For Quick Alerts
ALLOW NOTIFICATIONS  
For Daily Alerts

40ರ ಮೇಲೂ ಮುಖದಲ್ಲಿ ಕಾಂತಿ ಉಳಿಯಬೇಕೇ?ಹಾಗಾದ್ರೆ ಪ್ರತಿದಿನ ಈ ಎರಡು ಅಕ್ಷರಗಳನ್ನು ಉಚ್ಛರಿಸಿ

|

ವಯಸ್ಸಾಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ಮುಖದ ಮೇಲೆ ವಯಸ್ಸಾಗುವಿಕೆಯ ಪರಿಣಾಮವನ್ನು ಕಡಿಮೆ ಮಾಡಲು ಕೆಲವು ತಂತ್ರಗಳನ್ನು ಮಾಡಬಹುದು. ದೇಹವನ್ನು ಫಿಟ್ ಆಗಿಡಲು ವ್ಯಾಯಾಮ ಮಾಡುವುದು ಹೇಗೆ ಅಗತ್ಯವೋ, ಅದೇ ರೀತಿ ಮುಖದ ಮೇಲೆ ಊತ ಮತ್ತು ಸುಕ್ಕುಗಳನ್ನು ತಪ್ಪಿಸಲು ಮುಖದ ವ್ಯಾಯಾಮಗಳನ್ನು ಮಾಡುವುದು ಅಷ್ಟೇ ಅವಶ್ಯಕ. ಅದಕ್ಕಾಗಿ ನಾವಿಂದು ವಯಸ್ಸಾದ ಮೇಲೂ ತಾರುಣ್ಯಪೂರ್ಣ ತ್ವಚೆ ಪಡೆಯಲು ಮಾಡಬೇಕಾದ ಅತ್ಯಂತ ಸುಲಭವಾದ ವ್ಯಾಯಾಮ ಅಥವಾ ಮುಖದ ಯೋಗವನ್ನು ಹೇಳಹೊರಟಿದ್ದೇವೆ.

ವಯಸ್ಸಾದ ಮೇಲೂ ತಾರುಣ್ಯಪೂರ್ಣ ತ್ವಚೆ ಪಡೆಯಲು ಮಾಡಬೇಕಾದ ಅತ್ಯಂತ ಸುಲಭವಾದ ವ್ಯಾಯಾಮ ಅಥವಾ ಮುಖದ ಯೋಗವನ್ನು ಈ ಕೆಳಗೆ ನೀಡಲಾಗಿದೆ. ಇಲ್ಲಿ ಉಲ್ಲೇಖಿಸಿರುವ ಮುಖದ ವ್ಯಾಯಾಮಗಳು ತುಂಬಾ ಸುಲಭ. ಇದನ್ನು ನೀವು ಪ್ರಯಾಣದಲ್ಲಿರುವಾಗ ಅಥವಾ ಟಿವಿ ನೋಡುವಾಗಲೂ ಮಾಡಬಹುದು:

ಈ ಎರಡು ಅಕ್ಷರಗಳನ್ನು ಹೇಳಿ:

ಈ ಎರಡು ಅಕ್ಷರಗಳನ್ನು ಹೇಳಿ:

ಮುಖದ ಮೇಲೆ ವಯಸ್ಸಾಗುವಿಕೆಯ ಪರಿಣಾಮವನ್ನು ನಿಲ್ಲಿಸಲು, ದುಬಾರಿಯಾದ ಕ್ರೀಮ್ ಅನ್ನು ಹಚ್ಚುವುದು ಅನಿವಾರ್ಯವಲ್ಲ. ಉತ್ತಮ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದರ ಮೂಲಕ ಇಡೀ ದೇಹವನ್ನು ಫಿಟ್ ಆಗಿರಿಸಿಕೊಳ್ಳಬಹುದು. ನಾವು ಮುಖದ ವ್ಯಾಯಾಮಗಳ ಬಗ್ಗೆ ಮಾತನಾಡುವದಾದರೆ, ಇಂಗ್ಲಿಷ್‌ನ ಎರಡು ಅಕ್ಷರಗಳನ್ನು ಉಚ್ಛರಿಸುವ ಮೂಲಕ, ತುಟಿಗಳ ಸುತ್ತ ಮತ್ತು ಕೆನ್ನೆಯ ಮೂಳೆ ಪ್ರದೇಶದಲ್ಲಿ ಉಂಟಾಗುವ ಊತವನ್ನು ನಿಲ್ಲಿಸಬಹುದು.

ಆ ಎರಡು ಅಕ್ಷರಗಳೆಂದರೆ ರ 'ಒ' ಮತ್ತು 'ಇ'. ಈ ಎರಡು ಅಕ್ಷರಗಳನ್ನು ಪದೇ ಪದೇ ಉಚ್ಛಾರ ಮಾಡುವ ಮೂಲಕ ಸುಕ್ಕು ಹಾಗೂ ಡಬಲ್ ಗಲ್ಲದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಹಾಗಂತ ಒಮ್ಮೆಲೆ ಮ್ಯಾಜಿಕ್ ರೀತಿ ಆಗುವುದೆಂದು ಯೋಚಿಸಬೇಡಿ. ನಿರಂತರವಾಗಿ 5 ನಿಮಿಷಗಳ ಕಾಲ 'ಇ' ಮತ್ತು'ಒ' ಅಕ್ಷರಗಳಿಗೆ ಸ್ವಲ್ಪ ಒತ್ತು ಕೊಟ್ಟು, ವ್ಯಾಯಾಮ ಮಾಡಿದರೆ, ಕಾಲಕ್ರಮೇಣ ಫಲಿತಾಂಶವನ್ನು ಕಾಣಬಹುದು.

ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ:

ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ:

ಮುಖಕ್ಕೆ ಹೊಳಪು ತರಲು ನೀವು ವಾರಕ್ಕೊಮ್ಮೆ ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಬಹುದು. ಮಸಾಜ್ ಮುಖಕ್ಕೆ ತುಂಬಾ ಒಳ್ಳೆಯದು. ನೀವು ಶುದ್ಧ ತೆಂಗಿನ ಎಣ್ಣೆಯನ್ನು ಸಹ ತೆಗೆದುಕೊಳ್ಳಬಹುದು. ಕಣ್ಣುಗಳ ಕೆಳಗೆ ಇರುವ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಮಸಾಜ್ ಮಾಡುವಾಗ, ಮೃದುವಾಗಿರಿ. ಇಲ್ಲವಾದಲ್ಲಿ ಆ ಸೂಕ್ಷ್ಮ ಜಾಗಕ್ಕೆ ಹಾಣಿಯಾಗಬಹುದು. ಆದ್ದರಿಂದ ಬೆರಳಿನ ತುದಿಗೆ ಎಣ್ಣೆಯನ್ನು ಹಚ್ಚುವ ಮೂಲಕ ಈ ಸೂಕ್ಷ್ಮ ಸ್ಥಳವನ್ನು ಮಸಾಜ್ ಮಾಡಲು ಪ್ರಯತ್ನಿಸಿ.

ಕುತ್ತಿಗೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?:

ಕುತ್ತಿಗೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?:

ನಿಮ್ಮ ಕುತ್ತಿಗೆಯಲ್ಲಿ ಕೊಬ್ಬು ಹೆಚ್ಚಾಗುತ್ತಿದ್ದರೆ ಅಥವಾ ಡಬಲ್ ಗಲ್ಲದ ಸಮಸ್ಯೆ ಇದ್ದರೆ, ದಿನದಲ್ಲಿ ಹಲವು ಬಾರಿ ಆಕಾಶ ಅಥವಾ ಮನೆ ಚಾವಣಿಯನ್ನು ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಅರೇ ಇದೇನಪ್ಪ ಹೇಳ್ತಿದ್ದಾರೆ ಅಂತ ಅನ್ಕೋಬೇಡಿ, ಪದೇ ಪದೇ ಆಕಾಶ ನೋಡುವುದರಿಂದ ನಿಮ್ಮ ಕುತ್ತಿಗೆಯ ಸ್ನಾಯುಗಳಿಗೆ ವ್ಯಾಯಾಮ ಸಿಗುವುದು, ಜೊತೆಗೆ ಸಂಜೆ ನೀವು ಬಿಡುವಿದ್ದಾಗ, ಎಡ ಮತ್ತು ಬಲ ಮತ್ತು ಮೇಲಕ್ಕೆ ನೋಡಿ. ಈ ಕಾರಣದಿಂದಾಗಿ ಸ್ನಾಯುಗಳು ಹಿಗ್ಗುತ್ತವೆ ಮತ್ತು ಕೊಬ್ಬು ಸಂಗ್ರಹವಾಗುವುದಿಲ್ಲ.

English summary

Anti Aging Facial Yoga For Flaw Less Skin In Kannada

Here we talking about Anti Aging Facial Yoga For Flaw Less Skin In Kannada, read on
X
Desktop Bottom Promotion