For Quick Alerts
ALLOW NOTIFICATIONS  
For Daily Alerts

ಕಾಂತಿಯುತ ತ್ವಚೆ ಪಡೆಯಲು ಮನೆಯಲ್ಲೇ ಮಾಡಬಹುದಾದ ಸರಳ ಮಾಸ್ಕ್‌ಗಳು

|

ಸೌಂದರ್ಯ ಎನ್ನುವುದು ಇಂದಿನ ದಿನಗಳಲ್ಲಿ ಬಹುಮುಖ್ಯ ಪಾತ್ರ ವಹಿಸುವುದು. ಸೌಂದರ್ಯವೇ ಎಲ್ಲರನ್ನು ಆಕರ್ಷಿಸುವುದು. ಆದರೆ ಸೌಂದರ್ಯ ಕಾಪಾಡಿಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಯಾಕೆಂದರೆ ಹವಾಮಾನ ಬದಲಾಗುತ್ತಿರುವಂತೆ ಚರ್ಮದ ಮೇಲೆ ಆಗುವಂತಹ ಪರಿಣಾಮವು ಭಿನ್ನವಾಗಿರುವುದು.

homemade Masks

ಇದರಿಂದಾಗಿ ಕೆಲವೊಂದು ಫೇಸ್ ಮಾಸ್ಕ್ ಗಳನ್ನು ಬಳಸಿಕೊಂಡು ಸೌಂದರ್ಯವನ್ನು ಕಾಪಾಡಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇಲ್ಲ. ಚರ್ಮವು ಕಾಂತಿಯುತವಾಗಿದ್ದರೆ ಆಗ ಇದು ದೇಹದ ಸೌಂದರ್ಯವನ್ನು ವೃದ್ಧಿಸುವುದು. ಈ ಲೇಖನದಲ್ಲಿ ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಫೇಸ್ ಮಾಸ್ಕ್ ಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಬಾಳೆಹಣ್ಣು, ಲಿಂಬೆ ಮತ್ತು ಜೇನುತುಪ್ಪದ ಮಾಸ್ಕ್

ಬಾಳೆಹಣ್ಣು, ಲಿಂಬೆ ಮತ್ತು ಜೇನುತುಪ್ಪದ ಮಾಸ್ಕ್

ಬಾಳೆಹಣ್ಣಿನ ಫೇಸ್ ಮಾಸ್ಕ್ ಎಣ್ಣೆಯುಕ್ತ ಚರ್ಮಕ್ಕೆ ತುಂಬಾ ಉಪಯೋಗಕಾರಿಯಾಗಿರುವುದು. ಇದು ಚರ್ಮದಲ್ಲಿರುವ ಸತ್ತ ಕೋಶಗಳನ್ನು ಕಿತ್ತುಹಾಕಿ ರಂಧ್ರಗಳನ್ನು ತೆರೆಯುವುದು. ಸತ್ತ ಕೋಶಗಳನ್ನು ತೆಗೆದುಹಾಕುವ ಕಾರಣದಿಂದ ಚರ್ಮವು ತುಂಬಾ ನಯ ಹಾಗೂ ಕಾಂತಿಯುತವಾಗುವುದು. ಬಾಳೆಹಣ್ಣಿನಲ್ಲಿರುವಂತಹ ಹೀರಿಕೊಳ್ಳುವ ನಾರಿನಾಂಶ, ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಮೆಗ್ನಿಶಿಯಂ ರಕ್ತದೊತ್ತಡ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗುವುದು ಮಾತ್ರವಲ್ಲದೆ, ಎಣ್ಣೆಯುಕ್ತ ಚರ್ಮದ ಮೇಲೆ ಅದ್ಭುತವನ್ನು ಉಂಟು ಮಾಡುವುದು.

ಇದರ ತಯಾರಿ ಹೇಗೆ?

ಇದರ ತಯಾರಿ ಹೇಗೆ?

ಬಾಳೆಹಣ್ಣನ್ನು ನೀವು ಸರಿಯಾಗಿ ಹಿಚುಕಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಲಿಂಬೆರಸ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಇದು ಸರಿಯಾಗಿ ಒಣಗಲು ಬಿಡಿ ಮತ್ತು ಬಿಸಿ ನೀರು ಬಳಸಿಕೊಂಡು ಮುಖ ತೊಳೆದುಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು.

Most Read: ಮುಖದ ಕಾಂತಿ ಹೆಚ್ಚಿಸಲು ದಿಢೀರ್ ಉಪಾಯಗಳು

ಗ್ರೀನ್ ಟೀ ಮಾಸ್ಕ್

ಗ್ರೀನ್ ಟೀ ಮಾಸ್ಕ್

ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಗ್ರೀನ್ ಟೀ ದೇಹದ ಹೊರಗಿನ ಹಾಗೂ ಒಳಗಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಸಿ ನೀರಿಗೆ ಹಾಕಿ ಇದನ್ನು ಸೇವಿಸಿದರೆ ಅಥವಾ ಮಾಸ್ಕ್ ಮಾಡಿ ಹಚ್ಚಿಕೊಂಡರೆ ಇದು ಎಣ್ಣೆಯುಕ್ತ ಚರ್ಮಕ್ಕೆ ಕಾಂತಿ ನೀಡುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಎರಡು ಚಮಚ ಗ್ರೀನ್ ಟೀಯನ್ನು ನುಣ್ಣಗೆ ಹುಡಿ ಮಾಡಿ. ಇದಕ್ಕೆ ಸ್ವಲ್ಪ ಮೊಸರು, ಕೆಲವು ಹನಿ ಸಾರಭೂತ ತೈಲ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ಹಚ್ಚಿಕೊಂಡು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ಕೆಲವು ನಿಮಿಷ ಮಸಾಜ್ ಮಾಡಿದ ಬಳಿಕ ಬಿಸಿ ನೀರಿನಿಂದ ತೊಳೆಯಿರಿ.

ಕಡಲೆಹಿಟ್ಟು ಮತ್ತು ಅರಿಶಿನ ಮಾಸ್ಕ್

ಕಡಲೆಹಿಟ್ಟು ಮತ್ತು ಅರಿಶಿನ ಮಾಸ್ಕ್

ಅರಿಶಿನದಲ್ಲಿ ಉರಿಯೂತ ವಿರೋಧಿ ಮತ್ತು ಶಮನಕಾರಿ ಗುಣಗಳು ಇವೆ. ಅದೇ ರೀತಿಯಾಗಿ ಕಡಲೆಹಿಟ್ಟಿನಲ್ಲಿ ಕ್ಷಾರೀಯ ಗುಣವಿದೆ ಮತ್ತು ಇದು ಚರ್ಮದ ರಂಧ್ರಗಳಲ್ಲಿ ಆಳವಾಗಿ ಇರುವಂತಹ ವಿಷಕಾರಿ ಅಂಶಗಳನ್ನು ಸೆಳೆಯುವುದು. ಇದರಲ್ಲಿನ ಸೂಕ್ಷ್ಮಾಣು ವಿರೋಧಿ ಗುಣಗಳು ಚರ್ಮಕ್ಕೆ ತುಂಬಾ ಲಾಭಕಾರಿಯಾಗಿರುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಈ ಪ್ಯಾಕ್ ತಯಾರಿಸಲು ಒಂದು ಚಮಚ ಕಡಲೆಹಿಟ್ಟು ಮತ್ತು ಒಂದು ಚಮಚ ಅರಿಶಿನ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಕೆಲವು ಹನಿ ನಿಂಬೆರಸ ಮತ್ತು ರೋಸ್ ವಾಟರ್ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ನೀರಿನಿಂದ ತೊಳೆಯಿರಿ. ಇದರಿಂದ ಕಾಂತಿಯುತ ಚರ್ಮವು ನಿಮ್ಮದಾಗುವುದು.

Most Read: ಈ ಮೂರು ರಾಶಿಚಕ್ರದವರಿಗೆ ಹೊಸ ವರ್ಷವು ಊಹೆಗೂ ಮಿಗಿಲಾದ ಹೊಸ ಬದಲಾವಣೆಯನ್ನು ತಂದುಕೊಡುವುದು

ಪಪ್ಪಾಯ ಮತ್ತು ಓಟ್ ಮೀಲ್ ಸ್ಕ್ರಬ್

ಪಪ್ಪಾಯ ಮತ್ತು ಓಟ್ ಮೀಲ್ ಸ್ಕ್ರಬ್

ಪಪ್ಪಾಯದಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಎ ಮತ್ತು ಪಪೈನ್ ಎನ್ನುವ ಅಂಶವಿದೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಹಸಿ ಪಪ್ಪಾಯಿಯ ಪೇಸ್ಟ್ ಕಲೆಗಳು ಹಾಗೂ ಮೊಡವೆಗಳನ್ನು ನಿವಾರಣೆ ಮಾಡುವುದು.

ಇದನ್ನು ತಯಾರಿಸುವುದು ಹೇಗೆ?

ಇದನ್ನು ತಯಾರಿಸುವುದು ಹೇಗೆ?

ಒಂದು ತುಂಡು ಪಪ್ಪಾಯಿಯನ್ನು ಪೇಸ್ಟ್ ಮಾಡಿ. ಇದಕ್ಕೆ ಒಂದು ಚಮಚ ಬೆಲ್ಲ ಮತ್ತು ಓಟ್ ಮೀಲ್ ಸೇರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ ಮತ್ತು ಇದು ಚರ್ಮವನ್ನು ಶುಚಿಗೊಳಿಸುವುದು. ಇದರಿಂದ ಚರ್ಮವು ಕಾಂತಿಯುತ ಆಗುವುದು.

ಓಟ್ ಮೀಲ್ ಮತ್ತು ಮೊಟ್ಟೆಯ ಮಾಸ್ಕ್

ಓಟ್ ಮೀಲ್ ಮತ್ತು ಮೊಟ್ಟೆಯ ಮಾಸ್ಕ್

ಓಟ್ಸ್ ನಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಶಮನಕಾರಿ ಹಾಗೂ ಚರ್ಮಕ್ಕೆ ಪುನರ್ಶ್ಚೇತನ ನೀಡುವುದು. ಇದು ಚರ್ಮದಲ್ಲಿ ಇರುವಂತಹ ಕೆಲವೊಂದು ಮೊಡವೆ ಹಾಗೂ ಕಲೆಗಳನ್ನು ನಿವಾರಣೆ ಮಾಡುವುದು.

ತಯಾರಿಸುವ ವಿಧಾನ

ಮೂರು ಚಮಚ ಓಟ್ ಮೀಲ್, ಒಂದು ಚಮಚ ಜೇನುತುಪ್ಪ ಮತ್ತು ಮೊಸರು ಹಾಕಿಕೊಂಡು ಪೇಸ್ಟ್ ಮಾಡಿ. ಮುಖ ತೊಳೆದುಕೊಂಡು ಈ ಮಾಸ್ಕ್ ನ್ನು ಹಚ್ಚಿಕೊಳ್ಳಿ. ಇದು ಮುಖದಲ್ಲಿ ಹಾಗೆ ಒಣಗಲಿ ಮತ್ತು ಬಳಿಕ ತೊಳೆಯಿರಿ.

Most Read: ಶನಿ ದೇವರಿಗೆ ತನ್ನ ಪತ್ನಿಯೇ ಶಾಪ ನೀಡಿದಳು! ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ

ಶ್ರೀಗಂಧದ ಫೇಸ್ ಮಾಸ್ಕ್

ಶ್ರೀಗಂಧದ ಫೇಸ್ ಮಾಸ್ಕ್

ಶ್ರೀಗಂಧವು ತುಂಬಾ ಪುರಾತನ ಹಾಗೂ ನಂಬಿಕಯುಳ್ಳ ಶಮನಕಾರಿ ಸಾಮಗ್ರಿಯಾಗಿದೆ. ಇದು ಚರ್ಮಕ್ಕೆ ಶಮನ ನೀಡುವುದು. ಮೊಡವೆಗಳು, ಬೊಕ್ಕೆಗಳು ಮತ್ತು ಚರ್ಮದಲ್ಲಿರುವ ಕಲೆಗಳನ್ನು ಇದು ನಿವಾರಣೆ ಮಾಡುವುದು. ಇದು ಒಣ ಚರ್ಮಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಚಮಚ ಶ್ರೀಗಂಧದ ಹುಡಿ ಮತ್ತು ಅರ್ಧ ಚಮಚ ಅರಶಿನ ಹುಡಿಗೆ ಸ್ವಲ್ಪ ರೋಸ್ ವಾಟರ್ ಹಾಕಿಕೊಳ್ಳಿ ಮತ್ತು 20 ನಿಮಿಷ ಕಾಲ ಇದು ಚರ್ಮದ ಮೇಲೆ ಇರಲಿ. ಕಾಂತಿಯುತ ಚರ್ಮ ಪಡೆಯಲು ತಣ್ಣೀರಿನಿಂದ ಮುಖ ತೊಳೆಯಿರಿ.

English summary

homemade Masks For Glowing Skin That You Can Make At Home

Glowing skin – that too, with absolutely no aid from makeup! Sounds a bit unbelievable, right? Though it sounds far fetched, it is definitely achievable. However, turning this dream into reality comes with a slight catch – it does need some serious hard work from your side. As they say, time and effort will definitely yield results. To know more about how you can achieve glowing skin with simple concoctions that you can brew at home,
X
Desktop Bottom Promotion