For Quick Alerts
ALLOW NOTIFICATIONS  
For Daily Alerts

ತ್ವಚೆಯ ಟ್ಯಾನ್ ಹೋಗಲಾಡಿಸಲು ಹಾಗೂ ಅಂದ ಹೆಚ್ಚಿಸಲು ಚಿಟಿಕೆಯಷ್ಟು ಅರಿಶಿನ ಬಳಸಿ ಸಾಕು!

|

ಟ್ಯಾನಿಂಗ್ ಪ್ರತಿಯೊಬ್ಬರಲ್ಲೂ ಕಂಡು ಬರುವ ಒಂದು ಸಾಮಾನ್ಯ ಸಮಸ್ಯೆ.ಪ್ರತಿದಿನ ಸೂರ್ಯನ ಕಿರಣಗಳಿಗೆ ಮೈಯೊಡ್ಡಲೇ ಬೇಕಾಗಿರುವುದರಿಂದ ಟ್ಯಾನಿಂಗ್ ಕೂಡ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುತ್ತದೆ.ಸನ್ ಸ್ಕ್ರೀನ್ ಲೋಷನ್ ಬಳಕೆ,ಸನ್ ಹ್ಯಾಟ್,ಸನ್ ಗ್ಲಾಸ್,ಮೈ ತುಂಬಾ ಬಟ್ಟೆ ಇವುಗಳನ್ನು ಬಳಸಿದರೂ ಕೂಡ ಟ್ಯಾನ್ ಆಗುವುದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಇದನ್ನು ತಡೆಯುವುದು ಹೇಗೆ?

ಲೇಸರ್ ಚಿಕಿತ್ಸೆ,ಚರ್ಮ ಹೊಳಪು ಹೆಚ್ಚಿಸುವ ಚಿಕಿತ್ಸೆ,ದುಬಾರಿ ಕ್ರೀಂ ಇತರ ಸೌಂದರ್ಯವರ್ಧಕಗಳು ಇದಕ್ಕೆ ಪರಿಹಾರ ನೀಡುತ್ತವಾದರೂ ನಾವಿಲ್ಲಿ ಅದೆಲ್ಲಕ್ಕಿಂತ ಪರಿಣಾಮಕಾರಿ ವಿಧಾನಗಳನ್ನು ತಿಳಿಸುತ್ತೇವೆ.ಈ ವಿಷಯದಲ್ಲಿ ನೀವು ನಿಮ್ಮ ತಾಯಿ ಹೇಳುವ ವಿಧಾನಗಳನ್ನು ಕೂದಲು ಮತ್ತು ತ್ವಚೆಯ ರಕ್ಷಣೆಗೆ ಬಳಸಬೇಕು.ನಿಮಗೆ ಸಹಾಯಕವಾಗುವ ಇಂತಹ ವಸ್ತು ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ.ಚರ್ಮ ಟ್ಯಾನ್ ಆಗುವುದನ್ನು ಅಡುಗೆ ಮನೆಯಲ್ಲಿ ದೊರೆಯುವ ಅರಿಶಿನವನ್ನು ಬಳಸಿ ಹೋಗಲಾಡಿಸಬಹುದು. ಜ್ಯೂಸ್,ಎಣ್ಣೆ ಅಥವಾ ಪೌಡರ್ ಯಾವುದೇ ರೀತಿಯಲ್ಲಿ ಅರಿಶಿನವನ್ನು ಬಳಸಬಹುದು.

ಮೊಡವೆಯನ್ನು ಹೋಗಲಾಡಿಸುತ್ತದೆ

ಮೊಡವೆಯನ್ನು ಹೋಗಲಾಡಿಸುತ್ತದೆ

ಅರಿಶಿನದಲ್ಲಿರುವ ಆಂಟಿಬ್ಯಾಕ್ಟೀರಿಯ ಅಂಶ ಮೊಡವೆಯಾಗುವುದನ್ನು ತಡೆದು ಅದರ ಕಲೆಯನ್ನು ಹೋಗಲಾಡಿಸಲು ಕೂಡ ಅನುಕೂಲ ಮಾಡಿಕೊಡುತ್ತದೆ. ಇದರಲ್ಲಿರುವ ಉರಿಯೂತ ವಿರೋಧಿ ಗುಣ ಮೊಡವೆಯಿಂದ ಉಂಟಾಗುವ ಉರಿಯೂತವನ್ನು ಹೋಗಲಾಡಿಸಲು ಸಹಕರಿಸುತ್ತದೆ.ಚರ್ಮದಲ್ಲಿರುವ ಅಧಿಕ ಎಣ್ಣೆ ಅಂಶವನ್ನು ಕಡಿಮೆ ಮಾಡಲು ಕೂಡ ಇದು ಅನುಕೂಲ.

ಸೋರಿಯಾಸಿಸ್ ಸಮಸ್ಯೆಗೆ ಪರಿಹಾರ

ಸೋರಿಯಾಸಿಸ್ ಸಮಸ್ಯೆಗೆ ಪರಿಹಾರ

ಚರ್ಮದ ಉರಿಯೂತದಿಂದಾಗಿ ತುರಿಕೆ ಮತ್ತು ಒಣಗಿದ ಚರ್ಮವಾದಾಗ ಅರಿಶಿನ ಬಳಸುವುದು ಉಪಯೋಗಕರ.ಅರಿಶಿನದ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ಸೋರಿಯಾಸಿಸ್ ಗೆ ಹಚ್ಚಿ, ಒಂದು ರಾತ್ರಿ ಹಾಗೆಯೆ ಬಿಟ್ಟು ಮರುದಿನ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

Most Read: ಒಂದೇ ವಾರದಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಬೇಕೆ? 'ಅರಿಶಿನ ಪ್ಯಾಕ್' ಬಳಸಿ

ಸ್ಟ್ರೆಚ್ ಮಾರ್ಕ್‌ಗೆ ಪರಿಹಾರ

ಸ್ಟ್ರೆಚ್ ಮಾರ್ಕ್‌ಗೆ ಪರಿಹಾರ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶ ಜೀವಕೋಶದ ಪೊರೆಗಳ ಒಳಗೆ ಹೋಗಿ ರಾಸಾಯನಿಕ ಸಂಯುಕ್ತಗಳನ್ನು ಸಮತೋಲನಗೊಳಿಸಿ ಬದಲಾಯಿಸುವ ಗುಣವನ್ನು ಹೊಂದಿದೆ.ಇದು ಹಠಮಾರಿ ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕುತ್ತದೆ.

ಎಜಿಮಾ ಕ್ಕೆ ಪರಿಹಾರ

ಎಜಿಮಾ ಕ್ಕೆ ಪರಿಹಾರ

ಎಜಿಮಾದ ಉರಿಯೂತದಿಂದ ಕೆಂಪು,ತುರಿಕೆ ಹೊಂದಿರುವ ಒಣ ಚರ್ಮಉಂಟಾಗುತ್ತದೆ.ಅರಿಶಿಣದಲ್ಲಿರುವ ಕುರ್ಕ್ಯುಮಿನ್ ಉರಿಯೂತ ವಿರೋಧಿ ಆದ್ದರಿಂದ ಎಜಿಮಾ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.

ಹೊಳೆಯುವ ಚರ್ಮ

ಹೊಳೆಯುವ ಚರ್ಮ

ಚರ್ಮದ ಹೊಳಪನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಅರಿಶಿನ ಟ್ಯಾನ್ ಆದ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವ ಗುಣವನ್ನು ಹೊಂದಿದೆ.

ಸನ್ ಸ್ಕ್ರೀನ್ ನಂತೆ ಕೆಲಸಮಾಡುತ್ತದೆ

ಸನ್ ಸ್ಕ್ರೀನ್ ನಂತೆ ಕೆಲಸಮಾಡುತ್ತದೆ

ಚರ್ಮ ಹಾನಿಗೊಳಗಾದಾಗ ತ್ವಚೆ ಕುಂದಿದಂತೆ ಕಾಣುತ್ತದೆ.ಅರಿಶಿನ ಸೂರ್ಯನ ಯು ವಿ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ಕೂಡ ತಡೆಯುತ್ತದೆ.ಕಪ್ಪು ಕಲೆಗಳಾದುವುದನ್ನು ತಡೆಯುತ್ತದೆ.

ತಾರುಣ್ಯ ಕಾಪಾಡುತ್ತದೆ

ತಾರುಣ್ಯ ಕಾಪಾಡುತ್ತದೆ

ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಅರಿಶಿನವನ್ನು ಕಲೆ ಮತ್ತು ತ್ವಚೆ ಸುಕ್ಕುಗಟ್ಟುವುದನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತದೆ.ಇದರಲ್ಲಿರುವ ಆಂಟಿಇನ್ಫ್ಲಾಮೇಟರಿ ಗುಣ ನಿಯಮಿತ ಬಳಕೆಯಿಂದ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

ಗಾಯವನ್ನು ಮರೆಮಾಚುತ್ತದೆ

ಗಾಯವನ್ನು ಮರೆಮಾಚುತ್ತದೆ

ಯಾವುದೇ ರೀತಿಯ ಸಣ್ಣ ಗಾಯ,ಸುಟ್ಟ ಗಾಯ ಅರಿಶಿನ ಬಳಸುವುದರಿಂದ ಬೇಗ ಗುಣವಾಗಲು ಸಹಾಯಕ.

ಹೊಸ ಚರ್ಮ ಬರಲು ಸಹಕರಿಸುತ್ತದೆ

ಹೊಸ ಚರ್ಮ ಬರಲು ಸಹಕರಿಸುತ್ತದೆ

ಡೆಡ್ ಸ್ಕಿನ್ ಅನ್ನು ಹೋಗಲಾಡಿಸಿ ಹೊಸ ಚರ್ಮ ಬರಲು ಸಹಕರಿಸುತ್ತದೆ.ಆಪಲ್ ಸೈಡರ್ ವಿನೆಗರ್ ಜೊತೆಗೆ ಸ್ವಲ್ಪ ಅರಿಶಿನ ಬೆರೆಸಿ ಅದಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಹಾಗೆಯೇ ಬಿಡಿ.ಇದನ್ನು ವಾರದಲ್ಲಿ ಮೂರು ಬಾರಿ ಮಾಡಿ ಇದರ ಫಲಿತಾಂಶ ನೋಡಿ.

ಹಿಮ್ಮಡಿಯ ಬಿರುಕಿನಿಂದಾಗುವ ನೋವು

ಹಿಮ್ಮಡಿಯ ಬಿರುಕಿನಿಂದಾಗುವ ನೋವು

ಕಾಲಿನ ಕಾಳಜಿಗೂ ಅರಿಶಿನ ಬಳಸಬಹುದು.ಕಾಲಿನ ಬಿರುಕಿನಿಂದಾದ ನೋವು ಮತ್ತು ಇದರಿಂದಾಗಬಹುದಾದ ಸೋಂಕನ್ನು ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣದಿಂದಾಗಿ ಬೇಗ ಗುಣಮುಖವಾಗುವಂತೆ ಮಾಡುತ್ತದೆ. ಅರಿಶಿನದಲ್ಲಿರುವ ಸಂಕೋಚನ ಲಕ್ಷಣ ಬಿರಿದ ಹಿಮ್ಮಡಿಯನ್ನು ಕಡಿಮೆ ಮಾಡುತ್ತದೆ.ಕ್ಯಾಸ್ಟರ್ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯ ಜೊತೆಗೆ ಸ್ವಲ್ಪ ಅರಿಶಿನವನ್ನು ಬೆರೆಸಿ ಬಿರಿದ ಹಿಮ್ಮಡಿಗೆ ಹಚ್ಚಿ.ಹದಿನೈದು ನಿಮಿಷಗಳ ನಂತರ ಕಾಲನ್ನು ತೊಳೆದುಕೊಳ್ಳಿ.

ಪಿಗ್ಮೆಂಟೇಷನ್ ಸಮಸ್ಯೆ

ಪಿಗ್ಮೆಂಟೇಷನ್ ಸಮಸ್ಯೆ

ಅರಿಶಿನದಲ್ಲಿರುವ ಬ್ಲೀಚಿಂಗ್ ಗುಣ ಚರ್ಮದ ಪಿಗ್ಮೆಂಟೇಷನ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ.ಇದು ಚರ್ಮದ ಸೋಂಕನ್ನು ಕೂಡ ತಡೆದು ಕಲೆಗಳಾಗುವುದನ್ನು ತಡೆಯುತ್ತದೆ.

Most Read: ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

ಫೇಸ್ ಪ್ಯಾಕ್ಸ್

ಫೇಸ್ ಪ್ಯಾಕ್ಸ್

ಟ್ಯಾನಿಂಗ್ ಅನ್ನು ತಡೆಯಲು ಅರಿಶಿನವನ್ನು ಬಳಸಿ ಮಾಡಬಹುದಾದ ಕೆಲವು ಫೇಸ್ ಪ್ಯಾಕ್ ಅನ್ನು ಈ ಕೆಳಗೆ ನೀಡಿದ್ದೇವೆ.ಇದನ್ನು ಅನುಸರಿಸಿ ಟ್ಯಾನ್ ಆಗುವುದನ್ನು ತಡೆಯಿರಿ.

ಕಡಲೆ ಹಿಟ್ಟು, ಕಿತ್ತಳೆ ಮತ್ತು ಅರಿಶಿನ

ಕಡಲೆ ಹಿಟ್ಟು, ಕಿತ್ತಳೆ ಮತ್ತು ಅರಿಶಿನ

ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ,ಎರಡು ಚಮಚ ಕಡಲೆ ಹಿಟ್ಟು ಮತ್ತು ಅರ್ಧ ಚಮಚ ಅರಿಶಿನ ಪುಡಿಯನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ.ಇದಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್ ತಯಾರಿಸಿಕೊಳ್ಳಿ. 15-20 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಕಡಲೆ ಹಿಟ್ಟು ನೈಸರ್ಗಿಕವಾಗಿ ಡೆಡ್ ಸ್ಕಿನ್ ಹೋಗಲಾಡಿಸಿದರೆ,ಅರಿಶಿನ ಪಿಗ್ಮೆಂಟೇಷನ್ ಹೋಗಲಾಡಿಸುತ್ತದೆ.

ಅರಿಶಿನ,ಜೇನುತುಪ್ಪ,ಕಿತ್ತಳೆ ಹಣ್ಣು ಅಥವಾ ನಿಂಬೆ ಹಣ್ಣು

ಅರಿಶಿನ,ಜೇನುತುಪ್ಪ,ಕಿತ್ತಳೆ ಹಣ್ಣು ಅಥವಾ ನಿಂಬೆ ಹಣ್ಣು

ಒಂದು ಚಮಚ ಅರಿಶಿನ ಪುಡಿ,ಒಂದು ಚಮಚ ನಿಂಬೆ ಅಥವಾ ಕಿತ್ತಳೆ ರಸ,ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಂಡು ಮುಖ ಮತ್ತು ಕತ್ತಿನ ಸುತ್ತ ಹಚ್ಚಿ.ಅರಿಶಿನ ಮತ್ತು ನಿಂಬು ಚರ್ಮದ ಹೊಳಪನ್ನು ಹೆಚ್ಚಿಸಿದರೆ ಜೇನುತುಪ್ಪ ತ್ವಚೆಯನ್ನು ಮೃದುವಾಗಿಸುತ್ತದೆ.

Most Read: ಜನ್ಮ ದಿನಾಂಕ ಆಧರಿಸಿ ವಿವಾಹ ಹೊಂದಾಣಿಕೆ ಹೇಗೆ?

ಅರಿಶಿನ,ಬಾಳೆಹಣ್ಣು ಮತ್ತು ಜೇನುತುಪ್ಪ

ಅರಿಶಿನ,ಬಾಳೆಹಣ್ಣು ಮತ್ತು ಜೇನುತುಪ್ಪ

ಅರ್ಧ ಚಮಚ ಅರಿಶಿನ ಮತ್ತು ಎರಡು ಚಮಚದಷ್ಟಾಗುವ ನುರಿದ ಬಾಳೆಹಣ್ಣು,ಅರ್ಧ ಚಮಚ ಜೇನುತುಪ್ಪವನ್ನು ಚೆನ್ನಾಗಿ ಬೆರೆಸಿ.ಈ ಮಿಶ್ರಣವನ್ನು ಮುಖ ಮತ್ತು ಕತ್ತಿನ ಸುತ್ತ ಹಚ್ಚಿ ಕನಿಷ್ಠ ಅರ್ಧ ಗಂಟೆ ಹಾಗೆಯೇ ಬಿಡಿ.ನಂತರ ತಣ್ಣೀರಿನಲ್ಲಿ ತೊಳೆಯಿರಿ.ಅರಿಶಿನ ತ್ವಚೆಯನ್ನು ತಿಳಿಯಾಗಿಸಿದರೆ ಬಾಳೆಹಣ್ಣು ಮತ್ತು ಜೇನುತುಪ್ಪ ಮುಖದ ತೇವಾಂಶವನ್ನು ಕಾಪಾಡುತ್ತದೆ.

ಅರಿಶಿನ,ಟೊಮೇಟೊ ಮತ್ತು ಮೊಸರು

ಅರಿಶಿನ,ಟೊಮೇಟೊ ಮತ್ತು ಮೊಸರು

ಅರ್ಧ ಚಮಚ ಟೊಮೇಟೊ ರಸ, ಒಂದು ಚಮಚ ಮೊಸರು,ಅರ್ಧ ಚಮಚ ಅರಿಶಿನ ಇವುಗಳನ್ನು ಸರಿಯಾಗಿ ಮಿಶ್ರ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.ಟ್ಯಾನ್ ಆದ ಭಾಗಕ್ಕೆ ಇದನ್ನು ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ. ಟೊಮೆಟೊ ಸೂರ್ಯನ ವಿಕಿರಣಗಳಿಂದ ರಕ್ಷಿಸಿದರೆ ಅರಿಶಿನ ಮತ್ತು ಮೊಸರು ಟ್ಯಾನ್ ಅನ್ನು ಹೋಗಲಾಡಿಸಲು ಸಹಕರಿಸುತ್ತದೆ.

ಅರಿಶಿನ,ಕಡಲೆ ಹಿಟ್ಟು,ಆಲೀವ್ ಎಣ್ಣೆ ಮತ್ತು ಲಿಂಬು

ಅರಿಶಿನ,ಕಡಲೆ ಹಿಟ್ಟು,ಆಲೀವ್ ಎಣ್ಣೆ ಮತ್ತು ಲಿಂಬು

ಒಂದು ಬೌಲಿನಲ್ಲಿ 2-3 ಚಮಚ ಕಡಲೆ ಹಿಟ್ಟು ತೆಗೆದುಕೊಂಡು ಒಂದು ಚಮಚ ಆಲಿವ್ ಎಣ್ಣೆ ,ಒಂದು ಚಮಚ ನಿಂಬು ರಸ ಮತ್ತು ಒಂದು ಚಿಟಕಿ ಅರಿಶಿನ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿಕೊಂಡು 15 ನಿಮಿಷದ ನಂತರ ವಾಶ್ ಮಾಡಿಕೊಳ್ಳಿ.ಅರಿಶಿನ ಸ್ಕಿನ್ ಟೋನ್ ಅನ್ನು ಬದಲಿನಿಸದರೆ,ಕಡಲೆ ಹಿಟ್ಟು ಚರ್ಮದ ಕೊಳೆಯನ್ನು ತೆಗೆದು ಹಾಕುತ್ತದೆ.

ಅರಿಶಿನ ಮತ್ತು ನಿಂಬು ಹಣ್ಣು

ಅರಿಶಿನ ಮತ್ತು ನಿಂಬು ಹಣ್ಣು

2 ಚಮಚ ನಿಂಬು ರಸ, ಒಂದು ಚಮಚ ಅರಿಶಿನ ಇದನ್ನು ಬೆರೆಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿ 20 ನಿಮಿಷ ಹಾಗೆಯೇ ಬಿಡಿ.ಅರಿಶಿನ ಮತ್ತು ನಿಂಬು ರಸವು ಚರ್ಮವನ್ನು ತಿಳಿಯಾಗಿಸುವ ಗುಣ ಹೊಂದಿದ್ದು,ಟ್ಯಾನ್ ತೆಗೆದು ಹಾಕುತ್ತದೆ.

ಅರಿಶಿನ,ಮುಲ್ತಾನಿ ಮಿಟ್ಟಿ,ರೋಸ್ ವಾಟರ್ ಮತ್ತು ಜೇನುತುಪ್ಪ

ಅರಿಶಿನ,ಮುಲ್ತಾನಿ ಮಿಟ್ಟಿ,ರೋಸ್ ವಾಟರ್ ಮತ್ತು ಜೇನುತುಪ್ಪ

ಒಂದು ಚಮಚ ಮುಲ್ತಾನಿ ಮಿಟ್ಟಿ, ಅರ್ಧ ಚಮಚ ಅರಿಶಿನ,ಒಂದು ಚಮಚ ರೋಸ್ ವಾಟರ್,ಜೇನುತುಪ್ಪವನ್ನು ಸೇರಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ 20 ನಿಮಿಷ ಹಾಗೆಯೆ ಬಿಡಿ.ಮುಲ್ತಾನಿ ಮಿಟ್ಟಿ ತ್ವಚೆಯ ಕೊಳೆಯನ್ನು ಸಂಪೂರ್ಣ ತೆಗೆದು ಹಾಕಲು ಸಹಕರಿಸಿದರೆ, ಅರಿಶಿನ ತ್ವಚೆಯ ಕಾಂತಿ ಹೆಚ್ಚಿಸುತ್ತದೆ ಮತ್ತು ಜೇನುತುಪ್ಪ ತೇವಾಂಶವನ್ನು ಕಾಪಾಡುತ್ತದೆ.

ಅರಿಶಿನ,ಅಲೋವೆರಾ ಮತ್ತು ಮುಲ್ತಾನಿ ಮಿಟ್ಟಿ

ಅರಿಶಿನ,ಅಲೋವೆರಾ ಮತ್ತು ಮುಲ್ತಾನಿ ಮಿಟ್ಟಿ

ಒಂದು ಚಿಟಕಿ ಅರಿಶಿನಕ್ಕೆ ಅಲೋವೆರಾ ಮತ್ತು ಎರಡು ಚಮಚ ಮುಲ್ತಾನಿ ಮಣ್ಣನ್ನು ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗುವವರೆಗೂ ಹಾಗೆಯೆ ಬಿಡಿ. ಅಲೋವೆರಾ ಚರ್ಮವನ್ನು ಹಿತವಾಗಿಸಿದರೆ ಅರಿಶಿನ ಚರ್ಮವನ್ನು ತಿಳಿಯಾಗಿಸುತ್ತದೆ.

ಅರಿಶಿನ,ಶ್ರೀಗಂಧ ಮತ್ತು ಕಿತ್ತಳೆ ಹಣ್ಣು

ಅರಿಶಿನ,ಶ್ರೀಗಂಧ ಮತ್ತು ಕಿತ್ತಳೆ ಹಣ್ಣು

2 ಚಮಚ ಶ್ರೀಗಂಧದ ಪುಡಿ,2-3 ಚಮಚ ಕಿತ್ತಳೆ ಹಣ್ಣಿನ ರಸ,ಒಂದು ಚಮಚ ಅರಿಶಿನ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ.ಟ್ಯಾನ್ ಆದ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ.ಒಣಗಿದ ನಂತರ ತಣ್ಣೀರಿನಲ್ಲಿ ತೊಳೆಯಿರಿ.ಇವೆಲ್ಲವೂ ನೈಸರ್ಗಿಕವಾಗಿ ಟ್ಯಾನ್ ಹೋಗಲಾಡಿಸಿ ತ್ವಚೆಯ ಕಾಂತಿ ಹೆಚ್ಚಿಸಲು ಸಹಕರಿಸುತ್ತವೆ.

ಅರಿಶಿನ,ಜೇನುತುಪ್ಪ ಮತ್ತು ಪುದೀನಾ ಎಲೆಗಳು

ಅರಿಶಿನ,ಜೇನುತುಪ್ಪ ಮತ್ತು ಪುದೀನಾ ಎಲೆಗಳು

ಒಂದು ಚಮಚ ಜೇನುತುಪ್ಪ ಮತ್ತು ಪುದೀನಾ ಎಲೆ,ಇದಕ್ಕೆ ಅರ್ಧ ಚಮಚ ಅರಿಶಿನವನ್ನು ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ವಾಶ್ ಮಾಡಿ.ಪುದೀನಾ ಸೊಪ್ಪು ನಿಮ್ಮ ಮುಖದಲ್ಲಾದ ಟ್ಯಾನ್ ಹೋಗಲಾಡಿಸಿ ತ್ವಚೆಯನ್ನು ತಂಪಾಗಿಸುತ್ತದೆ. ನೀವೂ ಕೂಡ ಮನೆಯಲ್ಲಿ ಈ ಮೇಲೆ ನೀಡಿರುವ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿ.

English summary

How to remove tan with turmeric?

Tanning can be easily healed with none other than turmeric! Be it in the form of juice, oil, or powder, this powerful herb has powerful medicinal value and offers skincare benefits as well.
Story first published: Tuesday, January 29, 2019, 14:59 [IST]
X
Desktop Bottom Promotion