For Quick Alerts
ALLOW NOTIFICATIONS  
For Daily Alerts

ಈ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿದರೆ ಮೊಡವೆಗಳು ಮಾಯವಾಗಿ, ಕ್ಲಿಯರ್ ತ್ವಚೆ ನಿಮ್ಮದಾಗುವುದು

|

ಮೊಡವೆ ತಡೆಯಲು ಕೇವಲ ಬಾಹ್ಯ ಆರೈಕೆಯಷ್ಟೇ ಸಾಲದು. ನಾವು ಸೇವಿಸುವ ಪ್ರತಿಯೊಂದು ಆಹಾರವು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೊಡವೆಗಳು ಹೊರತಾಗಿಲ್ಲ. ಕೆಲವು ಆಹಾರಗಳು ಮೊಡವೆಗೆ ಕಾರಣವಾದರೆ, ಇನ್ನೂ ಕೆಲವು ಆಹಾರಗಳು ಮೊಡವೆ ಬರದಂತೆ ತಡೆದು, ಸ್ಪಷ್ಟ ಹಾಗೂ ಕಾಂತಿಯುತ ತ್ವಚಯನ್ನ ನೀಡುತ್ತದೆ. ಹಾಗಾದರೆ ಆ ಆಹಾರಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಮೊಡವೆ ಮುಕ್ತ ಚರ್ಮಕ್ಕಾಗಿ ಅತ್ಯುತ್ತಮ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೀನು:

ಮೀನು:

ವಾರಕ್ಕೊಮ್ಮೆಯಾದರೂ ಮೀನು ತಿನ್ನುವುದರಿಂದ ಮೊಡವೆಗಳು ಶೇಕಡಾ 32 ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಮೀನಿನಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಸತು ತ್ವಚೆಯನ್ನು ಹೊಳೆಯುವಂತೆ ಮಾಡುವುದು. ಈ ಮೂರು ಘಟಕಗಳು ಸ್ಪಷ್ಟವಾದ ತ್ವಚೆಗೆ ಪ್ರಮುಖವಾಗಿವೆ.

ಪಪ್ಪಾಯಿ :

ಪಪ್ಪಾಯಿ :

ನಿಮ್ಮ ತ್ವಚೆಯನ್ನು ಸ್ಪಷ್ಟವಾಗಿ ಮತ್ತು ಮೊಡವೆ ರಹಿತವಾಗಿಡಲು ಸಹಾಯ ಮಾಡುವ ಇನ್ನೊಂದು ಅತ್ಯಂತ ಉತ್ತಮವಾದ ಆಹಾರ ಪದಾರ್ಥವೆಂದರೆ ಪಪ್ಪಾಯಿ . ಇದು ಪಪೈನ್ ಎಂಬ ಜೀರ್ಣಕಾರಿ ಕಿಣ್ವವನ್ನು ಹೊಂದಿದ್ದು, ಈ ಕಿಣ್ವವು ಡೆಡ್ ಸೆಲ್‌ಗಳನ್ನು ತೆಗೆದುಹಾಕಲು, ಮೊಡವೆ ಕಲೆಗಳನ್ನು ಹೋಗಲಾಡಿಸಲು, ಚರ್ಮವನ್ನು ತೇವಾಂಶದಿಂದ ಇರಿಸಲು ಮತ್ತು ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹೇರಳವಾಗಿದ್ದು ಚರ್ಮವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ.

ದ್ವಿದಳ ಧಾನ್ಯಗಳು:

ದ್ವಿದಳ ಧಾನ್ಯಗಳು:

ದ್ವಿದಳ ಧಾನ್ಯಗಳಲ್ಲಿ ಕಡಲೆ, ಬೇಳೆ, ಬೀನ್ಸ್ ನಂತಹ ಆಹಾರ ಪದಾರ್ಥಗಳು ಸೇರಿವೆ. ಅವು ಕಡಿಮೆ ಗ್ಲೈಸೆಮಿಕ್ ಆಹಾರಗಲಾಗಿದ್ದು, ಉತ್ತಮ ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೆ ಕಾರಣವಾಗಬಹುದು. ನಿಯಂತ್ರಿತ ರಕ್ತದಲ್ಲಿನ ಸಕ್ಕರೆಯ ಮಟ್ಟವು ಮೊಡವೆಗಳನ್ನು ಕಡಿಮೆ ಮಾಡುತ್ತದೆ.

ನಿಂಬೆ:

ನಿಂಬೆ:

ನಾವೆಲ್ಲರೂ ಫೇಸ್ ಮಾಸ್ಕ್‌ಗಳಲ್ಲಿ ನಿಂಬೆಹಣ್ಣುಗಳನ್ನು ಬಳಸಿದ್ದೇವೆ. ನಿಂಬೆ ರಸವನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಬಹುದು ಎಂಬುದನ್ನು ನಾವು ಗಮನಿಸಬೇಕು. ನಿಂಬೆಹಣ್ಣಿನ ಪ್ರಯೋಜನಗಳನ್ನು ಪಡೆದುಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಅದನ್ನು ನಿಮ್ಮ ಕುಡಿಯುವ ನೀರು, ಸಲಾಡ್‌ಗಳಲ್ಲಿ ಮತ್ತು ಇತರ ರೀತಿಯಲ್ಲಿ ನಿಮ್ಮ ದೈನಂದಿನ ಆಹಾರ ಸೇವನೆಯಲ್ಲಿ ಸೇರಿಸುವುದು. ಆಂಟಿಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸಿಪ್ಪೆಯನ್ನು ಕೂಡ ಸೇರಿಸುವುದನ್ನು ಮರೆಯಬೇಡಿ.

ಟೊಮೆಟೊ:

ಟೊಮೆಟೊ:

ಟೊಮೆಟೊಗಳಲ್ಲಿ ಲೈಕೋಪೀನ್ ಸಮೃದ್ಧವಾಗಿದ್ದು, ನಿಮ್ಮ ತ್ವಚೆಗೆ ನೇರವಾಗಿ ಹಚ್ಚಬಹುದು ಮತ್ತು ಹೊಳೆಯುವ ಮುಖಕ್ಕಾಗಿ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಪ್ರತಿದಿನ ಟೊಮೆಟೊ ಸ್ಮೂಥಿಯನ್ನು ಕುಡಿಯುವುದರಿಂದ ಕೇವಲ ಒಂದು ವಾರದಲ್ಲಿ ನಿಮ್ಮ ಚರ್ಮದ ಮೇಲೆ ಧನಾತ್ಮಕ ಪರಿಣಾಮಗಳನ್ನು ಕಾಣಬಹುದು.

ಅಗಸೆಬೀಜಗಳು:

ಅಗಸೆಬೀಜಗಳು:

ನೀವು ಸಸ್ಯಾಹಾರಿಗಳಾಗಿದ್ದರೆ, ಅಗಸೆಬೀಜಗಳು ಒಮೆಗಾ -3 ರ ಉತ್ತಮ ಮೂಲವಾಗಿದೆ. ಇದು ನಿಮ್ಮ ತ್ವಚೆಯನ್ನು ತೇವಾಂಶದಿಂದ ಇಡಬಹುದು. ಪ್ರತಿದಿನ ಕೇವಲ ಎರಡು ಚಮಚ ಅಗಸೆಬೀಜಗಳನ್ನು ಸೇವಿಸಿ, ಮೊಡವೆ ಕಡಿಮೆಯಾಗುವುದನ್ನು ಮತ್ತು ಹೊಳೆಯುವ ತ್ವಚೆಯನ್ನು ಆದಷ್ಟು ಬೇಗ ಕಾಣುತ್ತೀರಿ.

ಗೆಣಸು:

ಗೆಣಸು:

ಗೆಣಸಿನಲ್ಲಿ ರೆಟಿನಾಲ್, ವಿಟಮಿನ್ ಎ ಇದ್ದು, ಈ ಘಟಕವು ಮೊಡವೆ ಮತ್ತು ಸುಕ್ಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೆಟಿನಾಲ್ ಇರುವ ಸಾಕಷ್ಟು ಕ್ರೀಮ್‌ಗಳನ್ನು ನೋಡಬಹುದು, ಆದರೆ ಇದನ್ನು ನೈಸರ್ಗಿಕ ರೂಪದಲ್ಲಿ ಸೇವಿಸುವುದು ಉತ್ತಮ ಮಾರ್ಗವಾಗಿದೆ, ಇದಕ್ಕೆ ಗೆಣಸು ಒಳ್ಳೆಯ ಆಯ್ಕೆಯಾಗಿದೆ.

ಕುಂಬಳಕಾಯಿ:

ಕುಂಬಳಕಾಯಿ:

ಕುಂಬಳಕಾಯಿಯು ಸತು ಮತ್ತು ಆಲ್ಫಾ-ಹೈಡ್ರಾಕ್ಸಿ ಆಮ್ಲಗಳಲ್ಲಿ ಸಮೃದ್ಧವಾಗಿದ್ದು, ಇವುಗಳು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ ಮತ್ತು pH ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಸತುವು ನಮ್ಮ ದೇಹದಲ್ಲಿ ತೈಲ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡಿ, ಮೊಡವೆ ರಹಿತವಾಗಿಸುತ್ತದೆ.

FAQ's
  • ಮೊಡವೆಗೆ ಕಾರಣವಾಗುವ ಆಹಾರಗಳು ಯಾವುವು?

    ಮೊಡವೆಗಳು ಮುಖ್ಯವಾಗಿ ಸಂಸ್ಕರಿಸಿದ ಸಕ್ಕರೆಯುಕ್ತ ಆಹಾರ, ಡೈರಿ ಉತ್ಪನ್ನಗಳು, ಫಾಸ್ಟ್ ಫುಟ್, ಜಂಕ್ ಫುಡ್ ಎಣ್ಣೆಯುಕ್ತ ಆಹಾರ ಸೇವೆನಯಿಂದ ಉಂಟಾಗುತ್ತದೆ. ಆದ್ದರಿಂದ ಮೊಡವೆ ಸಮಸ್ಯೆಯಿರುವವರು ಆದಷ್ಟು ಈ ಆಹಾರಗಳಿಂದ ದೂರವಿರಬೇಕು, ಇಲ್ಲವಾದಲ್ಲಿ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ.

English summary

Anti-Acne Diet: Foods to Eat for Clear and Acne Free Skin in Kannada

Here we talking about Anti-acne diet: Foods to eat for clear and acne free skin in Kannada, read on
Story first published: Wednesday, September 15, 2021, 12:17 [IST]
X
Desktop Bottom Promotion