For Quick Alerts
ALLOW NOTIFICATIONS  
For Daily Alerts

ಬರೀ 7 ದಿನಗಳಲ್ಲಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸರಳ ಟಿಪ್ಸ್

|

ಕಾಂತಿಯುತ ತ್ವಚೆ ಯಾರು ಇಷ್ಟಪಡಲ್ಲ ಹೇಳಿ? ಪ್ರತಿಯೊಬ್ಬರಿಗೂ ಬೇಕಾಗಿರುವುದು ಸುಂದರ ಹಾಗು ಕಾಂತಿಯುತ ತ್ವಚೆ. ಆದರೆ ಕಾಂತಿಯುತ ತ್ವಚೆ ಪಡೆಯಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಯಾಕೆಂದರೆ ಕಾಂತಿಯುತ ತ್ವಚೆಯು ಹಾಗೆ ದಿನ ಬೆಳಗಾಗುವುದ ರೊಳಗಡೆ ಬರಲ್ಲ. ಇದಕ್ಕೆ ತಾಳ್ಮೆ ಬೇಕು ಮತ್ತು ನಮ್ಮ ಜೀವನಶೈಲಿ ಬದಲಾಯಿಸಬೇಕು ಹಾಗು ಆರೋಗ್ಯಕಾರಿ ಆಹಾರ ಸೇವನೆ ಮಾಡಬೇಕು. ಹೀಗದ್ದಲ್ಲಿ ಮಾತ್ರ ತ್ವಚೆಯು ಕಾಂತಿಯುತವಾಗುವುದು. ಕಾಂತಿಯುತ ತ್ವಚೆ ಪಡೆಯಲು ನಾವು ನಿಮಗೆ ಆರು ವಿಧಾನಗಳನ್ನು ಹೇಳಿಕೊಡಲಿದ್ದೇವೆ. ಇದು ಯಾವುದು ಎಂದು ನೀವು ತಿಳಿಯಿರಿ. ನಿಸ್ತೇಜ ಚರ್ಮ ಮತ್ತು ನಿಮ್ಮ ಸುತ್ತಲಿನ ಜನರು ಗಮನಿಸುತ್ತಿಲ್ಲವೆಂದು ನಿಮಗೆ ಅನಿಸುತ್ತಿದೆಯಾ? ಹಾಗಾದರೆ ನಿಮ್ಮ ಚರ್ಮವು ಕಾಂತಿಯುತವಾಗಿಲ್ಲ ಎಂದು ಹೇಳಬಹುದು. ಆದರೆ ಇದಕ್ಕೆ ನೀವು ಚಿಂತೆ ಮಾಡಬೇಕಾಗಿಲ್ಲ. ನೀವು ಕೆಳಗೆ ಸ್ಕ್ರೋಲ್ ಮಾಡುತ್ತಾ ಸಾಗಿ.

glowing skin

ಪೋಷಣೆ ನೀಡಿ

ಯಾವತ್ತೂ ರಾತ್ರಿ ವೇಳೆ ಮುಖ ತೊಳೆಯದೆ ಮಲಗಬೇಡಿ. ನೀವು ತಡರಾತ್ರಿ 2 ಗಂಟೆಗೆ ಬಂದರೂ ಮೇಕಪ್ ತೆಗೆದು ಮುಖ ತೊಳೆಯಿರಿ. ಯಾಕೆಂದರೆ ನಿದ್ರೆಯ ವೇಳೆ ನಮ್ಮ ಚರ್ಮವು ಅದಾಗಿಯೇ ಪುನರ್ಶ್ಚೇತನಗೊಳ್ಳುವುದು ಮತ್ತು ಮೇಕಪ್ ತೆಗೆದು ಅಲ್ಲಿ ನೀವು ರಾತ್ರಿ ಕ್ರೀಮ್ ನ್ನು ಹಚ್ಚಿಕೊಳ್ಳಬೇಕು. ಆಗ ನಿಮ್ಮ ಚರ್ಮವು ಪುನರ್ಶ್ಚೇತಗೊಳ್ಳುವುದು.

ತೇವಾಂಶ ನೀಡಿ

ದೇಹಕ್ಕೆ ಸರಿಯಾಗಿ ತೇವಾಂಶ ನೀಡಲು ಮರೆಯಬೇಡಿ. ಶುದ್ಧ ನೀರು ಯಾವಾಗಲೂ ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದ ಚರ್ಮ ಮತ್ತು ದೇಹವು ತುಂಬಾ ಆರೋಗ್ಯವಾಗಿ ಇರುವುದು.

Most Read: ಬರೀ 15 ದಿನಗಳಲ್ಲಿ ಕುತ್ತಿಗೆಯ ಕಪ್ಪು ಕಲೆ ನಿವಾರಿಸಲು ಶಿಯಾ ಬಟರ್ ಬಳಸಿ

ಬಿಸಿಲ ಸ್ನಾನ

ಕೆಲವು ನಿಮಿಷಗಳ ಕಾಲ ಬಿಸಿಲ ಸ್ನಾನ ಮಾಡುವುದು ದೇಹಕ್ಕೆ ಒಳ್ಳೆಯದು. ಆದರೆ ನೀವು ಮುಖಕ್ಕೆ ಸನ್ ಸ್ಕ್ರೀನ್ ಕ್ರೀಮ್ ಬಳಸಿಕೊಳ್ಳಬೇಕು. ಕಾಲು, ಕೈಗಳು ಮತ್ತು ಕುತ್ತಿಗೆಗೆ ಇದನ್ನು ಹಚ್ಚಬೇಡಿ. ಇದರಿಂದ ವಿಟಮಿನ್ ಡಿ ಹೀರಿಕೊಳ್ಳಲು ಆಗದು. ಸನ್ ಸ್ಕ್ರೀನ್ ಕ್ರೀಮ್ ನಿಂದಾಗಿ ನೆರಿಗೆ, ಕಲೆ ಮತ್ತು ಚರ್ಮದ ಕ್ಯಾನ್ಸರ್ ಇತ್ಯಾದಿ ತಡೆಯಬಹುದು.

ಅತ್ಯುತ್ತಮ ಮೊಶ್ಚಿರೈಸರ್

ಒಣ ಮತ್ತು ಸಾಮಾನ್ಯ ಚರ್ಮಕ್ಕೆ ನೀವು ಬಾದಾಮಿ ಎಣ್ಣೆ ಬಳಸಿಕೊಳ್ಳಿ. ಎಣ್ಣೆಯುಕ್ತ ಚರ್ಮಕ್ಕೆ ಮಗುವಿನ ಎಣ್ಣೆ ಮತ್ತು ಈ ಋತುವಿನಲ್ಲಿ ಫೇಸ್ ಪ್ಯಾಖ್ ಚರ್ಮಕ್ಕೆ ಅತ್ಯುತ್ತಮವಾಗಿ ಮೊಶ್ಚಿರೈಸರ್ ನೀಡುವುದು. ನೀವು ಇದನ್ನು ಹಚ್ಚಿಕೊಂಡು ಬಳಿಕ ಟಿಶ್ಯೂ ಬಳಸಿಕೊಂಡು ತೆಗೆಯಬಹುದು. ಎಣ್ಣೆಯುಕ್ತ ಚರ್ಮವಿರುವವರು ಒಂದು ಗಂಟೆಗೆ ಮೊದಲು ಇದನ್ನು ತೆಗೆಯಿರಿ. ಆದರೆ ಸಾಮಾನ್ಯದಿಂದ ಒಣ ಚರ್ಮ ಇರುವ ವ್ಯಕ್ತಿಗಳು ಬಾದಾಮಿ ಎಣ್ಣೆ ದೀರ್ಘಕಾಲ ತನಕ ಹಚ್ಚಿಡಿ.

Most Read: ಮೊಟ್ಟೆಯ ಸಿಪ್ಪೆ ಬಳಸಿಕೊಂಡು ತ್ವಚೆಯ ಆರೈಕೆಗೆ ಸರಳ ವಿಧಾನಗಳು

ಕಾಂತಿ ಪಡೆಯಲು ಸ್ನಾನ ಮಾಡಿಕೊಳ್ಳಿ

ಹಗುರ ಸೋಪ್ ಗಳನ್ನು ಬಳಸಿಕೊಂಡು ನೀವು ಸ್ನಾನ ಮಾಡಿಕೊಳ್ಳಬೇಕು. ಸಾರಭೂತ ತೈಲಗಳನ್ನು ಹಚ್ಚಿಕೊಂಡು ಸ್ನಾನ ಮಾಡಿದರೆ ಆಗ ದೇಹದಲ್ಲಿ ಮೊಶ್ಚಿರೈಸರ್ ಉಳಿಯುವುದು. ದೇಹದಲ್ಲಿ ಮೊಶ್ಚಿರೈಸರ್ ಉಳಿಯಲು ನೀವು ಗ್ಲಿಸರಿನ್, ಖನಿಜಾಂಶ ತೈಲ, ಪೆಟ್ರೋಲಿಯಂ ಜೆಲ್ಲಿ ಇತ್ಯಾದಿಗಳನ್ನು ಬಳಸಿಕೊಳ್ಳಬಹುದು.

English summary

Tips to get glowing skin in 7 days

Tired of that dull skin and the fact that people don't notice you when you are in a room full of people? Well, that's because your skin doesn't glow anymore! But, fret not because here's a list of sure shot tips that will bring back that old glow on your face.
X
Desktop Bottom Promotion