For Quick Alerts
ALLOW NOTIFICATIONS  
For Daily Alerts

ಈ 7 ಪ್ರಯೋಜನಗಳಿಗಾಗಿ ಚಳಿಗಾಲದಲ್ಲಿ ಫೇಶಿಯಲ್ ಒಳ್ಳೆಯದು

|

ಚಳಿಗಾಲ ಬಂತೆಂದರೆ ಸಾಕು ಒಂದೆಲ್ಲಾ ಒಂದು ತ್ವಚೆ ಸಮಸ್ಯೆ ಶುರುವಾಗುವುದು. ಮೈಯನ್ನು ಉಣ್ಣೆ ಬಟ್ಟೆ, ಸ್ವೆಟರ್, ಕೋಟ್ ಇವುಗಳಿಂದ ರಕ್ಷಣೆ ಮಾಡಿದರೂ ಮುಖವನ್ನು ಹಾಗೇ ಬಿಡುವುದರಿಂದ ಮುಖದ ತ್ವಚೆ ಒಡೆಯಲಾರಂಭಿಸುತ್ತದೆ. ಇದರಿಂದ ಮುಖದ ತ್ವಚೆ ಡ್ರೈಯಾಗಿ ಮುಖದ ಕಾಂತಿ ಕಡಿಮೆಯಾಗುವುದು. ತುಟಿ ಒಡೆಯಲಾರಂಭಿಸುತ್ತದೆ, ಇದರಿಂದ ಮುಖ ಮತ್ತಷ್ಟು ಮಂಕಾಗಿ ಆಗಿ ಕಾಣುವುದು.

Reason To Do Facial In Winter

ಚಳಿಯ ಪರಿಣಾಮ ನಿಮ್ಮ ಮುಖದ ಮೇಲೆ ಬೀರದಂತೆ ತಡೆಗಟ್ಟಲು ಫೇಶಿಯಲ್ ಮಾಡಿಸುವುದು ಒಳ್ಳೆಯದು. ಫೇಶಿಯಲ್ ಮಾಡಿಸುವುದರಿಂದ ಚಳಿಯಿಂದ ಒಡೆದು ಮುಖ ಕಪ್ಪಾಗುವುದಿಲ್ಲ, ಎಂದಿನಂತೆ ನಿಮ್ಮ ತ್ವಚೆಯನ್ನು ಕಾಂತಿಯುತವಾಗಿ ಇಟ್ಟುಕೊಳ್ಳಬಹುದು. ಚಳಿಗಾಲದಲ್ಲಿ ಫೇಶಿಯಲ್ ಮಾಡಿಸಿದರೆ ನಿಮ್ಮ ತ್ವಚೆ ಈ 7 ಲಾಭ ಪಡೆಯುತ್ತದೆ ನೋಡಿ:

1. ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು

1. ತ್ವಚೆಯಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುವುದು

ಚಳಿ ಶುರುವಾದರೆ ಸಾಕು, ಮುಖದಲ್ಲಿ ತೇವಾಂಶ ಕಡಿಮೆಯಾಗುವುದು, ಸಾಕಷ್ಟು ನೀರು ಕುಡಿದರೂ ಕೂಡ ತ್ವಚೆ ಡ್ರೈಯಾಗುವುದು. ಹಾಲಿನ ಕೆನೆ ಹಚ್ಚುವುದು, ಮಾಯಿಶ್ಚರೈಸರ್ ಹಚ್ಚುವುದು ಮಾಡಿದರೂ ಕೂಡ ಬೇಸಿಗೆಯಲ್ಲಿ ಇರುವ ತ್ವಚೆಯ ಹೊಳಪು ಕಾಣಸುವುದಿಲ್ಲ. ಚಳಿಗಾಲದಲ್ಲೂ ಮುಖ ಅಕರ್ಷಕವಾಗಿ ಕಾಣಿಸಲು ಫೇಶಿಯಲ್ ಮಾಡಿಸಿ. ಹೀಗೆ ಫೇಶಿಯಲ್ ಮಾಡಿಸುವುದರಿಂದ ನಿಮ್ಮ ತ್ವಚೆ ಎಣ್ಣೆಯಾಗಿರಲಿ, ಶುಷ್ಕ ತ್ವಚೆಯಾಗಿರಲಿ ಮುಖದಲ್ಲಿ ತೇವಾಂಶವಿರುವುದರಿಂದ ಆಕರ್ಷಕವಾಗಿ ಕಾಣುವುದು. ಫೇಶಿಯಲ್ ನಿಮ್ಮ ತ್ವಚೆ ಸೌಂದರ್ಯವನ್ನು 20-25 ದಿನಗಳವರೆಗೆ ಕಾಪಾಡುತ್ತದೆ. ನಂತರ ಪುನಃ ಫೇಶಿಯಲ್ ಮಾಡಿಸಿ.

2. ಫೇಶಿಯಲ್ ಮಾಡಿಸುವುದರಿಂದ ನಿರ್ಜೀವ ತ್ವಚೆ ಇಲ್ಲವಾಗುವುದು

2. ಫೇಶಿಯಲ್ ಮಾಡಿಸುವುದರಿಂದ ನಿರ್ಜೀವ ತ್ವಚೆ ಇಲ್ಲವಾಗುವುದು

ಫೇಶಿಯಲ್ ಮಾಡುವಾಗ ಮುಖ ಕ್ಲೀನಿಂಗ್ ಮಾಡಿ, ಸ್ಕ್ರಬ್ ಮಾಡುವಾಗ ನಿರ್ಜೀವ ತ್ವಚೆ ಇಲ್ಲವಾಗುತ್ತದೆ. ಮುಖದ ತ್ವಚೆಯ ಮೇಲ್ಪದರಲ್ಲಿ ನಿರ್ಜೀವ ತ್ವಚೆಯಿದ್ದರೆ ಅದು ನಮ್ಮ ಮುಖವನ್ನು ಡ್ರೈಯಾಗಿ ಕಾಣುವಂತೆ ಮಾಡುತ್ತದೆ. ಮನೆಯಲ್ಲಿ ಸ್ಕ್ರಬ್ ಮಾಡಿ ನಿರ್ಜೀವ ತ್ವಚೆ ಹೋಗಲಾಡಿಸಬಹುದು. ಆದರೆ ನಿರ್ಜೀವ ತ್ವಚೆ ಹೋಗಲಾಡಿಸಿ, ಆಕರ್ಷಕ ಮೈಕಾಂತಿ ಬೇಕೆಂದರೆ ಫೇಶಿಯಲ್ ಮಾಡಿಸುವುದು ಒಳ್ಳೆಯದು.

3. ಮುಖದಲ್ಲಿ ರಕ್ತಸಂಚಾರ ಉತ್ತರವಾಗಿ ನಡೆಯುವುದು

3. ಮುಖದಲ್ಲಿ ರಕ್ತಸಂಚಾರ ಉತ್ತರವಾಗಿ ನಡೆಯುವುದು

ಮುಖದ ನರಗಳಲ್ಲಿ ರಕ್ತ ಸಂಚಾರ ಉತ್ತಮವಾಗಿದ್ದರೆ ಮುಖದ ಕಾಂತಿಯೂ ಹೆಚ್ಚುವುದು. ಫೇಶಿಯಲ್ ಮಾಡುವಾಗ ಮುಖಕ್ಕೆ ಮೆಲ್ಲನೆ ಮಸಾಜ್ ಮಾಡಲಾಗುವುದು. ಇದು ಮುಖದ ನರಗಳನ್ನು ರಿಲ್ಯಾಕ್ಸ್ ಮಾಡುವುದು. ಅಕಾಲಿಕ ನೆರಿಗೆಯನ್ನು ತಡೆಗಟ್ಟಿ, ಮುಖದಲ್ಲಿ ಯೌವನದ ಕಳೆ ಮಾಸದಿರಲು ಫೇಶಿಯಲ್ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಫೇಶಿಯಲ್ ಮಾಡಿಸಿದಾಗ ಮುಖಕ್ಕೆ ಉತ್ತಮ ಮಸಾಜ್ ದೊರೆತು ತ್ವಚೆ ಕಾಂತಿಯುತವಾಗುವುದು.

4. ಮುಖಕ್ಕೆ ವಿಟಮಿನ್‌ ದೊರೆಯುವುದು

4. ಮುಖಕ್ಕೆ ವಿಟಮಿನ್‌ ದೊರೆಯುವುದು

ಫೇಶಿಯಲ್‌ನಲ್ಲಿ ವಿಟಮಿನ್ ಸೆರಮ್ ಹಾಗೂ ಆ್ಯಂಟಿಆಕ್ಸಿಡೆಂಟ್ ಬಳಸುವುದರಿಂದ ನಿಮ್ಮ ತ್ವಚೆಗೆ ಯೌವನದ ಕಳೆ ನೀಡುತ್ತದೆ. ಚಳಿಗಾಲದಲ್ಲಿ ಬೆಳಗ್ಗೆ ಚಳಿಯಿದ್ದರೆ ಮಧ್ಯಾಹ್ನದ ಬಿಸಿಲು ತುಂಬಾ ಉರಿ ಇರುತ್ತದೆ. ಆ ಉರಿ ಬಸಿಲಿನಲ್ಲಿ ತಿರುಗಾಡಿದರೆ ತ್ವಚೆ ಕಪ್ಪಾಗುವುದು. ಫೇಶಿಯಲ್ ತ್ವಚೆ ಕಪ್ಪಾಗುವುದನ್ನು ತಡೆಗಟ್ಟುತ್ತದೆ, ತ್ವಚೆಯ ಕಾಂತಿಯನ್ನು ಕಾಪಾಡುತ್ತದೆ.

5. ಬ್ಲ್ಯಾಕ್‌ಹೆಡ್ಸ್ ಹೋಗಲಾಡಿಸಲು ಸಹಕಾರಿ

5. ಬ್ಲ್ಯಾಕ್‌ಹೆಡ್ಸ್ ಹೋಗಲಾಡಿಸಲು ಸಹಕಾರಿ

ಮುಖದಲ್ಲಿ ರಂಧ್ರಗಳು, ಬ್ಲ್ಯಾಕ್‌ ಹೆಡ್ಸ್ ಇದ್ದರೆ ಮುಖ ಮಂಕಾಗಿ ಕಾಣುವುದು, ಮುಖದ ಹೊಳಪು ಮಾಯವಾಗುವುದು. ಅದರೆ ಫೇಶಿಯಲ್ ಮಾಡುವಾಗ ತ್ವಚೆಯ ರಂಧ್ರಗಳಲ್ಲಿರುವ ಕೊಳೆಯನ್ನು ಹಾಗೂ ಬ್ಲ್ಯಾಕ್‌ಹೆಡ್ಸ್ ತೆಗೆಯಲಾಗುವುದು. ಇದರಿಂದ ಮುಖ ಸ್ವಚ್ಛವಾಗಿ ಅಕರ್ಷಕವಾಗಿ ಕಾಣುವುದು. ಚಳಿಗಾಲದಲ್ಲಿ ಬ್ಲ್ಯಾಕ್‌ಹೆಡ್ಸ್ ಸಮಸ್ಯೆ ಹೆಚ್ಚಾಗಿ ಕಾಡುವುದರಿಂದ ಇದನ್ನು ಹೋಗಲಾಡಿಸುವಲ್ಲಿ ಫೇಶಿಯಲ್ ಸಹಕಾರಿ.

6. ಪರಿಣಿತರ ಸಲಹೆ ದೊರೆಯುತ್ತದೆ

6. ಪರಿಣಿತರ ಸಲಹೆ ದೊರೆಯುತ್ತದೆ

ಫೇಶಿಯಲ್ ಮಾಡಿಸಲು ಪರಿಣಿತರು ಫೇಶಿಯಲ್ ಮಾಡುವುದರಿಂದ ಅವರ ಬಳಿ ನಿಮಗೆ ಯಾವ ಫೇಶಿಯಲ್ ಬೇಕು ಎಂದು ಕೇಳಬಹುದು ಹಾಗೂ ನಿಮ್ಮ ತ್ವಚೆಗೆ ಸೂಕ್ತವಾದ ಫೇಶಿಯಲ್ ಯಾವುದೆಂದು ಸಲಹೆ ಪಡೆಯಬಹುದು. ಫೇಶಿಯಲ್ ನಿಮ್ಮ ತ್ವಚೆಯನ್ನು ಮತ್ತಷ್ಟು ಆರೋಗ್ಯಕರವಾಗಿಸುತ್ತದೆ.

7. ವಿಶ್ರಾಂತಿಯನ್ನು ನೀಡುತ್ತದೆ

7. ವಿಶ್ರಾಂತಿಯನ್ನು ನೀಡುತ್ತದೆ

ಸಾಕಷ್ಟು ಒತ್ತಡದ ಕೆಲಸ ಕೂಡ ಮುಖದ ಕಾಂತಿಯ ಮೇಲೆ ಪರಿಣಾಮ ಬೀರುತ್ತದೆ. ಫೇಶಿಯಲ್ ಮಾಡಿಸಲು ಹೋದಾಗ ಬ್ಯೂಟಿಷಿಯನ್‌ಗಳು ಒಂದು ಗಂಟೆ ನಿಮ್ಮ ತ್ವಚೆಯನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ, ಇದರಿಂದ ತ್ವಚೆ ಹಾಗೂ ನೀವು ವಿಶ್ರಾಂತಿಯನ್ನು ಪಡೆಯುವಿರಿ. ತ್ವಚೆಗೆ ಮಸಾಜ್ ದೊರೆದಾ ತ್ವಚೆ ಕಾಂತಿ ಹೆಚ್ಚುವುದು. ತ್ವಚೆಯಲ್ಲಿ ಮಾಯಿಶ್ಚರೈಸರ್ ಉಳಿಯುವುದರಿಂದ ತ್ವಚೆ ಒಡೆಯುವ ಸಮಸ್ಯೆ ಉಂಟಾಗುವುದಿಲ್ಲ. ಇದರಿಂದ ಚಳಿಗಾಲದಲ್ಲೂ ಕಾಂತಿಯುತವಾದ ಆಕರ್ಷಕ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.

English summary

7 Reason To Do Facial In Winter

When winter comes, skin started to becomedry, facial become so dry and loks pale. But if you do facial it will rejuvenate your skin. Here We have explained 7 reason to do facial in winter season.
Story first published: Tuesday, October 29, 2019, 15:49 [IST]
X
Desktop Bottom Promotion