For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಪುರುಷರು ಕೈಗೊಳ್ಳಬೇಕಾದ ತ್ವಚೆಯ ಕಾಳಜಿಗಳು

|

ಸೌಂದರ್ಯದ ಕಾಳಜಿ ವಹಿಸುವುದು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಅನ್ವಯವಾಗುತ್ತದೆ. ನಿಯಮಿತವಾದ ಉಗುರುಗಳನ್ನು ಕತ್ತರಿಸಿಕೊಳ್ಳುವುದು, ವಾರಕ್ಕೊಮ್ಮೆ ಚರ್ಮದಾಳದಿಂದ ಸ್ವಚ್ಛಗೊಳಿಸುವುದು, ಬೆವರಿನ ದುರ್ಗಂಧ ಬಾರದಂತೆ ಕ್ರಮ ಕೈಗೊಳ್ಳುವುದು ಮೊದಲಾದವು ಅಗತ್ಯವಾಗಿದೆ ಎಂದು ಸೌಂದರ್ಯತಜ್ಞರು ಸಲಹೆ ಮಾಡುತ್ತಾರೆ. ಮ್ಯಾಗ್ನಿಫಿಕ್ ಎಂಬ ಸೌಂದರ್ಯ ಮಳಿಗೆಯ ಸ್ಥಾಪಕಿ ರಾಗಿಣಿ ಮೆಹ್ರಾ ಹಾಗೂ ಸಹ ಸಂಸ್ಥಾಪಕಿ ಮಿಲನ್ ಶರ್ಮಾ ರವರು ಈ ನಿಟ್ಟಿನಲ್ಲಿ ನೀಡುವ ಕೆಲವು ಸಲಹೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

ನಿಯಮಿತವಾದ ಉಗುರಿನ ಕಾಳಜಿ ಅಥವಾ ಪೆಡಿಕ್ಯೂರ್ ಸೇವೆಯನ್ನು ಪಡೆದುಕೊಳ್ಳಿ

ನಿಯಮಿತವಾದ ಉಗುರಿನ ಕಾಳಜಿ ಅಥವಾ ಪೆಡಿಕ್ಯೂರ್ ಸೇವೆಯನ್ನು ಪಡೆದುಕೊಳ್ಳಿ

ಪೆಡಿಕ್ಯೂರ್ ಸೇವೆಯಿಂದ ಮನಸ್ಸು ನಿರಾಳವಾಗುವ ಜೊತೆಗೇ ಸ್ವಚ್ಛತೆಯನ್ನೂ ಕಾಪಾಡಲಾಗುವ ಕಾರಣ ಪುರುಷರಿಗೂ ಈ ಸೇವೆ ಕಡ್ಡಾಯ ಅಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಈ ಸೇವೆಯ ಬಳಿಕ ತ್ವಚೆ ಸೌಮ್ಯ, ಆಕರ್ಷಕ ಹಾಗೂ ಆರೋಗ್ಯಕರವಾಗುವ ಜೊತೆಗೇ ವಿಶೇಷವಾಗಿ ಕಾಲು ಬೆರಳಿನ ಉಗುರುಗಳ ಕಾಳಜಿಯನ್ನೂ ಈ ಸೇವೆಯಲ್ಲಿ ವಹಿಸಲಾಗುತ್ತದೆ ಹಾಗೂ ಸಾಮಾನ್ಯವಾಗಿ ಗಮನಕ್ಕೇ ಬಾರದೇ ಹೋಗುವ ಉಗುರುಗಳ ಒಳಮುಖ ಬೆಳವಣಿಗೆಯನ್ನು ಮುಂಚಿತವಾಗಿ ಕಂಡುಹಿಡಿದು ಇದು ಉಲ್ಬಣ ಸ್ಥಿತಿಗೆ ತಲುಪುವುದರಿಂದ ತಪ್ಪಿಸಬಹುದು.

ನಿಮಗೊಪ್ಪುವ ಸುಗಂಧ ದ್ರವ್ಯವನ್ನು ಕಾಳಜಿಯಿಂದ ಆಯ್ಕೆ ಮಾಡಿ

ನಿಮಗೊಪ್ಪುವ ಸುಗಂಧ ದ್ರವ್ಯವನ್ನು ಕಾಳಜಿಯಿಂದ ಆಯ್ಕೆ ಮಾಡಿ

ನಿಮ್ಮ ನೆಚ್ಚಿನ ಸುಗಂಧ ಬೇಸಿಗೆಯಲ್ಲಿ ಬೆವರಿನ ದುರ್ಗಂಧದೊಂದಿಗೆ ಮಿಳಿತಗೊಂಡು ಬೇರೆಯೇ ವಾಸನೆಯನ್ನು ಪ್ರಕಟಿಸಬಹುದು ಹಾಗೂ ಹೆಚ್ಚಿನವರಿಗೆ ಇದು ಇಷ್ಟವಾಗದೇ ಹೋಗಬಹುದು. ಹಾಗಾಗಿ ಬೇಸಿಗೆಯಲ್ಲಿ ಬಳಸುವ ಸುಗಂಧಗಳನ್ನು ಕಾಳಜಿಯಿಂದ ಆಯ್ಕೆ ಮಾಡಿ. ಮಾರುಕಟ್ಟೆಯಲ್ಲಿ ದೊರಕುವ ಹೊಸ ಮಾದರಿಗಳನ್ನು ಯತ್ನಿಸಿ ಹಾಗೂ ಇದರಲ್ಲಿ ಸೂಕ್ತವಾದುದನ್ನು ಖಚಿತಪಡಿಸಿದ ಬಳಿಕವೇ ಹೆಚ್ಚಿನ ಪ್ರಮಾಣದಲ್ಲಿ ಕೊಳ್ಳಿ.

ತಲೆಗೂದಲ ವಿನ್ಯಾಸಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ

ತಲೆಗೂದಲ ವಿನ್ಯಾಸಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ

ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಬೆವರುತ್ತಾರೆ. ಬೆವರಿನ ತೊಂದರೆಯಿಂದ ತಪ್ಪಿಸಿಕೊಳ್ಳಲು ಹೆಚ್ಚಿನವರು ತಲೆಗೂದಲನ್ನು ಅತಿ ಚಿಕ್ಕದಾಗಿ ಕತ್ತರಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಹೀಗೆ ಕತ್ತರಿಸಿಕೊಳ್ಳುವುದರಲ್ಲಿಯೂ ಕಲಾತ್ಮಕತೆ ಕಂಡುಬರುತ್ತಿದ್ದು ಇದರ ಜೊತೆಗೇ ಕೆಲವು ಪ್ರಸಾಧನಗಳನ್ನೂ ಬಳಸಲಾಗುತ್ತದೆ. ಆದರೆ ಈ ಪ್ರಸಾದನಗಳು ಕೂದಲಿಗೆ ಆ ಕ್ಷಣ ಯಾವುದೋ ಒಂದು ಪ್ರಭಾವವನ್ನು ನೀಡಿದರೆ ಇದರ ಪ್ರಭಾವ ಉಡುಗಿದ ಬಳಿಕ ಕೂದಲಿಗೆ ಹಾನಿಯುಂಟುಮಾಡಬಹುದು. ಹಾಗಾಗಿ ಕೂದಲು ಮತ್ತು ನೆತ್ತಿಯ ಚರ್ಮಕ್ಕೆ ಸೂಕ್ತವಾಗುವಂತಹ ಪ್ರಸಾದನಗಳನ್ನೇ ಕಾಳಜಿಯಿಂದ ಆಯ್ಕೆ ಮಾಡಿ. ಸ್ನಾನದಲ್ಲಿ ಸೌಮ್ಯ ಶಾಂಪೂ ಹಾಗೂ ಬಳಿಕ ಸೌಮ್ಯ ಕಂಡೀಶನರ್ ಬಳಸುವುದು ಉತ್ತಮ.

ಬಿಸಿಲಿನಿಂದ ರಕ್ಷಣೆ

ಬಿಸಿಲಿನಿಂದ ರಕ್ಷಣೆ

ಬಿಸಿಲಿಗೆ ಒಡ್ಡಿಕೊಳ್ಳಬೇಕಾದ ಸಂದರ್ಭ ಎದುರಾಗುವ ಮುನ್ನವೇ ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಒಂದನ್ನು ಹಚ್ಚಿಕೊಂಡು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಣೆ ಪಡೆಯಬೇಕು. ಈ ಮೂಲಕ ತ್ವಚೆ ಕಪ್ಪಗಾಗುವುದು ಹಾಗೂ ಕಲೆಗಳು ಮೂಡುವುದನ್ನು ತಪ್ಪಿಸಬಹುದು.

Most Read: ಪುರುಷರು ಸ್ಮಾರ್ಟ್ ಆಗಿ ಕಾಣಲು ಸಿಂಪಲ್ ಆಗಿರುವ ಸ್ಟೈಲ್ ಟಿಪ್ಸ್!

ವಾರಕ್ಕೊಂದು ಬಾರಿ ಸತ್ತ ಜೀವಕೋಶ ನಿವಾರಿಸಿ/ಆಳವಾದ ಸ್ವಚ್ಛತೆ ಮಾಡಿಸಿಕೊಳ್ಳಿ

ವಾರಕ್ಕೊಂದು ಬಾರಿ ಸತ್ತ ಜೀವಕೋಶ ನಿವಾರಿಸಿ/ಆಳವಾದ ಸ್ವಚ್ಛತೆ ಮಾಡಿಸಿಕೊಳ್ಳಿ

ತ್ವಚೆಗೆ ಕೈಗೊಳ್ಳಬೇಕಾದ ಕಾಳಜಿಯಲ್ಲಿ ಮುಖ್ಯವಾದ ಅಂಶವೆಂದರೆ ವಾರಕ್ಕೊಮ್ಮೆ ಸತ್ತ ಜೀವಕೋಶಗಳ ಪದರವನ್ನು ನಿವಾರಿಸುವುದು (exfoliation)ಹಾಗೂ ಚರ್ಮದ ಆಳದಿಂದ ಕಲ್ಮಶಗಳನ್ನು ನಿವಾರಿಸುವುದು. ಈ ಕಾರ್ಯದ ಮೂಲಕ ತ್ವಚೆಯಲ್ಲಿದ್ದ ಎಣ್ಣೆಪಸೆ, ಜಿಡ್ಡು ಹಾಗೂ ಚರ್ಮದ ಸೂಕ್ಷ್ಮರಂಧ್ರಗಳಿಗೆ ನುಗ್ಗಿದ್ದ ಕೊಳೆಯನ್ನು ನಿವಾರಿಸಬಹುದು. ಬೇಸಿಗೆಯ ದಿನಗಳಲ್ಲಿ ಹೀಗೆ ಕೊಳೆ ತುಂಬಿಕೊಳ್ಳುವುದು ಸಾಮಾನ್ಯವಾಗಿದೆ.

ಬೆವರುವುದನ್ನು ತಡೆಗಟ್ಟಿ

ಬೆವರುವುದನ್ನು ತಡೆಗಟ್ಟಿ

ಬೆವರುವುದು ನೈಸರ್ಗಿಕ ಕ್ರಿಯೆಯಾಗಿದ್ದು ಇದನ್ನು ತಡೆಗಟ್ಟುವುದು ಸರಿಯಲ್ಲ. ಆದರೆ ಬೆವರುವಿಕೆಯನ್ನು ಸಮರ್ಥವಾಗಿ ನಿಭಾಯಿಸುವುದು ಜಾಣತನದ ಕ್ರಮವಾಗಿದೆ. ಸಿಂಥೆಟಿಕ್ ಉಡುಪುಗಳ ಬದಲಿಗೆ ಸ್ವಚ್ಛ, ಹತ್ತಿಯ ಬಟ್ಟೆಗಳನ್ನು ತೊಡುವುದು, ಸಡಿಲ ಬಟ್ಟೆಗಳನ್ನು ತೊಡುವುದು, ದಿನವಿಡೀ ಸಾಕಷ್ಟು ನೀರನ್ನು ಕುಡಿಯುವುದು, ಉತ್ತಮ ಗುಣಮಟ್ಟದ ಬೆವರಿನ ದುರ್ಗಂಧ ನಿವಾರಕ ಸುಗಂಧವನ್ನು ಹಚ್ಚಿಕೊಳ್ಳುವುದು ಮೊದಲಾದ ಕ್ರಮಗಳ ಮೂಲಕ ಬೆವರುವುದನ್ನು ಆದಷ್ಟೂ ಕಡಿಮೆಯಾಗಿಸಬಹುದು.

Most Read: ಪುರುಷರಿಗೆ ಬ್ಯೂಟಿ ಟಿಪ್ಸ್: ಕಾಂತಿಯುತ, ಸುಂದರ ತ್ವಚೆಗಾಗಿ ಹೀಗೆ ಮಾಡಿ

 ಶೇವಿಂಗ್ ಗೂ ಮೊದಲು ಮತ್ತು ಬಳಿಕ ಕೈಗೊಳ್ಳಬೇಕಾದ ಕ್ರಮಗಳು

ಶೇವಿಂಗ್ ಗೂ ಮೊದಲು ಮತ್ತು ಬಳಿಕ ಕೈಗೊಳ್ಳಬೇಕಾದ ಕ್ರಮಗಳು

ಬೇಸಿಗೆಯ ದಿನಗಳಲ್ಲಿ ಶೇವಿಂಗ್ ಮಾಡುವ ಮುನ್ನ ಉತ್ತಮ ತೇವಕಾರಕ ಬಳಸಿ ತ್ವಚೆಗೆ ತೇವವನ್ನು ಒದಗಿಸಬೇಕು (ಮಾಯಿಶ್ಚರೈಸಿಂಗ್) ಶೇವಿಂಗ್ ಮುಗಿಸಿದ ಬಳಿಕ ಟೋನರ್ ದ್ರವವನ್ನು ಬಳಸಿ ತ್ವಚೆಯ ಬಿಗಿತನವನ್ನು ಹೆಚ್ಚಿಸಬೇಕು. ಆ ಬಳಿಕ ಶೇವಿಂಗ್ ನ ಉರಿಯನ್ನು ತಪ್ಪಿಸಲು ಹಾಗೂ ತೇವವನ್ನು ಒದಗಿಸಲು ಉತ್ತಮ ಗುಣಮಟ್ಟದ ಆಫ್ಟರ್ ಶೇವ್ ಲೋಶನ್ ಅಥವಾ ಬಾಮ್ ಉಪಯೋಗಿಸಬೇಕು.

ಸಾಕಷ್ಟು ನೀರು ಕುಡಿಯುತ್ತಿರಿ

ಸಾಕಷ್ಟು ನೀರು ಕುಡಿಯುತ್ತಿರಿ

ಕೂದಲು ಮತ್ತು ತ್ವಚೆ ಆರೋಗ್ಯಕರವಾಗಿರಬೇಕೆಂದರೆ ದೇಹದಲ್ಲಿ ಸಾಕಷ್ಟು ನೀರಿನ ಪೂರೈಕೆಯನ್ನು ಒದಗಿಸಬೇಕು. ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ಪೂರೈಕೆ ಸತತವಾಗಿರಬೇಕು. ಈ ಮೂಲಕ ತ್ವಚೆ ಒಣಗುವುದು ಹಾಗೂ ಮೊಡವೆಗಳು ಏಳುವುದು ಎಂಬ ಬೇಸಿಗೆಯಲ್ಲಿ ಕಾಣಬರುವ ಎರಡು ದೊಡ್ಡ ತೊಂದರೆಯಿಂದ ರಕ್ಷಣೆ ಪಡೆಯಬಹುದು.

ನಿಯಮಿತವಾಗಿ ಶಾಂಪೂ ಬಳಸಿ

ನಿಯಮಿತವಾಗಿ ಶಾಂಪೂ ಬಳಸಿ

ಒಂದು ವೇಳೆ ನಿಮ್ಮ ತಲೆಗೂದಲು ವಿಪರೀತ ಎಣ್ಣೆಯಂಶ ಹೊಂದಿದ್ದರೆ ದಿನ ಬಿಟ್ಟು ದಿನ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಬೇಕು. ಉಳಿದಂತೆ ವಾರಕ್ಕೆರಡು ಅಥವಾ ಮೂರು ಬಾರಿ ಶಾಂಪೂ ಬಳಸಿ ಸ್ನಾನ ಮಾಡುವ ಮೂಲಕ ಕೂದಲು ಆರೋಗ್ಯಕರವಾಗಿದ್ದು ಎಣ್ಣೆಯ ಅಂಶ ಮತ್ತು ಕೊಳೆಗಳಿಂದ ಮುಕ್ತವಾಗಿರುತ್ತದೆ.

English summary

Summer beauty tips for men

Grooming is essential not just for women but for men too. Regular pedicures, weekly deep cleansing sessions and sweat prevention is a must, say experts. Ragini Mehra, Founder, Beauty Source and Milan Sharma, Co-founder, Magnifique, have suggested tips:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X