For Quick Alerts
ALLOW NOTIFICATIONS  
For Daily Alerts

ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಸೌಂದರ್ಯವರ್ಧಕಗಳು, ಇಂದಿಗೂ ಪ್ರಸಿದ್ಧ ಪಡೆದಿದೆ

|

ಹಿಂದಿನವರು ಬಳಸುತ್ತಿದ್ದ ಕೆಲವೊಂದು ಸಾಮಗ್ರಿಗಳನ್ನು ನಾವು ಇಂದು ಸಂಪೂರ್ಣವಾಗಿ ಕಡೆಗಣಿಸಿದ್ದೇವೆ. ಯಾಕೆಂದರೆ ಇದರ ಬಗ್ಗೆ ನಮಗೆ ಯಾವುದೋ ರೀತಿಯ ತಾತ್ಸಾರ ಭಾವನೆ. ಹಿಂದಿನವರು ಹೆಚ್ಚಾಗಿ ತಮ್ಮ ಆರೋಗ್ಯ ಹಾಗೂ ದೇಹಕ್ಕೆ ಬಳಸುತ್ತಿದ್ದ ಹಲವಾರು ರೀತಿಯ ಸಾಮಗ್ರಿಗಳು ತುಂಬಾ ಲಾಭಕಾರಿಯಾಗಿದ್ದರೂ ಅದು ನಮಗೆ ಕಾಣಿಸುವುದಿಲ್ಲ. ಹಿಂದಿನವರು ತಮ್ಮ ಸೌಂದರ್ಯಕ್ಕಾಗಿ ಹಲವಾರು ರೀತಿಯ ಸಾಮಗ್ರಿಗಳನ್ನು ಫೇಸ್ ಪ್ಯಾಕ್ ಹಾಗೂ ಸ್ಕ್ರಬ್ ರೂಪದಲ್ಲಿ ಬಳಕೆ ಮಾಡುತ್ತಲಿದ್ದರು.

ಇನ್ನು ಕೆಲವರು ಹಕ್ಕಿಯ ಪಿಕ್ಕೆ, ಕೆಲವು ಪ್ರಾಣಿಗಳ ರಕ್ತ, ಮೊಸಳೆಯ ಮಲ ಹೀಗೆ ಹಲವಾರು ವಿಚಿತ್ರವಾದ ವಿಧಾನಗಳನ್ನು ಬಳಸಿಕೊಂಡು ಸೌಂದರ್ಯ ಕಾಪಾಡಿಕೊಳ್ಳುತ್ತಿದ್ದರು ಎನ್ನುವುದನ್ನು ನಾವು ಕೇಳಿದ್ದೇವೆ. ಆದರೆ ಇಂದು ಇಂತಹ ವಿಧಾನಗಳನ್ನು ಯಾರೂ ಬಳಸುವುದಿಲ್ಲ. ಆದರೆ ಕೆಲವು ಹಳೆ ವಿಧಾನಗಳು ಹೇಗೆ ಸೌಂದರ್ಯವನ್ನು ವೃದ್ಧಿಸಲು ನೆರವಾಗುತ್ತಲಿತ್ತು ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ...

ಮೊಟ್ಟೆ

ಮೊಟ್ಟೆ

ಚೀನಾದಲ್ಲಿ ತುಂಬಾ ಹಿಂದಿನ ಕಾಲದಲ್ಲಿ ಅಂದರೆ ಚೆನ್ ರಾಜ್ಯಾಡಳಿತದ ಸಮಯದಲ್ಲಿ ಖ್ಯಾತ ಸುಂದರಿ ಹಾಗೂ ಈ ರಾಜ್ಯದ ರಾಣಿ ಝಾಂಗ್ ಲಿಹುವಾ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮೊಟ್ಟೆಗಳನ್ನು ಬಳಸಿಕೊಳ್ಳುತ್ತಲಿದ್ದರು ಎಂದು ಹೇಳಲಾಗುತ್ತದೆ. ತ್ವಚೆಯ ಆರೈಕೆಗೆ ಮೊಟ್ಟೆಯ ಬಳಕೆ ಮಾಡಿರುವ ಬಗ್ಗೆ 600 ಬಿ.ಸಿ.ಯಲ್ಲಿ ಕಂಡುಬಂದಿದೆ. ಮೊಟ್ಟೆ ಬಿಳಿ ಲೋಳೆಯನ್ನು ಮುಖ ಹಾಗೂ ಕುತ್ತಿಗೆ ಮೇಲೆ ಹಾಗೆ ಹಚ್ಚಿಕೊಳ್ಳಬೇಕು. ಇದರ ಬಳಿಕ ಅದು ಒಣಗಲು ಬಿಡಬೇಕು ಮತ್ತು ಬಳಿಕ ಅದನ್ನು ತೊಳೆಯಬೇಕು. ಇದು ಚರ್ಮವನ್ನು ಬಿಗಿಗೊಳಿಸುವುದು ಮತ್ತು ಮುಖದ ಕಾಂತಿಯನ್ನು ಹೆಚ್ಚಿಸುವುದು. ಮೊಟ್ಟೆಯಲ್ಲಿ ಇರುವಂತಹ ಉನ್ನತ ಮಟ್ಟದ ಪ್ರೋಟೀನ್ ಚರ್ಮಕ್ಕೆ ತೇವಾಂಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ವಯಸ್ಸಾಗುವ ಲಕ್ಷಣ ತಡೆಯುವ ಕೈಗವಚ

ವಯಸ್ಸಾಗುವ ಲಕ್ಷಣ ತಡೆಯುವ ಕೈಗವಚ

ಕೈಗಳು ವಯಸ್ಸಾಗುವ ಲಕ್ಷಣಗಳು ತೋರಿಸುತ್ತದೆ ಎಂದು ವಿಜ್ಞಾನವು ಕಂಡುಕೊಳ್ಳುವ ಮೊದಲೇ ದೇಹದಲ್ಲಿ ಕೈಗಳು ತುಂಬಾ ಪ್ರಮುಖ ಭಾಗ ಮತ್ತು ಇದು ಹೊರಗಡೆ ಹೆಚ್ಚು ತೆರೆದುಕೊಳ್ಳುವ ಭಾಗವೆಂದು ಮೇರಿ ಅಂಟೋನೆಟ್ ಕಂಡುಕೊಂಡಿದ್ದರು. ಈ ಕಾರಣದಿಂದಾಗಿ ಆಕೆ ಮೇಣ, ಬಾದಾಮಿಯ ಎಣ್ಣೆ ಮತ್ತು ರೋಸ್ ವಾಟರ್ ಬಳಸಿಕೊಂಡು ಕೈಗವಚ ಹಾಕಿಕೊಂಡು ನಿದ್ರಿಸುತ್ತಿದ್ದಳು. ಇದರಿಂದ ಕೈಗಳು ತುಂಬಾ ನಯ ಹಾಗು ಮೊಶ್ಚಿರೈಸ್ ಪಡೆದುಕೊಳ್ಳುತ್ತಿದ್ದವು.

Most Read: ರಾತ್ರಿ ಮಲಗುವ ಮುನ್ನ, ಈ ಫೇಸ್ ಪ್ಯಾಕ್‌ಗಳನ್ನು ಮುಖಕ್ಕೆ ಹಚ್ಚಿದರೆ, ತ್ವಚೆ ಇನ್ನಷ್ಟು ಬೆಳ್ಳಗಾಗುವುದು

ಹಾಲು ಮತ್ತು ಜೇನುತುಪ್ಪ

ಹಾಲು ಮತ್ತು ಜೇನುತುಪ್ಪ

ಹಾಲು ಮತ್ತು ಜೇನುತುಪ್ಪ ಬೆರೆಸಿಕೊಂಡು ಬಳಸಿದಾಗ ನೀವು ಕ್ಲಿಯೊಪಾತ್ರ ಬಗ್ಗೆ ಯೋಚಿಸದೆ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ಆಕೆ ಸೌಂದರ್ಯದ ದಂತಕಥೆಯಾಗಿದ್ದವರು. ಆಕೆಯ ಸೌಂದರ್ಯದ ಗುಟ್ಟೆಂದರೆ ಆಕೆ ಹಾಲು, ಜೇನುತುಪ್ಪ ಮತ್ತು ಆಲಿವ್ ತೈಲದ ಮಿಶ್ರಣದಲ್ಲಿ ಸ್ನಾನ ಮಾಡುತ್ತಲಿದ್ದರು. ನೀವು ಇನ್ನು ಕಾಯುವುದು ಯಾಕೆ? ಇದರಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು ಮಾಸ್ಕ್ ಅಥವಾ ಲೋಷನ್ ತಯಾರಿಸಿಕೊಳ್ಳಿ.

ಅವಕಾಡೋ

ಅವಕಾಡೋ

ತೇವಾಂಶ ನೀಡುವ ಮತ್ತು ಮೊಶ್ಚಿರೈಸ್ ಗುಣಗಳನ್ನು ಹೊಂದಿರುವಂತಹ ಅವಕಾಡೋವನ್ನು ಹಿಂದಿನಿಂದಲೂ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆರೋಗ್ಯಕರ ಕಾಂತಿಯುಂಟು ಮಾಡುವಂತಹ ಮುಖದ ಎಣ್ಣೆಯನ್ನು ನೀವು ಹುಡುಕುತ್ತಲಿದ್ದರೆ ಆಗ ನೀವು ಅವಕಾಡೋ ಅತ್ಯುತ್ತಮ ವಾಗಿರುವಂತದ್ದು. ಈ ಎಣ್ಣೆಯು ಚರ್ಮದಲ್ಲಿನ ಪಿಎಚ್ ಮಟ್ಟವನ್ನು ಸಮತೋಲನದಲ್ಲಿ ಇಡುವುದು.

Most Read: ಮನೆಯಲ್ಲೇ ಮೊಟ್ಟೆ ಹಾಗೂ ಜೇನು ಬಳಸಿಕೊಂಡು ಮಾಡಿ 'ಹೇರ್ ಸ್ಪಾ'

ರೋಸ್ ವಾಟರ್

ರೋಸ್ ವಾಟರ್

ಕೆಂಪು ಗುಲಾಬಿಯಷ್ಟು ಸುಂದರವಾಗಿರುವ ಹೂ ಮತ್ತೊಂದು ಇಲ್ಲವೆಂದೇ ಹೇಳಬಹುದು. ಹಿಂದಿನ ಕಾಲದಿಂದಲೂ ಈ ಹೂವನ್ನು ಸೌಂದರ್ಯವರ್ಧಕವಾಗಿ ಬಳಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಈಜಿಪ್ಟ್ ನಲ್ಲಿ ಈ ಹೂವನ್ನು ಸೌಂದರ್ಯವರ್ಧಕವಾಗಿ ಬಳಸುತ್ತಿದ್ದರು. ಇದು ರಂಧ್ರಗಳನ್ನು ಬಿಗಿಕೊಳಿಸುವುದು ಮತ್ತು ವಯಸ್ಸಾಗುವ ವೇಳೆ ಮೂಡುವಂತಹ ನೆರಿಗೆಗಳನ್ನು ತಡೆಯುವುದು. ಇದು ಕ್ಲೆನ್ಸರ್ ಆಗಿಯೂ ಕೆಲಸ ಮಾಡುವುದು. ಯಾಕೆಂದರೆ ಇದು ಚರ್ಮದಲ್ಲಿರುವಂತಹ ಕಲ್ಮಷ ಹಾಗೂ ಧೂಳನ್ನು ತೆಗೆದುಹಾಕುವುದು. ಇದನ್ನು ನೀವು ಪ್ರತಿನಿತ್ಯವೂ ಬಳಸಿಕೊಂಡು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

English summary

Ancient Beauty Secrets We Use Today

As disgusting as that may seem, you’ve come to accept it as a widely-used, go-to beauty treatment. And while it may still seem distasteful to some, using crocodile dung or leeches as a go-to beauty treatment was common place in ancient times. While most of us may not go that far today, there are some practices that we use even today.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more