For Quick Alerts
ALLOW NOTIFICATIONS  
For Daily Alerts

ರಾತ್ರಿ ವೇಳೆ ತ್ವಚೆಯ ಆರೈಕೆಗೆ ಬರೀ ಐದು ನಿಮಿಷದ ಸರಳ ಟಿಪ್ಸ್

|

ಸೌಂದರ್ಯ ಎನ್ನುವುದು ಎಲ್ಲರಿಗೂ ಅತ್ಯಗತ್ಯವಾಗಿ ಬೇಕಾದ ಸಂಗತಿ. ಯಾರ ಸೌಂದರ್ಯ ಹೆಚ್ಚು ಆಕರ್ಷಣೆಯಿಂದ ಕೂಡಿರುತ್ತದೆಯೋ ಅಂತಹವರು ಬಹುಬೇಗ ಜನರ ದೃಷ್ಟಿಗೆ ಬೀಳುತ್ತಾರೆ. ಇಲ್ಲವೇ ಜನಸಮೂಹದಲ್ಲಿ ಅವರು ಹೆಚ್ಚು ಆಕರ್ಷಕ ವ್ಯಕ್ತಿಯಾಗಿ ನಿಲ್ಲುವರು. ಸುಂದರ ಮೈಕಾಂತಿ ಮತ್ತು ಸೌಂದರ್ಯವು ನೋಡುಗರ ಮನಸ್ಸಿಗೆ ಒಂದು ರೀತಿಯ ಸಂತೋಷ, ಸಮಾಧಾನ ಹಾಗೂ ಪುಳಕದ ಭಾವನೆ ನೀಡುವುದು. ಈ ಭಾವನೆಗಳೇ ಆ ವ್ಯಕ್ತಿಯ ಬಳಿ ಮಾತನಾಡಲು ಹಾಗೂ ಅವರಿಗೊಂದು ನಗುವನ್ನು ನೀಡಲು ಬಯಸುವುದು. ಹಾಗಾಗಿ ಪ್ರತಿಯೊಬ್ಬರು ತಮ್ಮ ಸೌಂದರ್ಯ ಹಾಗೂ ತ್ವಚೆಯ ಆರೋಗ್ಯವು ಅತ್ಯುತ್ತಮವಾಗಿ ಇರಬೇಕು ಎಂದು ಬಯಸುತ್ತಾರೆ.

ಈ ಮೊದಲು ಸೌಂದರ್ಯ, ತ್ವಚೆಯ ಆರೈಕೆ, ಮೈಬಣ್ಣಗಳ ಬಗ್ಗೆ ಪುರುಷರಿಗಿಂತ ಹೆಚ್ಚು ಮಹಿಳೆಯರು ಚಿಂತನೆ ನಡೆಸುತ್ತಿದ್ದರು. ತಮ್ಮ ತ್ವಚೆಯ ಆರೈಕೆಗಾಗಿ ಸಾಕಷ್ಟು ಮನೆ ಮದ್ದು, ವಿಶೇಷ ತಜ್ಞರ ಸಲಹೆ ಹಾಗೂ ಚಿಕಿತ್ಸೆಯನ್ನು ಸಹ ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಸೌಂದರ್ಯ, ಆಕರ್ಷಕ ನೋಟ, ಕೇಶ ವಿನ್ಯಾಸ, ಮೈ ಬಣ್ಣ ಹಾಗೂ ಚಿಕಿತ್ಸೆಯ ಕುರಿತು ಪುರುಷರು ಸಹ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ ಎನ್ನುವುದು ವಿಶೇಷ. ಈ ನಿಟ್ಟಿನಲ್ಲಿಯೇ ಸೌಂದರ್ಯ ವರ್ಧಕ ಉತ್ಪನ್ನಗಳು ಸಹ ಮಹಿಳೆಯರಿಗೆ ಹಾಗೂ ಪುರುಷರಿಗೆ ಎಂದು ವಿಶೇಷ ಬಗೆಯಲ್ಲಿ ಲಭ್ಯವಾಗುತ್ತಿದೆ.

ಹಾರ್ಮೋನ್‍ಗಳ ವ್ಯತ್ಯಾಸ ಹಾಗೂ ವಯಸ್ಸಿನ ಕಾರಣದಿಂದ

ಹಾರ್ಮೋನ್‍ಗಳ ವ್ಯತ್ಯಾಸ ಹಾಗೂ ವಯಸ್ಸಿನ ಕಾರಣದಿಂದ

ಕಚೇರಿಯಲ್ಲಿಯ ಒತ್ತಡದ ಕೆಲಸ, ಮನೆಗೆ ಅಗತ್ಯ ವಸ್ತುಗಳ ಖರೀದಿಗೆ ಓಡಾಟ, ಮನೆಕೆಲಸದ ಜವಾಬ್ದಾರಿ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಕಾರಣಗಳು ಹಾಗೂ ಕೆಲಸಗಳು ಮಹಿಳೆಯರಿಗೆ ಸಾಕಷ್ಟು ಆಯಾಸವನ್ನು ಉಂಟುಮಾಡುತ್ತದೆ. ಕುಟುಂಬ ಸದಸ್ಯರ ಬೇಕು ಬೇಡಗಳನ್ನು ಪೂರೈಸುವುದರ ಮೂಲಕ ತಮ್ಮ ಅಗತ್ಯತೆ ಹಾಗೂ ಆರೋಗ್ಯದ ಕಾಳಜಿಯ ಬಗ್ಗೆ ಹೆಚ್ಚು ಗಮನ ನೀಡದೆ ಇರುತ್ತಾರೆ. ಮಹಿಳೆಯರಿಗೆ 25 ವರ್ಷದ ಬಳಿಕ ತಮ್ಮ ತ್ವಚೆಯಲ್ಲಿ ಹಾಗೂ ಆಕರ್ಷಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಅನುಭವಿಸುತ್ತಾರೆ. ಹಾರ್ಮೋನ್‍ಗಳ ವ್ಯತ್ಯಾಸ ಹಾಗೂ ವಯಸ್ಸಿನ ಕಾರಣದಿಂದಾಗಿ ತ್ವಚೆ ಹಾಗೂ ಸೌಂದರ್ಯದಲ್ಲಿ ಸಾಕಷ್ಟು ಇಳಿಮುಖ ಉಂಟಾಗುವುದು.

ರಾತ್ರಿ ವೇಳೆ ಐದು ನಿಮಿಷವನ್ನು ನಿಮಗಾಗಿ ಕಾಯ್ದಿರಿಸಿ

ರಾತ್ರಿ ವೇಳೆ ಐದು ನಿಮಿಷವನ್ನು ನಿಮಗಾಗಿ ಕಾಯ್ದಿರಿಸಿ

ಮಹಿಳೆಯರಿಗೆ ಹೇಳುವ ಸಲಹೆ ಏನೆಂದರೆ ದಿನದಲ್ಲಿ ಸಾಕಷ್ಟು ಸಮಯವನ್ನು ನೀವು ಮನೆ ಮಂದಿಗಾಗಿ ಹಾಗೂ ಮನೆ ಕೆಲಸಕ್ಕಾಗಿ ಮೀಸಲಿಡುತ್ತೀರಿ. ಅದೇ ರೀತಿ ನಿಮ್ಮ ಆರೋಗ್ಯ ಹಾಗೂ ತ್ವಚೆಯ ಆರೈಕೆಗಾಗಿ ರಾತ್ರಿ ವೇಳೆ ಐದು ನಿಮಿಷವನ್ನು ನಿಮಗಾಗಿ ಕಾಯ್ದಿರಿಸಿ. ನಿಮ್ಮ ತ್ವಚೆ ಹಾಗೂ ಆರೋಗ್ಯಕ್ಕಾಗಿ ನೀವು ನೀಡುವ ಐದು ನಿಮಿಷ ನಿಮ್ಮ ಸೌಂದರ್ಯದ ಸುಧಾರಣೆಗೆ ಕಾರಣವಾಗುವುದು. ಜೊತೆಗೆ ನಿಮ್ಮಲ್ಲಿ ಒಂದಿಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ನಿಮಗೂ ನಿಮ್ಮ ತ್ವಚೆಯ ಆರೈಕೆಗೆ ಸುಲಭವಾದ ಆರೈಕೆಯ ವಿಧಾನವನ್ನು ಅನುಸರಿಸಬೇಕು ಮತ್ತು ಹೆಚ್ಚು ಆಕರ್ಷಕವಾಗಿ ಕಾಣಬೇಕು ಎನ್ನುವ ಆಸೆ ಅಥವಾ ಬಯಕೆಗಳಿದ್ದರೆ ಲೇಖನ ಮುಂದಿನ ಭಾಗದಲ್ಲಿ ವಿವರಿಸಲಾದ ಸುಲಭ ಪರಿಹಾರ ಕ್ರಮಗಳನ್ನು ಅರಿಯಿರಿ.

Most Read: ತ್ವಚೆಗೆ ಕಾಂತಿ ಹೆಚ್ಚಿಸುವ ಸರಳವಾದ ಮೂರು ಆಯುರ್ವೇದಿಕ್ ಟಿಪ್ಸ್

ರಾತ್ರಿಯ ಸಮಯ ಉತ್ತಮ

ರಾತ್ರಿಯ ಸಮಯ ಉತ್ತಮ

ದಿನವಿಡೀ ಆಯಾಸ ಹಾಗೂ ಧೂಳಿನಿಂದ ದಣಿದು ಬಂದ ನಿಮಗೆ ವಿಶ್ರಾಂತಿ ಎನ್ನುವುದು ನೀವು ನಿದ್ರೆಗೆ ಜಾರಿದ ಕ್ಷಣಗಳಲ್ಲಿ ದೊರೆಯುವುದು. ನಿದ್ರೆಯಲ್ಲಿರುವಾಗಲೇ ದೇಹದಲ್ಲಿ ಸಾಕಷ್ಟು ಆರೋಗ್ಯಕರ ದುರಸ್ತಿ ಕಾರ್ಯಗಳು ನೆರವೇರುತ್ತವೆ. ಹಾಗಾಗಿ ನಿದ್ರೆ ಮಾಡುವ ಮೊದಲು ನೀವು ಐದು ನಿಮಿಷಗಳ ಕಾಲ ನಿಮ್ಮ ತ್ವಚೆಯ ಆರೈಕೆ ಅಥವಾ ಸೌಂದರ್ಯದ ಆರೈಕೆಗೆ ಸಮಯವನ್ನು ನೀಡಿ. ತಜ್ಞರು ಹೇಳುವ ಪ್ರಕಾರ ಹಾಸಿಗೆಯಲ್ಲಿ ಹೊದ್ದು ಮಲಗಿರುವಾಗ ಚರ್ಮದಲ್ಲಿ ಸಾಕಷ್ಟು ದುರಸ್ತಿ ಕೆಲಸಗಳು ನಡೆಯುತ್ತವೆ. ಅವು ಪುನರ್ಯೌವನ ಗೊಳ್ಳುವುದು. ನೀವು ನಿಮ್ಮ ತ್ವಚೆ ಹಾಗೂ ಸೌಂದರ್ಯದ ಆರೈಕೆಗೆ ಕೆಲವು ಕ್ರಮಗಳನ್ನು ಐದು ನಿಮಿಷಗಳ ಕಾಲ ಅನುಸರಿಸಿದರೆ ತ್ವಚೆಗೆ ಆರೋಗ್ಯಕರ ಪೋಷಣೆ ದೊರೆಯುವುದು. ಇದರಿಂದಾಗಿ ಸಾಕಷ್ಟು ತ್ವಚೆಯ ಸಮಸ್ಯೆಗಳು ದೂರವಾಗಿ ಹೆಚ್ಚು ಕಾಂತಿಯಿಂದ ಕೂಡಿರುತ್ತದೆ.

ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮದ ಆರೈಕೆಗಾಗಿ

ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮದ ಆರೈಕೆಗಾಗಿ

ಎಣ್ಣೆಯುಕ್ತ ಮತ್ತು ಮೊಡವೆಗಳಿಂದ ಕೂಡಿರುವ ತ್ವಚೆಯನ್ನು ಹೆಚ್ಚು ಮುತುವರ್ಜಿ ನೀಡುವುದರ ಮೂಲಕ ಆರೈಕೆಯನ್ನು ಕೈಗೊಳ್ಳಬೇಕು. ಇಂತಹ ತ್ವಚೆಯವರು ಹೆಚ್ಚು ಶುದ್ಧತೆಗೆ ಆದ್ಯತೆ ನೀಡಬೇಕು.

*ಮೊದಲು ನೀವು ನಿಮ್ಮ ಚರ್ಮದ ಪ್ರಕಾರಗಳಿಗೆ ಅನುಗುಣವಾಗಿ ಫೋಮಿಂಗ್ ಅಥವಾ ಜೆಲ್ ಆಧಾರಿತ ಕ್ಲೆನ್ಸರ್‍ನೊಂದಿಗೆ ಶುಚಿಗೊಳಿಸಿ.

*ವೃತ್ತಾಕಾರದ ಚಲನೆಯೊಂದಿಗೆ ಮಸಾಜ್ ಮಾಡುವುದರ ಮೂಲಕ ಒಮ್ಮೆ ಮುಖವನ್ನು ತೊಳೆಯಿರಿ.

*ಹೆಚ್ಚಿನ ಶುಚಿತ್ವ ಅಥವಾ ಶುದ್ಧೀಕರಿಸಲು ಟೋನರ್ ಅನ್ವಯಿಸಿ. ಇದರಿಂದ ಕೊಳಕು ಚರ್ಮಗಳು ಮತ್ತು ಸತ್ತ ಜೀವ ಕೋಶಗಳು ನಿವಾರಣೆಯಾಗುತ್ತವೆ.

*ಮೂರನೇ ಹಂತದಲ್ಲಿ ರೆಟಿನಾಲ್ ಸೀರಮ್‍ಅನ್ನು ಬಳಸಿ. ಇದು ರಂಧ್ರಗಳನ್ನು ಕಡಿಮೆ ಮಾಡಿಹೊಸ ಚರ್ಮ ಕೋಶಗಳ ಉತ್ಪಾದನೆಗೆ ಪ್ರೇರಣೆ ನೀಡುತ್ತದೆ.

*ಕೊನೆಯದಾಗಿ ಎಣ್ಣೆ ಮುಕ್ತ ಮಾಯ್ಚುರೈಸ್ ಕ್ರೀಮ್ ಅನ್ನು ಅನ್ವಯಿಸಿ.

*ಹೀಗೆ ಮಾಡುವುದರಿಂದ ಚರ್ಮದಲ್ಲಿ ಶುದ್ಧತೆ ಉಳಿದುಕೊಳ್ಳುವುದರ ಜೊತೆಗೆ ತೇವಾಂಶದ ಮಟ್ಟವು ಸಮತೋಲನದಲ್ಲಿ ಇರುತ್ತದೆ. ಆಗ ಚರ್ಮದ ಆರೋಗ್ಯವು ಉತ್ತಮವಾಗಿರುವುದರ ಜೊತೆಗೆ ಕಾಂತೀಯ ಗುಣವನ್ನು ಪಡೆದುಕೊಳ್ಳುವುದು.

Most Read: ಆರೋಗ್ಯದಾಯಕ ತ್ವಚೆಗೆ ನೀವು ಸೇವಿಸಬೇಕಾದ 4 ಆಹಾರಗಳು

ಶುಷ್ಕ/ಒಣ ಚರ್ಮಕ್ಕೆ ಸುಲಭ ಪರಿಹಾರ

ಶುಷ್ಕ/ಒಣ ಚರ್ಮಕ್ಕೆ ಸುಲಭ ಪರಿಹಾರ

ಶುಷ್ಕ ತ್ವಚೆಯನ್ನು ಹೊಂದಿರುವವರು ಬಹುಬೇಗ ತ್ವಚೆಯ ಹಾನಿ ಹಾಗೂ ಅನಾರೋಗ್ಯವನ್ನು ಅನುಭವಿಸುತ್ತಾರೆ. ಜೊತೆಗೆ ಚರ್ಮದಲ್ಲಿ ಕಾಂತೀಯ ಹಾಗೂ ತೇವಾಂಶದ ಗುಣ ಕಡಿಮೆ ರುವುದರಿಂದ ಒಡಕು, ಉರಿಯೂತ, ಕೋಶಗಳ ನಾಶ ಹಾಗೂ ಮಂದ ಆಕರ್ಷಣೆಯನ್ನು ಪಡೆದುಕೊಳ್ಳುವುದು. ಹಾಗಾಗಿ ಇಂತಹ ತ್ವಚೆಯವರು ಹೆಚ್ಚಿನ ಆರೈಕೆ ಹಾಗೂ ಕಾಳಜಿಯನ್ನು ಕೈಗೊಳ್ಳಬೇಕು.

*ಇಂತಹವರು ಹೈಡ್ರೇಟಿಂಗ್ ಪೋಷಕಾಂಶವನ್ನು ಒಳಗೊಂಡಿರುವ ಹಾಲು, ಹಾಲಿನ ಕೆನೆ ಮತ್ತು ಕ್ಲೆನ್ಸರ್‍ಗಳನ್ನು ಬಳಸುವುದನ್ನು ರೂಢಿ ಮಾಡಿಕೊಳ್ಳಬೇಕು.

*ಇವರು ನಿದ್ರೆ ಮಾಡುವ ಸಮಯದಲ್ಲಿ ಚರ್ಮವು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಚರ್ಮದಲ್ಲಿ ತೇವಾಂಶದ ಮಟ್ಟ ಕಡಿಮೆಯಾಗುವುದು. ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

*ಶುಷ್ಕ ತ್ವಚೆಯವರು ಆಂಟಿ ಏಜಿಂಗ್ ಸೆರಮ್ ಅನ್ನು ಬಳಸಬೇಕು. ಇದರ ಬಳಕೆಯಿಂದ ಚರ್ಮವು ನವೀಕರಣದ ಗುಣವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಚರ್ಮಕೋಶಗಳನ್ನು ಆರೋಗ್ಯದಿಂದಿಡುವುದು ಮತ್ತು ಪುನರ್ ಉತ್ಪಾದಿಸುವ ಸಾಮಥ್ರ್ಯವನ್ನು ಪಡೆದುಕೊಳ್ಳುವುದು.

*ಸೀರಮ್ ಸಂಪೂರ್ಣವಾಗಿ ಚರ್ಮಕ್ಕೆ ಹೀರಲ್ಪಡುವ ಮೊದಲು ರಾತ್ರಿ ವೇಳೆ ಅಂದರೆ ಮಲಗುವ ಮುನ್ನ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡಲು ಮಾಯ್ಚುರೈಸ್ ಕ್ರೀಮ್ ಅನ್ನು ಅನ್ವಯಿಸಿ.

*ಪ್ರಕ್ರಿಯೆಯನ್ನು ಅನುಸರಿಸಲು ನಿತ್ಯ ಐದು ನಿಮಿಷವನ್ನು ಮೀಸಲಾಗಿಟ್ಟರೆ ನಿಮ್ಮ ತ್ವಚೆಯು ಆರೋಗ್ಯ ಹಾಗೂ ಕಾಂತಿಯಿಂದ ಕೂಡಿರುತ್ತದೆ.

ಸಂಯೋಜನೆಯ/ಸಾಮಾನ್ಯ ತ್ವಚೆಯವರಿಗಾಗಿ ಸುಲಭ ಪರಿಹಾರ

ಸಂಯೋಜನೆಯ/ಸಾಮಾನ್ಯ ತ್ವಚೆಯವರಿಗಾಗಿ ಸುಲಭ ಪರಿಹಾರ

ಮುಖದ ಕೆಲವು ಸ್ಥಳಗಳಲ್ಲಿ ಅಂದರೆ ಮೂಗು, ಗಲ್ಲ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಒಣಗಿರುವಂತಹ ಚರ್ಮವನ್ನು ಹಗೊಂದಿದ್ದರೆ ಅಂತಹ ಚರ್ಮವನ್ನು ಸಂಯೋಜನೆಯ ಅಥವಾ ಸಾಮಾನ್ಯ ತ್ವಚೆಯವರು ಎಂದು ಹೇಳಲಾಗುವುದು. ಇಂತಹ ಚರ್ಮವು ಹೆಚ್ಚು ಆರೋಗ್ಯಕರ ಹಾಗೂ ಕಾಂತಿಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಅಂತೆಯೇ ಧೂಳಿನಿಂದ ಕೂಡಿರುವುದು, ಕಾಳಜಿ ನೀಡದೆ ಇರುವುದು, ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡದೆ ಇದ್ದರೆ ಚರ್ಮವು ಬಹುಬೇಗ ಹಾನಿಗೆ ಒಳಗಾಗುತ್ತದೆ.

*ಇಂತಹ ತ್ವಚೆಯವರು ಸಾರಭೂತ ತೈಲಗಳನ್ನು, ಜೆಲ್ ಆಧಾರಿತ ಕ್ಲೆನ್ಸರ್‍ಗಳನ್ನು ಬಳಸಬೇಕು. ಇವು ಪೋಷಣೆ ನೀಡಲು ಹಾಗೂ ಕಿರಿಕಿರಿಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತವೆ.

*ಸಾಮಾನ್ಯ ತ್ವಚೆಯವರು ಟೋನರ್ ಬಳಸುವುದು ಅಥವಾ ಟೋನರ್ ಮೊರೆ ಹೋಗುವುದು ಅತ್ಯುತ್ತಮವಾದ ಆಯ್ಕೆಯಾಗುತ್ತದೆ. ಇವರು ಟೋನರ್ ಬಳಕೆ ಮಾಡುವುದರಿಂದ ಚರ್ಮವು ಹೆಚ್ಚುವರಿ ವರ್ಧಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

*ಈ ತ್ವಚೆಯವರು ಟೋನರ್ ಬಳಕೆ ಮಾಡುವುದರಿಂದ ಚರ್ಮವು ಹೆಚ್ಚುವರಿ ವರ್ಧಕವನ್ನು ನೀಡುತ್ತದೆ. ಜೊತೆಗೆ ಚರ್ಮದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು.

*ಸಾಮಾನ್ಯ ತ್ವಚೆಯವರು ಸೀರಮ್ ಬಳಸುವುದರಿಂದ ದೊಡ್ಡ ರಂಧ್ರಗಳಾಗುವುದನ್ನು ತಡೆಹಿಡಿಯುತ್ತದೆ. ಚರ್ಮದಲ್ಲಿ ಸುಕ್ಕುಗಟ್ಟುವುದನ್ನು ತಡೆಯುವುದು.

*ಮಲಗುವ ಮುನ್ನ ಚರ್ಮಕ್ಕೆ ಮಾಯಿಶ್ಚರೈಸರ್ ಕ್ರೀಮ್ ಬಳಸುವುದರಿಂದ ಚರ್ಮಕ್ಕೆ ಅಗತ್ಯವಾದ ತೇವಾಂಶ ಹಾಗೂ ಎಣ್ಣೆಯ ಅಂಶವನ್ನು ಉಳಿದುಕೊಳ್ಳುವಂತೆ ಮಾಡುವುದು. ಜೊತೆಗೆ ಚರ್ಮವು ಶುದ್ಧವಾಗಿರುವುದರ ಮೂಲಕ ಹೈಡ್ರೀಕರಿಸಿರುತ್ತದೆ. ಇದರ ಪರಿಣಾಮವು ಚರ್ಮ ಮೃದು ಹಾಗೂ ಕಾಂತಿಯಿಂದ ಕೂಡಿರುವಂತೆ ಮಾಡುವುದು.

English summary

Five minute night-time skincare tips

There’s no denying that after a long day at work, you want to sit back, relax and recharge. And while you may require that down time, there’s another big part of you that needs it too—your skin! In fact, bedtime is the perfect time to let your skin repair and rejuvenate. This is why, to make sure your skin gets the right fuel to reboot, you need a separate night-time routine. Don’t be alarmed, though! All you really need is five minutes and you’re set. There is one small catch—you definitely need a routine suited to your skin type!
X