For Quick Alerts
ALLOW NOTIFICATIONS  
For Daily Alerts

ಸೌಂದರ್ಯ ವರ್ಧನೆಗೆ ಮಾಡುವ ಚಿಕಿತ್ಸೆಗೆ ನಾಚಿಕೆ ಪಡುವ ಅಗತ್ಯವಿಲ್ಲ

|

ಸೌಂದರ್ಯ ಎನ್ನುವುದು ಪ್ರತಿಯೊಬ್ಬರಿಗೂ ಅಗತ್ಯವಾದ ಸಂಗತಿ. ಜನಸಮೂಹದ ನಡುವೆ ಮಾತಿಲ್ಲದೆ ಎಲ್ಲರನ್ನು ಆಕರ್ಷಿಸುವುದು ಸೌಂದರ್ಯ ಮಾತ್ರ. ಸೌಂದರ್ಯಗಳ ಚಿಕಿತ್ಸೆ ಹಾಗೂ ಆರೈಕೆಗಾಗಿ ಇಂದು ಅನೇಕ ಉತ್ಪನ್ನಗಳು ಹಾಗೂ ಸೌಕರ್ಯಗಳು ಲಭ್ಯವಿದೆ. ಅವುಗಳನ್ನು ಬಳಸಿಕೊಂಡು ಸಾಕಷ್ಟು ಆರೈಕೆಯನ್ನು ಪಡೆದುಕೊಳ್ಳಬಹುದು. ಈ ಆರೈಕೆಯ ವಿಧಾನಗಳು ನಮ್ಮ ಸೌಂದರ್ಯದಲ್ಲಿ ಇರುವ ಕೆಲವು ಗಂಭೀರ ನ್ಯೂನತೆಗಳನ್ನು ಮರೆ ಮಾಚುವುದರ ಮೂಲಕ ಆಕರ್ಷಕ ಸೌಂದರ್ಯವನ್ನು ಪಡೆದುಕೊಳ್ಳಬಹುದು.

ಧೂಳು, ಅನುಚಿತ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಕಾರಣದಿಂದಾದಗಿ ವ್ಯಕ್ತಿ ಬಹುಬೇಗ ವಯಸ್ಸಾದ ಚಿಹ್ನೆಯನ್ನು ಪಡೆದುಕೊಳ್ಳುವನು. ಚರ್ಮದ ಮೇಲೆ ಉಂಟಾಗುವ ಉಷ್ಟಪರಿಣಾಮಗಳು ಬಹುಬೇಗ ಸುಕ್ಕುಗಟ್ಟುವಂತೆ ಹಾಗೂ ತನ್ನ ಕಾಂತಿಯನ್ನು ಕಳೆದುಕೊಳ್ಳುವಂತೆ ಮಾಡುವುದು. ಇಂತಹ ಸಮಸ್ಯೆಗಳನ್ನು ಸೌಂದರ್ಯ ವರ್ಧಕ ಚಿಕಿತ್ಸೆ ಹಾಗೂ ಆರೈಕೆಗೆ ಒಳಪಡಿಸಿದರೆ ಸಮಸ್ಯೆಗಳನ್ನು ಬಹುಬೇಗ ನಿವಾರಿಸಬಹುದು. ಜೊತೆಗೆ ವಯಸ್ಸಾದ ಚಿಹ್ನೆಯಿಂದ ಹೊರಬರಬಹುದು. ಇವುಗಳಿಂದಾಗಿ ಜನಸಮೂಹದ ಒಳಗೆ ಆಕರ್ಷಕ ವ್ಯಕ್ತಿಯಾಗಿ ಹೊರಹೊಮ್ಮಬಹುದು.

ಜೀವನದಲ್ಲಿ ನಡೆದುಬಂದ ದಾರಿ, ಅಪೂರ್ಣ ಮಾಹಿತಿ, ಸಂಪ್ರದಾಯ ಹಾಗೂ ಇನ್ನಿತ ಸಮಸ್ಯೆಗಳ ಕಾರಣದಿಂದ ಬಹುತೇಕ ಜನರು ಸೌಂದರ್ಯ ವೃದ್ಧಿ ಚಿಕಿತ್ಸೆ ಅಥವಾ ಆರೈಕೆಯನ್ನು ಪಡೆದುಕೊಳ್ಳಲು ಹೆದರುತ್ತಾರೆ. ಇದು ಅವರಿಗೆ ಮುಜುಗರ ತರುವಂತಹ ವಿಷಯ ಎಂದು ಭಾವಿಸುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಕೆಲವೊಮ್ಮೆ ಹಣಕಾಸಿನ ತೊಂದರೆ ಹಾಗೂ ದುಬಾರಿ ಚಿಕಿತ್ಸಾ ವೆಚ್ಚಗಳು ಹಿಂದೇಟು ಹಾಕುವಂತೆ ಮಾಡುವುದು. ಹಾಗಾಗಿ ಸೌಂದರ್ಯ ಚಿಕಿತ್ಸೆ ಹಾಗೂ ಆರೈಕೆಯನ್ನು ಸಾಮಾನ್ಯ ಜನರು ಪಡೆದುಕೊಳ್ಳಲು ಹಿಂಜರಿಯುತ್ತಾರೆ. ಜೊತೆಗೆ ಸದೊಂದು ನಾಚಿಕೆ ಸಂಗತಿ ಎಂದು ಸಹ ಪರಿಗಣಿಸುವರು.

ಸಾಮಾನ್ಯವಾಗಿ ಸಿನಿಮಾ ತಾರೆಗಳು ಹಾಗೂ ಫ್ಯಾಷನ್ ಲೋಕದ ಜನರು ಹೆಚ್ಚು ಆಕರ್ಷಕ ಮೈಕಾಂತಿ ಹಾಗೂ ನೋಟವನ್ನು ಹೊಂದಿರುತ್ತಾರೆ. ಅವರ ಆಕರ್ಷಕ ವ್ಯಕ್ತಿತ್ವ ಹಾಗೂ ಸೌಂದರ್ಯವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಇದಕ್ಕೆ ಕಾರಣ ಅವರು ನೈಸರ್ಗಿಕವಾಗಿಯೇ ಸೌಂದರ್ಯವನ್ನು ಹೊಂದಿದ್ದರೂ ಹೆಚ್ಚು ಆಕರ್ಷಣೆಗೆ ಹಾಗೂ ಸೌಂದರ್ಯದಲ್ಲಿ ಇರುವ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಯಾವುದೇ ಮುಜುಗರವನ್ನು ತೋರುವುದಿಲ್ಲ. ಬದಲಿಗೆ ಸೂಕ್ತ ಆರೈಕೆ ಹಾಗೂ ಚಿಕಿತ್ಸೆಗಳ ಮೂಲಕ ಹೆಚ್ಚು ಆಕರ್ಷಿತ ವ್ಯಕ್ತಿಗಳಾಗಿ ಮಿಂಚುತ್ತಾರೆ. ಇದು ಎಲ್ಲರ ಮೆಚ್ಚುಗೆಗೂ ಪಾತ್ರರಾಗುತ್ತಾರೆ.

Most Read: ಬರೀ 7 ದಿನಗಳಲ್ಲಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸರಳ ಟಿಪ್ಸ್

ಸಾಮಾನ್ಯರಾದ ನಾವು ಸಹ ನಮ್ಮ ಸೌಂದರ್ಯ ಸುಧಾರಣೆಯನ್ನು ಮಾಡಿಕೊಳ್ಳಬಹುದು. ಅದಕ್ಕಾಗಿ ಯಾವುದೇ ಮುಜುಗರ ಅಥವಾ ನಾಚಿಕೆಗೆ ಒಳಗಾಗುವ ಅಗತ್ಯವಿಲ್ಲ. ಸುಧಾರಣೆಯ ಮೂಲಕ ಹೆಚ್ಚಿನ ಸೌಂದರ್ಯವನ್ನು ಪಡೆದುಕೊಂಡು ಆಕರ್ಷಕ ವ್ಯಕ್ತಿಗಳಾಗಿ ಮಿಂಚಬಹುದು. ಇದು ನಮ್ಮ ನೋಟವನ್ನು ಸುಂದರಗೊಳಿಸುವುದಲ್ಲದೆ ನಮ್ಮಲ್ಲಿಯೂ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಹಾಗಾದರೆ ಆ ಸೌಂದರ್ಯ ಆರೈಕೆ ಅಥವಾ ಚಿಕಿತ್ಸಾ ಕ್ರಮಗಳು ಯಾವವು? ಅವು ಹೇಗೆ ನಮ್ಮ ಸೌಂದರ್ಯವನ್ನು ಉತ್ತಮ ಗೊಳಿಸುವುದು? ಅವುಗಳನ್ನು ಪಡೆದುಕೊಳ್ಳುವ ಪರಿ ಹೇಗೆ? ಎನ್ನುವಂತಹ ಅನೇಕ ಸಂಗತಿಗಳನ್ನು ಲೇಖನದ ಮುಂದಿನ ಭಾಗಗದಲ್ಲಿ ವಿವರಿಸಲಾಗಿದೆ.

* ಸೃಜನ ಶೀಲತೆಯಿಂದ ಕಳಪೆಗುಣಮಟ್ಟದ ಕೇಶರಾಶಿಯನ್ನು ಮರೆಮಾಚಿ

ಮುಖದ ಸೌಂದರ್ಯ ಹಾಗೂ ನಮ್ಮ ಸೌಂದರ್ಯವನ್ನು ಪ್ರತಿಬಿಂಬಿಸುವ ಪ್ರಮುಖ ಸಂಗತಿ ಎಂದರೆ ಕೇಶರಾಶಿ. ಯಾವ ಬಗೆಯ ಕೇಶರಾಶಿಯನ್ನು ಹೊಂದಿದ್ದೀರಿ ಎನ್ನುವುದರ ಮೇಲೆಯೂ ನಮ್ಮ ಮುಖದ ಆಕರ್ಷಣೆ ಹೆಚ್ಚುವುದು. ಶುಷ್ಕವಾದ, ಒರಟಾದ ಹಾಗೂ ಸೂಕ್ತ ಆಕಾರವಿಲ್ಲದ ಕೇಶರಾಶಿಗಳು ನಿಮ್ಮ ಆಕರ್ಷಣೆಯನ್ನು ಕುಂದಿಸುವುದು. ಹಾಗಾಗಿ ಆದಷ್ಟು ಶುಷ್ಕ ಹಾಗೂ ಕಾಂತಿಯನ್ನು ನೀಡುವಂತಹ ಶಾಂಪೂಗಳ ಬಳಕೆ ಹಾಗೂ ಕೇಶ ತೈಲಗಳನ್ನು ಬಳಸಿ ಆರೋಗ್ಯವನ್ನು ಕಾಯ್ದುಕೊಳ್ಳುವುದು ಉತ್ತಮ. ನಂತರ ನೀವು ವಿಶೇಷ ಕೆಲಸಕ್ಕೆ ಹೋಗುತ್ತಿದ್ದೀರಿ ಅಥವಾ ಸಾಕಷ್ಟು ಜನರ ಮುಂದೆ ಹೋಗಿ ನಿಲ್ಲುವ ಸಂದರ್ಭವಿದೆ ಎಂದಾಗ ನಿಮ್ಮ ಒರಟಾದ ಕೇಶರಾಶಿಗಳನ್ನು ಕೆಲವು ಕೇಶ ವಿನ್ಯಾಸಕ್ಕೆ ಒಳಪಡಿಸಿ, ನ್ಯೂನತೆಯನ್ನು ಮರೆಮಾಚಿ. ಉದಾಹರಣೆಗೆ ಟರ್ಬ್ ಬನ್ಸ್, ಮೆಸ್ಸೀ ಪೊನಿಟೈಲ್, ಸಾಕ್ ಬನ್ಸ್‍ಗಳಂತಹ ಕೇಶವಿನ್ಯಾಸವನ್ನು ಮಾಡುವುದರ ಮೂಲಕ ಹೆಚ್ಚು ಆಕರ್ಷಣೆಗೆ ಒಳಗಾಗಬಹುದು. ಅದಕ್ಕಾಗಿ ಕೊಂಚ ಆರೈಕೆಯ ಕಡೆಗೆ ಗಮನ ನೀಡಬೇಕು.

* ಸೌಂದರ್ಯ ವರ್ಧಕ ಉತ್ಪನ್ನಗಳು ಖರ್ಚನ್ನು ಹೆಚ್ಚಿಸುವುದು

ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಪಡೆದುಕೊಳ್ಳುವುದು ಅಥವಾ ಖರೀದಿ ಮಾಡುವುದರಿಂದ ನಿಮ್ಮ ಪರ್ಸ್‍ಅಲ್ಲಿ ಇರುವ ಹಣವು ಬಹುಬೇಗ ಖರ್ಚುಮಾಡಬಹುದು. ಸೌಂದರ್ಯ ಉತ್ಪನ್ನಗಳು ದುಬಾರಿ ಉತ್ಪನ್ನವಾಗಿ ಇರಬಹುದು. ಆದರೆ ಅವು ಅದ್ಭುತ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಅಲ್ಲದೆ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡದು. ಬದಲಿಗೆ ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್‍ಗಳು ಮತ್ತು ವೈಟ್ ಹೆಡ್ಗಳು, ಸುಕ್ಕು, ಕಲೆಗಳನ್ನು ನಿವಾರಿಸುತ್ತವೆ. ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದರ ಜೊತೆಗೆ ಹೆಚ್ಚು ಕಾಂತಿಯಿಂದ ಕೂಡಿರುವಂತೆ ಮಾಡುವುದು. ಹಾಗಾಗಿ ಉತ್ತಮ ಉತ್ಪನ್ನಗಳ ಆಯ್ಕೆ ಹಾಗೂ ಅದರ ಬಳಕೆ ಮಾಡುವುದರಲ್ಲಿ ಯಾವುದೇ ಹಿಂಜರಿಕೆ ಅಥವಾ ನಾಚಿಕೆಗೆ ಒಳಗಾಗಬಾರದು.

Most Read: ಕಾಂತಿಯುತ ಕೂದಲಿಗೆ ಮನೆಯಲ್ಲೇ ತಯಾರಿಸುವ ಹೇರ್‌ಮಾಸ್ಕ್‌ಗಳು

* ತೆಳ್ಳಗೆ ಕಾಣುವಂತೆ ಮಾಡುವ ಒಳ ಉಡುಪು ಧರಿಸುವುದು

ಎಲ್ಲರೂ ಸೂಕ್ತ ರೀತಿಯ ದೇಹದಾಕಾರವನ್ನು ಹೊಂದಿರುವುದಿಲ್ಲ. ಜೊತೆಗೆ ದೇಹದ ಆಕಾರವು ಆಕರ್ಷಕವಾಗಿ ಇಲ್ಲದೆ ಇರಬಹುದು. ಬೊಜ್ಜುತನವು ನಿಮ್ಮ ಸೌಂದರ್ಯವನ್ನು ಕುಂದಿಸಬಹುದು. ಮಹಿಳೆಯರಿಗೆ ವಿಶೇಷವಾಗಿ ತೊಡೆ, ಹೊಟ್ಟೆ, ಸೊಂಟದ ಭಾಗವು ಹೆಚ್ಚು ಕೊಬ್ಬುಗಳಿಂದ ಕೂಡಿರುತ್ತದೆ. ಇಂತಹ ನ್ಯೂನತೆಯನ್ನು ಮರೆಮಾಚಲು ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ತಮ ಗುಣಮಟ್ಟದ ಒಳುಡುಪುಗಳು ಲಭ್ಯವಿದೆ. ಹೊಟ್ಟೆ, ತೊಡೆ, ಸೊಂಟಗಳ ಆಕಾರವನ್ನು ಹಿಡಿದಿಡುವ ಹಾಗೂ ತೆಳ್ಳಗೆ ಕಾಣುವಂತೆ ಮಾಡುವ ಒಳ ಉಡುಪನ್ನು ಧರಿಸಿ. ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದು. ಜೊತೆಗೆ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುವುದು. ಇವುಗಳನ್ನು ಬಳಸುವುದರಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗುವ ಅಗತ್ಯವಿಲ್ಲ.

* ಅನಗತ್ಯ ಕೂದಲನ್ನು ತೆಗೆಯುವುದು

ಮಹಿಳೆಯರ ಸೌಂದರ್ಯ ಎಂದರೆ ಮೊದಲು ನಯವಾದ ಹಾಗೂ ಕೋಮಲ ತ್ವಚೆಯನ್ನು ಸೂಚಿಸುತ್ತದೆ. ಅನಗತ್ಯ ಕೂದಲುಗಳನ್ನು ನಿವಾರಿಸುವುದರಿಂದ ಸೌಂದರ್ಯವು ಹೆಚ್ಚು ಆಕರ್ಷಣೆಯಿಂದ ಕೂಡಿರುತ್ತದೆ. ಮುಖದ ಮೇಲೆ, ಕೈ-ಕಾಲುಗಳ ಮೇಲೆ ಸಾಕಷ್ಟು ಕೂದಲುಗಳಿರುತ್ತವೆ. ಅವುಗಳನ್ನು ತೆಗೆಯುವ ವಿಶೇಷ ಚಿಕಿತ್ಸೆ, ಕ್ರೀಮ್‍ಗಳು, ವ್ಯಾಕ್ಸಿಂಗ್‍ಗಳ ಮೋರೆ ಹೋಗುವುದು ಉತ್ತಮ. ಇವುಗಳನ್ನು ಮಾಡದೆ ಇದ್ದರೆ ನಿಮ್ಮಲ್ಲಿ ಒಂದಿಷ್ಟು ಹಣ ಉಳಿಯಬಹುದು. ಆದರೆ ಸೌಂದರ್ಯವು ಆಕರ್ಷಕವಾಗಿ ಕಾಣದು. ಹಾಗಾಗಿ ಈ ರೀತಿಯ ಉತ್ಪನ್ನಗಳ ಖರೀದಿಸಲು ಅಥವಾ ಶಾಶ್ವತವಾಗಿ ಅನುಚಿತ ಕೇಶರಾಶಿಯನ್ನು ನಿವಾರಿಸುವ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಿ. ಅದಕ್ಕಾಗಿ ಯಾವುದೇ ನಾಚಿಕೆ ಅಥವಾ ಹಿಂಜರಿಕೆಯ ಅಗತ್ಯವಿಲ್ಲ. ನಿಮ್ಮ ಸೌಂದರ್ಯದ ಆರೈಕೆ ಮಾಡಿದಷ್ಟು ನೀವು ಸುಂದರ ಹಾಗೂ ಆಕರ್ಷಕವಾಗಿ ಕಾಣುವಿರಿ ಎನ್ನುವುದನ್ನು ನೆನಪಿನಲ್ಲಿಡಿ.

English summary

why you should not be ashamed of what you do for beauty

You may have read about the celebrities who undergone the knife or needle to look younger and more beautiful. Nose jobs, boob jobs, liposuction, face-lifts have become very common among the celebrities. But, the surprising news is that even non-celebrities choose to undergo them. Instead of hiding or not admitting that you have under gone the knife, women should be upfront about such surgeries because you have paid tons of money to get a wrinkle free face or perfect pair of breasts. Why feel ashamed now, if you have endured so much pain to make you love the way you look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X