಮೈಯಲ್ಲಿರುವ ಎಲ್ಲಾ ಡೆಡ್ ಸೆಲ್ ಗಳನ್ನು ತೊಡೆದುಹಾಕಲು ಇದನ್ನು ನಿಮ್ಮಮುಖದ ಮೇಲೆ ಉಜ್ಜಿ. ಓಟ್ ಮೀಲ್ ಎಫ್ಫೋಲಿಯೇಟ್ ಆಗಿ ಕಾರ್ಯನಿರ್ವಹಿಸಿದರೆ, ಬಾಳೆಹಣ್ಣು ಮತ್ತು ತೆಂಗಿನ ಹಾಲು ಹೈಡ್ರೇಟ್ ಮಾಡುತ್ತದೆ ಮತ್ತು ಚರ್ಮವನ್ನು ಪೋಷಿಸುತ್ತದೆ.

English summary

Banana Face Masks Recipes For Glowing Skin In Kannada

Here we told about Banana face masks recipes for Glowing Skin in kannada, read on.
Story first published: Wednesday, January 27, 2021, 16:00 [IST]
X
Desktop Bottom Promotion