For Quick Alerts
ALLOW NOTIFICATIONS  
For Daily Alerts

ಮೊಡವೆಯ ಸಮಸ್ಯೆ ನಿವಾರಣೆಗೆ ಕೂಲ್ ಕೂಲ್ ಐಸ್ ಚಿಕಿತ್ಸೆ!

|

ಮೊಡವೆ ಮುಖದ ಮೇಲೆ ಕಾಣಿಸಿಕೊಂಡರೆ ಆಗ ಇದು ಸೌಂದರ್ಯವನ್ನು ಕೆಡಿಸುವುದು ಮಾತ್ರವಲ್ಲದೆ, ನೋವು, ಕಿರಿಕಿರಿ ಉಂಟು ಮಾಡುವುದು. ಇಂತಹ ಮೊಡವೆಗಳ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್ ಗಳು ಹಾಗೂ ಮನೆಮದ್ದುಗಳನ್ನು ಬಳಸಿಕೊಳ್ಳಬಹುದು. ಆದರೆ ಹೆಚ್ಚಾಗಿ ಕ್ರೀಮ್ ಗಳಲ್ಲಿ ರಾಸಾಯನಿಕವು ಅಧಿಕವಾಗಿರುವುದು.

Ice Treatment for cure pimples

ಮನೆಮದ್ದುಗಳು ಫಲಿತಾಂಶ ನೀಡುವುದು ಸ್ವಲ್ಪ ನಿಧಾನವಾದರೂ ಇದು ತುಂಬಾ ಸುರಕ್ಷಿತ ಎನ್ನಬಹುದು. ಮೊಡವೆ ಮುಖದ ಮೇಲಿಂದ ನಿವಾರಣೆ ಆದರೂ ಅದರಿಂದ ಕಲೆಗಳು ಕೂಡ ಮೂಡುವುದು. ಇದರಿಂದಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ನೈಸರ್ಗಿಕ ಔಷಧಿಗಳ ಬಗ್ಗೆ ಹೆಚ್ಚಿನವರು ಗಮನಹರಿಸುವರು. ಇದು ಜನಪ್ರಿಯತೆಯನ್ನು ಕೂಡ ಪಡೆದುಕೊಳ್ಳುತ್ತಿದೆ. ಮೊಡವೆ ನಿವಾರಣೆ ಮಾಡಲು ಇಂತಹ ಒಂದು ಚಿಕಿತ್ಸೆಯೆಂದರೆ ಅದು ಐಸ್ ಅಥವಾ ಮಂಜುಗಡ್ಡೆ. ಐಸ್ ಬಳಸಿಕೊಂಡು ಮೊಡವೆಯನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದು.

ಇದನ್ನು ಬಳಸುವುದು ಹೇಗೆ?

ಇದನ್ನು ಬಳಸುವುದು ಹೇಗೆ?

ಮೊಡವೆಗಳಿಗೆ ಐಸ್ ಬಳಸುವುದು ತುಂಬಾ ಸರಳ ಹಾಗೂ ನೇರವಾದ ಪ್ರಕ್ರಿಯೆ. ಆದರೆ ಚರ್ಮಕ್ಕೆ ಐಸ್ ಬಳಸುವ ಮೊದಲು ಕೆಲವೊಂದು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಬೇರೆ ಯಾವುದೇ ರೀತಿಯ ಮೊಡವೆ ಕ್ರೀಮ್ ಗಳನ್ನು ಬಳಸುವ ಮೊದಲು ನೀವು ಅನುಸರಿಸುವಂತಹ ಕ್ರಮಗಳನ್ನು ಇಲ್ಲೂ ಅನುಸರಿಸಿಕೊಂಡು ಹೋಗಬೇಕು.

Most Read: ಬ್ಯೂಟಿ ಟಿಪ್ಸ್: ಮನೆಯಲ್ಲಿಯೇ ತಯಾರಿಸಿ ನೋಡಿ ಈರುಳ್ಳಿ ಫೇಸ್ ಪ್ಯಾಕ್

ಮೊಡವೆ ಮೇಲೆ ಐಸ್ ಇಡುವ ಮೊದಲು....

ಮೊಡವೆ ಮೇಲೆ ಐಸ್ ಇಡುವ ಮೊದಲು....

ನೀವು ನೇರವಾಗಿ ಮೊಡವೆ ಮೇಲೆ ಐಸ್ ಇಡುವ ಮೊದಲು ಅದನ್ನು ಒಂದು ಬಟ್ಟೆ ಅಥವಾ ದಪ್ಪಗಿನ ಟವೆಲ್ ನಲ್ಲಿ ಸುತ್ತಿಕೊಳ್ಳಿ. ಐಸ್ ನ್ನು ಮೊಡವೆಗಳ ಮೇಲೆ ಕೇವಲ ಒಂದು ನಿಮಿಷ ಕಾಲದ ಅಂತದಲ್ಲಿ ಮಾತ್ರ ಇಟ್ಟುಬಿಡಿ. ಬೆಳಗ್ಗೆ ಮತ್ತು ಸಂಜೆ ವೇಳೆ ಮುಖ ಶುಚಿಗೊಳಿಸಿದ ಬಳಿಕ ನೀವು ಮೊಡವೆಗಳ ಮೇಲೆ ಒಂದು ನಿಮಿಷ ಕಾಲ ಐಸ್ ನ್ನು ಇಟ್ಟುಬಿಡಿ. ಮೊಡವೆಗಳಿಂದ ಉಂಟಾಗಿರುವಂತಹ ಉರಿಯೂತವು ಅತಿಯಾಗಿದ್ದರೆ ಆಗ ನೀವು ಐದು ನಿಮಿಷ ಕಾಲ ಇಡಬಹುದು. ಇದರ ಮಧ್ಯೆ ನೀವು ಅಂತರವನ್ನು ಕಾಯ್ದುಕೊಳ್ಳಿ. ಇದರಿಂದಾಗಿ ಚರ್ಮಕ್ಕೆ ಹಾನಿಯಾಗುವುದು ತಪ್ಪುವುದು.

5-10 ನಿಮಿಷ ಕಾಲ ಬಿಸಿ ಚಿಕಿತ್ಸೆ

5-10 ನಿಮಿಷ ಕಾಲ ಬಿಸಿ ಚಿಕಿತ್ಸೆ

ಕೆಲವೊಂದು ಸಲ ಬಿಸಿ ಚಿಕಿತ್ಸೆ ಜತೆಗೆ ಐಸ್ ಬಳಸಿದಾಗ ಮೊಡವೆಗಳ ಮೇಲೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದನ್ನು ನೀವು ಬಿಸಿ ಚಿಕಿತ್ಸೆಯಾಗಿರುವ ಕಂಪ್ರೆಸ್ ಅಥವಾ ಸ್ಟೀಮ್ ಟವೆಲ್ ಬಳಸಿಕೊಂಡು ಬಳಸಬಹುದು. ಬಿಸಿ ಚಿಕಿತ್ಸೆ ಮಾಡಿದರೆ ಆಗ ಚರ್ಮದಲ್ಲಿರುವ ರಂಧ್ರಗಳೂ ತೆರೆಯುವುದು. 5-10 ನಿಮಿಷ ಕಾಲ ನೀವು ಬಿಸಿ ಚಿಕಿತ್ಸೆ ನೀಡಿದ ಬಳಿಕ ಒಂದು ನಿಮಿಷ ಐಸ್ ನ್ನು ಇಟ್ಟರೆ ಆಗ ಉರಿಯೂತ ಮತ್ತು ಊತವು ಕಡಿಮೆಯಾಗುವುದು. ಮೊಡವೆಗಳು ಸಂಪೂರ್ಣವಾಗಿ ನಿವಾರಣೆ ಆಗುವ ತನಕ ನೀವು ಈ ರೀತಿಯ ಚಿಕಿತ್ಸೆಯನ್ನು ಮುಂದುವರಿಸಿಕೊಂಡು ಹೋಗಬಹುದು.

Most Read: ಈ ಬಾರಿಯ 2019 ಚಂದ್ರಗ್ರಹಣದಿಂದಾಗಿ ಈ 4 ರಾಶಿಗಳಲ್ಲಿ ಹೆಚ್ಚಿನ ಬದಲಾವಣೆಗಳು ಕಾಣಲಿದೆಯಂತೆ

ಈ ವಿಧಾನ ಬಳಸಿಕೊಳ್ಳುವ ಬದಲು ನೀವು ಅನುಸರಿಸಬೇಕಾದ ಕ್ರಮಗಳು

ಈ ವಿಧಾನ ಬಳಸಿಕೊಳ್ಳುವ ಬದಲು ನೀವು ಅನುಸರಿಸಬೇಕಾದ ಕ್ರಮಗಳು

ಮೊಡವೆಗಳ ಮೇಲೆ ಐಸ್ ನ್ನು ಇಡುವ ಕ್ರಮದಿಂದಾಗಿ ಕಲ್ಮಶಗಳು ನಿಮ್ಮ ಚರ್ಮದ ಮೇಲ್ಮೈಗೆ ಆಕರ್ಷಿತವಾಗಬಹುದು. ಈ ಕಾರಣದಿಂದಾಗಿ ನಿಮಗೆ ಚರ್ಮದಲ್ಲಿ ಉಳಿದಿರುವಂತಹ ಕಲ್ಮಷವನ್ನು ಹೊರಗೆ ತೆಗೆಯಲು ತುಂಬಾ ಕಷ್ಟವಾಗಬಹುದು. ನೀವು ಮೊಡವೆಯನ್ನು ಒಡೆದರೆ ಅದು ಇನ್ನಷ್ಟು ಹಬ್ಬುವುದು. ಇದು ತುಂಬಾ ಕೆಟ್ಟ ಪರಿಣಾಮ ಬೀರುವುದು. ಮೊಡವೆಗಳನ್ನು ಒಡೆಯುವುದು ಅಥವಾ ಅದರ ಪ್ರಕ್ರಿಯೆಯನ್ನು ನಿಲ್ಲಿಸುವುದು ಕಲೆಗಳು ಉಂಟಾಗಲು ಕಾರಣವಾಗುವುದು.

ಮೊಡವೆಗಳ ಮೇಲೆ ಐಸ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು

ಮೊಡವೆಗಳ ಮೇಲೆ ಐಸ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು

ಮೊಡವೆಗಳ ಮೇಲೆ ಐಸ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ಗಮನದಲ್ಲಿಟ್ಟುಕೊಂಡು ನೀವು ಕೆಲಸ ಮಾಡಬಹುದು ಮತ್ತು ಈ ತಣ್ಣಗಿನ ಸಾಮಗ್ರಿಯು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುವುದನ್ನು ತಡೆಯಬಹುದು. ಯಾವುದೇ ಹಾನಿಯಾಗದಂತೆ ತಡೆಯಲು ನೀವು ಐಸ್ ನ್ನು ಸ್ವಲ್ಪ ಸ್ವಲ್ಪ ಸಮಯ ಬಿಟ್ಟು ಇಡಬೇಕು. ದೀರ್ಘಕಾಲದ ತನಕ ಐಸ್ ಅಥವಾ ಐಸ್ ನಂತೆ ಇರುವಂತಹ ಯಾವುದೇ ರೀತಿಯ ಸಾಮಗ್ರಿಗಳನ್ನು ಚರ್ಮಕ್ಕೆ ಇಟ್ಟಾಗ ಅದರಿಂದ ಹಲವಾರು ರೀತಿಯಿಂದ ಅಂಗಾಂಶಗಳ ಮೇಲೆ ಹಾನಿಯಾಗುವುದು.

English summary

Ice Treatment for cure pimples

Natural skin care remedies are growing in popularity, including those used in the alternative treatment of acne. Ice is one such touted treatment. There are potential benefits to ice on pimples, but the question is whether this method is effective enough to fully clear up your breakout for good.
X
Desktop Bottom Promotion