For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಕ್ಯಾರೆಟ್‌ನಿಂದ ಕೂಡ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು!

|

ಹಸಿಯಾಗಿ ತಿನ್ನಬಹುದಾದ ತರಕಾರಿಯಾದ ಕ್ಯಾರೆಟ್ (ಕನ್ನಡದಲ್ಲಿ ಗಜ್ಜರಿ) ತ್ವಚೆಗೆ ಹಲವಾರು ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಕ್ಯಾರೆಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳೂ, ಪ್ರಬಲ ಆಂಟಿ ಆಕ್ಸಿಡೆಂಟುಗಳೂ ಇದ್ದು ಇದನ್ನು ಅರೆದು ತಯಾರಿಸಿದ ಲೇಪವನ್ನು ಮುಖಲೇಪವಾಗಿ ಹಚ್ಚಿಕೊಳ್ಳುವ ಮೂಲಕ ಅಥವಾ ರಸವನ್ನು ಸಿಂಪಡಿಸಿಕೊಳ್ಳುವ ಮೂಲಕ ತ್ವಚೆಗೆ ಅಮೂಲ್ಯ ಆರೈಕೆಯನ್ನು ಪಡೆಯಬಹುದು.

ಆರೋಗ್ಯಕರ ಮತ್ತು ಕಾಂತಿಯುತ ತ್ವಚೆಯನ್ನು ಬಯಸುವ ನಾವೆಲ್ಲರೂ ಇದಕ್ಕಾಗಿ ಕೊಂಚ ಹೆಚ್ಚಿನ ಶ್ರಮವಹಿಸಲು ಹಿಂಜರಿಯುವುದಿಲ್ಲ. ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳು ಯಾವುದು ಬಂದಿವೆ ಎಂಬ ಮಾಹಿತಿಯನ್ನು ಸತತವಾಗಿ ಹುಡುಕುತ್ತಾ ಉತ್ತಮವೆಂದು ಕಾಣಿಸುವುದನ್ನು ನಮ್ಮ ವ್ಯಾನಿಟಿ ಬ್ಯಾಗ್ ನೊಳಗೆ ತುರುಕಿಸಿಕೊಳ್ಳುವುದನ್ನು ತಡೆಯಲಾಗದು. ಸಾಮಾನ್ಯವಾಗಿ ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಉತ್ಪನ್ನಗಳು ನಮ್ಮ ಯಾವುದೇ ಕೆಲಸಕ್ಕೆ ಬರುವುದಿಲ್ಲ ಎಂದು ಕೆಲವೇ ಸಮಯದಲ್ಲಿ ನಮಗೆ ಅರಿವಾಗಿರುತ್ತದೆ.

ಕ್ಯಾರೆಟ್ ಸೌಂದರ್ಯದ ವಿಷಯದಲ್ಲೂ ಎತ್ತಿದ ಕೈ!

ಕ್ಯಾರೆಟ್ ಸೌಂದರ್ಯದ ವಿಷಯದಲ್ಲೂ ಎತ್ತಿದ ಕೈ!

ಇಂದು ನೈಸರ್ಗಿಕ ಚಿಕಿತ್ಸೆ ಮತ್ತು ಆರೈಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿರುವ ಪರಿಣಾಮವಾಗಿ ನಾವು ಸುಪರ್ ಮಾರ್ಕೆಟ್ಟುಗಳಲ್ಲಿ ದೊರಕುವ ಸಿದ್ಧರೂಪದ ಸೌಂದರ್ಯವರ್ಧಕಗಳ ಬದಲಾಗಿ ಮನೆಯಲ್ಲಿಯೇ ಲಭ್ಯವಿರುವ ನೈಸರ್ಗಿಕ ಸಾಮಾಗ್ರಿಗಳನ್ನು ಉಪಯೋಗಿಸಿ ಸೌಂದರ್ಯವನ್ನು ವೃದ್ದಿಸಿಕೊಳ್ಳುವತ್ತ ಹೆಚ್ಚು ಒಲವು ತೋರುತ್ತಿದ್ದೇವೆ. ಇವು ಅಗ್ಗವೂ, ಸುಲಭವಾಗಿ ಸದಾ ಲಭ್ಯವಾಗುವಂತಹದ್ದೂ ಆಗಿದ್ದು ಯಾವುದೇ ರಾಸಾಯನಿಕಗಳಿಲ್ಲದೇ ಸುರಕ್ಷಿತವಾಗಿವೆ. ತನ್ಮೂಲಕ ದುಬಾರಿ ಹಾಗೂ ಅಪಾಯಕಾರಿ ರಾಸಾಯನಿಕಗಳಿಂದ ಮುಕ್ತಿ ಪಡೆಯಬಹುದು. ಇದುವರೆಗೆ ನೀವು ಕ್ಯಾರೆಟ್ಟನ್ನು ಹಲವು ಬಗೆಯ ಖಾದ್ಯ ಹಾಗೂ ಸಿಹಿಪದಾರ್ಥಗಳ ರೂಪದಲ್ಲಿ ಸೇವಿಸಿದ್ದೀರೇ ಹೊರತು ಸೌಂದರ್ಯವರ್ಧಕವಾಗಿ ಬಳಸಿರಲಿಕ್ಕಿಲ್ಲ. ಅಚ್ಚರಿಯಾಯಿತೇ? ಹೌದು, ತ್ವಚೆಯ ಮೇಲೆ ಹಲವಾರು ಧನಾತ್ಮಕ ಪರಿಣಾಮಗಳನ್ನು ಬೀರುವ ಕ್ಷಮತೆ ಈ ಕ್ಯಾರೆಟ್ ಗೆ ಇದೆ.

ಕ್ಯಾರೆಟ್ ಸೌಂದರ್ಯದ ವಿಷಯದಲ್ಲೂ ಎತ್ತಿದ ಕೈ!

ಕ್ಯಾರೆಟ್ ಸೌಂದರ್ಯದ ವಿಷಯದಲ್ಲೂ ಎತ್ತಿದ ಕೈ!

ಕ್ಯಾರೆಟ್ ಸೇವನೆಯಿಂದ ಆರೋಗ್ಯಕ್ಕೆ ಹಲವು ಬಗೆಯ ಪ್ರಯೋಜನಗಳಿವೆ ಎಂದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ವಿಶೇಷವಾಗಿ ಕಣ್ಣುಗಳು ಮತ್ತು ಕೂದಲಿಗೆ ಹೆಚ್ಚಿನ ಪೋಷಣೆ ದೊರಕುತ್ತದೆ. ಆದರೆ ತ್ವಚೆಗೂ ಇದು ನೀಡುವ ಪೋಷಣೆಯ ಬಗ್ಗೆ ಇದುವರೆಗೆ ನಮಗೆ ಮಾಹಿತಿಯೇ ಇರಲಿಲ್ಲ. ಇದುವರೆಗೂ ನಾವು ಕ್ಯಾರೆಟ್ಟನ್ನು ಸಾಲಾಡ್, ಸಿಹಿಪದಾರ್ಥ, ಸಾಂಬಾರ್, ಜ್ಯೂಸ್, ಆಹಾರ ಅಲಂಕಾರಿಕಾ ಸಾಮಾಗ್ರಿಯಾಗಿಯೇ ಬಳಸುತ್ತಿದ್ದೆವು. ಬನ್ನಿ, ಈಗ ಈ ಸುಂದರ ತರಕಾರಿಯನ್ನು ಸೌಂದರ್ಯವರ್ಧಕವಾಗಿ ಬಳಸುವ ಮೂಲಕ ತ್ವಚೆ ಪಡೆಯುವ ಕಾಂತಿ ಮತ್ತು ಆರೋಗ್ಯದ ಬಗ್ಗೆ ಅರಿಯೋಣ...

ಒಣಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಒಣಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಕ್ಯಾರೆಟ್ಟುಗಳಲ್ಲಿ ಪೊಟ್ಯಾಶಿಯಂ ಪ್ರಮುಖ ಪ್ರಮಾಣದಲ್ಲಿದ್ದು ಇವು ತ್ವಚೆಯ ಸೂಕ್ಷ್ಮರಂಧ್ರಗಳ ಮೂಲಕ ಒಳ ಇಳಿದು ತ್ವಚೆಯ ಕೆಳಪದರಕ್ಕೆ ತಲುಪಿ ಅಗತ್ಯ ಪೋಷಣೆ ಒದಗಿಸುತ್ತದೆ. ತನ್ಮೂಲಕ ತ್ವಚೆಗೆ ಅತಿ ಆಳದಿಂದ ಆರ್ದ್ರತೆಯನ್ನು ಒದಗಿಸುವ ತೇವಕಾರಕವಾಗಿ ಈ ಮುಖಲೇಪ ಕಾರ್ಯನಿರ್ವಹಿಸುತ್ತದೆ. ಪರಿಣಾಮವಾಗಿ ತ್ವಚೆ ಆರೋಗ್ಯಕರ ಕಾಂತಿಯನ್ನು ಪಡೆಯುತ್ತದೆ.

ವಿಧಾನ:

ಅರ್ಧ ಕ್ಯಾರೆಟ್ಟೊಂದನ್ನು ಚಿಕ್ಕದಾಗಿ ತುರಿದು ಅರೆಯಿರಿ. ಇದಕ್ಕೆ ಅರ್ಧ ಚಿಕ್ಕ ಚಮಚ ಜೇನು, ಒಂದು ಚಿಕ್ಕ ಚಮಚ ಹಾಲು ಬೆರೆಸಿ ನುಣ್ಣಗಿನ ಲೇಪವಾಗಿ ಮಿಶ್ರಣ ಮಾಡಿ. ಈ ಲೇಪವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡಿರುವ ಮುಖದೆ ಮೇಲೆ ತೆಳುವಾಗಿ ಹಚ್ಚಿ ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

Most Read: ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯ ಹೆಚ್ಚಿಸಲು ಕ್ಯಾರೆಟ್ ಫೇಸ್ ಪ್ಯಾಕ್

ಎಣ್ಣೆಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಎಣ್ಣೆಚರ್ಮಕ್ಕಾಗಿ ಕ್ಯಾರೆಟ್ ಮುಖಲೇಪ

ಕ್ಯಾರೆಟ್ಟುಗಳಲ್ಲಿರುವ ವಿಟಮಿನ್ ಎ ತ್ವಚೆಯ ಹೆಚ್ಚುವರಿ ತೈಲಗಳನ್ನು ನಿವಾರಿಸಿ ಕಲ್ಮಶರಹಿತ ತ್ವಚೆಗೆ ಆಹ್ಲಾಕದರ ಮತ್ತು ತಾಜಾತನ ಒದಗಿಸುತ್ತದೆ. ಈ ಮುಖಲೇಪ ತಯಾರಿಸಲು ಒಂದು ಕ್ಯಾರೆಟ್ ನ ತುರಿಯನ್ನು ಹಿಂಡಿ ಸಂಗ್ರಹಿಸಿದ ರಸಕ್ಕೆ ತಲಾ ಒಂದು ದೊಡ್ಡ ಚಮಚ ಮೊಸರು, ಕಡ್ಲೆಹಿಟ್ಟು ಮತ್ತು ಲಿಂಬೆರಸವನ್ನು ಬೆರೆಸಿ ಮಿಶ್ರಣ ಮಾಡಿ. ಈ ಲೇಪವನ್ನು ಮುಖ ಮತ್ತು ಕುತ್ತಿಗೆಗೆ ತೆಳುವಾಗಿ ಹಚ್ಚಿಕೊಂಡು ಸುಮಾರು ಅರ್ಧಘಂಟೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ತ್ವಚೆ ಸಹಜವರ್ಣಕ್ಕೆ ಹಿಂದಿರುಗಲು

ತ್ವಚೆ ಸಹಜವರ್ಣಕ್ಕೆ ಹಿಂದಿರುಗಲು

ಬಿಸಿಲು ಅಥವಾ ಇತರ ಕಾರಣಗಳಿಂದ ತ್ವಚೆ ಸಹಜವರ್ಣಕ್ಕೂ ಹೆಚ್ಚು ಗಾಢವಾಗಿದ್ದರೆ ಈ ಮುಖಲೇಪ ಶೀಘ್ರವೇ ಸಹಜವರ್ಣಕ್ಕೆ ಮರಳಲು ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಕ್ಯಾರೆಟ್ ರಸ, ಮೊಸರು ಮತ್ತು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿ ತ್ವಚೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ತ್ವಚೆಯ ಮೇಲೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು ಕ್ಯಾರೆಟ್ ರಸ ನೆರವಾಗುತ್ತದೆ ಹಾಗೂ ತ್ವಚೆ ಶೀಘ್ರವೇ ಸಹಜವರ್ಣಕ್ಕೆ ಮರಳಲು ನೆರವಾಗುತ್ತದೆ.

ಬಿಸಿಲಿನ ಹೊಡೆತದಿಂದ ರಕ್ಷಿಸುವ ಸಿಂಪರಣೆ

ಬಿಸಿಲಿನ ಹೊಡೆತದಿಂದ ರಕ್ಷಿಸುವ ಸಿಂಪರಣೆ

ಕ್ಯಾರೆಟ್ಟುಗಳಲ್ಲಿರುವ ಬೀಟಾ ಕ್ಯಾರೋಟೀನ್ ಮತ್ತು ಕ್ಯಾರೋಟಿನಾಯ್ಡ್ ಎಂಬ ಪೋಷಕಾಂಶಗಳಿಗೆ ತ್ವಚೆಯನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ಕ್ಷಮತೆ ಇದೆ ಹಾಗೂ ಈಗಾಗಲೇ ಬಿಸಿಲಿನ ಹೊಡೆತದಿಂದ ಕಪ್ಪಗಾಗಿದ್ದ ತ್ವಚೆಯನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಕ್ಯಾರೆಟ್ ರಸ ಮತ್ತು ಗುಲಾಬಿ ನೀರನ್ನು ಮಿಶ್ರಣ ಮಾಡಿ ನೀರನ್ನು ಸಿಂಪಡಿಸುವ ಬಾಟಲಿಯೊಂದರಲ್ಲಿ ತುಂಬಿ. ಈ ಉಪಕರಣದಿಂದ ಮುಖ ಹಾಗೂ ಸೂರ್ಯನಿಗೆ ಒಡ್ಡುವ ದೇಹದ ಎಲ್ಲಾ ಭಾಗಗಳ ಮೇಲೆ ತೆಳುವಾಗಿ ಈ ರಸವನ್ನು ಸಿಂಪಡಿಸಿ ತಾನಾಗಿಯೇ ಒಣಗುವಂತೆ ಮಾಡಿ. ಈ ಸಿಂಪರಣೆ ತ್ವಚೆಗೆ ಅಗತ್ಯ ಆರ್ದ್ರತೆಯನ್ನು ಒದಗಿಸುವ ಜೊತೆಗೇ ಸೂರ್ಯನ ಅತಿನೇರಳೆ ಕಿರಣಗಳಿಂದಲೂ ರಕ್ಷಣೆ ಒದಗಿಸುತ್ತದೆ.

Most Read: ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

ವೃದ್ಧಾಪ್ಯದ ವಿರುದ್ಧ ಹೋರಾಡುವ ದ್ರವ

ವೃದ್ಧಾಪ್ಯದ ವಿರುದ್ಧ ಹೋರಾಡುವ ದ್ರವ

ಸಮಪ್ರಮಾಣದಲ್ಲಿ ಕ್ಯಾರೆಟ್ ರಸ ಮತ್ತು ಲೋಳೆಸರ (ಆಲೋವೆರಾ)ದ ತಿರುಳುಗಳನ್ನು ಮಿಶ್ರಣ ಮಾಡಿ ನಿತಮಿತವಾಗಿ ತ್ವಚೆಗೆ ಹಚ್ಚಿಕೊಳ್ಳುತ್ತಾ ಇದ್ದರೆ ವೃದ್ದಾಪ್ಯದ ಚಿಹ್ನೆಗಳು ಆವರಿಸುವ ಗತಿಯನ್ನು ತಡವಾಗಿಸಬಹುದು. ಕ್ಯಾರೆಟ್ಟುಗಳಲ್ಲಿ ವಿಫುಲವಾಗಿರುವ ವಿಟಮಿಸ್ ಸಿ ತ್ವಚೆಯಲ್ಲಿ ಹೆಚ್ಚಿನ ಪ್ರಮಾಣದ ಕೊಲ್ಯಾಜೆನ್ ಉತ್ಪತ್ತಿಯಾಗಲು ನೆರವಾಗುವ ಮೂಲಕ ತ್ವಚೆಯ ಸೆಳೆತವನ್ನು ಹೆಚ್ಚಿಸಿ ನೆರಿಗೆಗಳು ಮೂಡದಂತೆ ತಡೆಯುತ್ತದೆ.

ಕ್ಯಾರೆಟ್ಟುಗಳಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ತ್ವಚೆಗೆ ಸಾಮಾನ್ಯವಾಗಿ ಎದುರಾಗುವ ಎಲ್ಲಾ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ ಹಾಗೂ ತನ್ಮೂಲಕ ಯಾವುದೇ ಕಾಯಿಲೆ ಆವರಿಸದಂತೆ ರಕ್ಷಿಸುತ್ತದೆ. ಇದುವರೆಗೆ ಕ್ಯಾರೆಟ್ಟಿನ ಈ ಗುಣಗಳ ಬಗ್ಗೆ ಅರಿವಿಲ್ಲದೇ ಇದ್ದರೆ ಇನ್ನು ಮುಂದೆ ನಿಮ್ಮ ನಿತ್ಯದ ಸೌಂದರ್ಯವರ್ಧಕವಾಗಿ ಕ್ಯಾರೆಟ್ ಉಪಯೋಗಿಸುವುದನ್ನು ಮರೆಯದಿರಿ. ಇದರ ಪರಿಪೂರ್ಣ ಪ್ರಯೋಜನಗಳನ್ನು ಪಡೆಯಲು ಕ್ಯಾರೆಟ್ ಅನ್ನು ತ್ವಚೆಗೆ ಹೊರಗಿನಿಂದ ಲೇಪಿಸಿಕೊಳ್ಳುವ ಜೊತೆಗೇ ಆಹಾರದ ರೂಪದಲ್ಲಿ ಸೇವಿಸಲೂಬೇಕು.

English summary

Carrots Can Give You A Beautiful Skin!

We all go that extra mile to acquire a healthy and glowing skin. How we painstakingly watch out for every cosmetic product available in the market and stash them in our vanity box, half of which we don't even use. With the current wave of natural living, we are slowly drifting away from supermarkets and entering our own kitchens to fish out food items to replace those expensive, chemical-laden skincare products.Of all the items stocked up in our kitchen, it might have never occurred to you to pick up carrot for your skin care regime. Surprised? Well, carrot is another kitchen staple that has proven positive effects on skin!
X
Desktop Bottom Promotion