Just In
Don't Miss
- News
ಬೇಕಾದ ಖಾತೆಯ ಪಟ್ಟಿ ಸಿಎಂ ಗೆ ನೀಡಿರುವ ಬೈರತಿ ಬಸವರಾಜ್
- Movies
ಬಾಲಿವುಡ್ ನಲ್ಲಿ ಬರ್ತಿದೆ ಕನ್ನಡದ 'ಯು ಟರ್ನ್': ನಾಯಕಿ ಇವರೇ
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಗೂಗಲ್!
- Automobiles
ಹೊಸ ಸಿಟಿ ಆರ್ಎಸ್ ಕಾರಿನ ವೀಡಿಯೋ ಬಿಡುಗಡೆಗೊಳಿಸಿದ ಹೋಂಡಾ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಖದ ಸೌಂದರ್ಯ ಹೆಚ್ಚಿಸಲು ಹುಣಸೆ ಹಣ್ಣು ಬಳಸುವ 4 ಸರಳ ಟಿಪ್ಸ್
ಹುಣಸೆ ಹುಳಿ, ಇದು ಹೆಸರೇ ತಿಳಿಸುವಂತೆ ಹುಳಿಯಾಗಿದ್ದರೂ ಇದರ ರುಚಿಯನ್ನು ನೆನೆದಾಗ ನಾಲಿಗೆ ಚುರುಗುಟ್ಟದೇ ಇರಲಾರದು. ಇದರ ಹುಳಿಮಿಶ್ರಿತ ಕೊಂಚ ಸಿಹಿಯೇ ಇದನ್ನು ಚಟ್ನಿ, ಸಾಂಬಾರ್, ಕ್ಯಾಂಡಿ, ಜೆಲ್ಲಿ ಮೊದಲಾದ ಹಲವಾರು ತಿನಿಸುಗಳ ಅನಿವಾರ್ಯ ಅಂಶವನ್ನಾಗಿಸಿದೆ. ಆದರೆ ಹುಣಸೆ ಹುಳಿ ಕೇವಲ ಒಂದು ಆಹಾರ ಸಾಮಾಗ್ರಿ ಮಾತ್ರವಲ್ಲ, ತ್ವಚೆಯನ್ನು ಬೆಳಗುವ ಒಂದು ಅತ್ಯುತ್ತಮ ಸೌಂದರ್ಯವರ್ಧಕ ಪ್ರಸಾದನವೂ ಆಗಿದೆ.
ಹುಣಸೆಹುಳಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳೂ, ಫ್ಲೇವನಾಯ್ಡುಗಳೂ ಮತ್ತು ಪ್ರಮುಖವಾಗಿ ವಿಟಮಿನ್ ಸಿ ಮತ್ತು ಎ ಇವೆ. ಇವುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ತಡೆಯುತ್ತವೆ. ಅಲ್ಲದೇ ಇವುಗಳ ಮುಖಲೇಪವನ್ನು ಹಚ್ಚಿಕೊಳ್ಳುವ ಮೂಲಕ ಮುಖದ ತ್ವಚೆಗೆ ಎದುರಾಗುವ ಉರಿಯನ್ನು ತಗ್ಗಿಸಬಹುದು. ಅಲ್ಲದೇ ಚರ್ಮದ ಬಣ್ಣ ಬಿಸಿಲಿನಿಂದ ಗಾಢವಾಗಿದ್ದರೆ ಮತ್ತೊಮ್ಮೆ ಸಹಜವರ್ಣಕ್ಕೆ ತರಲು ಇದೊಂದು ನೈಸರ್ಗಿಕ ಬಿಳಿಚುಕಾರಕವಾಗಿ ಕಾರ್ಯನಿರ್ವಹಿಸುತ್ತದೆ...

ತ್ವಚೆಯ ಸೆಳೆತವನ್ನು ಹೆಚ್ಚಿಸಲು
ಸುಮಾರು ಮೂವತ್ತು ಗ್ರಾಂ ಹುಣಸೆಹುಳಿಯ ತಿರುಳನ್ನು ನೂರು ಮಿಲಿಲೀ ನೀರಿನಲ್ಲಿ ಚೆನ್ನಾಗಿ ಕುದಿಸಿ ಹೊರತೆಗೆದು ಕಿವುಚಿ ತಿರುಳನ್ನು ಸಂಗ್ರಹಿಸಿ. ಈ ತಿರುಳಿಗೆ ಅರ್ಧ ಚಿಕ್ಕ ಚಮಚ ಅರಿಸಿನ ಬೆರೆಸೆ ನಯವದ ಮುಖಲೇಪ ತಯಾರಿಸಿ. ಈ ಲೇಪವನ್ನು ಮುಖವೆಲ್ಲಾ ಆವರಿಸುವಂತೆ ಹಚ್ಚಿಕೊಳ್ಳಿ. ಕೇವಲ ಒಂದೇ ಬಾರಿ ಹಚ್ಚಿಕೊಂಡಾಗ ನಿಮ್ಮ ತ್ವಚೆ ಕೊಂಚ ಪ್ರಖರವಾಗಿರುವುದನ್ನು ಕಂಡು ಬೆರಗಾಗದೇ ಇರಲಾರಿರಿ. ಈ ವಿಧಾನ ವಿಶೇಷವಾಗಿ ಎಣ್ಣೆಚರ್ಮದ ವ್ಯಕ್ತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಮೂರು ಬಾರಿ ಪುನರಾವರ್ತಿಸಿ.
Most Read: ಹುಣಸೆ ಹಣ್ಣಿನ ಪ್ರಯೋಜನಗಳು ಒಂದೇ ಎರಡೇ? ಇದು ತುಂಬಾನೇ ಆರೋಗ್ಯಕಾರಿ

ತಕ್ಷಣದ ಬಿಳಿಚುಕಾರಕವಾಗಿ ಬಳಸುವ ವಿಧಾನ
ಒಂದು ವೇಳೆ ನೀವು ಹಾನಿಕಾರಕ ರಾಸಾಯನಿಕ ಆಧಾರಿತ ಬಿಳಿಚುಕಾರಕ ಉತ್ಪನ್ನಗಳನ್ನು ನಂಬದೇ ಇದ್ದಲ್ಲಿ ನೈಸರ್ಗಿಕ ಪ್ರಸಾದನಗಳ ಮೊರೆ ಹೋಗುವುದೇ ಉತ್ತಮ. ಇದಕ್ಕಾಗಿ ತಲಾ ಒಂದು ಚಿಕ್ಕ ಚಮಚ ಲಿಂಬೆರಸ ಮತ್ತು ಜೇನು ಹಾಗೂ ಹುಣಸೆಹುಳಿಯ ತಿರುಳು (ಮೇಲೆ ವಿವರಿಸಿದ ವಿಧಾನದಲ್ಲಿ ಸಂಗ್ರಹಿಸಿದ್ದು) ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮುಖದ ಮೇಲೆ ತೆಳುವಾಗಿ ಹಚ್ಚಿಕೊಂಡು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಸತ್ತ ಜೀವಕೋಶಗಳ ನಿವಾರಿಸಲು
ನಿಮ್ಮ ತ್ವಚೆಯ ಹೊರಪದರಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳು ಹಾಗೂ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಸಿಲುಕಿಕೊಂಡಿರುವ ಕೊಳೆಯನ್ನು ನಿವಾರಿಸಲು ಹುಣಸೆಯಲ್ಲಿರುವ ಎ ಎಫ್ ಎ (AFA (alpha hydroxyl acids) ಎಂಬ ಆಮ್ಲಗಳು ನೆರವಾಗುತ್ತವೆ. ಇದಕ್ಕಾಗಿ ತಲಾ ಒಂದು ಚಿಕ್ಕ ಚಮಚ ಸಮುದ್ರದ ಉಪ್ಪು ಮತ್ತು ಹುಣಸೆಹುಳಿಯ ತಿರುಳನ್ನು ಬೆರೆಸಿ. ಇದಕ್ಕೆ ಒಂದು ಚಿಕ್ಕ ಚಮಚ ಮೊಸರು ಅಥವಾ ಹಾಲಿನ ಕೆನೆಯನ್ನು ಬೆರೆಸಿ ನಯವಾದ ಲೇಪ ತಯಾರಿಸಿ. ವಿಶೇಷವಾಗಿ ಎಣ್ಣೆಚರ್ಮದ ವ್ಯಕ್ತಿಘಳು ಮೊಸರನ್ನೂ ಒಣಚರ್ಮದವರು ಹಾಲಿನ ಕೆನೆಯನ್ನೂ ಆಯ್ದುಕೊಳ್ಳಬೇಕು. ಈ ಲೇಪನವನ್ನು ಬಳಸಿ ಮುಖದ ತ್ವಚೆಯನ್ನು ಹೆಚ್ಚಿನ ಒತ್ತಡವಿಲ್ಲದೇ ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಹೋಗಿ. ಈ ಲೇಪದಲ್ಲಿರುವ ವಿಟಮಿನ್ ಬಿ ಮತ್ತು ಸಿ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸುವ ಜೊತೆಗೇ ಕಲ್ಮಶರಹಿತ, ತಾಜಾತನದಿಂದ ಕೂಡಿದ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಲು ನೆರವಾಗುತ್ತವೆ.

ತಕ್ಷಣದ ಕಾಂತಿಗಾಗಿ
ಒಂದು ವೇಳೆ ನಿಮಗೆ ಕಡಿಮೆ ಸಮಯದಲ್ಲಿಯೇ ಪ್ರಮುಖ ಕಾರ್ಯಕ್ರಮವೊಂದಿದ್ದು ಇದರಲ್ಲಿ ನಿಮ್ಮ ಸೌಂದರ್ಯವನ್ನು ಬೆಳಗಿಸುವುದು ಅಗತ್ಯವಾಗಿದ್ದರೆ, ಅಥವಾ ಪ್ರಿಯಕರನ ಮೆಚ್ಚುಗೆ ಪಡೆಯಬೇಕೆಂದಿದ್ದರೆ ನಿಮಗೆ ಇಪ್ಪತ್ತು ನಿಮಿಷಗಳಷ್ಟು ಕಾಲದ ಸಮಯಾವಕಾಶವಿದ್ದರೆ ಸಾಕು. ಹುಣಸೆಹುಳಿಯ ನೆರವಿನಿಂದ ಈ ಕ್ಷಿಪ್ರ ಅವಧಿಯಲ್ಲಿಯೇ ಫೇಶಿಯಲ್ ಸೇವೆಯಲ್ಲಿ ಪಡೆದಂತಹ ಕಾಂತಿ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ತಲಾ ಒಂದು ಚಿಕ್ಕಚಮಚದಷ್ಟು ಹುಣಸೆ ಹುಳಿಯ ತಿರುಳು ಮತ್ತು ಜೇನನ್ನು ಮಿಶ್ರಣ ಮಾಡಿ ಬಳಿಕ ಎರಡು ಚಿಕ್ಕ ಚಮಚದಷ್ಟು ಕಡ್ಲೆಹಿಟ್ಟು ಬೆರೆಸಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ತೆಳುವಾಗಿ ಮುಖದ ತ್ವಚೆಗೆ ಹಚ್ಚಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ಒತ್ತಿ ಒರೆಸಿಕೊಳ್ಳಿ. ಪ್ರಿಯಕರ ನಿಮ್ಮ ಮುಖದ ಕಾಂತಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ!