For Quick Alerts
ALLOW NOTIFICATIONS  
For Daily Alerts

ನಿದ್ರಾಹೀನತೆಯಿಂದಾಗಿ ಸೌಂದರ್ಯದ ಮೇಲೆ ಪರಿಣಾಮ

|

ಸುಂದರ ನಿದ್ರೆ ಎನ್ನುವ ಶಬ್ಧವನ್ನು ನೀವು ಕೇಳಿರಬಹುದು. ಹೌದು, ನಿದ್ರೆಯು ಸರಿಯಾಗಿದ್ದರೆ ಆಗ ಸೌಂದರ್ಯವು ಇರುತ್ತದೆ. ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಿದ್ದರೆ ಅದು ನಿಮ್ಮ ಸೌಂದರ್ಯದ ಮೇಲೆ ಅದ್ಭುತವನ್ನು ಉಂಟು ಮಾಡುವುದು. ಅದೇ ನಿದ್ರಾಹೀನತೆ ಇದ್ದರೆ ಅದು ನಿಮ್ಮ ಸೌಂದರ್ಯಕ್ಕೆ ಕೆಟ್ಟ ಪರಿಣಾಮ ಬೀರುವುದು. ವಿವಿಧ ರೀತಿಯ ಪರಿಣಾಮಗಳೊಂದಿಗೆ ನಿದ್ರೆಹೀನತೆಯಿಂದಾಗಿ ಆಯಾಸ ಮತ್ತು ಕಣ್ಣುಗಳ ಕೆಳಗಡೆ ಕಪ್ಪು ಕಲೆಗಳು ಮೂಡುವುದು ಇತ್ಯಾದಿ ಸಮಸ್ಯೆಗಳು ಕಂಡುಬರುವುದು.

ದೇಹ ಮತ್ತು ಮನಸ್ಸನ್ನು ಪುನರ್ಶ್ಚೇತನಗೊಳಿಸಲು ಸರಿಯಾದ ನಿದ್ರೆ ಅತೀ ಅಗತ್ಯವಾಗಿ ಇರುವುದು. ರಾತ್ರಿ ವೇಳೆ ನಿದ್ರೆಯು ಸರಿಯಾದರೆ ಆಗ ಚರ್ಮವನ್ನು ಪುನರುಜ್ಜೀವನಗೊಳಿಸುವುದು. ಆದರೆ ನಿದ್ರೆಯ ತೊಂದರೆ ಕಾಣಿಸಿಕೊಂಡರೆ ಆಗ ಚರ್ಮ ಮತ್ತು ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಬರಬಹುದು. ಇದರಲ್ಲಿ ಮುಖ್ಯವಾಗಿ ಮೊಡವೆ, ಒಣಚರ್ಮ, ಚರ್ಮದ ಅಲರ್ಜಿ ಇತ್ಯಾದಿಗಳು. ನಿದ್ರಾಹೀನತೆ ಯಿಂದಾಗಿ ಎಷ್ಟು ಪರಿಣಾಮ ಉಂಟಾಗುವುದು ಎಂದು ನಾವು ಈ ಲೇಖನದಲ್ಲಿ ತಿಳಿಯುವ. ಇದು ನಿಮ್ಮ ಸೌಂದರ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂದು ಕೂಡ ತಿಳಿಯುವ. ಇದರ ಬಗ್ಗೆ ನೀವು ತಿಳಿಯಿರಿ.

Sleep Deprivation

ಚರ್ಮವು ಕಾಂತಿ ಕಳೆದುಕೊಳ್ಳುವುದು
ನಿದ್ರೆ ಕಡಿಮೆಯಾದರೆ ಆಗ ದೇಹದಲ್ಲಿ ಕಾರ್ಟಿಸಲ್ ಪ್ರಮಾಣವು ಹೆಚ್ಚಾಗುವುದು. ಇದು ಚರ್ಮದಲ್ಲಿ ಉರಿಯೂತ ಉಂಟು ಮಾಡುವ ಹಾರ್ಮೋನ್ ಆಗಿದೆ ಮತ್ತು ಚರ್ಮವನ್ನು ಇದು ನಿಸ್ತೇಜಗೊಳಿಸುವುದು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ಕಾಂತಿ ಕಳೆದುಕೊಳ್ಳುವಿರಿ ಮತ್ತು ಚರ್ಮವು ಒಣ ಹಾಗೂ ನಿಸ್ತೇಜವಾಗುವುದು.

ಮೊಡವೆಗಳನ್ನು ಉಂಟು ಮಾಡಬಹುದು
ನಿದ್ರಾಹೀನತೆಯ ಮತ್ತೊಂದು ಪ್ರಮುಖ ಪರಿಣಾಮವೆಂದರೆ ಮೊಡವೆ, ಬೊಕ್ಕೆ ಇತ್ಯಾದಿಗಳು ಮೂಡುವುದು. ನಿದ್ರಾ ಹೀನತೆಯಿಂದಾಗಿ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗುವುದು ಮತ್ತು ಚರ್ಮದ ಮೇಲೆ ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳು ದಾಳಿ ಮಾಡುವುದು. ನಿದ್ರಾಹೀನತೆಯಿಂದಾಗಿ ಚರ್ಮದಲ್ಲಿ ಉರಿಯೂತ ಉಂಟಾಗುವುದು ಮತ್ತು ಇದರಿಂದ ಮೊಡವೆಯಂತಹ ಸಮಸ್ಯೆ ಕಂಡುಬರುವುದು.

ಚರ್ಮದ ಸಮಸ್ಯೆಯನ್ನು ಕೆಡಿಸುವುದು
ನಿದ್ರಾಹೀನತೆಯಿಂದಾಗಿ ಮೊಡವೆಗಳು ಮೂಡುವುದು ಮಾತ್ರವಲ್ಲದೆ, ನಿಮಗೆ ಯಾವುದೇ ಚರ್ಮದ ಸಮಸ್ಯೆಯಿದ್ದರೆ ಅದನ್ನು ಮತ್ತಷ್ಟು ಹೆಚ್ಚಿಸುವುದು. ಮೊಡವೆ ಅಥವಾ ಇನ್ಯಾವುದೇ ಸಮಸ್ಯೆ ಕಾಣಿಸುತ್ತಿದ್ದರೆ ಆಗ ನಿದ್ರಾ ಹೀನತೆಯಿಂದ ಅದು ಮತ್ತಷ್ಟು ಕೆಡುವುದು. ರಾತ್ರಿ ವೇಳೆ ನಿದ್ರೆ ಸರಿಯಾಗಿದ್ದರೆ ಆಗ ಚರ್ಮವು ವೇಗವಾಗಿ ಚೇತರಿಸುವುದು.

ಚರ್ಮಕ್ಕೆ ಬೇಗನೆ ವಯಸ್ಸಾಗುವಂತೆ ಮಾಡುವುದು
ಚರ್ಮವನ್ನು ಪುನರ್ಶ್ಚೇತನಗೊಳಿಸಲು ಮತ್ತು ಆರೋಗ್ಯವಾಗಿಡಲು ಸರಿಯಾದ ನಿದ್ರೆಯು ಅತೀ ಅಗತ್ಯವಾಗಿದೆ. ನಿದ್ರಾಹೀನತೆಯಿಂದಾಗಿ ಚರ್ಮದಲ್ಲಿ ಕಾಲಜನ್ ಉತ್ಪತ್ತಿಯು ಕಡಿಮೆ ಮಾಡುವುದು ಮತ್ತು ಇದರಿಂದಾಗಿ ಚರ್ಮದಲ್ಲಿ ಗೆರೆ ಹಾಗೂ ನೆರಿಗೆಗಳು ಮೂಡುವುದು. ನಿದ್ರಾಹೀನತೆಯಿಂದಾಗಿ ಚರ್ಮವು ಸರಿಯಾಗಿ ಕಾರ್ಯನಿರ್ವಹಿಸದೆ ಇರಬಹುದು ಮತ್ತು ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಬಹುದು.

ಒಣ ಚರ್ಮ ಉಂಟು ಮಾಡುವುದು
ನಿದ್ರಿಸುವ ವೇಳೆ ದೇಹವು ಪುನರ್ಶ್ಚೇತಗೊಳ್ಳುವುದು ಮಾತ್ರವಲ್ಲದೆ, ದೇಹಕ್ಕೆ ಬೇಕಾಗುವ ತೇವಾಂಶದ ಮಟ್ಟವನ್ನು ಸುಧಾರಣೆ ಮಾಡುವುದು. ಇದರಿಂದ ಸರಿಯಾದ ನಿದ್ರೆ ಮಾಡಿದರೆ ದೇಹಕ್ಕೆ ಮೊಶ್ಚಿರೈಸ್ ಸಿಗುವುದು ಮತ್ತು ತೇವಾಂಶದಿಂದ ಇಡುವುದು. ನಿದ್ರೆ ಸರಿಯಾಗಿ ಇಲ್ಲದೆ ಇದ್ದರೆ ಆಗ ಒಣ ಚರ್ಮದ ಸಮಸ್ಯೆಯು ಉಂಟಾಗುವುದು. ಒಣ ಚರ್ಮದೊಂದಿಗೆ ವಿವಿಧ ರೀತಿಯ ಸಮಸ್ಯೆಗಳು ಕಂಡುಬರುವುದು.

ಕಣ್ಣ ಕೆಳಗಡೆ ಕಪ್ಪು ಕಲೆಗಳು
ಕಣ್ಣಿನ ಕೆಳಭಾಗದ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು ಮತ್ತು ಇದರಿಂದಾಗಿ ಅದರ ಮೇಲೆ ಸುಲಭವಾಗಿ ಪರಿಣಾಮ ಬೀರುವುದು. ನಿದ್ರಾ ಹೀನತೆ ಉಂಟಾದರೆ ಆಗ ಕಣ್ಣಿನ ಕೆಳಗಡೆ ಕಪ್ಪು ಕಲೆಗಳು ಮೂಡುವುದು. ಕಪ್ಪು ಕಲೆಗಳು, ಊದಿಕೊಂಡ ಕಣ್ಣುಗಳು ನಿದ್ರಾಹೀನತೆಯಿಂದಾಗಿ ಕಾಣಿಸುವುದು. ಇದರಿಂದಾಗಿ ನಿಮ್ಮ ಸಂಪೂರ್ಣ ಮುಖದ ಸೌಂದರ್ಯವು ಕೆಡುವುದು.

ತೂಕ ಹೆಚ್ಚಿಸಬಹುದು
ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ ನಿಜ. ಸರಿಯಾಗಿ ನಿದ್ರೆ ಮಾಡದೆ ಇರುವ ಪರಿಣಾಮವಾಗಿ ತೂಕ ಹೆಚ್ಚಳವಾಗುವ ಸಾಧ್ಯತೆಗಳು ಇರುವುದು. ಹಲವಾರು ಅಧ್ಯಯನಗಳು ಕೂಡ ನಿದ್ರಾ ಹೀನತೆಯಿಂದಾಗಿ ತೂಕ ಹೆಚ್ಚಳ ಮತ್ತು ಬೊಜ್ಜು ಉಂಟಾಗುವುದು ಎಂದು ಹೇಳಿವೆ. ನಿದ್ರಾಹೀನತೆಯಿಂದಾಗಿ ಹಸಿವು ಹೆಚ್ಚಾಗುವುದು ಮತ್ತು ಸಿಹಿ ತಿನ್ನಬೇಕು ಎನ್ನುವ ಬಯಕೆ ಹೆಚ್ಚುವುದು. ಇದರಿಂದಾಗಿ ದೇಹದ ತೂಕ ಹೆಚ್ಚಳವಾಗುವುದು.

English summary

Effects Of Sleep Deprivation On Your Beauty

You might have heard about the term 'beauty sleep'. Well, guess what? Beauty sleep is real! Apart from the obvious effects of lack of sleep such as looking tired, the bags under your eyes etc., it has some long-term outcomes on your beauty as well. Through this article, we aim to discuss the adverse effects of sleep deprivation on your beauty. Check it out!
X
Desktop Bottom Promotion