For Quick Alerts
ALLOW NOTIFICATIONS  
For Daily Alerts

ಬರೀ ಐದೇ ದಿನಗಳಲ್ಲಿ ಕಾಂತಿಯುತ ಚರ್ಮಕ್ಕಾಗಿ 'ಜೇನುತುಪ್ಪ' ಬಳಸಿ!

|

ಪ್ರಕೃತಿದತ್ತವಾಗಿ ಸಿಗುವಂತಹ ಸಾಮಗ್ರಿಗಳಲ್ಲಿ ತುಂಬಾ ಪರಿಶುದ್ಧವಾಗಿರುವುದು ಜೇನುತುಪ್ಪ ಎಂದು ಹೇಳಬಹುದು. ಆದರೆ ಮನುಷ್ಯನ ಅತಿಯಾದ ಆಸೆಯಿಂದಾಗಿ ಜೇನುತುಪ್ಪಕ್ಕೂ ಕಲಬೆರಕೆ ಮಾಡಲು ಆರಂಭಿಸಿದ್ದಾನೆ. ಇದರಿಂದ ಜೇನುತುಪ್ಪ ಕೂಡ ಇಂದಿನ ದಿನಗಳಲ್ಲಿ ಪರಿಶುದ್ಧವಾಗಿ ಸಿಗುವುದು ಎಂದು ಹೇಳಲಾಗದು. ಆದರೆ ಜೇನುತುಪ್ಪದಲ್ಲಿ ಇರುವಂತಹ ಗುಣಗಳು ನೂರಾರು. ಇದು ಆರೋಗ್ಯ ಹಾಗು ಸೌಂದರ್ಯವನ್ನು ವೃದ್ಧಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ತುಂಬಾ ಸಿಹಿಯಾಗಿರುವ ಜೇನುತುಪ್ಪವು ಹಲವಾರು ವಿಧದಿಂದ ತ್ವಚೆಗೆ ಕಾಂತಿ ನೀಡುವುದು. ಜೇನುತುಪ್ಪದ ರುಚಿ ನೋಡಿರುವಂತಹ ಜನರು ಇದನ್ನು ಯಾವತ್ತಿಗೂ ಕಾಂತಿಯುತ ಚರ್ಮಕ್ಕಾಗಿ ಬಳಕೆ ಮಾಡಿದ್ದೀರಾ? ಸೌಂದರ್ಯವರ್ಧಿಸುವಲ್ಲಿ ಜೇನುತುಪ್ಪವು ಇತರ ಕೆಲವೊಂದು ಸಾಮಗ್ರಿಗಳೊಂದಿಗೆ ಬಳಸಿಕೊಂಡಾಗ ಲಾಭಕಾರಿ. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡ ಜೇನುತುಪ್ಪವನ್ನು ಬೆರೆಸಲಾಗುತ್ತದೆ.

Honey To Get Glowing Skin Just In 5 Days

ಯಾಕೆಂದರೆ ಇದು ತ್ವಚೆಗೆ ನೈಸರ್ಗಿಕ ಕಾಂತಿ ನೀಡುವುದು. ಹೆಚ್ಚಾಗಿ ಎಲ್ಲಾ ಮನೆಗಳಲ್ಲಿ ಕಂಡುಬರುವಂತಹ ಜೇನುತುಪ್ಪವನ್ನು ನೀವು ತ್ವಚೆಯ ಕಾಂತಿವರ್ಧಕವಾಗಿ ಬಳಸಿಕೊಂಡು, ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯವರ್ಧಕ ಉತ್ಪನ್ನಗಳನ್ನು ಕಡೆಗಣಿಸಬಹುದು. ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬೆರೆಸಿರುವರು. ಪ್ರಕೃತಿದತ್ತವಾದ ಜೇನುತುಪ್ಪ ಬಳಸಿಕೊಂಡು ನೈಸರ್ಗಿಕವಾಗಿ ತ್ವಚೆಗೆ ಕಾಂತಿ ಪಡೆಯುವುದು ಹೇಗೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ. ಜೇನುತುಪ್ಪವು ಮೊಡವೆ ನಿವಾರಣೆ ಮಾಡುವುದು, ಗಾಯ ಒಣಗಿಸುವುದು ಮತ್ತು ತ್ವಚೆಗೆ ಕಾಂತಿ ಕೂಡ ನೀಡುವುದು.

ಲಿಂಬೆ ಮತ್ತು ಜೇನುತುಪ್ಪ

ಲಿಂಬೆ ಮತ್ತು ಜೇನುತುಪ್ಪ

ಲಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಸ್ ಆಮ್ಲವಿದ್ದು. ಇದು ಚರ್ಮದ ಆರೋಗ್ಯವನ್ನು ಸುಧಾರಣೆ ಮಾಡುವುದು. ಜೇನುತುಪ್ಪದೊಂದಿಗೆ ಲಿಂಬೆರಸವನ್ನು ಬೆರೆಸಿಕೊಂಡಾಗ ಇದೆರಡು ತ್ವಚೆಗೆ ಅದ್ಭುತವಾಗಿ ಪರಿಣಾಮ ಬೀರುವುದು. ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿ. ಇದರೆಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಬಿಸಿ ನೀರಿನಿಂದ ಮುಖ ತೊಳೆಯಿರಿ ಮತ್ತು ಮುಖವನ್ನು ಸರಿಯಾಗಿ ತೊಳೆಯಿರಿ. ಈ ಪ್ರಕ್ರಿಯೆಯನ್ನು ನೀವು ವಾರದಲ್ಲಿ ಒಂದು ಸಲ ಮಾಡಿ.

Most Read: ಮುಖದ ಸೌಂದರ್ಯ ಹೆಚ್ಚಿಸಲು ಹುಣಸೆ ಹಣ್ಣು ಬಳಸುವ 4 ಸರಳ ಟಿಪ್ಸ್

ಟೊಮೆಟೊ ಮತ್ತು ಜೇನುತುಪ್ಪ

ಟೊಮೆಟೊ ಮತ್ತು ಜೇನುತುಪ್ಪ

ಚರ್ಮವನ್ನು ಸುಧಾರಣೆ ಮಾಡುವುದು ಮಾತ್ರವಲ್ಲದೆ, ಟ್ಯಾನಿಂಗ್ ತೆಗೆದುಹಾಕಲು ಟೊಮೆಟೊ ತುಂಬಾ ಪರಿಣಾಮಕಾರಿ. ಟೊಮೆಟೊದಿಂದ ನೀವು ತುಂಬಾ ಕಾಂತಿಯುತ ಚರ್ಮ ಪಡೆಯಬಹುದು. ಟೊಮೆಟೊ ಮತ್ತು ಜೇನುತುಪ್ಪ ಮಿಶ್ರಣ ಮಾಡಿಕೊಂಡು ಬಳಸಿಕೊಂಡರೆ ಅದರಿಂದ ಚರ್ಮಕ್ಕೆ ತುಂಬಾ ಒಳ್ಳೆಯದು. ಒಂದು ತಾಜಾ ಟೊಮೆಟೊ ತೆಗೆದುಕೊಂಡು ಅದನ್ನು ರುಬ್ಬಿಕೊಂಡು, ಮೆತ್ತಗಿನ ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ ಮತ್ತು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ಮುಖ ಸರಿಯಾಗಿ ತೊಳೆಯಿರಿ ಮತ್ತು ಮಿಶ್ರಣವನ್ನು ಹಚ್ಚಿಕೊಂಡ ಬಳಿಕ ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ. ಕಣ್ಣಿನ ಸಮೀಪದ ಚರ್ಮಕ್ಕೆ ಇದನ್ನು ಹಚ್ಚಿಕೊಳ್ಳಬೇಡಿ. 15 ನಿಮಿಷ ಬಳಿಕ ನೀವು ಮುಖವನ್ನು ಸರಿಯಾಗಿ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಈ ಮಿಶ್ರಣವನ್ನು ನೀವು ಬಳಸಿಕೊಂಡರೆ ಆಗ ನೈಸರ್ಗಿಕವಾದ ಕಾಂತಿಯು ನಿಮ್ಮ ತ್ವಚೆಗೆ ಸಿಗುವುದು.

ಬಾಳೆಹಣ್ಣು ಮತ್ತು ಜೇನುತುಪ್ಪ

ಬಾಳೆಹಣ್ಣು ಮತ್ತು ಜೇನುತುಪ್ಪ

ಬಾಳೆಹಣ್ಣು ಹೆಚ್ಚಾಗಿ ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಬಾಳೆಹಣ್ಣು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು, ಚರ್ಮದಲ್ಲಿನ ಜಿಡ್ಡಿನ ಅಂಶ ತೆಗೆಯುವುದು, ಕಪ್ಪು ಕಲೆಗಳ ತೆಗೆಯುವುದು ಮತ್ತು ಮೊಡವೆ ನಿವಾರಣೆ ಮಾಡುವುದು. ಚರ್ಮಕ್ಕೆ ವಯಸ್ಸಾಗುತ್ತಿರುವ ಲಕ್ಷಣವನ್ನು ಇದು ತಡೆಯುವುದು. ಹಣ್ಣಾಗಿರುವಂತಹ ಬಾಳೆಹಣ್ಣನ್ನು ತೆಗೆದುಕೊಂಡು ಅದರ ಅರ್ಧ ಭಾಗವನ್ನು ಒಂದು ಪಿಂಗಾಣಿಗೆ ಹಾಕಿ ಸರಿಯಾಗಿ ಹಿಚುಕಿಕೊಂಡು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮತ್ತೆ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರ ಬಳಿಕ ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆರಸ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನೀವು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀವು ಬಿಸಿ ನೀರು ಬಳಸಿಕೊಂಡು ಮುಖ ತೊಳೆಯಿರಿ. ಮುಖವನ್ನು ಸರಿಯಾಗಿ ಒರೆಸಿಕೊಳ್ಳಿ. ವಾರದಲ್ಲಿ ಒಂದು ಸಲ ನೀವು ಈ ಮನೆಮದ್ದನ್ನು ಬಳಸಿಕೊಳ್ಳಬಹುದು.

Most Read: ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಸರಳ ಟಿಪ್ಸ್

ಕಡಲೆಹಿಟ್ಟು ಮತ್ತು ಜೇನುತುಪ್ಪ

ಕಡಲೆಹಿಟ್ಟು ಮತ್ತು ಜೇನುತುಪ್ಪ

ಕಡಲೆಹಿಟ್ಟು ಮತ್ತೊಂದು ಒಳ್ಳೆಯ ಸಾಮಗ್ರಿಯಾಗಿದ್ದು, ಇದು ಚರ್ಮಕ್ಕೆ ತುಂಬಾ ಲಾಭಕಾರಿಯಾಗಿರುವುದು. ಇದು ಚರ್ಮದ ಬಣ್ಣವನ್ನು ವೃದ್ಧಿಸುವುದು ಮತ್ತು ಕಾಂತಿಯುತ ತ್ವಚೆ ನೀಡುವುದು. ಎರಡು ಚಮಚ ಕಡಲೆಹಿಟ್ಟು ಮತ್ತು ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಸರಿಯಾಗಿ ಇದನ್ನು ಮಿಶ್ರಣ ಮಾಡಿ, ಮೆತ್ತಗಿನ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ನೀವು ಉಗುರುಬೆಚ್ಚಗಿನ ನೀರು ಬಳಸಿಕೊಂಡು ತೊಳೆಯಿರಿ. ಟವೆಲ್ ನೀಮದ ಮುಖವನ್ನು ಸರಿಯಾಗಿ ಒರೆಸಿಕೊಳ್ಳಿ. ಒಳ್ಳೆಯ ಫಲಿತಾಂಶ ಬೇಕಿದ್ದರೆ ಆಗ ನೀವು ವಾರದಲ್ಲಿ ಎರಡು ಅಥವಾ ಮೂರು ಸಲ ನೀವು ಇದನ್ನು ಬಳಸಿಕೊಳ್ಳಬೇಕು.

English summary

Use Honey To Get Glowing Skin Just In 5 Days!

Do you enjoy the sweet taste of honey? Now do not just enjoy the great taste of honey but get a natural glowing skin with honey. Along with your kitchen make honey an essential ingredient of your beauty regimen. Honey is often present in various beauty products due to its ability to give you the natural glow. Honey can be easily found in almost every kitchen. You can use it on your own for your skin and avoid beauty products available in the market which are loaded with chemicals.
Story first published: Saturday, March 2, 2019, 15:21 [IST]
X
Desktop Bottom Promotion