For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಸರಳವಾಗಿ ಮಾಡಬಹುದಾದ-ಕಡಿಮೆ ಖರ್ಚಿನ ಬ್ಯೂಟಿ ಟಿಪ್ಸ್!

|

ಆಗಾಗ ಬ್ಯೂಟಿ ಪಾರ್ಲರ್‌ಗಳಿಗೆ ಹೋಗದೆ, ತೀರಾ ದುಬಾರಿಯಾದ ಸೌಂದರ್ಯವರ್ಧಕ ವಸ್ತುಗಳನ್ನು ಬಳಸದೆಯೂ ಯಾವಾಗಲೂ ಅಂದವಾಗಿ ಕಾಣುವುದು ಒಂದು ಅದ್ಭುತ ಕಲೆ. ಎಲ್ಲರ ಮಧ್ಯೆ ಅತ್ಯಂತ ಸುಂದರವಾಗಿ ಕಾಣುವ ಇಚ್ಛೆ ನಿಮಗೂ ಇದ್ದಲ್ಲಿ ಹಾಗೂ ಅದಕ್ಕಾಗಿ ತೀರಾ ಹೆಚ್ಚು ಹಣ ಖರ್ಚು ಮಾಡುವ ಮನಸ್ಸು ನಿಮಗಿರದೇ ಇದ್ದಲ್ಲಿ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಸುಂದರಿಯಾಗಿ ಕಾಣುವುದು ಹೇಗೆಂದು ನಾವು ನಿಮಗೆ ತಿಳಿಸುತ್ತೇವೆ. ಮನೆಯಲ್ಲೇ ಇರುವ ಸಾಧನಗಳಿಂದ ಸುಂದರವಾಗಿ ಕಾಣಲು 5 ಟಿಪ್ಸ್

beauty products

ಹೈಲೈಟರ್

ಮುಖಕ್ಕೆ ಹೊಳಪು ತರಲು ಹೈಲೈಟರ್ ಬಳಸಲಾಗುತ್ತದೆ. ಆದರೆ ತೀರಾ ದುಬಾರಿಯಾಗಿರುವ ಹೈಲೈಟರ್ ಬದಲಾಗಿ ನೀವು ಲಿಪ್ ಗ್ಲೋಸ್ ಅನ್ನೇ ಇದಕ್ಕಾಗಿ ಬಳಸಬಹುದು. ಯಾವುದೇ ಕ್ಲಿಯರ್ ಶೇಡಿನ ಲಿಪ್ ಗ್ಲೋಸ್ ಹೈಲೈಟರ್ ರೀತಿಯೇ ಕೆಲಸ ಮಾಡುತ್ತದೆ. ಲಿಪ್ ಗ್ಲೋಸ್ ಅನ್ನು ಕೆನ್ನೆಗಳ ಮೇಲೆ ಮೃದುವಾಗಿ ಹಚ್ಚಿಕೊಂಡಲ್ಲಿ ಮುಖದ ಹೊಳಪು ಹೆಚ್ಚಿಸಬಹುದು. ತೆಂಗಿನೆಣ್ಣೆಗೆ ಶಿಮ್ಮರ್ ಪಿಗ್ಮೆಂಟ್ (ಮಿನುಗುವ ವರ್ಣದ್ರವ್ಯ) ಮಿಕ್ಸ್ ಮಾಡಿ ಕೂಡ ಹೈಲೈಟರ್ ರೀತಿಯಲ್ಲಿ ಬಳಸಬಹುದು.

Most Read: ಮಹಿಳೆಯರು ಎಂದೆಂದಿಗೂ ಬಳಸಲೇ ಬಾರದ ವಿಷಕಾರಿ ಕಾಸ್ಮೆಟಿಕ್ ಉತ್ಪನ್ನಗಳು

ಲಿಪ್ ಸ್ಕ್ರಬ್

ಬಿರಿದ ಹಾಗೂ ಒಣಗಿದ ತುಟಿಗಳ ಅಂದ ಹೆಚ್ಚಿಸಲು ಲಿಪ್ ಸ್ಕ್ರಬ್ ಬಳಸಲಾಗುತ್ತದೆ. ಆದರೆ ಈಗ ನೀವು ಲಿಪ್ ಸ್ಕ್ರಬ್ ಅನ್ನು ಮನೆಯಲ್ಲೇ ತಯಾರಿಸಿ ಬಳಸಬಹುದು. ಮನೆಯಲ್ಲಿರುವ ವ್ಯಾಸಲೀನ್ (ಪೆಟ್ರೋಲಿಯಂ ಜೆಲ್ಲಿ) ಗೆ ಒಂದಿಷ್ಟು ಸಕ್ಕರೆ ಸೇರಿಸಿ ಮಿಕ್ಸ್ ಮಾಡಿದಲ್ಲಿ ನಿಮ್ಮ ಲಿಪ್ ಸ್ಕ್ರಬ್ ತಯಾರಾದಂತೆಯೇ. ಇದನ್ನು ತುಟಿಗಳಿಗೆ ನಿಯಮಿತವಾಗಿ ಹಚ್ಚಿಕೊಂಡಲ್ಲಿ ಬಿರಿದ ಹಾಗೂ ಒಣಗಿದ ತುಟಿಗಳ ಸಮಸ್ಯೆ ಮಾಯವಾಗುವುದು.

ಬ್ಲೆಮಿಶ್ ಬಾಮ್ ಕ್ರೀಂ (ಬಿಬಿ ಕ್ರೀಂ)

ಬೇಸಿಗೆ ಕಾಲದಲ್ಲಿ ಮನೆಯಲ್ಲೇ ತಯಾರಿಸಿದ ಹಗುರಾದ ಬ್ಲೆಮಿಶ್ ಬಾಮ್ ಕ್ರೀಂ ಅನ್ನು ಮೇಕಪ್ ಬೇಸ್ ಆಗಿ ಬಳಸಲು ಸಾಧ್ಯ. ಒಂದಿಷ್ಟು ಮಾಯಿಶ್ಚರೈಜರ್ ಅನ್ನು ನೀರಿನೊಂದಿಗೆ ಅಥವಾ ಪೌಡರ್ ಫೌಂಡೇಶನ್ ನೊಂದಿಗೆ ಮಿಕ್ಸ್ ಮಾಡಿದಲ್ಲಿ ರೆಡಿ ಆಗುತ್ತದೆ ಬ್ಲೆಮಿಶ್ ಬಾಮ್ ಕ್ರೀಂ. ಈ ಬೇಸಿಗೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.

Most Read: ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯ ಹೆಚ್ಚಿಸಲು ಸ್ಟ್ರಾಬೆರಿ ಹಣ್ಣುಗಳ ಫೇಸ್ ಪ್ಯಾಕ್

ಬ್ರಶ್ ಸ್ವಚ್ಛ ಮಾಡುವ ಲಿಕ್ವಿಡ್

ಮೇಕಪ್ ಬ್ರಶ್‌ಗಳು ಆಗಾಗ ಧೂಳು ಹಿಡಿಯುವುದರಿಂದ ಅವನ್ನು ಸ್ವಚ್ಛ ಮಾಡುತ್ತಿರಬೇಕಾಗುತ್ತದೆ. ಇದಕ್ಕಾಗಿ ಹಲವಾರು ಲಿಕ್ವಿಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಬ್ರಶ್ ಅನ್ನು ಸ್ವಚ್ಛಗೊಳಿಸಲು ಹಣ ತೆತ್ತು ಲಿಕ್ವಿಡ್ ಕೊಳ್ಳಲೇಬೇಕೆಂದಿಲ್ಲ. ಮನೆಯಲ್ಲಿರುವ ಸಾಧಾರಣ ಶಾಂಪೂವಿನಿಂದಲೇ ಇದನ್ನು ಮಾಡಬಹುದು. ಒಂದು ಕಪ್ ಬಿಸಿ ನೀರಿಗೆ ಕೆಲ ಹನಿ ನಾರ್ಮಲ್ ಶಾಂಪೂ ಸೇರಿಸಿ. ಈಗ ಇದನ್ನು ಬಳಸಿ ನಿಮ್ಮ ಮೇಕಪ್ ಬ್ರಶ್ ಗಳನ್ನು ಸ್ವಚ್ಛ ಮಾಡಬಹುದು. ಟ್ರೈ ಮಾಡಿ ನೋಡಿ.

ಬ್ರೋ ಪೌಡರ್

ನಿಮ್ಮ ಬಳಿ ಈಗಾಗಲೇ ಐ ಶಾಡೊ ಪ್ಯಾಲೆಟ್ ಇದ್ದಲ್ಲಿ ನೀವು ಬ್ರೋ ಪೌಡರ್ ಕೊಳ್ಳುವ ಅಗತ್ಯವೇ ಇಲ್ಲ. ಇದರಲ್ಲಿರುವ ಕಡು ಕಂದು ಹಾಗೂ ಬೂದು ವರ್ಣಗಳನ್ನು ಬಳಸಿ ನಿಮ್ಮ ಐ ಬ್ರೋಗಳಿಗೆ ಹಚ್ಚಿ ಶೇಪ್ ಮಾಡಬಹುದು.

English summary

beauty products you can make at home!

Looking flawless without hitting the salon or using expensive products is an art. If you want to look drop-dead-gorgeous, but don't want to invest in too many products or time, then we've got you covered. Don't want to spend money on a high-end highlighter? Use a lip gloss instead. Any clear lip gloss can work as a highlighter. Dab on the cheekbones to get a natural glow. You can also mix a bit of coconut oil with shimmer pigment to make your own DIY highlighter.
X
Desktop Bottom Promotion