For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೈಕೆಗೆ ಮಣ್ಣಿನ ಫೇಸ್ ಮಾಸ್ಕ್ - ಪ್ರಯತ್ನಿಸಲೇಬೇಕಾದ ಐದು ವಿಧಗಳು

|

ತ್ವಚೆಯ ಆರೈಕೆಗೆ ನಿಸರ್ಗ ನೀಡಿರುವ ಒಂದು ಕೊಡುಗೆ ಎಂದರೆ ಮಣ್ಣು. ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಸಸ್ಯಗಳ ಬೆಳವಣಿಗೆಗೆ ನೆರವಾಗುವಂತೆಯೇ ತ್ವಚೆಯ ಕಲ್ಮಶಗಳನ್ನು ನಿವಾರಿಸಿ ತಾಜಾತನವನ್ನು ಇನ್ನಿಲ್ಲದಂತೆ ನೀಡುತ್ತವೆ. ಸೌಂದರ್ಯವೃದ್ಧಿ ಚಿಕಿತ್ಸೆಗಳಲ್ಲಿಯೂ ಮಣ್ಣನ್ನು ಉಪಯೋಗಿಸಿ ತ್ವಚೆಯಲ್ಲಿರುವ ನೈಸರ್ಗಿಕ ಕೊಲ್ಯಾಜೆನ್ ನಾರುಗಳನ್ನು ಬಳಪಡಿಸಲಾಗುತ್ತದೆ.

ತನ್ಮೂಲಕ ತ್ವಚೆಯ ಸೆಳೆತ ಮತ್ತು ಆರೋಗ್ಯ ಉತ್ತಮಗೊಂಡು ಸೌಂದರ್ಯ ವೃದ್ದಿಸುತ್ತದೆ. ನೈಸರ್ಗಿಕ ಮಣ್ಣಿನಲ್ಲಿರುವ ಹೀರಿಕೊಳ್ಳುವ ಗುಣ ತ್ವಚೆಯ ಆಳದಲ್ಲಿರುವ ಕಲ್ಮಶ ಮತ್ತು ಕೊಳೆಯನ್ನು ಹೀರಿ ತೆಗೆಯುತ್ತದೆ. ಅಲ್ಲದೇ ಮಣ್ಣಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲವಾದುದರಿಂದ ಇವುಗಳ ಧಾಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಮಣ್ಣಿನ ಗುಣಗಳನ್ನು ತ್ವಚೆಯ ಆರೈಕೆ ಹಾಗೂ ಸೌಂದರ್ಯವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ....

Mud Face Masks

ಮೊಡವೆಗಳನ್ನು ನಿವಾರಿಸಲು ಜ್ವಾಲಾಮುಖಿಯ ಮಣ್ಣು (Volcanic Mud)

ಜ್ವಾಲಾಮುಖಿಯ ಪಕ್ಕದಿಂದ ಸಂಗ್ರಹಿಸಲಾದ ಮಣ್ಣು ವಾಸ್ತವವಾಗಿ ಭೂಮಿಯಾಳದ ಅತಿಯಾದ ಬಿಸಿಯಿಂದ ಹೊರದಬ್ಬಲ್ಪಟ್ಟ ಲಾವಾ ಕ್ರಮೇಣ ತಣ್ಣಗಾಗಿದ್ದು ಅತೀವ ಬಿಸಿಯಿಂದಾಗಿ ಇದರ ಒಳಗಿನ ಅಂಶವೆಲ್ಲಾ ಒಣಗಿ ಸೂಕ್ಷ್ಮ ಸ್ಪಂಜಿನಂತಾಗಿರುತ್ತದೆ. ಈ ಸ್ಪಂಜಿನಂತಹ ಮಣ್ಣು ತ್ವಚೆಯ ಆಳದಲ್ಲಿರುವ ಕೊಳೆ, ಕಲ್ಮಶ ಹಾಗೂ ಹೆಚ್ಚುವರಿ ತೈಲವನ್ನು ಹೀರಿಕೊಳ್ಳುತ್ತದೆ. ಇವೇ ಮೊಡವೆಗಳಾಗಲು ಮೂಲ ಕಾರಣವಾಗಿದ್ದು ಮೂಲವೇ ಇಲ್ಲದಿದ್ದ ಬಳಿಕ ಮೊಡವೆಗಳು ಮೂಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಈ ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣ ಚರ್ಮದಾಳದಲ್ಲಿ ಮೊಡವೆಗಳಾಗಲು ಕಾರಣವಾಗಬಹುದಾಗಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ತ್ವಚೆ ಆರೋಗ್ಯಕರವಾಗಿ ಮೊಡವೆ ಅಥವಾ ಕಲೆಗಳಿಲ್ಲದೇ ಕಂಗೊಳಿಸುತ್ತದೆ. ಸೈನರ್ಗಿಕ ಜೇನಿನಲ್ಲಿಯೂ ತ್ವಚೆಗೆ ಪೋಷಣೆ ನೀಡುವ ಗುಣವಿದ್ದು ತ್ವಚೆಯನ್ನು ಮೃದು ಹಾಗೂ ಸೌಮ್ಯವಾಗಿಸಲು ನೆರವಾಗುತ್ತದೆ. ಲ್ಯಾವೆಂಡರ್ ಅವಶ್ಯಕ ತೈಲದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ ಹಾಗೂ ಇವೆಲ್ಲವೂ ಆರೋಗ್ಯಕರ, ಮೊಡವೆಯಿಲ್ಲದ ತ್ವಚೆ ಪಡೆಯಲು ನೆರವಾಗುತ್ತವೆ.

Most Read: ಮನೆಯಲ್ಲಿಯೇ ಸರಳವಾಗಿ ಮಾಡಬಹುದಾದ-ಕಡಿಮೆ ಖರ್ಚಿನ ಬ್ಯೂಟಿ ಟಿಪ್ಸ್!

ಅಗತ್ಯವಿರುವ ಸಾಮಾಗ್ರಿಗಳು

*½ ಚಿಕ್ಕಚಮಚ ಜ್ವಾಲಾಮುಖಿಯ ಮಣ್ಣು
*ಎರಡು ಚಿಕ್ಕ ಚಮಚ ಜೇನು
*ಎರಡರಿಂದ ಮೂರು ತೊಟ್ಟು ಲ್ಯಾವೆಂಡರ್ ಅವಶ್ಯಕ ತೈಲ

ಬಳಸುವ ವಿಧಾನ

*ಒಂದು ಬೋಗುಣಿಯಲ್ಲಿ ಮಣ್ಣು ಹಾಕಿ ಜೇನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ
*ಇದಕ್ಕೆ ಲ್ಯಾವೆಂಡರ್ ತೈಲವನ್ನು ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ.
*ಈ ಲೇಪನವನ್ನು ಈಗತಾನೇ ತೊಳೆದು ಒರೆಸಿಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಂಡು ಹದಿನೈದು ನಿಮಿಷ ಹಾಗೇ ಬಿಡಿ.
*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.
*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಿ.

ಬ್ಲಾಕ್ ಹೆಡ್ (ಕಪ್ಪು ತಲೆ) ನಿವಾರಣೆಗೆ

*ಈ ಮಣ್ಣು ತ್ವಚೆಯ ಮೇಲೆ ರಕ್ಷಣಾ ಪದರದಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ತ್ವಚೆ ಶೀಘ್ರವೇ ಚೇತರಿಸಿಕೊಳ್ಳಲು ನೆರವಾಗುತ್ತದೆ. ಚರ್ಮದ ಹೊರಪದರದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು ಲಿಂಬೆ ಅತ್ಯುತ್ತಮವಾದ ನೈಸರ್ಗಿಕ ಸಂಕೋಚಕ ವಸ್ತುವಾಗಿದೆ. ಈ ಗುಣ ಕಪ್ಪು ತಲೆಗಳನ್ನು ಬುಡಸಹಿತ ನಿವಾರಿಸಲು ನೆರವಾಗುತ್ತದೆ.

ಅವಶ್ಯವಿರುವ ಸಾಮಾಗ್ರಿಗಳು

  • ಮೂರು ದೊಡ್ಡ ಚಮಚ ಜ್ವಾಲಾಮುಖಿಯ ಮಣ್ಣು
  • ಒಂದು ಚಿಕ್ಕ ಚಮಚ ಲಿಂಬೆರಸ

ವಿಧಾನ:

  • ಒಂದು ಬೋಗುಣಿಯಲ್ಲಿ ಮಣ್ಣು ಮತ್ತು ಲಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನೆಯ ಲೇಪವಾಗಿಸಿ.
  • ಈ ಲೇಪವನ್ನು ಹಚ್ಚಿಕೊಳ್ಳುವ ಮುನ್ನ ಉಗುರುಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆದುಕೊಂಡು ದಪ್ಪಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.
  • ಬ್ಲಾಕ್ ಹೆಡ್ ಗಳು ಇರುವ ಭಾಗದ ಮೇಲೆ ಈ ಲೇಪವನ್ನು ದಪ್ಪನಾಗಿ ಹಚ್ಚಿ.
  • ಚೆನ್ನಾಗಿ ಒಣಗುವವರೆಗೂ ಹಾಗೇ ಬಿಡಿ.
  • ಬಳಿಕ ಉಗುರುಬೆಚ್ಚನೆ ನೀರಿನಿಂದ ತೋಯಿಸಿ ನಿಧಾನವಾಗಿ, ನಯವಾಗಿ ಉಜ್ಜುತ್ತಾ ಈ ಲೇಪವನ್ನು ನಿವಾರಿಸಿ.
  • ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಈ ಕಾರ್ಯವನ್ನು ನಿರ್ವಹಿಸಿ.

ತ್ವಚೆಯನ್ನು ಆಳದಿಂದ ಸ್ವಚ್ಛಗೊಳಿಸಲು: ಕಪ್ಪು ಮಣ್ಣು

ಕಪ್ಪು ಮಣ್ಣಿನಲ್ಲಿ ಪ್ರಬಲ ಉರಿಯೂತ ನಿವಾರಕ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳಿದ್ದು ತ್ವಚೆಯನ್ನು ಆಳದಿಂದ ಸ್ವಚ್ಛಗೊಳಿಸಲು ಸೂಕ್ತವಾಗಿದೆ. ಈ ಮೂಲಕ ತ್ವಚೆಗೆ ಎದುರಾಗಬಹುದಾಗಿದ್ದ ಹಲವಾರು ತೊಂದರಗಳಿಂದ ರಕ್ಷಣೆ ಒದಗಿಸುತ್ತದೆ. ಸೌತೆಕಾಯಿ ತ್ವಚೆಗೆ ತಣುಪು ಮತ್ತು ನಿರಾಳತೆ ನೀಡುವ ಜೊತೆಗೇ ಪ್ರಬಲ ಸ್ವಚ್ಛಕಾರಕವೂ ಆಗಿದ್ದು ತ್ವಚೆಯ ಆಳದಲ್ಲಿದ್ದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

  • ಒಂದು ಚಿಕ್ಕ ಚಮಚ ಕಪ್ಪು ಮಣ್ಣು
  • ಒಂದು ದೊಡ್ಡ ಚಮಚ ಸೌತೆಕಾಯಿಯ ತಿರುಳನ್ನು ಚೆನ್ನಾಗಿ ಗೊಟಾಯಿಸಿದ ಲೇಪ

ವಿಧಾನ

  • ಒಂದು ಬೋಗುಣಿಯಲ್ಲಿ ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ
  • ಈಗತಾನೇ ತೊಳೆದುಕೊಂಡ ಮುಖಕ್ಕೆ ಈ ಲೇಪವನ್ನು ತೆಳುವಾಗಿ ಹಚ್ಚಿ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಒಂದರಿಂದ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ.

Most Read: ಕರಿಬೇವಿನ ಸೊಪ್ಪಿನಲ್ಲಿವೆ ಕೂದಲಿನ ಆರೋಗ್ಯ ಕಾಪಾಡುವ ಚಮತ್ಕಾರಿ ಗುಣಗಳು !!! ಬಳಸುವ ವಿಧಾನಗಳನ್ನು ತಿಳಿಯಿರಿ

ಕಲ್ಮಶ ನಿವಾರಣೆಗೆ-Alpine Moor Mud

ಅಲ್ಪೈನ್ ಮೂರ್ ಎಂಬ ಹೆಸರಿನಲ್ಲಿ ಸಿಗುವ ಮಣ್ಣು ಚರ್ಮದಲ್ಲಿ ಕೊಲ್ಯಾಜೆನ್ ಉತ್ಪಾದನೆಯ ಗತಿಯನ್ನು ವೃದ್ದಿಸುತ್ತದೆ ಹಾಗೂ ಚರ್ಮದ ಕಲ್ಮಶಗಳನ್ನು ನಿವಾರಿಸಿ ಹೊಸತನವನ್ನು ನೀಡಲು ನೆರವಾಗುತ್ತದೆ. ಕಹಿಬೇಬಿನ ಎಲೆಗಳಲ್ಲಿ ಅತ್ಯುತ್ತಮವಾದ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ ಹಾಗೂ ಈ ಗುಣ ತ್ವಚೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಸ್ವಚ್ಛಗೊಳಿಸಲು ನೆರವಾಗುತ್ತದೆ. ಕೊಬ್ಬರಿ ಎಣ್ಣೆ ತ್ವಚೆಗೆ ತಂಪನ್ನೆರೆಯುವ ಜೊತೆಗೇ ಸೂಕ್ಷ್ಮರಂಧ್ರಗಳ ಮೂಲಕ ಆರ್ದ್ರತೆಯನ್ನು ನೀಡುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

  • ಒಂದು ಚಿಕ್ಕ ಚಮಚ ಆಲ್ಪೈನ್ ಮೂರ್ ಮಣ್ಣು
  • ಅರ್ಧ ಚಿಕ್ಕ ಚಮಚ ಬೇವಿನ ಪುಡಿ
  • ಎರಡು ಚಿಕ್ಕ ಚಮಚ ಕೊಬ್ಬರಿ ಎಣ್ಣೆ
  • ಒಂದು ದೊಡ್ಡ ಚಮಚ ಗುಲಾಬಿ ನೀರು

ವಿಧಾನ

  • ಒಂದು ಬೋಗುಣಿಯಲ್ಲಿ ಮಣ್ಣು ಮತ್ತು ಬೇವಿನ ಪುಡಿ ಹಾಕಿ ಬೆರೆಸಿ. ಬಳಿಕ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗುಲಾಬಿ ನೀರನ್ನು ಹಾಕಿ ಲೇಪವನ್ನು ಸಿದ್ಧಪಡಿಸಿ.

ಬಳಕೆಯ ವಿಧಾನ

  • ಮೊದಲು ಮುಖದ ತ್ವಚೆಯನ್ನು ಕೊಂಚ ನೀರಿನಿಂದ ತೇವಗೊಳಿಸಿ.
  • ಮುಖದ ಎಲ್ಲಾ ಭಾಗಗಳಿಗೆ ಆವರಿಸುವಂತೆ ಲೇಪವನ್ನು ತೆಳುವಾಗಿ ಲೇಪಿಸಿ
  • ಸುಮಾರು ಹತ್ತು ನಿಮಿಷಗಳವರೆಗೆ ಹಾಗೇ ಒಣಗಲು ಬಿಡಿ.
  • ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
  • ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿ.

ಒಣಚರ್ಮಕ್ಕಾಗಿ ಕಪ್ಪು ಮಣ್ಣು

ಕಪ್ಪು ಮಣ್ಣು ತ್ವಚೆಗೆ ಸೌಮ್ಯವಾಗಿದ್ದು ತ್ವಚೆಗೆ ಆರ್ದ್ರತೆಯನ್ನು ಒದಗಿಸುವ ಮೂಲಕ ಚರ್ಮಕ್ಕೆ ಆರೈಕೆ ನೀಡುತ್ತದೆ ಹಾಗೂ ಸೂರ್ಯನ ಪ್ರಖರ ಕಿರಣಗಳಿಂದ ತ್ವಚೆಗೆ ಹಾನಿಯಾಗುವುದನ್ನು ತಪ್ಪಿಸುತ್ತದೆ. ಬಾದಾಮಿ ಎಣ್ಣೆ ನೈಸರ್ಗಿಕ ಸೌಮ್ಯಕಾರಕ ಹಾಗೂ ಆಳಕ್ಕೆ ಆರ್ದ್ರತೆಯನ್ನು ಒದಗಿಸುವ ಪ್ರಸಾದನವಾಗಿದೆ. ಟೀ ಟ್ರೀ ಎಣ್ಣೆ ಅತ್ಯಂತ ಪ್ರಬಲ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಆರೋಗ್ಯಕ ಮತ್ತು ಪೋಷಣೆ ಪಡೆದ ತ್ವಚೆಯನ್ನು ಹೊಂದಲು ನೆರವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

  • ಅರ್ಧ ಚಿಕ್ಕ ಚಮಚ ಕಪ್ಪು ಮಣ್ಣು
  • ಒಂದು ಚಿಕ್ಕ ಚಮಚ ಬಾದಾಮಿ ಎಣ್ಣೆ
  • ಮೂರರಿಂದ ನಾಲ್ಕು ತೊಟ್ಟು ಟೀ ಟ್ರೀ ಎಣ್ಣೆ

ವಿಧಾನ

  • ಒಂದು ಬೋಗುಣಿಯಲ್ಲಿ ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಈ ಲೇಪನವನ್ನು ಮುಖದ ಮೇಲೆ ತೆಳುವಾಗಿ ಹರಡಿ ಹತ್ತು ನಿಮಿಷ ಒಣಗಲು ಬಿಡಿ.
  • ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
  • ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ.
English summary

Must try Mud Face Masks To Tackle Various Skin Issues

Mud face masks are an amazing way to pamper your skin. Often used in cosmetic treatments, topical application of natural muds enhance the collagen fibres in your skin and thus, is a great way to improve the appearance and health of your skin. Natural clays, when used with ingredients like honey, lemon, cucumber etc., help to tackle different skin issues. Here's how!
X
Desktop Bottom Promotion