Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹದಿಹರೆಯದ ಹೆಣ್ಣು ಮಕ್ಕಳ ಸೌಂದರ್ಯ ಹೆಚ್ಚಳಕ್ಕೆ ಸಲಹೆಗಳು
ಹರಿಹರೆಯ ಈ ವಯಸ್ಸೇ ಒಂದು ರೀತಿಯಲ್ಲಿ ಆಕರ್ಷಕ.ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಲುಕ್ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ನೀವು ಹದಿಹರೆಯದವರಾಗಿದ್ದರೆ ನಿಮ್ಮ ಸೌಂದರ್ಯದ ಊಹೆ ಪಾಪ್ ಸಾಂಗ್ ನಿಂದ ಆರಂಭಿಸಿ ಫಿಲಂ ಸ್ಟಾರ್ ಮೂಲಕ ಮುಗಿಯುತ್ತದೆ ಎನ್ನಬಹುದು.ಸೌಂದರ್ಯದ ವಿಷಯಕ್ಕೆ ಬಂದರೆ ಹೊಸ ಹೊಸ ಮೇಕಪ್,ತ್ವಚೆಯ ಕಾಳಜಿ ಎಲ್ಲವನ್ನೂ ಪ್ರಯೋಗ ಮಾಡುವ ವಯಸ್ಸಿದು.

ನೀವು ಚಂದ ಕಾಣಬೇಕು ಎಂಬ ನಿರಂತರ ಪ್ರಯತ್ನ ಈ ವಯಸ್ಸಿನಲ್ಲಿ ನಡೆಯುತ್ತಲೇ ಇರುತ್ತದೆ. ಸುಂದರ ಮಹಿಳೆಯಾಗಬೇಕೆಂಬ ಹಂಬಲ ಈ ಸಮಯದಲ್ಲಿ ಸಹಜ.ಅದಕ್ಕಾಗಿ ಕೆಲವು ಸೌಂದರ್ಯ ಸಲಹೆಗಳು ಇಲ್ಲಿವೆ ಓದಿ ನೋಡಿ.

ನೀರು
ನಿಮ್ಮ ತ್ವಚೆ ಸ್ವಚ್ಛ ಮತ್ತು ಕಾಂತಿಯುತವಾಗಿರಲು ನೀರಿನ ಅಗತ್ಯವಿದೆ.ಕಪ್ಪು ಕಲೆ,ಮೊಡವೆ ಇವುಗಳನ್ನು ತಡೆಯಲು ಮಾತ್ರವಲ್ಲ ಆರೋಗ್ಯಕ್ಕೆ ಕೂಡ ನೀರಿನ ಅವಶ್ಯಕತೆ ಇದೆ.ಆದ್ದರಿಂದ ಹೆಚ್ಚು ನೀರು ಸೇವಿಸಿ .

ಫೌಂಡೇಶನ್ ಬಳಸಬೇಡಿ
ಮೇಕಪ್ ಮಾಡುವಾಗ ಫೌಂಡೇಶನ್ ಬಳಸುವ ಬಯಕೆ ಸಾಮಾನ್ಯ ಆದರೆ ಇದು ತರುಣಿಯರಿಗೆ ಸೂಕ್ತವಲ್ಲ.ನಿಮ್ಮ ಫ್ರೆಶ್ ಆಗಿರುವ,ತಾರುಣ್ಯದಿಂದ ಕೂಡಿರುವ ತ್ವಚೆಗೆ ಫೌಂಡೇಶನ್ ಕ್ರೀಂ ಬಳಸಬೇಡಿ.ಆದರೂ ನಿಮಗೆ ಮೇಕಪ್ ಮಾಡಬೇಕೆಂದಿದ್ದಲ್ಲಿ ಕನ್ಸೀಲರ್ ಬಳಸಿ ಮೇಲೆ ಪೌಡರ್ ಅಥವಾ ಟಿಂಟೆಡ್ ಮಾಸ್ಚುರೈಸರ್ ಬಳಸಿ.ಟಿಂಟೆಡ್ ಮಾಸ್ಚುರೈಸರ್ ಫೌಂಡೇಶನ್ ಕ್ರೀಮಿಗಿಂತ ಹೆವಿಯಾಗಿರುತ್ತದೆ.

ನ್ಯಾಚುರಲ್ ಕೇಶ
ಒಂದೇ ಬಾರಿ ಕೂದಲಿನ ಸಂಪೂರ್ಣ ಬಣ್ಣ ಬದಲಿಸುವ ಪ್ರಯತ್ನ ಬೇಡ.ನ್ಯಾಚುರಲ್ ಕೇಶರಾಶಿ ಸುಂದರವಾಗಿರುತ್ತದೆ.ನಿಮ್ಮದು ಕಪ್ಪು ಕೂದಲಾಗಿದ್ದಲ್ಲಿ ಡಾರ್ಕ್ ಶೇಡ್ ಕೊಡಿ ಅಥವಾ ಲೈಟ್ ಹೈಲೈಟ್ ಮಾಡಿ.ನಿಮ್ಮ ಸುಂದರವಾದ ಕೂದಲಿಗೆ ಒಂದು ಬಾಟಲಿಯ ಸಂಪೂರ್ಣ ಬಣ್ಣ ಉಪಯೋಗಿಸಿ ಕೂದಲಿಗೆ ವಿವಿಧ ಬಣ್ಣದ ಡೈ ಹಾಕುವ ಪ್ರಯತ್ನ ಮಾಡಬೇಡಿ ಇದು ಕೂದಲಿನ ಅಂದವನ್ನು ಹಾಳುಮಾಡುತ್ತದೆ. ಹೆಚ್ಚಿನ ಹೆಣ್ಣು ಮಕ್ಕಳು,ಅಷ್ಟೇ ಏಕೆ ಫಿಲಂ ಸ್ಟಾರ್ ಗಳೂ ಕೂಡ ಕಡಿಮೆ ಮೇಕಪ್ ನಲ್ಲಿ ಸುಂದರವಾಗಿ ಕಾಣಿಸುತ್ತಾರೆ.ಮೇಕಪ್ ಅತಿಯಾದಲ್ಲಿ ಎಂತವರು ಕೂಡ ಫ್ರೀಕ್ ಆಗಿ ಕಾಣುತ್ತಾರೆ. ಹರಿಹರೆಯದ ವಯಸ್ಸಿಗೆ ಗ್ಲಾಸ್ ಲುಕ್ ನೀಡಲು ಕಣ್ಣಿಗೆ ಮಸ್ಕರಾ ಮತ್ತು ಕನ್ಸೀಲರ್ ಬಳಸಿದರೆ ಸಾಕಾಗುತ್ತದೆ.ಚಳಿಗಾಲದಲ್ಲಿ ಬೇಕಿದ್ದರೆ ಬ್ಲಶ್ ಕೂಡ ಬಳಸಬಹುದು.

ಕನ್ಸೀಲರ್ ಬಳಕೆಯ ನಂತರ ಪ್ಯಾಟ್ ಮಾಡಿ
ಕನ್ಸೀಲರ್ ಬಳಸುವ ಮೊದಲ ನಿಯಮ ಅದನ್ನು ರಬ್ ಮಾಡದೇ ಪ್ಯಾಟ್ ಮಾಡುವುದು. ಆದ್ದರಿಂದ ನೀವು ಕನ್ಸೀಲರ್ ಬಳಸುವಾಗ ಮಧ್ಯ ಬೆರಳಿಗೆ ಸ್ವಲ್ಪ ಹಾಕಿಕೊಂಡು ಮುಖದ ಮೇಲೆ ಪ್ಯಾಟ್ ಮಾಡಿ,ರಬ್ ಮಾಡಬೇಡಿ.

ಕಣ್ಣಿನ ಮೇಕಪ್
ಕಣ್ಣಿನ ಮೇಕಪ್ ತೆಗೆಯಲು ವ್ಯಾಸಲಿನ್ ಅಗ್ಗದ ವಿಧಾನ.ಅಷ್ಟೇ ಅಲ್ಲ ಒಡೆದ ತುಟಿಯನ್ನು ಸರಿಪಡಿಸಲು ಕೂಡ ಇದು ಪ್ರಯೋಜಕ.ಟೂತ್ ಬ್ರಷ್ ಗೆ ಸ್ವಲ್ಪ ವ್ಯಾಸಲಿನ್ ಬಳಸಿ ತುಟಿಯ ಮೇಲೆ ಉಜ್ಜಿ.ನಂತರ ಹೆಚ್ಚಿನ ವ್ಯಾಸಲಿನ್ ಅನ್ನು ಒರೆಸಿಕೊಳ್ಳಿ ಸುಂದರವಾದ ತುಟಿ ನಿಮ್ಮದಾಗುತ್ತದೆ.

ಕಣ್ಣು ಮತ್ತು ತುಟಿಯ ಬ್ಯಾಲೆನ್ಸ್
ನಿಮ್ಮ ತುಟಿಗೆ ಅತಿಯಾದ ಲಿಪ್ಸ್ಟಿಕ್ ಮತ್ತು ಕಣ್ಣಿಗೆ ಅತಿಯಾಗಿ ಕಾಡಿಗೆ ಹಚ್ಚಿಕೊಳ್ಳಬೇಡಿ.ಕಣ್ಣಿಗೆ ಘಾಡ ಬಣ್ಣ ಹಚ್ಚಿದರೆ ತುಟಿಗೆ ಲೈಟ್ ಆಗಿರಲಿ.ಹಾಗೆಯೇ ನಿಮ್ಮ ಲಿಪ್ಲೈನ್ ಬಣ್ಣ ಲಿಪ್ಸ್ಟಿಕ್ ಬಣ್ಣಕ್ಕಿಂತ ಘಾಡವಾಗಿರದಿರಲಿ. ಹದಿಹರೆಯದ ಜೀವನ ಒಂದು ರೀತಿಯ ಮೋಜು,ನೈಜವಾಗಿದ್ದಷ್ಟು ಸುಂದರ. ಅದನ್ನು ಓವರ್ ಮೇಕಪ್ ಮಾಡಿಕೊಳ್ಳುವುದರ ಮೂಲಕ ಸಹಜ ಸೌಂದರ್ಯವನ್ನು ಮರೆಮಾಚಿ ವಯಸ್ಕ ಮಹಿಳೆಯಂತೆ ಕಾಣಬೇಡಿ.



Click it and Unblock the Notifications
