For Quick Alerts
ALLOW NOTIFICATIONS  
For Daily Alerts

ಐಸ್‌ಕ್ಯೂಬ್‌ನಿಂದ ಸೌಂದರ್ಯದ ಆರೈಕೆಗೆ ಪರಿಣಾಮಕಾರಿ ವಿಧಾನಗಳು

|

ಸೌಂದರ್ಯ ಪ್ರತಿಯೊಬ್ಬರಿಗೂ ಬೇಕು. ಹೀಗೆ ಇರುವಾಗ ಅದನ್ನು ಕಾಪಾಡಿಕೊಂಡು ಹೋಗುವುದು ತುಂಬಾ ಮುಖ್ಯ. ಒತ್ತಡದ ಜೀವನ, ಕಲುಷಿತ ವಾತಾವರಣ ಹೀಗೆ ಹಲವಾರು ಕಾರಣಗಳಿಂದಾಗಿ ನಮ್ಮ ತ್ವಚೆಯ ಮೇಲೆ ಪರಿಣಾಮಗಳು ಉಂಟಾಗುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳಬಹುದು ಅಥವಾ ಮುಖದ ಮೇಲೆ ಕಲೆಗಳು, ಮೊಡವೆ ಹಾಗೂ ಬೊಕ್ಕೆಗಳು ಕಾಣಿಸಬಹುದು.

ಇದನ್ನು ನಾವು ಖಂಡಿತವಾಗಿಯೂ ಇಷ್ಟಪಡಲಾರೆವು. ಮುಖದ ಮೇಲಿನ ಮೊಡವೆ ಹಾಗೂ ಬೊಕ್ಕೆ ಇತ್ಯಾದಿಗಳನ್ನು ನಿವಾರಣೆ ಮಾಡಲು ನೀವು ಹಲವಾರು ರೀತಿಯ ಕ್ರೀಮ್ ಹಾಗೂ ಮನೆಮದ್ದುಗಳನ್ನು ಬಳಸಿಕೊಂಡಿಬಹುದು. ಈ ಲೇಖನದಲ್ಲಿ ನಾವು ಐಸ್ ಕ್ಯೂಬ್(ಮಂಜುಗಡ್ಡೆ ತುಂಡುಗಳು) ಬಳಸಿಕೊಂಡು ಸೌಂದರ್ಯವನ್ನು ಹೆಚ್ಚಿಸುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ. ಇದು ರಕ್ತಸಂಚಾರವನ್ನು ಉತ್ತಮಪಡಿಸುವ ಕಾರಣದಿಂದಾಗಿ ಕಾಂತಿ ಸಿಗುವುದು. ಇದರಿಂದ ಐಸ್ ಕ್ಯೂಬ್ ಗಳು ಅದ್ಬುವನ್ನು ಉಂಟು ಮಾಡಲಿದೆ. ಕಣ್ಣಿನ ಕೆಳಗೆ ಊದಿಕೊಂಡಿರುವುದು, ಬಿಸಿಲಿನಿಂದ ಆಗಿರುವ ಸುಟ್ಟ ಕಲೆಗಳು ಮತ್ತು ಇತರ ಸಮಸ್ಯೆಗಳನ್ನು ನಿವಾರಣೆ ಮಾಡಲು ವಿಶ್ವದೆಲ್ಲೆಡೆಯಲ್ಲಿ ಇರುವಂತಹ ಮಹಿಳೆಯರು ಐಸ್ ಕ್ಯೂಬ್ ನ್ನು ಬಳಸಿಕೊಳ್ಳುವರು. ಕಾಂತಿಯುತ ಚರ್ಮವನ್ನು ಪಡೆಯಲು ಐಸ್ ಕ್ಯೂಬ್ ನೆರವಾಗಲಿದೆ ಎಂದು ಹೇಳಲಾಗುತ್ತದೆ.

 Ice Cubes For Skincare

ಐಸ್ ಕ್ಯೂಬ್ ನ್ನು ದಿನನಿತ್ಯದ ಸೌಂದರ್ಯವರ್ಧಕದೊಂದಿಗೆ ಬಳಸಿಕೊಂಡಾಗ ನಿಮ್ಮ ಮುಖಕ್ಕೆ ಹೆಚ್ಚಿನ ಕಾಂತಿ ಸಿಗುವುದು. ಐಸ್ ಕ್ಯೂಬ್ ತುಂಬಾ ಅಗ್ಗ ಮತ್ತು ಇದು ಎಲ್ಲಾ ರೀತಿಯ ಚರ್ಮಕ್ಕೆ ಹೊಂದಿಕೊಳ್ಳುವುದು. ಐಸ್ ಕ್ಯೂಬ್ ನಿಮ್ಮ ಮೇಕಪ್ ನ್ನು ದೀರ್ಘಕಾಲ ತನಕ ಉಳಿಸುವುದು ಮಾತ್ರವಲ್ಲದೆ ಇದು ಹಲವಾರು ರೀತಿಯಿಂದ ಚರ್ಮಕ್ಕೆ ನೆರವಾಗುವುದು. ನಿಮ್ಮ ದೈನಂದಿನ ಸೌಂದರ್ಯವರ್ಧಕದಲ್ಲಿ ಐಸ್ ಕ್ಯೂಬ್ ನ್ನು ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ನೀವು ದಿನನಿತ್ಯವು ಬಳಸಿಕೊಂಡ ವೇಳೆ ಆಗ ನಿಮಗೆ ಹಲವಾರು ರೀತಿಯ ಲಾಭಗಳು ಸಿಗುವುದು.

ಐಸ್ ಕ್ಯೂಬ್ ನಿಂದ ಸಿಗುವ ಲಾಭಗಳು
•ಬಳಲಿದ ಚರ್ಮವನ್ನು ಪುನರ್ಶ್ಚೇತನಗೊಳಿಸುವುದು.
•ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ
•ಚರ್ಮದ ಉರಿಯೂತ ಕಡಿಮೆ ಮಾಡುವುದು.
•ಬಿಸಿಲಿನ ಸುಟ್ಟ ಗಾಯಕ್ಕೆ ಶಮನ ನೀಡುವುದು.
•ಕಣ್ಣಿನ ಕೆಳಗಡೆ ಇರುವ ಊತ ಕಡಿಮೆ ಮಾಡುವುದು.
•ಕಪ್ಪು ವೃತ್ತಗಳ ನಿವಾರಣೆ ಮಾಡುವುದು.
•ಬೊಕ್ಕೆಗಳನ್ನು ನಿವಾರಿಸುವುದು
•ಚರ್ಮದ ರಂಧ್ರಗಳನ್ನು ಕಿರಿದಾಗಿಸುವುದು.
•ನೆರಿಗೆಗಳು ಕಾಣದಂತೆ ಮಾಡುವುದು
•ಚರ್ಮದಲ್ಲಿ ಎಣ್ಣೆಯಂಶ ಕಡಿಮೆ ಮಾಡುವುದು.
•ಚರ್ಮದಲ್ಲಿನ ಸತ್ತಕೋಶಗಳನ್ನು ತೆಗೆದುಹಾಕುವುದು.
•ಚರ್ಮ ಕೆಂಪಾಗುವುದನ್ನು ತಡೆಯುವುದು
•ಚರ್ಮಕ್ಕೆ ಕಾಂತಿ ಮತ್ತು ಸೌಂದರ್ಯ ನೀಡುವುದು.
ಐಸ್ ಕ್ಯೂಬ್ ನ್ನು ಚರ್ಮದ ಆರೈಕೆಗೆ ಬಳಸಿಕೊಳ್ಳುವುದು ಹೇಗೆ

ನಯ ಹಾಗೂ ಕಾಂತಿಯುತ ಚರ್ಮಕ್ಕೆ ಐಸ್ ಕ್ಯೂಬ್ ಮತ್ತು ಜೇನುತುಪ್ಪ
ಬ್ಯಾಕ್ಟೀರಿಯ ವಿರೋಧಿ ಮತ್ತು ಆಂಟಿ ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವಂತಹ ಜೇನುತುಪ್ಪವು ನಯ ಹಾಗೂ ಸುಂದರ ಚರ್ಮ ನೀಡುವುದು. ನಿಯಮಿತವಾಗಿ ಜೇನುತುಪ್ಪ ಬಳಸಿಕೊಂಡರೆ ಆಗ ಚರ್ಮವು ಕಾಂತಿಯುತವಾಗುವುದು.
ಬೇಕಾಗುವ ಸಾಮಗ್ರಿಗಳು
2 ಚಮಚ ಜೇನುತುಪ್ಪ
*ನೀರು(ನಿಮಗೆ ಬೇಕಾಗುಷ್ಟು)

ಬಳಸುವ ವಿಧಾನ
•ಜೇನುತುಪ್ಪ ಮತ್ತು ನೀರನ್ನು ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣವನ್ನು ಈಗ ಐಸ್ ಟ್ರೇಗೆ ಹಾಕಿಬಿಡಿ ಮತ್ತು ಅದು ಐಸ್ ಕ್ಯೂಬ್ ಗಳಾಗಲಿ.
•ಐಸ್ ಕ್ಯೂಬ್ ಗಳಾದ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ.
•ಇದು ಒಣಗಲಿ ಮತ್ತು ಅದನ್ನು ಹಾಗೆ ಬಿಟ್ಟುಬಿಡಿ.
•ಉತ್ತಮ ಫಲಿತಾಂಶ ಬೇಕಾದಾಗ ನೀವು ಇದನ್ನು ವಾರದಲ್ಲಿ ಮೂರು ಸಲ ಬಳಸಿಕೊಳ್ಳಿ. ಬಿಸಿಲಿನಿಂದ ಸುಟ್ಟ ಚರ್ಮಕ್ಕೆ ಐಸ್ ಕ್ಯೂಬ್ ಮತ್ತು ಅಲೋವೆರಾ ಅಲೋವೆರಾದಲ್ಲಿ ಚರ್ಮಕ್ಕೆ ಶಮನ ನೀಡುವಂತಹ ಗುಣವು ಇದೆ ಮತ್ತು ಇದು ಚರ್ಮವನ್ನು ಶಾಂತಗೊಳಿಸುವುದು ಮತ್ತು ಉರಿಯೂತ ಕಡಿಮೆ ಮಾಡುವುದು. ಅಲೋವೆರಾವನ್ನು ಬಿಸಿಲಿನಿಂದ ಸುಟ್ಟ ಜಾಗಕ್ಕೆ ಹಚ್ಚಿಕೊಂಡರೆ ಆಗ ನಿಮಗೆ ಶಮನ ಸಿಗುವುದು ಮತ್ತು ಆರಾಮವಾಗುವುದು.

ಬೇಕಾಗುವ ಸಾಮಗ್ರಿಗಳು
2 ಚಮಚ ಅಲೋವೆರಾ ಲೋಳೆ(ತಾಜಾವಾಗಿ ತೆಗೆದಿರುವುದು)
ನೀರು(ನಿಮಗೆ ಬೇಕಾದಷ್ಟು)
ತಯಾರಿಸುವ ವಿಧಾನ
•ಒಂದು ತಾಜಾ ಅಲೋವೆರಾ ಲೋಳೆ ಮತ್ತು ನೀರನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಐಸ್ ಟ್ರೇಗೆ ಹಾಕಿ ಮತ್ತು ಅದು ಐಸ್ ಕ್ಯೂಬ್ ಗಳಾಗಲು ಬಿಡಿ.
•ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•ಇದನ್ನು ಒಣಗಲು ಬಿಡಿ ಮತ್ತು ಹಾಗೆ ಮುಖದ ಮೇಲೆ ಬಿಡಿ.
•ನಿರೀಕ್ಷಿತ ಫಲಿತಾಂಶ ಸಿಗಬೇಕಾದರೆ ಆಗ ನೀವು ವಾರದಲ್ಲಿ ಮೂರು ಸಲ ಇದನ್ನು ಬಳಸಿಕೊಳ್ಳಿ.

ಕಣ್ಣ ಕೆಳಗಿನ ಊತಕ್ಕೆ ಐಸ್ ಕ್ಯೂಬ್ ಮತ್ತು ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಸಮೃದ್ಧವಾಗಿದೆ ಮತ್ತು ಇದು ಕಣ್ಣ ಕೆಳಗಿನ ಊತ ಹಾಗೂ ಕಪ್ಪು ವೃತ್ತಗಳನ್ನು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು
ಎರಡು ಗ್ರೀನ್ ಟೀ ಬ್ಯಾಗ್
*ಬಿಸಿ ನೀರು(ಬೇಕಾಗುವಷ್ಟು)
ತಯಾರಿಸುವ ವಿಧಾನ
•ಸಣ್ಣ ಕಪ್ ನಲ್ಲಿ ಬಿಸಿ ನೀರು ಹಾಕಿ ಮತ್ತು ಅದಕ್ಕೆ ಎರಡು ಗ್ರೀನ್ ಟೀ ಬ್ಯಾಗ್ ಹಾಕಿ.
•15-20 ನಿಮಿಷ ಕಾಲ ಹಾಗೆ ಇಡಿ ಮತ್ತು ಇದರ ಬಳಿಕ ಬ್ಯಾಗ್ ತೆಗೆದು ಬಿಸಾಡಿ.
•ಗ್ರೀನ್ ಟೀ ಈಗ ತಣ್ಣಗಾಗಲು ಬಿಡಿ.
•ತಣ್ಣಗಾದ ಬಳಿಕ ಗ್ರೀನ್ ಟೀಯನ್ನು ಐಸ್ ಟ್ರೇಗೆ ಹಾಖಿ ಮತ್ತು ಐಸ್ ಕ್ಯೂಬ್ ತಯಾರಿಸಿಕೊಳ್ಳಿ.
•ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•ಇದನ್ನು ಒಣಗಲು ಬಿಡಿ ಮತ್ತು ಅದು ಹಾಗೆ ಇರಲಿ.
•ನಿರೀಕ್ಷಿತ ಫಲಿತಾಂಶಕ್ಕಾಗಿ ನೀವು ವಾರದಲ್ಲಿ ಎರಡು ಸಲ ಹೀಗೆ ಮಾಡಿ.

ಮೊಡವೆ ನಿವಾರಣೆಗೆ ಐಸ್ ಕ್ಯೂಬ್ ಮತ್ತು ದಾಲ್ಚಿನ್ನಿ
ದಾಲ್ಚಿನಿಯಲ್ಲಿ ಮೊಡವೆ ನಿವಾರಣೆ ಮಾಡುವಂತಹ ಉರಿಯೂತ ಶಮನಕಾರಿ ಗುಣಗಳು ಇದೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂಡ ಇದೆ. ಐಸ್ ನೊಂದಿಗೆ ಇದು ಚರ್ಮದಲ್ಲಿನ ರಂಧ್ರಗಳನ್ನು ಕುಗ್ಗಿಸುವುದು ಮತ್ತು ಇದರಿಂದಾಗಿ ಚರ್ಮದಲ್ಲಿನ ಎಣ್ಣೆಯಂಶವು ಮಾಯವಾಗುವುದು ಮತ್ತು ಮೊಡವೆ ಹಾಗೂ ಬೊಕ್ಕೆಗಳ ನಿವಾರಣೆ ಆಗುವುದು.

ಬೇಕಾಗುವ ಸಾಮಗ್ರಿಗಳು
*2 ಚಮಚ ದಾಲ್ಚಿನಿ ಹುಡಿ
*ನೀರು ಬೇಕಾಗುಷ್ಟು
ತಯಾರಿಸುವ ವಿಧಾನ
•ದಾಲ್ಚಿನಿ ಹುಡಿ ಮತ್ತು ನೀರನ್ನು ಒಂದು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ.
•ಐಸ್ ಟ್ರೇಗೆ ಈ ನೀರನ್ನು ಹಾಕಿ ಮತ್ತು ಇದರಿಂದ ಐಸ್ ಕ್ಯೂಬ್ ತಯಾರಿಸಿಕೊಳ್ಳಿ.
•ಇದನ್ನು ಮುಖದ ಮೇಲೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ.
•ಇದು ಒಣಗಲಿ ಮತ್ತು ಹಾಗೆ ಬಿಟ್ಟುಬಿಡಿ.
•ಉತ್ತಮ ಫಲಿತಾಂಶಕ್ಕಾಗಿ ನೀವು ವಾರದಲ್ಲಿ ಮೂರು ಸಲ ಹೀಗೆ ಮಾಡಿ. ವಯಸ್ಸಾಗುವ ಲಕ್ಷಣ ತಡೆಯಲು ಐಸ್ ಕ್ಯೂಬ್ ಮತ್ತು ಗುಲಾಬಿ ಎಸಲುಗಳು ಗುಲಾಬಿ ಎಸಲುಗಳು ಮತ್ತು ಇದರ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದರಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣ ಇದೆ. ಇದು ನೆರಿಗೆ ಮತ್ತು ಗೆರೆಗಳನ್ನು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು
*½ ಕಪ್ ಒಣಗಿಸಿದ ಗುಲಾಬಿ ಎಸಲುಗಳು
*5-6 ಹನಿ ಗುಲಾಬಿ ತೈಲ
*ನೀರು ಬೇಕಾದಷ್ಟು
ತಯಾರಿಸುವ ವಿಧಾನ
•ಒಂದು ಪಿಂಗಾಣಿಗೆ ಹಾಕಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಇದನ್ನು ಈಗ ಐಸ್ ಟ್ರೇಗೆ ಹಾಕಿ ಮತ್ತು ಅದರಿಂದ ಐಸ್ ಕ್ಯೂಬ್ ಮಾಡಿಕೊಳ್ಳಿ.
•ಇದನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ಬಿಡಿ. ಮುಖ ಮತ್ತು ಕುತ್ತಿಗೆಯನ್ನು ನೀವು ತೊಳೆಯಬೇಡಿ.
•ಇದನ್ನು ವಾರದಲ್ಲಿ ಮೂರ ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಐಸ್ ಕ್ಯೂಬ್ ಮತ್ತು ಅಡುಗೆ ಸೋಡಾ
ಅಡುಗೆ ಸೋಡಾದಲ್ಲಿ ನಂಜು ನಿರೋಧಕ ಹಾಗೂ ಉರಿಯೂತ ಶಮನಕಾರಿ ಗುಣಗಳು ಇವೆ. ಇದನ್ನು ಚರ್ಮದಲ್ಲಿರುವಂತಹ ರಂಧ್ರಗಳನ್ನು ಕುಗ್ಗಿಸುವುದು ಮತ್ತು ಮೊಡವೆಗಳು ಮೂಡದಂತೆ ಮಾಡುವುದು.

ಬೇಕಾಗುವ ಸಾಮಗ್ರಿಗಳು
•ಒಂದು ಚಮಚ ಅಡುಗೆ ಸೋಡಾ
•ನೀರು ಬೇಕಾದಷ್ಟು

ತಯಾರಿಸುವ ವಿಧಾನ
•ಸ್ವಲ್ಪ ಅಡುಗೆ ಸೋಡಾ ಮತ್ತು ನೀರನ್ನು ಒಂದು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ.
•ಇದನ್ನು ಈಗ ಐಸ್ ಟ್ರೇಗೆ ಹಾಕಿ ಮತ್ತು ಐಸ್ ಕ್ಯೂಬ್ ಆಗಲು ಬಿಡಿ.
•ಇದನ್ನು ಮುಖಕ್ಕೆ ಸಂಪೂರ್ಣವಾಗಿ ಹಚ್ಚಿಕೊಳ್ಳಿ ಮತ್ತು ಒಂದು ಅರ್ಧ ಗಂಟೆ ಕಾಲ ಹಾಗೆ ಇರಲಿ.
•ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.
•ಉತ್ತಮ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಒಂದು ಸಲ ಇದನ್ನು ಬಳಸಿ.

ಕಲೆಗಳ ನಿವಾರಣಗೆ ಐಸ್ ಕ್ಯೂಬ್ ಮತ್ತು ಅರಶಿನ
ಅರಿಶಿನದಲ್ಲಿ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಕಲೆಗಳನ್ನು ನಿವಾರಣೆ ಮಾಡುವುದು ಮತ್ತು ಚರ್ಮವು ಕೆಂಪಾಗುವುದನ್ನು ತಡೆಯುವುದು. ಮೊಡವೆ ಹಾಗೂ ಬೊಕ್ಕೆಗಳಿಗೆ ಕೂಡ ಇದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.

ಬೇಕಾಗುವ ಸಾಮಗ್ರಿಗಳು
*ಒಂದು ಚಮಚ ಅರಶಿನ ಹುಡಿ
*ನೀರು ಬೇಕಾದಷ್ಟು
ತಯಾರಿಸುವ ವಿಧಾನ
•ಸ್ವಲ್ಪ ಅರಶಿನ ಮತ್ತು ನೀರನ್ನು ಒಂದು ಪಿಂಗಾಣಿಗೆ ಹಾಕಿಕೊಂಡು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಐಸ್ ಟ್ರೇಗೆ ಹಾಕಿ ಮತ್ತು ಅದರಿಂದ ಐಸ್ ಕ್ಯೂಬ್ ಮಾಡಿಕೊಳ್ಳಿ.
•ಇದನ್ನು ಮುಖಕ್ಕೆ ಪೂರ್ತಿಯಾಗಿ ಹಚ್ಚಿಕೊಳ್ಳಿ ಅಥವಾ ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಬಿಡಿ.
•ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ.
•ಉತ್ತಮ ಫಲಿತಾಂಶ ಬೇಕಿದ್ದರೆ ಆಗ ನೀವು ಇದನ್ನು ವಾರದಲ್ಲಿ ಎರಡು ಸಲ ಬಳಸಿಕೊಳ್ಳಿ.

English summary

Effective Ways To Use Ice Cubes For Skincare

Ice has surprising benefits, and when incorporated in your daily skin care routine, it doubles up the benefits on the face. Ice is incredibly cheap and suits all types of skin. Ice not only helps to make your make-up lasts longer, but it benefits your skin in several ways.
X
Desktop Bottom Promotion