For Quick Alerts
ALLOW NOTIFICATIONS  
For Daily Alerts

ವಾರದೊಳಗೆ ಮೊಡವೆ ಸಮಸ್ಯೆ ನಿವಾರಣೆಗೆ ಟೂತ್‌ಪೇಸ್ಟ್‌ನ ಚಿಕಿತ್ಸೆ

|

ಮುಖದ ಮೇಲೆ ಮೊಡವೆಗಳು ಮೂಡಿದರೆ ಆಗ ಅದಕ್ಕಿಂತ ದೊಡ್ಡ ಸಮಸ್ಯೆಯು ಮತ್ತೊಂದು ಇಲ್ಲ. ಮೊಡವೆಗಳು ನೋವುಂಟು ಮಾಡುವ ಜತೆಗೆ ಕಿರಿಕಿರಿ ಅನಿಸುವುದು. ಇದರಿಂದಾಗಿ ನಾವು ಮಾರುಕಟ್ಟೆಗೆ ಹೋಗಿ ಅಲ್ಲಿ ಸಿಗುವಂತಹ ಉತ್ಪನ್ನಗಳನ್ನು ಪಡೆದು ಮೊಡವೆ ನಿವಾರಣೆ ಮಾಡಲು ಪ್ರಯತ್ನಿಸುತ್ತೇವೆ. ಇದು ಕೆಲವು ದಿನಗಳ ಕಾಲ ಮಾಯವಾದರೂ ಮತ್ತೆ ಮರಳುವುದು. ಆಗ ಮತ್ತೊಂದು ವಿಧಾನ ಪ್ರಯತ್ನಿಸುತ್ತೇವೆ. ಆದರೆ ಮೊಡವೆಗಳು ಮಾತ್ರ ಬರುತ್ತಲೇ ಇರುವುದು.

ಹೊರಗಿ ಧೂಳು, ಹೊಗೆ, ಕಲ್ಮಶ ಇತ್ಯಾದಿಗಳು ಮುಖದ ಮೇಲೆ ಮೊಡವೆ ಹಾಗೂ ಬೊಕ್ಕೆಗಳು ಮೂಡಲು ಪ್ರಮುಖ ಕಾರಣವಾಗಿದೆ. ಇದರೊಂದಿಗೆ ದೇಹದಲ್ಲಿ ಆಗುವಂತಹ ಹಾರ್ಮೋನು ವೈಪರಿತ್ಯವು ಇದಕ್ಕೆ ಕಾರಣವಾಗಿದೆ. ಮೊಡವೆಗಳ ನಿವಾರಣೆ ಮಾಡಲು ಹಲ್ಲುಜ್ಜುವಂತಹ ಪೇಸ್ಟ್ ಯಾವತ್ತಾದರೂ ನೀವು ಬಳಸಿ ನೋಡಿದ್ದೀರಾ? ಹಾಗಾದರೆ ನೀವು ಈ ಒಂದು ವಿಧಾನವನ್ನು ಪ್ರಯೋಗಿಸಿ ನೋಡಿ. ಯಾಕೆಂದರೆ ಹಲ್ಲುಜ್ಜುವ ಪೇಸ್ಟ್ ತುಂಬಾ ಪರಿಣಾಕಾರಿಯಾಗಿ ಮೊಡವೆ ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ.

ಮೊಡವೆಗೆ ಟೂತ್‌ಪೇಸ್ಟ್ ಮತ್ತು ಅಡುಗೆ ಸೋಡಾ

ಮೊಡವೆಗೆ ಟೂತ್‌ಪೇಸ್ಟ್ ಮತ್ತು ಅಡುಗೆ ಸೋಡಾ

ಬೇಕಾಗುವಂತಹ ಸಾಮಗ್ರಿಗಳು

*1 ಚಮಚ ಅಡುಗೆ ಸೋಡಾ

*ನಿಮ್ಮ ಆಯ್ಕೆಯ ಟೂತ್‌ಪೇಸ್ಟ್

*ಕೈಗವಚ ಅಥವಾ ಸ್ಪಾಂಜ್(ಆಯ್ಕೆಗೆ ಬಿಟ್ಟದ್ದು)

ತಯಾರಿಸುವ ಸಮಯ

*2 ನಿಮಿಷ

ಬಳಸುವ ಸಮಯ

*30 ನಿಮಿಷ ಅಥವಾ ರಾತ್ರಿಯಿಡಿ ಹಾಗೆ ಬಿಡಬಹುದು.

ವಿಧಾನ

ವಿಧಾನ

*ಅಡುಗೆ ಸೋಡಾ ಮತ್ತು ಸ್ವಲ್ಪ ಟೂತ್‌ಪೇಸ್ಟ್ ನ್ನು ಮಿಶ್ರಣ ಮಾಡಿಕೊಳ್ಳಿ.

*ಎರಡು ನಿಮಿಷ ಕಾಲ ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದರಿಂದ ಅದು ಚೆನ್ನಾಗಿ ಮಿಶ್ರಣವಾಗುವುದು.

*ಮೊದಲು ತಣ್ಣೀರಿನಲ್ಲಿ ಮುಖ ತೊಳೆದುಕೊಂಡ ಬಳಿಕ ಕೈಗವಚ ಅಥವಾ ಸ್ಪಾಂಜ್ ಬಳಕೆ ಮಾಡಿಕೊಂಡು ನೀವು ಬಾಧಿತ ಜಾಗಕ್ಕೆ ಈ ಮಿಶ್ರಣವನ್ನು ಸರಿಯಾಗಿ ಹಚ್ಚಿಕೊಳ್ಳಿ.

*ಪೇಸ್ಟ್ ಮತ್ತು ಅಡುಗೆ ಸೋಡಾವು ಚರ್ಮದಲ್ಲಿ ಸುಮಾರು 30 ನಿಮಿಷ ಕಾಲ ಹಾಗೆ ಇರಲಿ ಅಥವಾ ಇದನ್ನು ರಾತ್ರಿ ಮಲಗುವ ಮೊದಲು ಹಚ್ಚಿಕೊಂಡು ರಾತ್ರಿಯಿಡಿ ಹಾಗೆ ಬಿಡಿ.

*ತಣ್ಣೀರಿನಿಂದ ಮುಖ ತೊಳೆಯಿರಿ.

*ನಿಮ್ಮ ಚರ್ಮಕ್ಕೆ ಹೊಂದಿಕೆ ಆಗುವಂತಹ ಮೊಶ್ಚಿರೈಸರ್ ನ್ನು ಹಚ್ಚಿಕೊಳ್ಳಿ. ಅಥವಾ ಅಲೋವೆರಾದ ಲೋಳೆ ಹಚ್ಚಿಕೊಂಡರೆ ಚರ್ಮವು ನಯವಾಗುವುದು. ಇದರಿಂದ ಮಿಶ್ರಣದಿಂದ ಉಂಟಾದ ಕಿರಿಕಿರಿ ತಪ್ಪುವುದು.

Most Read:ಟೂತ್‌ಪೇಸ್ಟ್ ಬಳಸಿ ಕೂಡ ಮೊಡವೆ ಹಾಗೂ ಬ್ಲ್ಯಾಕ್ ಹೆಡ್ಸ್ ನಿವಾರಿಸಬಹುದು!

ಎಷ್ಟು ಸಲ ಮಾಡಬೇಕು?

ಎಷ್ಟು ಸಲ ಮಾಡಬೇಕು?

ವಾರದಲ್ಲಿ 2ರಿಂದ 3 ಸಲ ಅಥವಾ ಮೊಡವೆಗಳು ಹೊಸದಾಗಿ ಮೂಡಿದ ವೇಳೆ ನೀವು ಇದನ್ನು ಹಚ್ಚಿಕೊಳ್ಳಿ.

ಇದು ಹೇಗೆ ಕೆಲಸ ಮಾಡುವುದು?

ಇದು ಹೇಗೆ ಕೆಲಸ ಮಾಡುವುದು?

ಅಡುಗೆ ಸೋಡಾದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದಾಗಿ ಇದು ಕೆಂಪಾಗಿರುವುದು ಮತ್ತು ಊತವನ್ನು ಕಡಿಮೆ ಮಾಡುವುದು. ಮೊಡವೆ ಮೂಡಿದ ವೇಳೆ ಈ ಎರಡು ಸಮಸ್ಯೆಯು ಸಾಮಾನ್ಯವಾಗಿರುವುದು. ಟೂತ್‌ಪೇಸ್ಟ್ ನಲ್ಲಿ ಟ್ರೈಕ್ಲೊಸನ್ ಅಂಶವಿದ್ದು, ಇದು ಮೊಡವೆ ಒಣಗುವಂತೆ ಮಾಡುವುದು ಮತ್ತು ಅದರ ಗಾತ್ರವನ್ನು ಕುಗ್ಗಿಸುವುದು. ಇದೆರಡನ್ನು ಬಳಕೆ ಮಾಡುವ ಕಾರಣದಿಂದ ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದು.

ಉಪ್ಪು ಮತ್ತು ಟೂತ್‌ಪೇಸ್ಟ್ - ಬೇಕಾಗಿರುವ ಸಾಮಗ್ರಿಗಳು

ಉಪ್ಪು ಮತ್ತು ಟೂತ್‌ಪೇಸ್ಟ್ - ಬೇಕಾಗಿರುವ ಸಾಮಗ್ರಿಗಳು

*ಒಂದು ಚಿಟಿಕೆ ಉಪ್ಪು

*ಸ್ವಲ್ಪ ಟೂತ್‌ಪೇಸ್ಟ್

*ಸಣ್ಣ ಪಿಂಗಾಣಿ ಮಿಶ್ರಣ ಮಾಡಲು

ತಯಾರಿಸಲು ಬೇಕಾಗುವ ಸಮಯ

*2 ನಿಮಿಷ

ಹಚ್ಚಲು ಬೇಕಾಗುವ ಸಮಯ

*5 ನಿಮಿಷ

ವಿಧಾನ

ಸಣ್ಣ ಪಿಂಗಾಣಿಯಲ್ಲಿ ಉಪ್ಪು ಮತ್ತು ಪೇಸ್ಟ್ ನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

ಈ ಪ್ರದೇಶದ ಸುತ್ತಲು ನೀವು ಸ್ಕ್ರಬ್ ಮಾಡಿಕೊಳ್ಳಿ.

ಕೆಲವು ನಿಮಿಷ ಕಾಲ ನೀವು ಹೀಗೆ ಮಾಡಿ.

ತಣ್ಣೀರಿನಿಂದ ನೀವು ಇದನ್ನು ತೊಳೆಯಿರಿ.

ಇದರ ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಇದು ಹೇಗೆ ಕೆಲಸ ಮಾಡುವುದು

ಇದು ಹೇಗೆ ಕೆಲಸ ಮಾಡುವುದು

ನಮಗೆಲ್ಲರಿಗೂ ತಿಳಿದಿರುವಂತೆ ಉಪ್ಪು ಚರ್ಮದಲ್ಲಿ ಪಿಎಚ್ ಮಟ್ಟ ಕಾಪಾಡಲು ನೆರವಾಗುವುದು. ಇದರ ಒರಟುತನವು ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುವುದು. ಮೊಡವೆ ಸುತ್ತಲು ನೀವು ಇದನ್ನು ಸ್ಕ್ರಬ್ ಮಾಡಿದರೆ ಆಗ ಅದು ತುಂಬಾ ಆಳವಾಗಿ ಸ್ವಚ್ಛ ಮಾಡುವುದು, ಎಣ್ಣೆಯಂಶ ತೆಗೆಯುವುದು, ತುಂಬಿರುವಂತಹ ಚರ್ಮದ ರಂಧ್ರಗಳನ್ನು ತೆರೆಯುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂಡ ಮೊಡವೆ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಉಪ್ಪನ್ನು ನೀವು ಟೂತ್‌ಪೇಸ್ಟ್ ನ ಜತೆಗೆ ಮಿಶ್ರಣ ಮಾಡಿಕೊಂಡು ಪ್ರತಿನಿತ್ಯವು ಪರಿಣಾಮಕಾರಿಯಾಗಿ ಸ್ಕ್ರಬ್ ಮಾಡಿದರೆ ಆಗ ಮೊಡವೆ ದೂರ ಮಾಡಬಹುದು. ನಿಮಗೆ ಅಲ್ಪ ಸಮಯದಲ್ಲೇ ಇದರ ಫಲಿತಾಂಶವು ಕಂಡುಬರುವುದು. ಇದರಿಂದ ನೀವು ಇದನ್ನು ಅರ್ಧದಲ್ಲೇ ಕೈಬಿಡುವಂತಹ ಪ್ರಶ್ನೆಯೇ ಬರುವುದಿಲ್ಲ.

ಲಿಂಬೆ ಮತ್ತು ಟೂತ್‌ಪೇಸ್ಟ್

ಲಿಂಬೆ ಮತ್ತು ಟೂತ್‌ಪೇಸ್ಟ್

ಬೇಕಾಗುವ ಸಾಮಗ್ರಿಗಳು

1 ಚಮಚ ಲಿಂಬೆರಸ ಅಥವಾ ತಾಜಾ ಲಿಂಬೆ

ಸ್ವಲ್ಪ ಟೂತ್‌ಪೇಸ್ಟ್

ತಯಾರಿಸುವ ಸಮಯ

2 ನಿಮಿಷ

ಬಳಸುವ ಸಮಯ

30 ನಿಮಿಷ ಅಥವಾ ಚರ್ಮಕ್ಕೆ ಕಿರಿಕಿರಿ ಆಗದೆ ಇದ್ದರೆ ನೀವು ರಾತ್ರಿಯಿಡಿ ಹಾಗೆ ಬಿಡಬಹುದು.

ವಿಧಾನ

ವಿಧಾನ

*ಫೇಸ್ ವಾಶ್ ಬಳಸಿಕೊಂಡು ಮುಖ ಸರಿಯಾಗಿ ತೊಳೆಯಿರಿ.

ಲಿಂಬೆರಸದಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಳ್ಳಿ. ಇದರ ಬಳಿಕ ಟೂತ್‌ಪೇಸ್ಟ್ ನಲ್ಲಿ.

*ಒಂದು ತುಂಡು ಲಿಂಬೆಯನ್ನು ಟೂತ್‌ಪೇಸ್ಟ್ ನಲ್ಲಿ ಹಾಕಬಹುದು.

*ಇದನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.

30 ನಿಮಿಷ ಕಾಲ ಹಾಗೆ ಬಿಡಿ ಅಥವಾ ನೀವು ರಾತ್ರಿಯಿಡಿ ಹಾಗೆ ಬಿಡಬಹುದು(ಇದು ತುಂಬಾ ಪರಿಣಾಮಕಾರಿ ಆಗಿರುವುದು.)

ತಣ್ಣೀರಿನಿಂದ ಮುಖ ತೊಳೆಯಿರಿ.

*ಮೊಶ್ಚಿರೈಸರ್ ಹಚ್ಚಿಕೊಂಡ ಬಳಿಕ ಈ ವಿಧಾನವು ಪೂರ್ತಿ ಆಗುವುದು.

ಇದು ಹೇಗೆ ಕೆಲಸ ಮಾಡುವುದು?

ಇದು ಹೇಗೆ ಕೆಲಸ ಮಾಡುವುದು?

ಲಿಂಬೆಯ ಲಾಭಗಳು ಅಸಂಖ್ಯಾತವಾಗಿದೆ. ನಾವು ದಿನನಿತ್ಯವು ಎದುರಿಸುವಂತಹ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಲಿಂಬೆಯು ನಮಗೆ ನೆರವಿಗೆ ಬರುವುದು. ಲಿಂಬೆಯಲ್ಲಿ ಸಿಟ್ರಸ್ ಗುಣಗಳು ಇರುವುದರ ಜತೆಗೆ ಇದು ನಂಜುನಿರೋಧಕ ಮತ್ತು ಕೆಂಪು ಬೊಕ್ಕೆಗಳು ಅಥವಾ ಮೊಡವೆಗಳನ್ನು ಇದು ಒಣಗಿಸುವುದು. ಇದು ಎಲ್ಲಾ ರೀತಿಯ ಚರ್ಮಗಳಿಗೆ ಹೊಂದಿಕೊಳ್ಳುವುದು ಮತ್ತು ದೇಹದಲ್ಲಿ ಮೂಡುವಂತಹ ಬೊಕ್ಕೆಗಳಿಗೆ ಕೂಡ ಇದನ್ನು ಬಳಸಿಕೊಳ್ಳಬಹುದು. ಈ ವಿಧಾನದ ವೇಳೆ ನಿಮಗೆ ತುಂಬಾ ಉರಿ ಕಾಣಿಸಿಕೊಳ್ಳಬಹುದು. ಇದು ಸಹಿಸಲು ಅಸಾಧ್ಯವಾಗಿ ಇರುವುದು. ನಿಮಗೆ ಸಾಧ್ಯವಿಲ್ಲದೆ ಇದ್ದರೆ ಆಗ ನೀವು ಇದನ್ನು ತೊಳೆದುಕೊಂಡು ಬೇರೆ ವಿಧಾನ ಪ್ರಯತ್ನಿಸಿ.

ಮೊಡವೆಗೆ ಮಂಜುಗಡ್ಡೆ(ಐಸ್) ಮತ್ತು ಟೂತ್‌ಪೇಸ್ಟ್

ಮೊಡವೆಗೆ ಮಂಜುಗಡ್ಡೆ(ಐಸ್) ಮತ್ತು ಟೂತ್‌ಪೇಸ್ಟ್

ನಿಮಗೆ ಬೇಕಾಗಿರುವ ಸಾಮಗ್ರಿಗಳು

ಕೆಲವು ತುಂಡು ಐಸ್

ಅಥವಾ ಒಂದು ಐಸ್ ಪ್ಯಾಕ್

ಐಸ್ ತುಂಡುಗಳನ್ನು ಬಿಗಿಯಲು ಒಂದು ಬಟ್ಟೆ

ಸ್ವಲ್ಪ ಟೂತ್‌ಪೇಸ್ಟ್

ತಯಾರಿಯ ಸಮಯ

ತಯಾರಿಯ ಸಮಯ

5 ನಿಮಿಷ(ಈಗಾಗಲೇ ಐಸ್ ತುಂಡುಗಳು ಅಥವಾ ಐಸ್ ಪ್ಯಾಕ್ ತಯಾರಾಗಿದ್ದರೆ).

ಇಲ್ಲವಾದಲ್ಲಿ ಐಸ್ ಆಗಲು ಸ್ವಲ್ಪ ಸಮಯ ಬೇಕಾಗುವುದು.

ಬಳಸಲು ಸಮಯ

10-15 ನಿಮಿಷ

ವಿಧಾನ

ವಿಧಾನ

ಒಂದು ಸಣ್ಣ ಬಟ್ಟೆ ಅಥವಾ ಟವೆಲ್ ನಲ್ಲಿ ಐಸ್ ತುಂಡುಗಳನ್ನು ಹಾಕಿ, ಅದನ್ನು ಕಟ್ಟಿಕೊಳ್ಳಿ.

ಮೊಡವೆಗಳು ಇರುವಂತಹ ಜಾಗಕ್ಕೆ ಟೂತ್‌ಪೇಸ್ಟ್ ಹಚ್ಚಿಕೊಳ್ಳಿ ಮತ್ತು ಐಸ್ ತುಂಡುಗಳನ್ನು ಅಲ್ಲಿ ಒತ್ತಿಕೊಳ್ಳಿ.

ಈ ಪ್ಯಾಕ್ ನ್ನು 10-15 ನಿಮಿಷ ಕಾಲ ಹಾಗೆ ಇಟ್ಟುಬಿಡಿ. ಇದಕ್ಕಿಂತ ಹೆಚ್ಚು ಸಮಯ ಇಡಬೇಡಿ.

ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಇದರ ಬಳಿಕ ನಿಮಗೆ ಬೇಕಾಗಿರುವಂತಹ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

English summary

Toothpaste Remedies To Get Rid Of Pimples with in week!

A pimple and acne prone skin is such a nightmare to deal with; it’s like a doll made with glass; you just have to be cautious about every damn thing, and your life practically revolves around keeping them at bay. But, in this process, we invariably try ridiculous things that might not make a difference, but sometimes backfire. I know, what you’re thinking, that this also sounds like one of those random silly ideas, but hold that thought. Using toothpaste for pimples is anything but dumb. But, hey like I said you need to use it the right way. You will anyway, and we will learn about that now.There’s more than one way to do it, let’s find out how you can take care of your pimples by combining it with toothpaste and things that are available in your household.
X
Desktop Bottom Promotion