For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನಿಂದ ಚರ್ಮ ಹಾಗೂ ಕೂದಲಿಗೆ ಸಿಗುವ 7 ಲಾಭಗಳು

|

ದಾಹ ಹಾಗೂ ಹಸಿವನ್ನು ತಣಿಸುವಂತಹ ಒಂದು ಹಣ್ಣಿದ್ದರೆ ಅದು ಕಲ್ಲಂಗಡಿ ಮಾತ್ರ. ಬಿರು ಬೇಸಿಗೆಯಲ್ಲಿ ಒಂದು ತುಂಡು ಕಲ್ಲಂಗಡಿ ಹಣ್ಣನ್ನು ತಿಂದರೆ ಆಗ ಹೊಟ್ಟೆ ತುಂಬಿ, ಬಾಯಾರಿಕೆ ಕೂಡ ತಣಿಯುವುದು. ಬೇಸಿಗೆಯಲ್ಲಿ ಇದು ಅತೀ ಹೆಚ್ಚು ಬಳಸಲ್ಪಡುವ ಹಾಗೂ ಮಾರಾಟವಾಗುವಂತಹ ಹಣ್ಣು. ನಮ್ಮಲ್ಲಿ ಹೆಚ್ಚಾಗಿ ಕಲ್ಲಂಗಡಿ ಹಣ್ಣಿನ ತಿರುಳು ಕೆಂಪು ಆಗಿರುವುದು. ಆದರೆ ಇದು ಹಳದಿ ಹಾಗೂ ಕಿತ್ತಳೆ ಹಣ್ಣದಲ್ಲೂ ವಿಶ್ವದೆಲ್ಲೆಡೆಯಲ್ಲಿ ಲಭ್ಯವಿದೆ. ಬಿಳಿ ಸಿಪ್ಪೆ ಹೊಂದಿರುವಂತಹ ಕಲ್ಲಂಗಡಿ ಹಣ್ಣು ಕೂಡ ಇದೆ. ವಿಶ್ವದೆಲ್ಲೆಡೆಯಲ್ಲಿ ಇದನ್ನು ವರ್ಷಪೂರ್ತಿ ಬೆಳೆಸಲಾಗುತ್ತದೆ.

ಕೇವಲ 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇದನ್ನು ಬೆಳೆಸಬಹುದು. ಸಾಂಪ್ರದಾಯಿಕವಾಗಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ವಿಯೆಟ್ನಾಂನ ಹೊಸ ವರ್ಷದ ರಜೆ ಸಂದರ್ಭದಲ್ಲಿ ಸೇವನೆ ಮಾಡಲಾಗುತ್ತದೆ ಮತ್ತು ಚೀನಾದ ಹೊಸ ವರ್ಷದ ಆಚರಣೆ ವೇಳೆ ಬೇರೆ ಬೀಜಗಳ ಜತೆಗೆ ಈ ಬೀಜಗಳನ್ನು ಸೇವನೆ ಮಾಡಲಾಗುತ್ತದೆ. ಇದು ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ.

ಕಲ್ಲಂಗಡಿ ಜಾತಿಗೆ ಸೇರಿರುವಂತಹ ಕುಂಬಳಕಾಯಿ ಇತ್ಯಾದಿಗಳು ಕೂಡ ಬೆಳೆಯಲಾಗುತ್ತದೆ. ಕಲ್ಲಂಗಡಿಯಲ್ಲಿ ಶೇ. 6ರಷ್ಟು ಸಕ್ಕರೆ ಪ್ರಮಾಣವಿದೆ. ಆದರೆ ಇದರಲ್ಲಿ ಶೇ. 92ಕ್ಕೂ ಹೆಚ್ಚಿನ ಪ್ರಮಾಣದ ನೀರಿನಾಂಶವಿದೆ. ಇದರಿಂದ ಬೇಸಿಗೆಯ ದಿನಗಳಲ್ಲಿ ನಿರ್ಜಲೀಕರಣದಿಂದ ತಪ್ಪಿಸಲು ಈ ಹಣ್ಣನ್ನು ಬಳಸಿಕೊಳ್ಳಲಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಕೆಲವೊಂದು ಸೌಂದರ್ಯವರ್ಧ ಉತ್ಪನ್ನಗಳು, ಶಾವರ್ ಜೆಲ್, ಲಿಪ್ ಸ್ಟಿಕ್ ಮತ್ತು ಲಿಪ್ ಗ್ಲೊಸ್ಸೆಸ್ ಗಳಲ್ಲಿ ಬಳಸಲಾಗುತ್ತದೆ.

ಕಲ್ಲಂಗಡಿ ಹಣ್ಣಿನಿಂದ ಚರ್ಮ ಹಾಗೂ ಕೂದಲಿಗೆ ಸಿಗುವ 7 ಲಾಭಗಳು

ಯಾಕೆಂದರೆ ಇದರಲ್ಲಿ ಇರುವಂತಹ ತೇವಾಂಶ ನೀಡುವಂತಹ ಗುಣಗಳು ಇದಕ್ಕೆ ಕಾರಣವಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಕೆಲವೊಂದು ಪ್ರಮುಖ ವಿಟಮಿನ್ ಗಳಾಗಿರುವಂತಹ ವಿಟಮಿನ್ ಎ, ಬಿ6 ನತ್ತು ಸಿ ಇದೆ. ಕಲ್ಲಂಗಡಿ ಹಣ್ಣಿನಲ್ಲಿ ಲೈಕೊಪೆನೆ ಮತ್ತು ಅಮಿನೋ ಆಮ್ಲವಿದೆ. ಇದೆಲ್ಲವೂ ಜತೆಯಾಗಿ ಆರೋಗ್ಯಕರ ಚರ್ಮಕ್ಕೆ ನೆರವಾಗುವುದು. ಇದರಲ್ಲಿ ಇರುವಂತಹ ಆ್ಯಂಟಿ ಆಕ್ಸಿಡೆಂಟ್ ಅಂಶವು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು. ಕೂದಲು ಮತ್ತು ಚರ್ಮಕ್ಕೆ ಕಲ್ಲಂಗಡಿ ಹಣ್ಣಿನಿಂದ ಸಿಗುವ ಲಾಭಗಳು ಈ ರೀತಿಯಾಗಿ ಇದೆ.

ಕೂದಲಿನ ಬೆಳವಣಿಗೆಗೆ ಸಹಕಾರಿ

ಕೂದಲಿನ ಬೆಳವಣಿಗೆಗೆ ಸಹಕಾರಿ

ಅರ್ಜಿನೈನ್(ಅಮಿನೋ ಆಮ್ಲ) ಎನ್ನುವಂತಹ ಅಂಶವು ನಮ್ಮ ದೇಹಕ್ಕೆ ಮುಖ್ಯವಾಗಿರುವುದು ಮತ್ತು ಇದು ತಲೆಬುರುಡೆಗೆ ರಕ್ತ ಸಂಚಾರವನ್ನು ಸುಗಮಗೊಳಿಸಲು ನೆರವಾಗುವುದು. ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಿಗುವಂತಹ ಸಿಟ್ರುಲ್ಲೈನ್ ಇದ್ದು, ಇದು ಅರ್ಜಿನೈನ್ ಮಟ್ಟವನ್ನು ಹೆಚ್ಚಿಸುವುದು. ಇದರಿಂದಾಗಿ ಕೂದಲಿನ ಬೆಳವಣಿಗೆಗೆ ನೆರವಾಗುವುದು.

 ಕೂದಲು ಉದುರುವಿಕೆ ತಪ್ಪಿಸುವುದು

ಕೂದಲು ಉದುರುವಿಕೆ ತಪ್ಪಿಸುವುದು

ಕಲ್ಲಂಗಡಿ ಹಣ್ಣಿನವಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿದೆ ಮತ್ತು ಇದು ದೇಹದಲ್ಲಿ ಹೇಮ್ ಅಲ್ಲದೆ ಇರುವಂತಹ ಕಬ್ಬಿನಾಂಶವನ್ನು ಬಳಸಿಕೊಳ್ಳಲು ನೆರವಾಗುವುದು. ಇದು ರಕ್ತನಾಳಗಳಲ್ಲಿ ಸರಿಯಾದ ಕಬ್ಬಿನಾಂಶವು ಇರುವಂತೆ ನೋಡಿಕೊಳ್ಳುವುದು ಮತ್ತು ಅದು ಕೂದಲಿನ ಕೋಶಗಳಿಗೆ ಸರಿಯಾಗಿ ಆಮ್ಲಜನಕವನ್ನು ಸಾಗಾಟ ಮಾಡಲು ನೆರವಾಗುವುದು.

ಇದರಿಂದ ಕೂದಲು ಆರೋಗ್ಯವಾಗಿರುವುದು. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಕಾಲಜನ್ ಅತೀ ಅಗತ್ಯವಾಗಿ ಬೇಕು ಮತ್ತು ಕಲ್ಲಂಗಡಿ ಹಣ್ಣು ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸಲು ನೆರವಾಗುವುದು.

MOST READ:ಕೂದಲಿನ ಎಲ್ಲಾ ಸಮಸ್ಯೆಗೂ- ಸೀಗೆಕಾಯಿ ಪರ್ಫೆಕ್ಟ್ ಮನೆಮದ್ದು!

ಕೂದಲಿಗೆ ಮೊಶ್ಚಿರೈಸ್ ನೀಡುವುದು

ಕೂದಲಿಗೆ ಮೊಶ್ಚಿರೈಸ್ ನೀಡುವುದು

ಕಲ್ಲಂಗಡಿ ಬೀಜದ ಎಣ್ಣೆಯು ತುಂಬಾ ತೆಳುವಾದ ಎಣ್ಣೆಯಾಗಿದೆ. ಇದು ಕೂದಲಿಗೆ ಮೊಶ್ಚಿರೈಸ್ ನೀಡುವುದು ಮತ್ತು ಕಲ್ಲಂಗಡಿ ಶಾಂಪೂವಿನಲ್ಲಿ ಇದು ಅದ್ಭುತವಾಗಿ ಕೆಲಸ ಮಾಡುವುದು.

ಚರ್ಮಕ್ಕೆ ತೇವಾಂಶ ನೀಡುವುದು

ಚರ್ಮಕ್ಕೆ ತೇವಾಂಶ ನೀಡುವುದು

ಚರ್ಮವು ನಿರ್ಜಲೀಕರಣಗೊಂದರೆ ಅದರಿಂದ ತುಂಬಾ ನಿಸ್ತೇಜ ಹಾಗೂ ಒಣಗಿದ ಹಾಗೆ ಕಾಣುವುದು. ಆದರೆ ಕಲ್ಲಂಗಡಿ ಹಣ್ಣಿನಲ್ಲಿ ಇರುವಂತಹ ಅಧಿಕ ಮಟ್ಟದ ನೀರಿನಾಂಶದಿಂದಾಗಿ ಇದು ಚರ್ಮವನ್ನು ತೇವಾಂಶ ಹಾಗೂ ಮೊಶ್ಚಿರೈಸ್ ಆಗಿ ಇರುವುದು. ಇದರಿಂದ ಚರ್ಮವು ತುಂಬಾ ನಯ ಹಾಗೂ ಅದ್ಭುತವಾಗಿ ಕಾಣಿಸುವುದು.

ಚರ್ಮಕ್ಕೆ ಟೋನರ್ ಆಗಿ ಕೆಲಸ ಮಾಡುವುದು

ಚರ್ಮಕ್ಕೆ ಟೋನರ್ ಆಗಿ ಕೆಲಸ ಮಾಡುವುದು

ಕಲ್ಲಂಗಡಿ ಇರುವಂತಹ ನೈಸರ್ಗಿಕ ಅಂಶದಿಂದಾಗಿ ದೇಹದಲ್ಲಿನ ಕೆಲವೊಂದು ಅಂಗಾಂಶಗಳು ಹಾಗೆ ಕುಗ್ಗುವುದು. ಇದರಿಂದ ಕಲ್ಲಂಗಡಿ ಹಣ್ಣು ನೈಸರ್ಗಿಕ ಟೋನರ್ ಆಗಿ ಕೆಲಸ ಮಾಡುವುದು ಮತ್ತು ಇದು ಚರ್ಮಕ್ಕೆ ತಾಜಾತನ ನೀಡುವುದು.

MOST READ: ಕಲ್ಲಂಗಡಿ ಹಣ್ಣಿನ ಬೀಜಗಳ ಸ್ಪೆಷಾಲಿಟಿ ಒಂದೇ ಎರಡೇ

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುವ ಲಕ್ಷಣಗಳನ್ನು ತಡೆಯುವುದು

ವಯಸ್ಸಾಗುತ್ತಾ ಹೋದಂತೆ ನಮ್ಮ ಚರ್ಮವು ತುಂಬಾ ತೆಳು ಆಗುವುದು ಮತ್ತು ಆಗುವಂತಹ ಹಾನಿಯಿಂದ ಚೇತರಿಸಿಕೊಳ್ಳಲು ಆಗದು. ನಮ್ಮ ದೇಹದಲ್ಲಿ ಇರುವಂತಹ ಫ್ರೀ ರ್ಯಾಡಿಕಲ್ ಗಳು ನಮ್ಮ ಕೋಶಗಳಿಗೆ ಹಾನಿ ಉಂಟು ಮಾಡುವುದು ಮತ್ತು ಚರ್ಮಕ್ಕೆ ವಯಸ್ಸಾಗುವಂತೆ ಮಾಡುವುದು.

ಕಲ್ಲಂಗಡಿ ಹಣ್ಣಿನಲ್ಲಿ ಲೈಕೊಪೆನೆ ಅಂತಹ ಆ್ಯಂಟಿ ಆಕ್ಸಿಡೆಂಟ್ ಇದೆ ಮತ್ತು ಇದರಲ್ಲಿ ವಿಟಮಿನ್ ಎ ಮತ್ತು ಸಿ ಕೂಡ ಇದ್ದು, ಫ್ರೀ ರ್ಯಾಡಿಕಲ್ ನ್ನು ಇದು ಕಡಿಮೆ ಮಾಡುವುದು ಮತ್ತು ವಯಸ್ಸಾಗುವಂತಹ ಲಕ್ಷಣಗಳನ್ನು ನಿಧಾನವಾಗಿಸುವುದು. ವಿಟಮಿನ್ ಎ ಸೇವನೆ ಮಾಡುವ ಮೂಲಕವಾಗಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು ಮತ್ತು ಸ್ಥಿತಿಸ್ಥಾಪಕತ್ವ ಕೋಶಗಳಿಗೆ ನೆರವಾಗುವ ಕಾರಣದಿಂದಾಗಿ ಇದು ಯುವ ಹಾಗೂ ಬಿಗಿಯಾಗಿರುವಂತೆ ಮಾಡುವುದು.

MOST READ: ಕುತ್ತಿಗೆಯ ನೆರಿಗೆಯನ್ನು ನಿವಾರಿಸಲು ಸೂಕ್ತ ಮನೆಮದ್ದುಗಳು

ಚರ್ಮದಲ್ಲಿ ಎಣ್ಣೆಯ ಉತ್ಪತ್ತಿ ತಡೆಯುವುದು

ಚರ್ಮದಲ್ಲಿ ಎಣ್ಣೆಯ ಉತ್ಪತ್ತಿ ತಡೆಯುವುದು

ಮೇದಸ್ಸಿನ ಗ್ರಂಥಿಗಳು ಸ್ರವಿಸುವಂತಹ ಎಣ್ಣೆಯಿಂದಾಗಿ ಚರ್ಮವನ್ನು ಕೆಲವೊಂದು ಸಂದರ್ಭದಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿರುವುದು.

ಕಲ್ಲಂಗಡಿ ಹಣ್ಣಿನಲ್ಲಿ ಇರುವಂತಹ ವಿಟಮಿನ್ ಎ ಚರ್ಮದ ರಂಧ್ರದ ಗಾತ್ರವನ್ನು ಕುಗ್ಗಿಸುವುದು ಮತ್ತು ಮೇದಸ್ಸಿನ ಗ್ರಂಥಿಗಳು ಸ್ರವಿಸುವಂತಹ ಎಣ್ಣೆಯ ಪ್ರಮಾಣವನ್ನು ಕೂಡ. ಈ ಗುಣಗಳಿಂದಾಗಿ ಕಲ್ಲಂಗಡಿ ಹಣ್ಣು ಮೊಡವೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ನಂಬಲಾಗಿದೆ.

English summary

Benefits Of watermelon for hair and skin | ಕಲ್ಲಂಗಡಿ ಹಣ್ಣಿನಿಂದ ಚರ್ಮ ಹಾಗೂ ಕೂದಲಿಗೆ ಲಾಭಗಳು

Watermelon is packed with Vitamin C, which helps your body to use non-heme iron – this ensures that enough iron is in your red blood cells to assist in carrying oxygen to your hair follicles, promoting healthy hair. Collagen is also needed for healthy hair growth and watermelon helps promote collagen formation.Watermelon Seed Oil is a very light oil, which helps to moisturise and works very well in watermelon shampoo.
Story first published: Monday, February 11, 2019, 10:51 [IST]
X
Desktop Bottom Promotion