For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೋಗ್ಯಕ್ಕಾಗಿ ಅವೊಕ್ಯಾಡೊ ಬಳಸಿ

|

ಆವಕಾಡೊ ಹಣ್ಣು ಇದನ್ನು ಕನ್ನಡದಲ್ಲಿ ಬೆಣ್ಣೆ ಹಣ್ಣು ಎಂದು ಕರೆಯಲಾಗುತ್ತದೆ. ತಿನ್ನಲು ತುಂಬಾ ರುಚಿಯಾಗಿರುವ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದ ಆಂತರಿಕ ಆರೋಗ್ಯ ಮಾತ್ರವಲ್ಲದೆ ಬಾಹ್ಯ ಸೌಂದರ್ಯ ವೃದ್ಧಿಗೆ ಕೂಡ ಇದು ಸಹಕಾರಿಯಾಗಿದೆ. ಅಂದರೆ ನಮ್ಮ ತ್ವಚೆಯ ಆರೋಗ್ಯ ಕಾಪಾಡಲು ಇದನ್ನು ಬಹು ವಿಧದಲ್ಲಿ ಬಳಸಬಹುದಾಗಿದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆವಕಾಡೊ ಹಣ್ಣನ್ನು ಸೂಪರ್ ಫುಡ್ ಎಂದು ವರ್ಗೀಕರಿಸಲಾಗಿದ್ದು, ತ್ವಚೆಯ ಆರೋಗ್ಯ ಕಾಪಾಡಲು ಇದನ್ನು ಬಳಸಲಾಗುತ್ತದೆ.

ಇದರಲ್ಲಿರುವ ವಿಟಮಿನ್ ಸಿ ಹಾಗೂ ವಿಟಮಿನ್ ಇ ಅಂಶಗಳು ತ್ವಚೆಗೆ ಆಂತರಿಕವಾಗಿ ಪೋಷಣೆ ನೀಡುವ ಮೂಲಕ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅವೊಕ್ಯಾಡೊನಲ್ಲಿರುವ ಲುಟೀನ್ ಹಾಗೂ ಜಿಯಾಕ್ಸೆಂಥೀನ್ ಪದಾರ್ಥಗಳು ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದ್ದು, ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ.

ನೋವು ನಿವಾರಕ ಆವಕಾಡೊ

ನೋವು ನಿವಾರಕ ಆವಕಾಡೊ

ತ್ವಚೆಯ ಉರಿಯೂತವನ್ನು ಶಮನಗೊಳಿಸಿ ತ್ವಚೆಗೆ ತಂಪು ಹಾಗೂ ಆರೈಕೆ ನೀಡಿ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಆವಕಾಡೊ ಸಹಕಾರಿಯಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ತ್ವಚೆಯನ್ನು ಸ್ವಚ್ಛಗೊಳಿಸಿ, ತ್ವಚೆಗೆ ಆರೋಗ್ಯವನ್ನು ನೀಡುತ್ತವೆ.

ಇಷ್ಟೊಂದು ಆರೋಗ್ಯಕರ ಗುಣಗಳಿಂದ ಸಮೃದ್ಧವಾಗಿರುವ ಆವಕಾಡೊ ಹಣ್ಣನ್ನು ತ್ವಚೆಯ ಆರೋಗ್ಯಕ್ಕಾಗಿ ಒಮ್ಮೆ ಬಳಸಿದಲ್ಲಿ ಇದರ ಮಹತ್ವ ನಿಮಗೇ ಅರಿವಾಗುವುದು. ಹಾಗಾದರೆ ಇದರ ಇನ್ನೂ ಹೆಚ್ಚಿನ ಉಪಯುಕ್ತತೆಗಳು ಹಾಗೂ ಇದನ್ನು ಬಳಸುವುದು ಹೇಗೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಚರ್ಮದ ಸೌಂದರ್ಯಕ್ಕೆ ಆವಕಾಡೊ

ಚರ್ಮದ ಸೌಂದರ್ಯಕ್ಕೆ ಆವಕಾಡೊ

-ತ್ವಚೆಗೆ ಆರ್ದ್ರತೆಯನ್ನು ನೀಡುತ್ತದೆ.

-ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ.

-ಮೊಡವೆಗಳು ಹಾಗೂ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.

-ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

-ಸೂರ್ಯನ ಶಾಖದಿಂದ ಚರ್ಮ ಕಪ್ಪಾಗುವಿಕೆಯನ್ನು ತಡೆಯುತ್ತದೆ.

-ತ್ವಚೆಗೆ ಹೊಳಪು ನೀಡುತ್ತದೆ.

ತ್ವಚೆಯ ಆರೋಗ್ಯಕ್ಕೆ ಆವಕಾಡೊ ಬಳಕೆ ಹೇಗೆ?

ಮೊಡವೆ ನಿವಾರಣೆಗೆ

ಮೊಡವೆ ನಿವಾರಣೆಗೆ

ಚರ್ಮದ ಗ್ರಂಥಿಗಳಲ್ಲಿ ಹೆಚ್ಚುವರಿ ತೈಲ ಉತ್ಪಾದನೆಯನ್ನು ನಿಯಂತ್ರಿಸುವ ಆವಕಾಡೊ ಮೊಡವೆಗಳಾಗದಂತೆ ತಡೆಯುತ್ತದೆ. ಇನ್ನು ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿಯಂತ್ರಕ ಅಂಶದಿಂದ ಮೊಡವೆಗಳ ಬೆಳವಣಿಗೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಾಶವಾಗುತ್ತವೆ.

ಬೇಕಾಗುವ ಪದಾರ್ಥಗಳು:

*1 ಹಣ್ಣಾದ ಅವೊಕ್ಯಾಡೊ

*1 ಟೇಬಲ್ ಸ್ಪೂನ್ ಜೇನುತುಪ್ಪ

ಬಳಸುವುದು ಹೇಗೆ?

ಒಂದು ಬಟ್ಟಲಿನಲ್ಲಿ ಆವಕಾಡೊ ಹಣ್ಣನ್ನು ಹಾಕಿ ನುಣ್ಣಗೆ ಅರೆಯಿರಿ. ಇದಕ್ಕೆ ಜೇನುತುಪ್ಪ ಸೇರಿಸಿ ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು ಸುಮಾರು 20 ನಿಮಿಷಗಳವರೆಗೆ ಇರಲು ಬಿಡಿ. ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ.

Most Read: ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ!

ಜಿಡ್ಡಿನ ತ್ವಚೆ ಸಮಸ್ಯೆ ನಿವಾರಣೆಗೆ

ಜಿಡ್ಡಿನ ತ್ವಚೆ ಸಮಸ್ಯೆ ನಿವಾರಣೆಗೆ

ಜಿಡ್ಡಿನ ತ್ವಚೆ ಸಮಸ್ಯೆ ನಿವಾರಣೆಗೆ ಅವೊಕ್ಯಾಡೊವನ್ನು ಮೊಟ್ಟೆಯ ಬಿಳಿ ಲೋಳೆಯೊಂದಿಗೆ ಬಳಸಬೇಕು. ತ್ವಚೆಯ ರಂಧ್ರಗಳ ಮುಚ್ಚುವಿಕೆಯನ್ನು ತಡೆಗಟ್ಟುವ ಗುಣವನ್ನು ಮೊಟ್ಟೆಯ ಬಿಳಿ ಲೋಳೆ ಹೊಂದಿದೆ. ಇದರಿಂದ ಹೆಚ್ಚುವರಿ ತೈಲ ಉತ್ಪಾದನೆಯಾಗುವುದನ್ನು ತಡೆಗಟ್ಟಬಹುದು.

ಬೇಕಾಗುವ ಪದಾರ್ಥಗಳು:

*1 ಹಣ್ಣಾದ ಅವೊಕ್ಯಾಡೊ

*1 ಮೊಟ್ಟೆಯ ಬಿಳಿ ದ್ರವ

ಬಳಸುವುದು ಹೇಗೆ?

ಒಂದು ಬಟ್ಟಲಿಗೆ ಆವಕಾಡೊ ಹಣ್ಣನ್ನು ಹಾಕಿ ನುಣ್ಣಗೆ ಅರೆದು ಪೇಸ್ಟ್ ಮಾಡಿ. ಇದಕ್ಕೆ ಮೊಟ್ಟೆಯ ಬಿಳಿ ದ್ರವ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಇರಲು ಬಿಡಿ. ನಂತರ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ.

ಶುಷ್ಕ ತ್ವಚೆಯವರಿಗಾಗಿ ಆವಕಾಡೊ ಬಳಕೆ

ಶುಷ್ಕ ತ್ವಚೆಯವರಿಗಾಗಿ ಆವಕಾಡೊ ಬಳಕೆ

ಶುಷ್ಕ ತ್ವಚೆಯ ನಿವಾರಣೆಗೆ ಅವೊಕ್ಯಾಡೊವನ್ನು ಬಾದಾಮಿ ಎಣ್ಣೆಯೊಂದಿಗೆ ಬಳಸುವುದು ಸೂಕ್ತ. ಬಾದಾಮಿ ಎಣ್ಣೆಯು ತ್ವಚೆಗೆ ತೇವಾಂಶವನ್ನು ಒದಗಿಸಿ ಕಾಂತಿ ಬರುವಂತೆ ಮಾಡುತ್ತದೆ. ಇದರಿಂದ ಸುಕ್ಕಾದ ಹಾಗೂ ಒಣಗಿದ ತ್ವಚೆಯ ಸಮಸ್ಯೆ ನಿವಾರಣೆಯಾಗುತ್ತದೆ.

ಬೇಕಾಗುವ ಪದಾರ್ಥಗಳು:

*ಹಣ್ಣಾದ ಅರ್ಧ ಅವೊಕ್ಯಾಡೊ

*1 ಟೀ ಸ್ಪೂನ್ ಬಾದಾಮಿ ಎಣ್ಣೆ

ಬಳಸುವ ವಿಧಾನ

ಒಂದು ಬಟ್ಟಲಿಗೆ ಆವಕಾಡೊ ಹಣ್ಣನ್ನು ಹಾಕಿ ಅದನ್ನು ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಬಾದಾಮಿ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ತಯಾರಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು 15 ರಿಂದ 20 ನಿಮಿಷ ಇರಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.

Most Read: ಬೆಣ್ಣೆ ಹಣ್ಣಿನ ಎಲೆಗಳ ಚಹಾ ಕುಡಿಯಿರಿ- ತಲೆ ನೋವಿನಿಂದ ಮುಕ್ತಿ ಪಡೆಯಿರಿ

ವಯಸ್ಸಾಗುವಿಕೆಯ ಲಕ್ಷಣ ತಡೆಯಲು

ವಯಸ್ಸಾಗುವಿಕೆಯ ಲಕ್ಷಣ ತಡೆಯಲು

ತ್ವಚೆಯ ಮೇಲೆ ವಯಸ್ಸಾಗುವಿಕೆಯ ಲಕ್ಷಣಗಳನ್ನು ತಡೆಯಲು ಅವೊಕ್ಯಾಡೊವನ್ನು ತೆಂಗಿನೆಣ್ಣೆ ಹಾಗೂ ಅಲೊ ವೆರಾಗಳೊಂದಿಗೆ ಬಳಸಬೇಕು. ತೆಂಗಿನೆಣ್ಣೆಯಿಂದ ಕೊಲಾಜೆನ್ ಉತ್ಪಾದನೆ ಹೆಚ್ಚಾಗಿ ಚರ್ಮದ ಮೇಲೆ ಸುಕ್ಕಾಗುವುದು ಹಾಗೂ ಗೆರೆ ಬೀಳುವುದನ್ನು ತಡೆಯುತ್ತದೆ. ಅಲೊವೆರಾದಿಂದ ಚರ್ಮ ತಂಪಾಗಿ ಆರಾಮ ಸಿಗುತ್ತದೆ ಹಾಗೂ ಇದರಿಂದ ಚರ್ಮ ಹೊಸ ಕಾಂತಿಯನ್ನು ಪಡೆದುಕೊಳ್ಳುತ್ತದೆ.

ಬೇಕಾಗುವ ಸಾಮಗ್ರಿಗಳು

*1 ಹಣ್ಣಾದ ಅವೊಕ್ಯಾಡೊ

*1 ಟೇಬಲ್ ಸ್ಪೂನ್ ತೆಂಗಿನೆಣ್ಣೆ

*1 ಟೇಬಲ್ ಸ್ಪೂನ್ ಅಲೊವೆರಾ

ಬಳಸುವ ವಿಧಾನ

ಒಂದು ಬಟ್ಟಲಿಗೆ ಅವೊಕ್ಯಡೊ ಹಣ್ಣನ್ನು ಹಾಕಿ ಅದನ್ನು ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಕಲಕಿ. ನಂತರ ಅಲೊವೆರಾ ಜೆಲ್ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮುಖ ತೊಳೆದುಕೊಂಡು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ. ಈಗ ಪೇಸ್ಟ್ ಅನ್ನು ಮುಖದ ಮೇಲೆ ಸಮಾನವಾಗಿ ಲೇಪಿಸಿಕೊಳ್ಳಿ. 15 ರಿಂದ 20 ನಿಮಿಷ ಬಿಟ್ಟು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.

Most Read: ಸೌಂದರ್ಯದ ಸಕಲ ಸಮಸ್ಯೆಗಳಿಗೂ-ಬೆಣ್ಣೆ ಹಣ್ಣಿನ ಚಿಕಿತ್ಸೆ

ಮುಖಕ್ಕೆ ಹೊಸ ಕಾಂತಿ ನೀಡಲು

ಮುಖಕ್ಕೆ ಹೊಸ ಕಾಂತಿ ನೀಡಲು

ಚರ್ಮಕ್ಕೆ ಹೊಸ ಕಾಂತಿ ಹಾಗೂ ಹೊಳಪು ನೀಡಲು ಅವೊಕ್ಯಾಡೊವನ್ನು ಓಟಮೀಲ್‌ನೊಂದಿಗೆ ಉಪಯೋಗಿಸಬೇಕು. ಓಟಮೀಲ್ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೊಳೆದು ಸ್ವಚ್ಛ ಮಾಡುತ್ತದೆ. ಅಲ್ಲದೆ ಇದರಲ್ಲಿನ ಆಂಟಿ ಆಕ್ಸಿಡೆಂಟ್ ಹಾಗೂ ನೋವು ನಿರೋಧಕ ಗುಣಗಳಿಂದ ಚರ್ಮಕ್ಕೆ ಹೊಸ ಕಾಂತಿ ದೊರಕುತ್ತದೆ.

ಬೇಕಾಗುವ ಸಾಮಗ್ರಿಗಳು

*1 ಹಣ್ಣಾದ ಅವೊಕ್ಯಾಡೊ

*2 ಟೇಬಲ್ ಸ್ಪೂನ್ ಓಟಮೀಲ್

ಬಳಸುವ ವಿಧಾನ

ಒಂದು ಬಟ್ಟಲಿಗೆ ಆವಕಾಡೊ ಹಣ್ಣನ್ನು ಹಾಕಿ ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಓಟಮೀಲ್ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಮುಖ ತೊಳೆದುಕೊಂಡು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ. ಈಗ ಪೇಸ್ಟ್ ಅನ್ನು ಮುಖದ ಮೇಲೆ ಸಮಾನವಾಗಿ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಮುಖವನ್ನು ಟವೆಲಿನಿಂದ ಒಣಗಿಸಿಕೊಳ್ಳಿ.

ಚರ್ಮದಲ್ಲಿ ತೇವಾಂಶ ಕಾಪಾಡಲು

ಚರ್ಮದಲ್ಲಿ ತೇವಾಂಶ ಕಾಪಾಡಲು

ಚರ್ಮದಲ್ಲಿ ತೇವಾಂಶ ಕಾಪಾಡಲು ಅವಕ್ಯಾಡೊವನ್ನು ಜೇನು ಹಾಗೂ ಹಾಲಿನೊಂದಿಗೆ ಉಪಯೋಗಿಸಬೇಕು. ಜೇನು ನೈಸರ್ಗಿಕ ಮಾಯಿಶ್ಚರೈಸರ್ ಆಗಿರುವುದರಿಂದ ಇದು ಚರ್ಮಕ್ಕೆ ಆರಾಮ ನೀಡುತ್ತದೆ. ಇನ್ನು ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಚರ್ಮವನ್ನು ನುಣುಪಾಗಿಸಿ ಹೊಳಪು ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

*1 ಹಣ್ಣಾದ ಅವೊಕ್ಯಾಡೊ

*1 ಟೇಬಲ್ ಸ್ಪೂನ್ ಹಾಲು

*1 ಟೇಬಲ್ ಸ್ಪೂನ್ ಕಚ್ಚಾ ಜೇನು

ಬಳಸುವ ವಿಧಾನ

ಒಂದು ಬಟ್ಟಲಿಗೆ ಆವಕಾಡೊ ಹಣ್ಣನ್ನು ಹಾಕಿ ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಹಾಲು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಇದಕ್ಕೆ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ ತೊಳೆದುಕೊಂಡು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಿ. ಈಗ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಸಮಾನವಾಗಿ ಲೇಪಿಸಿಕೊಳ್ಳಿ. 15 ರಿಂದ 20 ನಿಮಿಷ ಬಿಟ್ಟು ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ಮುಖವನ್ನು ಟವೆಲಿನಿಂದ ಒಣಗಿಸಿಕೊಳ್ಳಿ.

ಕಾಂತಿಯುತ ತ್ವಚೆಗಾಗಿ

ಕಾಂತಿಯುತ ತ್ವಚೆಗಾಗಿ

ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಆವಕಾಡೊ ಹಣ್ಣನ್ನು ನಿಂಬೆಯ ರಸದೊಂದಿಗೆ ಉಪಯೋಗಿಸಲಾಗುತ್ತದೆ. ನಿಂಬೆರಸದಲ್ಲಿರುವ ವಿಟಮಿನ್ ಸಿ ಯಿಂದ ಚರ್ಮದಲ್ಲಿರುವ ಕಲ್ಮಶಗಳು ಹೊರಹಾಕಲ್ಪಟ್ಟು ಮೆಲನಿನ್ ಉತ್ಪಾದನೆಯನ್ನು ತಗ್ಗಿಸುತ್ತದೆ. ಜೇನು ತುಪ್ಪವು ಚರ್ಮಕ್ಕೆ ತೇವಾಂಶ ನೀಡಿ ಚರ್ಮವನ್ನು ಮೃದು ಹಾಗೂ ಕಾಂತಿಯುಕ್ತವಾಗಿ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು:

*1 ಹಣ್ಣಾದ ಅವೊಕ್ಯಾಡೊ

*ಅರ್ಧ ಟೀ ಸ್ಪೂನ್ ನಿಂಬೆ ರಸ

*ಅರ್ಧ ಟೇಬಲ್ ಸ್ಪೂನ್ ಜೇನು ತುಪ್ಪ

ಬಳಸುವ ವಿಧಾನ

ಒಂದು ಬಟ್ಟಲಿಗೆ ಆವಕಾಡೊ ಹಣ್ಣನ್ನು ಹಾಕಿ ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಪೇಸ್ಟ್ ಅನ್ನು ಮುಖದ ಮೇಲೆ ಸಮಾನವಾಗಿ ಲೇಪಿಸಿಕೊಳ್ಳಿ. 20 ನಿಮಿಷ ಬಿಟ್ಟು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಮುಖವನ್ನು ಟವೆಲಿನಿಂದ ಒಣಗಿಸಿಕೊಳ್ಳಿ.

ಸಂಪೂರ್ಣ ದೇಹದ ತ್ವಚೆಯ ಪೋಷಣೆಗೆ

ಸಂಪೂರ್ಣ ದೇಹದ ತ್ವಚೆಯ ಪೋಷಣೆಗೆ

ಸಂಪೂರ್ಣ ದೇಹದ ಚರ್ಮದ ಆರೋಗ್ಯಕ್ಕಾಗಿ ಅವೊಕ್ಯಾಡೊವನ್ನು ಬಾಳೆ ಹಾಗೂ ಯೋಗರ್ಟನೊಂದಿಗೆ ಉಪಯೋಗಿಸಲಾಗುತ್ತದೆ. ಅವೊಕ್ಯಾಡೊನಲ್ಲಿರುವ ಪೋಷಕಾಂಶಗಳು ಸಹಜವಾಗಿಯೇ ಚರ್ಮದ ಆರೈಕೆ ಮಾಡುತ್ತವೆ. ಇನ್ನು ಬಾಳೆಹಣ್ಣು ಚರ್ಮಕ್ಕೆ ಅಗತ್ಯವಾದ ತೇವಾಂಶ ಒದಗಿಸಿ ಅದನ್ನು ಮೃದುವಾಗಿಸುತ್ತದೆ. ಹಾಗೆಯೇ ಇದರಲ್ಲಿರು ಆಂಟಿ ಆಕ್ಸಿಡೆಂಟ್ ಅಂಶದಿಂದ ಚರ್ಮಕ್ಕೆ ಹಾನಿಯಾಗುವುದು ತಡೆಗಟ್ಟುತ್ತದೆ. ಯೋಗರ್ಟನಲ್ಲಿರುವ ಲ್ಯಾಕ್ಟಿಕ್ ಆಸಿಡ್‌ನಿಂದ ಚರ್ಮ ನುಣುಪಾಗಿ ಹೊಸ ಕಾಂತಿಯನ್ನು ಪಡೆದುಕೊಳ್ಳುತ್ತದೆ. ನಿಮ್ಮ ಸಂಪೂರ್ಣ ದೇಹದ ತ್ವಚೆಯ ಆರೈಕೆಗಾಗಿ ಈ ವಿಧಾನವನ್ನು ಬಳಸಿ.

ಬೇಕಾಗುವ ಸಾಮಗ್ರಿಗಳು

*1 ಹಣ್ಣಾದ ಅವೊಕ್ಯಾಡೊ

*1 ಕಳಿತ ಬಾಳೆಹಣ್ಣು

*ಕಾಲು ಕಪ್ ಪ್ಲೇನ್ ಮೊಸರು

ಬಳಸುವ ವಿಧಾನ:

ಒಂದು ಬಟ್ಟಲಿಗೆ ಆವಕಾಡೊ ಹಣ್ಣನ್ನು ಹಾಕಿ ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ನುರಿಸಿದ ಬಾಳೆಹಣ್ಣು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಯೋಗರ್ಟ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಸಂಪೂರ್ಣ ದೇಹಕ್ಕೆ ಲೇಪಿಸಿಕೊಂಡು 15 ನಿಮಿಷ ಬಿಡಿ. ನಂತರ ಸ್ನಾನ ಮಾಡಿ ಮಿಶ್ರಣವನ್ನು ಸಂಪೂರ್ಣವಾಗಿ ತೊಳೆದುಕೊಳ್ಳಿ.

English summary

How To Use Avocado For Different Skin Issues

The delicious avocado isn't just a delight for your taste buds but for the skin as well.Avocado is a superfood that has a lot of benefits to offer for your skin and nourishes your skin in the best way possible.Avocado contains vitamins C and E that nourish the skin from within and give you a refreshed skin. Lutein and zeaxanthin present in avocado protect the skin from harmful UV damage and prevents the signs of ageing caused by the UV rays.
X
Desktop Bottom Promotion