For Quick Alerts
ALLOW NOTIFICATIONS  
For Daily Alerts

ಮೊಡವೆಗಳ ಕಲೆ ನಿವಾರಣೆಗೆ ಸುಲಭ ಫೇಸ್ ಮಾಸ್ಕ್‌ಗಳು

|

ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆ ಹಾಗೂ ಗುಳ್ಳೆಗಳು ನಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸಬಲ್ಲವು. ಜೊತೆಗೆ ಇವುಗಳಿಂದ ಉಂಟಾಗುವ ನೋವು ಹಾಗೂ ಉರಿಯಿಂದ ಯಾತನೆ ಅನುಭವಿಸಬೇಕಾಗುತ್ತದೆ. ಇವುಗಳಿಂದ ಪಾರಾಗಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮು, ದ್ರಾವಣ ಹೀಗೆ ಏನೇನೋ ತಂದು ಬಳಸುತ್ತೇವೆ. ಆದರೆ ಮೊಡವೆಗಳ ನಿವಾರಣೆಗಾಗಿ ಮಾಡುವ ಉಪಚಾರ ಸೂಕ್ತವಾಗಿರದಿದ್ದಲ್ಲಿ ಅದರಿಂದ ಚರ್ಮಕ್ಕೆ ಮತ್ತಷ್ಟು ಹಾನಿಯಾಗಬಹುದು.

ನಿಜ ಹೇಳಬೇಕೆಂದರೆ ಮೊಡವೆಗಳನ್ನು ಹೇಗೋ ಕಡಿಮೆ ಮಾಡಿಬಿಡಬಹುದು, ಆದರೆ ಅದರ ನಂತರ ಉಳಿಯುವ ಹಟಮಾರಿ ಕಲೆಗಳನ್ನು ನಿವಾರಿಸುವುದು ಮಾತ್ರ ಸವಾಲೇ ಆಗಿದೆ. ಹೀಗಾಗಿ ಈ ಕಲೆಗಳ ನಿವಾರಣೆಗಾಗಿ ಸೂಕ್ತ ಔಷಧೋಪಚಾರ ಮಾಡಬೇಕಾಗುತ್ತದೆ. ಕೇವಲ ಎರಡು ವಸ್ತುಗಳನ್ನು ಬಳಸಿ ತಯಾರಿಸಿದ ಫೇಶಿಯಲ್‌ಗಳಿಂದ ಮೊಡವೆಗಳ ಕಲೆ ನಿವಾರಣೆಯ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದೇವೆ, ನೀವೂ ಟ್ರೈ ಮಾಡಿ. ಮೊಡವೆಗಳ ಕಲೆ ನಿವಾರಣೆಗೆ ಸುಲಭ ಮನೆ ಮದ್ದುಗಳು

Face Masks For Acne Scars

ಅಲೊ ವೆರಾ ಮತ್ತು ನಿಂಬೆ ರಸ

ಬೇಕಾಗುವ ಸಾಮಗ್ರಿಗಳು : 1 ಟೇಬಲ್ ಸ್ಪೂನ್ ಅಲೊ ವೆರಾ, ಅರ್ಧ ಟೇಬಲ್ ಸ್ಪೂನ್ ನಿಂಬೆ ರಸ
ತಯಾರಿಸುವ ವಿಧಾನ : ತಾಜಾ ಅಲೊ ವೆರಾ ಎಲೆಯಿಂದ ಅಲೊ ವೆರಾ ಎಣ್ಣೆಯನ್ನು ಹಿಂಡಿ ಬಟ್ಟಲಿಗೆ ಹಾಕಿಕೊಳ್ಳಿ. ತಾಜಾ ನಿಂಬೆ ಹಣ್ಣಿನ ರಸವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮುಖ ಚೆನ್ನಾಗಿ ತೊಳೆದುಕೊಂಡು ಈ ಮಿಕ್ಸ್ ಅನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಇದನ್ನು 20 ರಿಂದ 30 ನಿಮಿಷ ಇರಲು ಬಿಡಿ. ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ. ಮೊಡವೆ ಕಲೆಗಳ ನಿವಾರಣೆಗಾಗಿ ವಾರಕ್ಕೆ ಮೂರ್‍ನಾಲ್ಕು ಬಾರಿ ಅಥವಾ ಪ್ರತಿನಿತ್ಯ ಈ ವಿಧಾನ ಅನುಸರಿಸಿ.

ಅಡುಗೆ ಸೋಡಾ ಮತ್ತು ತೆಂಗಿನ ಎಣ್ಣೆ

ಬೇಕಾಗುವ ಸಾಮಗ್ರಿಗಳು : 1 ಟೇಬಲ್ ಸ್ಪೂನ್ ಅಡುಗೆ ಸೋಡಾ, 2 ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ
ತಯಾರಿಸುವ ವಿಧಾನ : ಒಂದು ಬಟ್ಟಲಿಗೆ ಅಡುಗೆ ಸೋಡಾ ಹಾಗೂ ಕೊಬ್ಬರಿ ಎಣ್ಣೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು ಬೆರಳುಗಳಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಹೀಗೆ 2 ರಿಂದ 3 ನಿಮಿಷ ಮಸಾಜ್ ಮಾಡಿ ಇದನ್ನು 15 ರಿಂದ 20 ನಿಮಿಷ ಹಾಗೆಯೇ ಬಿಡಿ. ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

Most Read: ಮೊಡವೆ ಕಲೆಗಳನ್ನು ನಿವಾರಿಸಲು 'ಗ್ರೀನ್ ಟೀ' ಬಳಸಿ ನೋಡಿ!

ಆಪಲ್ ಸೈಡರ್ ವಿನೆಗರ್ ಮತ್ತು ಜೇನು ತುಪ್ಪ

ಬೇಕಾಗುವ ಸಾಮಗ್ರಿಗಳು : 1 ಟೇಬಲ್ ಚಮಚೆ ಕಚ್ಚಾ ಜೇನು ತುಪ್ಪ, ಅರ್ಧ ಟೇಬಲ್ ಚಮಚೆ ಆಪಲ್ ಸೈಡರ್ ವಿನೆಗರ್
ತಯಾರಿಸುವ ವಿಧಾನ : ಬಟ್ಟಲೊಂದರಲ್ಲಿ ಕಚ್ಚಾ ಜೇನು ತುಪ್ಪ ಹಾಗೂ ಆಪಲ್ ಸೈಡರ್ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು ಕೆಲ ಕ್ಷಣಗಳವರೆಗೆ ಬೆರಳುಗಳಿಂದ ಮೃದುವಾಗಿ ಮಸಾಜ್ ಮಾಡಿ. 15 ರಿಂದ 20 ನಿಮಿಷ ಈ ಮಾಸ್ಕ್ ಅನ್ನು ಹಾಗೆಯೇ ಬಿಟ್ಟು ನಂತರ ಸಾದಾ ನೀರಿನಿಂದ ತೊಳೆದುಕೊಳ್ಳಿ. ಮೊಡವೆಗಳ ಕಲೆ ನಿವಾರಣೆಗೆ ವಾರಕ್ಕೊಮ್ಮೆ ಈ ವಿಧಾನ ಅನುಸರಿಸಬಹುದು.

ಮೊಟ್ಟೆಯ ಬಿಳಿ ಲೋಳೆ ಹಾಗೂ ನಿಂಬೆ ರಸ

ಬೇಕಾಗುವ ಸಾಮಗ್ರಿಗಳು : 1 ಟೇಬಲ್ ಚಮಚೆ ಮೊಟ್ಟೆಯ ಬಿಳಿ ಲೋಳೆ, ಅರ್ಧ ಚಮಚೆ ನಿಂಬೆ ರಸ
ತಯಾರಿಸುವ ವಿಧಾನ : ಮೊಟ್ಟೆ ಒಡೆದು ಅದರಲ್ಲಿನ ಬಿಳಿ ಲೋಳೆಯನ್ನು ನಿಧಾನವಾಗಿ ಪ್ರತ್ಯೇಕಿಸಿಕೊಳ್ಳಿ. ಇದನ್ನು ಬಟ್ಟಲಿಗೆ ಹಾಕಿ ಇದರಲ್ಲಿ ನಿಂಬೆ ರಸ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. ನುಣುಪಾದ ಪೇಸ್ಟ್ ರೂಪ ಬರುವವರೆಗೆ ಬ್ಲೆಂಡ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಸರಿಯಾಗಿ ಲೇಪಿಸಿಕೊಳ್ಳಿ. ಕೆಲ ನಿಮಿಷಗಳವರೆಗೆ ಹಾಗೆಯೇ ಇರಲು ಬಿಡಿ. ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

Most Read: ತ್ವಚೆಯ ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು

ಸೌತೆಕಾಯಿ ಮತ್ತು ಮೊಸರು

ಬೇಕಾಗುವ ಸಾಮಗ್ರಿಗಳು : ಒಂದು ಮಧ್ಯಮ ಗಾತ್ರದ ಸವತೆಕಾಯಿ, 2 ಟೇಬಲ್ ಚಮಚೆ ಮೊಸರು
ತಯಾರಿಸುವ ವಿಧಾನ : ಸವತೆಕಾಯಿಯನ್ನು ಚಿಕ್ಕ ಹೋಳುಗಳಾಗಿ ಹೆಚ್ಚಿಕೊಂಡು ಅದನ್ನು ಬ್ಲೆಂಡ್ ಮಾಡಿ ನುಣುಪಾದ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು 20 ರಿಂದ 30 ನಿಮಿಷ ಬಿಟ್ಟು ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ.

ಅರಿಶಿನ ಮತ್ತು ಮೊಸರು

ಬೇಕಾಗುವ ಸಾಮಗ್ರಿಗಳು : ಅರ್ಧ ಟೇಬಲ್ ಸ್ಪೂನ್ ಅರಿಶಿನ ಪುಡಿ, 2 ಟೇಬಲ್ ಚಮಚೆ ತಾಜಾ ಮೊಸರು
ತಯಾರಿಸುವ ವಿಧಾನ : ಬಟ್ಟಲಿಗೆ ಮೊಸರ ಹಾಕಿ ಅದರಕ್ಕೆ ಅರಿಶಿನ ಪುಡಿ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ನುಣುಪಾದ ಪೇಸ್ಟ್ ತಯಾರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 20 ರಿಂದ 30 ನಿಮಿಷ ಹಾಗೆಯೇ ಬಿಡಿ. ನಂತರ ಸಾದಾ ನೀರಿನಿಂದ ಮುಖ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಮೂರ್‍ನಾಲ್ಕು ಬಾರಿ ಈ ವಿಧಾನ ಅನುಸರಿಸಬಹುದು.

English summary

Effective 2-Ingredient Face Masks For Acne Scars

Acne and breakouts not only make us lose our self-confidence but also cause a lot of pain and irritation. As a result, we try out different remedies available in the market hoping that they would heal acne. Instead, you can use 2-ingredient masks like aloe vera gel & lemon juice, coconut oil & baking soda and apple cider vinegar and honey to treat acne scars.
X
Desktop Bottom Promotion