For Quick Alerts
ALLOW NOTIFICATIONS  
For Daily Alerts

ಮುಖದ ಅಂದ ಹೆಚ್ಚಿಸಲು ಸರಳವಾಗಿ ಮಾಡಬಹುದಾದ 5 ಸೂಪರ್ ನೈಸರ್ಗಿಕ ಬ್ಯೂಟಿ ಟಿಪ್ಸ್

|

ಅಂಗಡಿಗೆ ಹೋಗಿ ಅಲ್ಲಿಂದ ಶಾಂಪೂ, ಫೇಸ್ ಕ್ರೀಮ್ ಇತ್ಯಾದಿ ಸೌಂದರ್ಯವರ್ಧಕಗಳನ್ನು ಖರೀದಿ ಮಾಡಿಕೊಂಡು ಬರುತ್ತೇವೆ. ಆದರೆ ಇಂತಹ ಸೌಂದರ್ಯವರ್ಧಕ ಉತ್ಪನ್ನಗಳು ನಮ್ಮ ದೇಹದ ಮೇಲೆ ಯಾವ ರೀತಿ ಅಡ್ಡ ಪರಿಣಾಮ ಬೀರುವುದು ಎಂದು ನಮಗೆ ತಿಳಿದಿಲ್ಲ. ಯಾಕೆಂದರೆ ನಾವು ಕಣ್ಣು ಮುಚ್ಚಿಕೊಂಡು, ಜಾಹೀರಾತಿನಲ್ಲಿ ನೋಡಿರುವಂತಹ ಉತ್ಪನ್ನ ಖರೀದಿ ಮಾಡಿ ತಂದು ಬಳಸುತ್ತೇವೆ. ಇದಕ್ಕೆ ಬಳಕೆ ಮಾಡಲ್ಪಟ್ಟಿರುವ ಸಾಮಗ್ರಿಗಳು ಯಾವುದು ಎಂದು ಗಮನಿಸುವುದೇ ಇಲ್ಲ. ಹೀಗಾಗಿ ಇದರಲ್ಲಿ ಇರುವಂತಹ ರಾಸಾಯನಿಕಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಹೆಚ್ಚಾಗಿ ನಾವೆಲ್ಲರೂ ಬಳಸುವಂತಹ ಸೌಂದರ್ಯವರ್ಧಕ ಉತ್ಪನಗಳಾಗಿರಲಿ ಅಥವಾ ಕ್ರೀಮ್, ಟೂಥ್ ಪೇಸ್ಟ್ ಇತ್ಯಾದಿಗಳು ಏನೇ ಆಗಿರಲಿ, ಅದರಲ್ಲಿ ಹೆಚ್ಚಾಗಿ ಇರುವಂತಹದ್ದು ಮನುಷ್ಯ ನಿರ್ಮಿತವಾದ ರಾಸಾಯನಿಕ ಅಂಶಗಳು.

Five Super Simple Natural Beauty Tips

ಇದರಲ್ಲಿ ಕೆಲವೊಂದು ರೀತಿಯ ರಾಸಾಯನಿಕಗಳು ನಮ್ಮ ದೇಹದ ಮೇಲೆ ಪರಿಣಾಮ ಬೀರಬಹುದು. ಆದರೆ ಇದನ್ನು ನಾವು ಗಮನಿಸುವುದೇ ಇಲ್ಲ. ಕೆಲವೊಂದು ಕಂಪೆನಿಗಳು ತಾವು ನೈಸರ್ಗಿಕದತ್ತ ಸಾಮಗ್ರಿಗಳನ್ನು ಬಳಕೆ ಮಾಡುವುದು ಎಂದು ಹೇಳಿಕೊಳ್ಳುತ್ತವೆ. ಆದರೆ ಇಂತಹ ಉತ್ಪನ್ನಗಳು ತುಂಬಾ ದುಬಾರಿ ಆಗಿರುವುದು. ಹೆಚ್ಚಿನ ಜನರಿಗೆ ಇದನ್ನು ಕೊಂಡುಕೊಳ್ಳಲು ಸಾಧ್ಯವಾಗದು. ಇಂತಹ ಸೌಂದರ್ಯವರ್ಧಕಗಳಿಂದ ನೀವು ದೇಹವನ್ನು ರಾಸಾಯನಿಕಯುಕ್ತ ಗೊಳಿಸುವುದು ಯಾಕೆ? ಸ್ವಲ್ಪ ದುಬಾರಿ ಆದರೂ ನೀವು ನೈಸರ್ಗಿಕ ಉತ್ಪನ್ನಗಳನ್ನು ಬಳಸಿಕೊಳ್ಳಿ. ಇದಕ್ಕೆ ಉತ್ತರ ಕೂಡ ಸರಳವಾಗಿದೆ. ಅದೇನೆಂದರೆ ನೀವು ತುಂಬಾ ಅಗ್ಗವಾಗಿರುವ ಸಾಮಗ್ರಿ ಬಳಸಿದರೆ ಅದರಿಂದ ಆಗುವಂತಹ ಕೆಟ್ಟ ಪರಿಣಾಮಗಳು ಹೆಚ್ಚಾಗಿರುವುದು. ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ನಿಮ್ಮ ಸೌಂದರ್ಯ ವೃದ್ಧಿಸುವುದು ಹೇಗೆ ಎಂದು ತಿಳಿಯಿರಿ.

ನಿಮಗೆ ಬೇಕಾಗಿರುವುದು-ಅಡುಗೆ ಸೋಡಾ

ನಿಮಗೆ ಬೇಕಾಗಿರುವುದು-ಅಡುಗೆ ಸೋಡಾ

ಅಡುಗೆ ಸೋಡಾ (ಇದನ್ನು ಸೋಡಾದ ಬೈಕಾರ್ಬನೇಟ್ ಎಂದು ಕರೆಯಲಾಗುತ್ತದೆ)

ಆ್ಯಪಲ್ ಸೀಡರ್ ವಿನೇಗರ್ (ಆ್ಯಪಲ್ ಸೀಡರ್ ವಿನೇಗರ್ ಸಿಗದೆ ಇದ್ದರೆ ಆಗ ನೀವು ಬಿಳಿ ಅಥವಾ ಕೆಂಪು ವಿನೇಗರ್ ಬಳಸಬಹುದು)

ತೆಂಗಿನೆಣ್ಣೆ(ಪರಿಶುದ್ಧ ತೆಂಗಿನೆಣ್ಣೆ, ಕೋಲ್ಡ್ ಪ್ರೆಸ್ಟ್ ತೆಂಗಿನೆಣ್ಣೆ ಬಳಸಿ)

ಮೊದಲ ವಿಧಾನ-ಮುಖದ ಸ್ಕ್ರಬ್

ಮುಖವನ್ನು ಒದ್ದೆ ಮಾಡಿಕೊಳ್ಳಿ. ಇದನ್ನು ನೀವು ಸ್ನಾನ ಮಾಡುವಾಗ ಅಥವಾ ಶಾವರ್ ನಿಂದ ಮಾಡಬಹುದು. ಒಂದು ಚಮಚ ಅಡುಗೆ ಸೋಡಾವನ್ನು ಅಂಗೈಗೆ ಹಾಕಿಕೊಳ್ಳಿ ಮತ್ತು ಇದನ್ನು ಒದ್ದೆ ಮಾಡಿಕೊಳ್ಳಿ. ಇದನ್ನು ಪೇಸ್ಟ್ ಮಾಡಿಕೊಳ್ಳಲು ಸರಿಯಾಗಿ ನೀರು ಹಾಕಿ. ಇದನ್ನು ಸ್ವಲ್ಪ ತೆಗೆದು ನೀವು ಒಂದು ಅಥವಾ ಎರಡು ನಿಮಿಷ ಕಾಲ ಸ್ಕ್ರಬ್ ಮಾಡಿ. ಕಣ್ಣುಗಳ ಭಾಗದಲ್ಲಿ ಸ್ವಲ್ಪ ಜಾಗೃತೆ ವಹಿಸಿ. ಬಿಸಿ ನೀರಿನಿಂದ ತೊಳೆಯಿರಿ. ಇದರ ಬಳಿಕ ನಿಮ್ಮ ಚರ್ಮವು ತುಂಬಾ ನಯ ಹಾಗೂ ಕಾಂತಿಯನ್ನು ಪಡೆಯುವುದು.

ಎರಡನೇ ಚಿಕಿತ್ಸೆ-ಶಾಂಪೂ

ಎರಡನೇ ಚಿಕಿತ್ಸೆ-ಶಾಂಪೂ

ನೀವು ಮತ್ತೆ ಸೋಡಾ ಬಳಸಿಕೊಳ್ಳಬೇಕು. ಕೂದಲು ಎಷ್ಟು ಉದ್ದವಿದೆ ಎಂದು ನೋಡಿಕೊಂಡು ಸೋಡಾ ಬಳಕೆ ಮಾಡಿ. ಭುಜದಿಂದ ಕೆಳಗಡೆ ತನಕ ಕೂದಲು ಉದ್ದವಿದ್ದರೆ, ಆಗ ನೀವು ಮೂರು ಚಮಚ ಅಡುಗೆ ಸೋಡಾ ಬಳಕೆ ಮಾಡಬೇಕು. ಇದಕ್ಕಿಂತ ಸಣ್ಣ ಕೂದಲು ಇದ್ದರೆ ಕಡಿಮೆ. ನಿಖರ ಪ್ರಮಾಣವು ಇಲ್ಲಿ ಅಗತ್ಯ ಎಂದು ಅನಿಸುವುದಿಲ್ಲ. ನೀವು ಇದನ್ನು ನಿಯಮಿತವಾಗಿ ಬಳಕೆ ಮಾಡಿದರೆ, ಆಗ ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕು ಎಂದು ತಿಳಿಯುವುದು. ಶಾಂಪೂ ಹಾಕಿಕೊಳ್ಳುವ ಮೊದಲು ಕೂದಲು ಒದ್ದೆ ಮಾಡಿದಂತೆ, ಕೂದಲನ್ನು ಒದ್ದೆ ಮಾಡಿಕೊಳ್ಳಿ.

300 ಮಿ.ಲೀ. ಬಿಸಿ ನೀರಿಗೆ ಈಗ ಅಡುಗೆ ಸೋಡಾ ಹಾಕಿಕೊಳ್ಳಿ.

ಇದನ್ನು ಸರಿಯಾಗಿ ಕಲಸಿಕೊಳ್ಳಿ.

ಈಗ ಕೂದಲಿಗೆ ಈ ನೀರನ್ನು ಹಾಕಿಕೊಳ್ಳಿ. ಕೂದಲು ಸಂಪೂರ್ಣವಾಗಿ ಒದ್ದೆ ಆಗಲಿ.

ಕೆಲವು ನಿಮಿಷ ಕಾಲ ನೀವು ಕೂದಲನ್ನು ಉಜ್ಜಿಕೊಳ್ಳಿ.

ಇದು ಸ್ವಲ್ಪ ಅಂಟಿನಂತೆ ಕಾಣಿಸಬಹುದು. ನೀವು ಇದನ್ನು ಬಳಿಕ ಶಾವರ್ ನಲ್ಲಿ ಸರಿಯಾಗಿ ತೊಳೆದುಕೊಳ್ಳಿ.

Most Read: ಬ್ಯೂಟಿ ಟಿಪ್ಸ್: ರಾತ್ರಿ ಬೆಳಗಾಗುವುದರೊಳಗೆ ಸೌಂದರ್ಯ ವೃದ್ಧಿ!

ವಿಧಾನ 3-ಕೂದಲು ತೊಳೆಯುವುದು

ವಿಧಾನ 3-ಕೂದಲು ತೊಳೆಯುವುದು

ಸೋಡಾ ಶಾಂಪೂ ಹಾಕಿಕೊಂಡ ಬಳಿಕ ನೀವು ವಿನೇಗರ್ ಹಾಕಿಕೊಂಡು ಕೂದಲು ತೊಳೆಯಬೇಕು. ಇದು ಒಂದು ರೀತಿಯಲ್ಲಿ ಕಂಡೀಷನರ್ ನಂತೆ ಕೆಲಸ ಮಾಡುವುದು. ಸ್ವಲ್ಪ ಪ್ರಮಾಣದ ವಿನೇಗರ್(ಕೂದಲಿನ ಉದ್ದಕ್ಕೆ ಅನುಗುಣವಾಗಿ-ಮೊದಲಿಗೆ1/4 ಕಪ್ ಬಳಸಿ) ನ್ನು ಒಂದು ಕಪ್ ಬಿಸಿ ನೀರಿಗೆ ಹಾಕಿ. ಇದರಿಂದ ಕೂದಲು ಒದ್ದೆ ಮಾಡಿಕೊಳ್ಳಿ. ಸಂಪೂರ್ಣ ಕೂದಲು ವಿನೇಗರ್ ನಿಂದ ಒದ್ದೆ ಆಗಿದೆ ಎಂದು ನೀವು ದೃಢಪಡಿಸಿಕೊಳ್ಳಿ.

ನಿಧಾನವಾಗಿ ಉಜ್ಜಿಕೊಳ್ಳಿ ಮತ್ತು ಕೆಲವು ನಿಮಿಷಗಳ ಕಾಲ ಹಾಗೆ ಬಿಟ್ಟು, ಬಳಿಕ ತೊಳೆಯಿರಿ. ಈ ವಿಧಾನದಿಂದ ನಿಮ್ಮ ಕೂದಲು ಒಣಗಿದ ಬಳಿಕ ತುಂಬಾ ಕಾಂತಿ ಪಡೆಯುವುದು.

ನಾಲ್ಕನೇ ವಿಧಾನ-ಟೂಥ್ ಪೇಸ್ಟ್

ನಾಲ್ಕನೇ ವಿಧಾನ-ಟೂಥ್ ಪೇಸ್ಟ್

ಸ್ವಲ್ಪ ನೀರಿಗೆ ಸೋಡಾ ಹಾಕಿ ಅದನ್ನು ಮೆತ್ತಗಿನ ಪೇಸ್ಟ್ ಮಾಡಿ. ನೀವು ದೊಡ್ಡ ಪ್ರಮಾಣದಲ್ಲಿ ಇದನ್ನು ಮಾಡಬಹುದು ಮತ್ತು ಒಂದು ಡಬ್ಬದಲ್ಲಿ ಹಾಕಿಕೊಂಡು ಅದರ ಮುಚ್ಚಳ ಮುಚ್ಚಿ ಬಿಡಬಹುದು. ಈ ಪೇಸ್ಟ್ ಗೆ ತಾಜಾತನ ಉಂಟು ಮಾಡಲು ನೀವು ಪುದೀನಾ ಎಣ್ಣೆಯ ಕೆಲವು ಹನಿ ಹಾಕಿಕೊಳ್ಳಬಹುದು. ಇದನ್ನು ಸ್ವಲ್ಪ ತೆಗೆದು ಟೂಥ್ ಬ್ರಷ್ ಗೆ ಹಾಕಿ ಮತ್ತು ಒದ್ದೆ ಮಾಡಿ. ಇದರಿಂದ ಸಾಮಾನ್ಯದಂತೆ ಹಲ್ಲುಜ್ಜಿಕೊಳ್ಳಿ. ಇದರ ಬಳಿಕ ಬಾಯಿ ತೊಳೆಯಿರಿ.

Most Read: ತ್ವರಿತವಾಗಿ ಮುಖದ ಸೌಂದರ್ಯ ಹೆಚ್ಚಿಸುವ ನೈಸರ್ಗಿಕವಾದ ಹಾಗೂ ಅಗ್ಗದ ಫೇಸ್‌ ಪ್ಯಾಕ್‌ಗಳು

ಐದನೇ ವಿಧಾನ-ಮುಖಕ್ಕೆ ಮಾಯಿಶ್ಚಿರೈಸ್

ಐದನೇ ವಿಧಾನ-ಮುಖಕ್ಕೆ ಮಾಯಿಶ್ಚಿರೈಸ್

ಈ ವಿಧಾನಕ್ಕೆ ಸ್ವಲ್ಪ ತೆಂಗಿನೆಣ್ಣೆ ಬೇಕು. ಒಂದು ಡಬ್ಬ ತೆಂಗಿನ ಎಣ್ಣೆಯು ತುಂಬಾ ದುಬಾರಿ ಆಗಬಹುದು. ಆದರೆ ನೀವು ಇದನ್ನು ಮೊಶ್ಚಿರೈಸರ್ ಆಗಿ ಬಳಸಿಕೊಂಡರೆ ಈ ಹಣ ವಸೂಲಿ ಆಗುವುದು. ಒಂದು ಸಣ್ಣ ಡಬ್ಬದಲ್ಲಿ ಹಾಕಿಕೊಂಡು ಇದನ್ನು ನಿಮ್ಮ ಕೋಣೆ ಅಥವಾ ಸ್ನಾನಗೃಹದಲ್ಲಿ ಇಡಬಹುದು. ಇದು ಬೆಳಗ್ಗೆ ಮತ್ತು ಸಂಜೆ ವೇಳೆ ನಿಮ್ಮ ಸೌಂದರ್ಯದ ಆರೈಕೆಗೆ ನೆರವಾಗುವುದು. ಸ್ವಲ್ಪ ಎಣ್ಣೆ ತೆಗೆದುಕೊಳ್ಳಿ ಮತ್ತು ಅದನ್ನು ನಿಧಾಣವಾಗಿ ಚರ್ಮಕ್ಕೆ ಉಜ್ಜಿಕೊಳ್ಳಿ. ಈ ವೇಳೆ ನೀವು ಕಣ್ಣಿನ ಕಡೆ ಗಮನಹರಿಸಿ. ಎಣ್ಣೆ ಅತಿಯಾಗಿ ಬಳಸಿದರೆ ಅದರ ಬಗ್ಗೆ ನೀವು ಚಿಂತೆ ಮಾಡಬೇಡಿ ಮತ್ತು ಚರ್ಮವು ಎಣ್ಣೆಯನ್ನು ಹೀರಿಕೊಳ್ಳುವುದು. ಎಣ್ಣೆಯು ಘನವಾಗಿದ್ದರೆ ಆಗ ನೀವು ಸ್ವಲ್ಪ ಇದನ್ನು ತೆಗೆದುಕೊಂಡು ಅದು ಕರಗುವ ತನಕ ಅಂಗೈಯಲ್ಲಿ ಹಾಕಿಕೊಳ್ಳಿ. ನಿಮ್ಮ ದೇಹದ ಉಷ್ಣತೆಯಿಂದ ಅದು ಕರಗುವುದು ಮತ್ತು ಇದನ್ನು ನೀವು ಚರ್ಮಕ್ಕೆ ಹಚ್ಚಿಕೊಳ್ಳಬಹುದು. ಇದನ್ನು ಮುಖಕ್ಕೆ ಹಚ್ಚಿಕೊಂಡ ಬಳಿಕ ನೀವು ಇದನ್ನು ಕೈಗಳಿಗೆ ಬಳಸಿಕೊಂಡು ಮೊಶ್ಚಿರೈಸ್ ಮಾಡಿಕೊಳ್ಳಿ. ದೇಹದ ಬೇರೆ ಭಾಗಗಳಿಗೆ ಮಾಯಿಶ್ಚಿರೈಸ್ ಮಾಡಿಕೊಳ್ಳಲು ನೀವು ಇದನ್ನು ಬಳಸಬಹುದು. ತೆಂಗಿನ ಎಣ್ಣೆಯ ಸಣ್ಣ ಡಬ್ಬವು ಮುಖಕ್ಕೆ ಮಾಯಿಶ್ಚಿರೈಸ್ ಮಾಡಲು ಕೆಲವು ತಿಂಗಳುಗಳ ಕಾಲ ಬರುವುದು. ಇದರಿಂದ ನೀವು ದುಬಾರಿ ಉತ್ಪನ್ನಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಎಂದಿಲ್ಲ. ಮನೆಯಲ್ಲೇ ಸಿಗುವ ಕೆಲವು ಸಾಮಗ್ರಿಗಳನ್ನು ನೀವು ಬಳಸಿಕೊಂಡು ಅದನ್ನು ಸೌಂದರ್ಯವರ್ಧಕವಾಗಿ ಬಳಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಂಡಿದ್ದೀರಿ. ಇದು ತುಂಬಾ ಅಗ್ಗದ ಹಾಗೂ ನೈಸರ್ಗಿಕ ಸಾಮಗ್ರಿಗಳು. ಇದನ್ನು ನೀವು ಬಳಕೆ ಮಾಡಿ ತ್ವಚೆಗೆ ನೈಸರ್ಗಿಕ ಕಾಂತಿ ಹಾಗೂ ಸೌಂದರ್ಯ ನೀಡಿ.

English summary

Five Super Simple Natural Beauty Tips

If you have, you will have seen that the majority of the ingredients in these products are man-made chemicals. Some of them are potentially dangerous if they find their way into our bodies.Of course, there are exceptions. There are some very famous brands that pride themselves on their products containing only natural ingredients. And good on them. But they can be even more expensive than the non-natural products. And most people just can't afford them.So, what can you do? You would like to stop poisoning your body with chemical-laden beauty products, but it's difficult to justify paying the high prices for natural products,Don't worry. The answer is a simple one, and cheaper than you could possibly imagine.
X
Desktop Bottom Promotion