For Quick Alerts
ALLOW NOTIFICATIONS  
For Daily Alerts

ಮೊಡವೆ ನಿವಾರಣೆ ಮಾಡಲು ಪ್ರೋಬಯಾಟಿಕ್ ಆಹಾರಗಳ ಮೊರೆ ಹೋಗಿ…

|

ಮೊಡವೆ ಎನ್ನುವುದು ಪುರುಷರು ಹಾಗೂ ಮಹಿಳೆಯರಲ್ಲಿ ಸಾಮಾನ್ಯ ವಿಚಾರ. ಇದು ಬಂದರೆ ಅದರಿಂದ ಆಗುವಂತಹ ಕಿರಿಕಿರಿ ತಪ್ಪಿಸುವುದು ತುಂಬಾ ಕಷ್ಟ. ಅದರ ನೋವು, ಕಲೆ ಹಾಗೂ ಅದರಿಂದ ಆಗುವ ಉರಿಯೂತವು ಸಮಸ್ಯೆ ಉಂಟು ಮಾಡುವುದು. ಇದು ಸೌಂದರ್ಯ ಕೆಡಿಸುವ ಜತೆಗೆ ಮುಖದ ಮೇಲೆ ಕೆಲವು ಶಾಶ್ವತ ಕಲೆಗಳನ್ನು ಉಂಟು ಮಾಡುವುದು. ಇದಕ್ಕೆ ಪರಿಹಾರಗಳು ಅನೇಕ ಇದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಕ್ರೀಮ್ ಹಾಗೂ ಲೋಷನ್ ಗಳನ್ನು ಬಳಸಿಕೊಂಡು ಮೊಡವೆ ನಿವಾರಣೆ ಮಾಡಲು ಪ್ರಯತ್ನಿಸಿ ನೀವು ಕಂಗೆಟ್ಟು ಹೋಗಿರಬಹುದು.

ಪ್ರೋಬಯಾಟಿಕ್ ಗಳ ಸೇವನೆ ಮಾಡಿಕೊಂಡು ಮೊಡವೆ ನಿವಾರಣೆ ಮಾಡಲು ಯಾವತ್ತಾದರೂ ನೀವು ಪ್ರಯತ್ನಿಸಿದ್ದೀರಾ? ಬ್ಯಾಕ್ಟೀರಿಯಾವು ನಿಮ್ಮ ದೇಹಕ್ಕೆ ತುಂಬಾ ಕೆಟ್ಟದು ಎಂದು ಭಾವಿಸಿರಬಹುದು. ಆದರೆ ಕೆಲವೊಂದು ಬ್ಯಾಕ್ಟೀರಿಯಾವು ದೇಹಕ್ಕೆ ಒಳ್ಳೆಯದು ಕೂಡ. ಕೆಲವು ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿ ಲಾಭಕಾರಿ ಆಗಿ ಕೆಲಸ ಮಾಡುವುದು. ಹೊಟ್ಟೆ, ಆರೋಗ್ಯ, ಚರ್ಮ ಮತ್ತು ಮೊಡವೆಗಳಿಗೆ ಈ ಬ್ಯಾಕ್ಟೀರಿಯಾಗಳು ತುಂಬಾ ಒಳ್ಳೆಯದು. ಮೊಡವೆಗಳನ್ನು ಪ್ರೋಬಯಾಟಿಕ್ ಬಳಸಿಕೊಂಡು ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ...

ಮೊಸರು

ಮೊಸರು

ಉನ್ನತ ಮಟ್ಟದ ಪ್ರೋಬಯಾಟಿಕ್ ಅಥವಾ ಒಳ್ಳೆಯ ಬ್ಯಾಕ್ಟೀರಿಯಾ ಬಗ್ಗೆ ನಾವು ಆಲೋಚನೆ ಮಾಡುವ ವೇಳೆ ಮೊದಲಿಗೆ ಗಮನಕ್ಕೆ ಬರುವುದು ಮೊಸರು. ಮೊಸರಿನಲ್ಲಿ ಇರುವಂತಹ ಬ್ಯಾಕ್ಟೀರಿಯಾವು ನಮ್ಮಆರೋಗ್ಯವನ್ನು ಸುಧಾರಣೆ ಮಾಡುವುದು. ಹಾಲನ್ನು ಹುದುಗು ಬರುವಂತೆ ಮಾಡಿದ ಬಳಿಕ ಮೊಸರು ತಯಾರು ಮಾಡುವ ಪರಿಣಾಮವಾಗಿ ಇದು ಬ್ಯಾಕ್ಟೀರಿಯಾ ಸ್ನೇಹಿಯಾಗಿ ಇರುವುದು. ಮುಖ್ಯವಾಗಿ ಲ್ಯಾಕ್ಟಿಕ್ ಆಮ್ಲ ಬ್ಯಾಕ್ಟೀರಿಯಾ ಮತ್ತು ಬಿಫಿಡೊಬ್ಯಾಕ್ಟೀರಿಯಾವು ಇರುವುದು. ಮೊಸರನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಮೂಳೆಯ ಆರೋಗ್ಯ ಕಾಪಾಡುವುದು ಮತ್ತು ಅಧಿಕ ರಕ್ತದೊತ್ತಡ ಇರುವಂತಹವರಿಗೆ ಇದು ತುಂಬಾ ಲಾಭಕಾರಿ ಆಗಿ ಪರಿಣಮಿಸಿದೆ.

ಉಪ್ಪಿನಕಾಯಿ

ಉಪ್ಪಿನಕಾಯಿ

ಉಪ್ಪಿನಕಾಯಿ ಇಲ್ಲದೆ ಹಿಂದಿನವರು ಊಟವೇ ಮಾಡುತ್ತಿರಲಿಲ್ಲ. ಆದರೆ ಇಂದು ಉಪ್ಪಿನಕಾಯಿ ಎಂದರೆ ಅದನ್ನು ಆರೋಗ್ಯಕ್ಕೆ ತುಂಬಾ ಹಾನಿಗೀಡು ಮಾಡುವಂತಹ ಖಾದ್ಯವೆಂದು ಪರಿಣಗಣಿಸಲಾಗಿದೆ. ಆದರೆ ಹುದುಗು ಬರಿಸಿದ ತರಕಾರಿ ಅಥವಾ ಉಪ್ಪಿನಕಾಯಿಯಲ್ಲಿ ಪ್ರೋಬಯಾಟಿಕ್ ಗಳು ಇರುವುದು. ಸೌತೆಕಾಯಿ, ಕ್ಯಾಬೇಜ್, ಬೀಟ್ ರೂಟ್, ಕ್ಯಾರೇಟ್, ಈರುಳ್ಳಿ ಇತ್ಯಾದಿಗಳ ಉಪ್ಪಿನಕಾಯಿಯಲ್ಲಿ ಪ್ರೋಬಯಾಟಿಕ್ ಗಳು ಇದೆ. ಇದು ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡುವುದು. ಅಧಿಕ ಸೋಡಿಯಂ ಅಂಶವು ಉಪ್ಪಿನಕಾಯಿಯಲ್ಲಿ ಇರುವ ಕಾರಣದಿಂದಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುವಂತಹ ಜನರು ಉಪ್ಪಿನಕಾಯಿ ಸೇವನೆ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ವಿನೇಗರ್ ಹಾಕಿ ಮಾಡಲ್ಪಟ್ಟ ಉಪ್ಪಿನಕಾಯಿಯಲ್ಲಿ ಪ್ರೋಬಯಾಟಿಕ್ ಗಳು ಇರುವುದಿಲ್ಲ.

ಮಜ್ಜಿಗೆ

ಮಜ್ಜಿಗೆ

ಮೊಸರಿನಿಂದ ಮಾಡಲ್ಪಡುವಂತಹ ಮಜ್ಜಿಗೆ ಕೂಡ ಒಳ್ಳೆಯ ಪ್ರೋಬಯಾಟಿಕ್ ಗಳನ್ನು ಹೊಂದಿದೆ. ಎರಡು ರೀತಿಯ ಮಜ್ಜಿಗೆ ನಮಗೆ ಸಿಗುವುದು. ಒಂದು ಸಾಂಪ್ರದಾಯಿಕ ಮಜ್ಜಿಗೆ ಸಂಸ್ಕೃರಿತ ಮಜ್ಜಿಗೆ ಸಾಂಪ್ರದಾಯಿಕ ಮಜ್ಜಿಗೆಯಲ್ಲಿ ಉನ್ನತ ಮಟ್ಟದ ಪ್ರೋಬಯಾಟಿಕ್ ಗಳು ಇವೆ. ಅದೇ ಸಂಸ್ಕೃರಿತ ಮಜ್ಜಿಗೆಯಲ್ಲಿ ಒಳ್ಳೆಯ ಪ್ರೋಬಯಾಟಿಕ್ ಗಳು ಇರುವುದಿಲ್ಲ. ಪ್ರೋಬಯಾಟಿಕ್ ಗಳಿಂದ ಸಮೃದ್ಧವಾಗಿರುವಂತಹ ಮಜ್ಜಿಗೆಯು ಕಡಿಮೆ ಕೊಬ್ಬು ಹಾಗೂ ಕ್ಯಾಲರಿ ಹೊಂದಿದೆ. ಇದರಲ್ಲಿ ಹಲವಾರು ರೀತಿಯ ಪ್ರಮುಖ ವಿಟಮಿನ್ ಹಾಗೂ ಖನಿಜಾಂಸಗಳಾಗಿರುವಂತಹ ವಿಟಮಿನ್ ಬಿ12, ರಿಬೊಫ್ಲಾವಿನ್, ಕ್ಯಾಲ್ಸಿಯಂ ಮತ್ತು ಪೋಸ್ಪರಸ್ ಇದೆ.

ಹಸಿ ಚೀಸ್

ಹಸಿ ಚೀಸ್

ಪ್ರೋಬಯಾಟಿಕ್ ಹೊಂದಿರುವಂತಹ ಮತ್ತೊಂದು ಹಾಲಿನ ಉತ್ಪನ್ನವೇ ಚೀಸ್. ಹೆಚ್ಚಿನ ಚೀಸ್ ನ್ನು ಹುದುಗುಬರಿಸಲಾಗುತ್ತದೆ. ಆದರೆ ಎಲ್ಲವುಗಳಲ್ಲಿ ಪ್ರೋಬಯಾಟಿಕ್ ಇರಬೇಕು ಎಂದೇನಿಲ್ಲ. ದನದ ಹಾಲು ಮತ್ತು ಮೇಕೆ ಹಾಲಿನಿಂದ ಮಾಡಿರುವಂತಹ ಚೀಸ್ ನಲ್ಲಿ ಉನ್ನತ ಮಟ್ಟದ ಪ್ರೋಬಯಾಟಿಕ್ ಗಳು ಇವೆ. ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ವಿಟಮಿನ್ ಬಿ12, ಪೋಸ್ಪರಸ್ ಮತ್ತು ಸೆಲೆನಿಯಂ ಇದೆ. ನೀವು ಚೀಸ್ ಖರೀದಿಸುವ ವೇಳೆ ಗಮನಿಸಬೇಕಾದ ವಿಚಾರವೆಂದರೆ ಇದನ್ನು ಪ್ಯಾಶ್ಚರೀಕರಿಸಿರ ಬಾರದು ಮತ್ತು ಕಚ್ಚಾ ಚೀಸ್ ನಲ್ಲಿ ಮಾತ್ರ ಪ್ರೋಬಯಾಟಿಕ್ ಗಳು ಇರುವುದು.

 ಕೊಂಬುಚಾ

ಕೊಂಬುಚಾ

ಹುದುಗುಬರಿಸಿರುವಂತಹ ಬ್ಲ್ಯಾಕ್ ಅಥವಾ ಗ್ರೀನ್ ಟೀಯನ್ನು ಕೊಂಬುಚಾ ಎಂದು ಕರೆಯಲಾಗುತ್ತದೆ. ಇದು ಮೊಡವೆ ನಿವಾರಣೆಗೆ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಕೊಂಬುಚಾ ಇಂದಿನ ದಿನಗಳಲ್ಲಿ ತುಂಬಾ ಫೇವರಿಟ್ ಆಗಿದೆ. ಯಾಕೆಂದರೆ ಇದು ಜೀರ್ಣಕ್ರಿಯೆಗೆ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು ಮತ್ತು ಇದು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದು. ಇದನ್ನು ನೀವು ಮನೆಯಲ್ಲೇ ತಯಾರಿಸಿಕೊಳ್ಳ ಬಹುದು. ಕೊಂಬುಚಾವನ್ನು ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಜತೆಗೆ ಸೇರಿಸಿಕೊಂಡು ಹುದುಗುಬರಿಸಲಾಗುತ್ತದೆ. ಇದರಲ್ಲಿ ಇರುವಂತಹ ಪ್ರೋಬಯಾಟಿಕ್ ಗುಣಗಳಿಂದಾಗಿ ಇದು ಕೆಲವೊಂದು ಆರೋಗ್ಯ ಗುಣಗಳನ್ನು ಕೂಡ ಹೊಂದಿದೆ.

English summary

Probiotic Foods for Acne

Acne is something from which both man and woman are tired of. From expensive face products to avoiding oily and fatty food, you might be tried of these remedies. Stubborn acne never leaves you alone. Do you know acne can be treated if you starts consuming probiotics? You might be in a huge misconception that bacteria is bad for your health but not everything which you think is bad for you.
X
Desktop Bottom Promotion