For Quick Alerts
ALLOW NOTIFICATIONS  
For Daily Alerts

ಕುತ್ತಿಗೆಯ ನೆರಿಗೆಯನ್ನು ನಿವಾರಿಸಲು ಸೂಕ್ತ ಮನೆಮದ್ದುಗಳು

|

ಮುಖದ ಮೇಲೆ ಬೀಳುವ ನೆರಿಗೆಗಳೇ ಹೆಚ್ಚಿನವರ ಚಿಂತೆಗೆ ಕಾರಣವಾಗಿವೆ. ಆದರೆ ಕುತ್ತಿಗೆಯ ಮೇಲೆ ಇರುವ ನೆರಿಗೆಗಳೂ ಸೌಂದರ್ಯವನ್ನು ಕುಂದಿಸಲು ಪ್ರಧಾನ ಪಾತ್ರ ವಹಿಸುತ್ತದೆ ಎಂದು ನಿಮಗೆ ಗೊತ್ತೇ? ಹೌದು, ಕುತ್ತಿಗೆಯ ಚರ್ಮ ಜೋಲು ಬೀಳುವ, ಕೆಳದವಡೆಯ ಅಡಿ ಇರುವ ಭಾಗ ಮಡಚಿ ಎರಡು ಗದ್ದ ಇರುವಂತೆ ತೋರುವ ಮೂಲಕ ಸಹಜ ಸೌಂದರ್ಯವನ್ನು ಮರೆಮಾಚುತ್ತವೆ. ಕುತ್ತಿಗೆಯ ಉದ್ದಕ್ಕೂ ಅಡ್ಡಲಾಗಿರುವ ಸೂಕ್ಷ್ಮ ಗೆರೆಗಳಂತೂ ತಲೆ ಮೇಲೆತ್ತಿದಾಗ ಪುಸ್ತಕ ತೆರೆದಂತೆ ತೆರೆದು ಒಳಭಾಗದ ಬಿಳಿವರ್ಣವನ್ನು ಪ್ರದರ್ಶಿಸಿ ಪಟ್ಟೆಪಟ್ಟೆಯಾಗುವಂತೆ ಮಾಡುತ್ತವೆ. ಇದಕ್ಕೆ ಕುತ್ತಿಗೆಯ ಭಾಗದಲ್ಲಿ ಕೊಬ್ಬು ತುಂಬಿಕೊಳ್ಳುವುದು ಒಂದು ಕಾರಣವಾದರೆ ಈ ಭಾಗದ ಚರ್ಮ ತೀರಾ ಸಡಿಲವಾಗುವುದು ಇನ್ನೊಂದು ಕಾರಣ. ಅಲ್ಲದೇ ವೃದ್ದಾಪ್ಯದ ಚಿಹ್ನೆಗಳನ್ನು ಮೊದಲಾಗಿ ಪ್ರದರ್ಶಿಸುವ ಗೆರೆಗಳೂ ಈ ಕುತ್ತಿಗೆಯ ಗೆರೆಗಳೇ ಆಗಿವೆ.

ಈ ಗೆರೆಗಳು ಮೂಡಲು ಇತರ ಕಾರಣಗಳೆಂದರೆ ಕುತ್ತಿಗೆಯ ಆರೋಗ್ಯದ ಕಡೆಗೆ ಗಮನ ನೀಡದೇ ಹೋಗುವುದು, ಸೂರ್ಯನ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದು, ನಿರ್ಜಲೀಕರಣ, ಧೂಮಪಾನ, ಪೌಷ್ಟಿಕ ಆಹಾರ ಸೇವನೆಯ ಕೊರತೆ ಅಥವಾ ರಸದೂತಗಳ ಅಸಮತೋಲನ ಇತ್ಯಾದಿಗಳಾಗಿವೆ. ಒಂದು ವೇಳೆ ನಿಮ್ಮ ಕುತ್ತಿಗೆಯ ರೇಖೆಗಳು ನಿಮ್ಮ ಸಹಜಸೌಂದರ್ಯವನ್ನೇ ಕಸಿದುಕೊಳ್ಳುವಷ್ಟು ಗಾಢವಾಗಿದ್ದರೆ ಇವನ್ನು ನಿವಾರಿಸಲು ಕೆಲವು ಸುಲಭ ಮನೆಮದ್ದುಗಳಿವೆ, ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ:

ಅನಾನಾಸು

ಅನಾನಾಸು

ಈ ಹಣ್ಣಿನಲ್ಲಿ ವಿಟಮಿಸ್ ಸಿ ಸಮೃದ್ಧವಾಗಿದೆ ಹಾಗೂ ಚರ್ಮದಲ್ಲಿ ಕೊಲ್ಯಾಜೆನ್ ಅಂಶವನ್ನು ಹೆಚ್ಚಿಸಿ ಸೆಳೆತವನ್ನು ಪಡೆದುಕೊಳ್ಳುವ ಮೂಲಕ ನೆರಿಗೆಗಳು ಇಲ್ಲದಂತಾಗಿಸುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಒಂದು ಚೆನ್ನಾಗಿ ಹಣ್ಣಾದ ಅನಾನಾಸಿನ ತಾಜಾ ತಿರುಳಿನ ಚಿಕ್ಕ ಭಾಗವೊಂದನ್ನು ನುಣ್ಣಗೆ ಮಿಕ್ಸಿಯಲ್ಲಿ ಅರೆಯಿರಿ

ಬಳಿಕ ಇದನ್ನು ಹಿಂಡಿ ರಸವನ್ನು ಸಂಗ್ರಹಿಸಿ

ಈ ರಸವನ್ನು ಕುತ್ತಿಗೆಯ ಭಾಗದ ಮೇಲೆ ಸುಮಾರು ಅದು ನಿಮಿಷಗಳವರೆಗೆ ಕೆಳಗಿನಿಂದ ಮೇಲ್ಭಾಗಕ್ಕೆ ನೇವರಿಸುವಂತೆ ಅಲ್ಪ ಒತ್ತಡದಿಂದ ಮಸಾಜ್ ಮಾಡಿಕೊಳ್ಳಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ

ಉತ್ತಮ ಫಲಿತಾಂಶ ಪಡೆಯಲು ವಾರಕ್ಕೊಮ್ಮೆ ಈ ವಿಧಾನ ಪುನರಾವರ್ತಿಸಿ

Most Read: ಕುತ್ತಿಗೆಯ ಸುತ್ತ ಕಪ್ಪು ಬಣ್ಣವಾಗಿದೆಯೇ? ಹಾಗಾದರೆ ಈ ಫೇಸ್ ಪ್ಯಾಕ್ ಹಚ್ಚಿ ನೋಡಿ...

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿಯೂ ತ್ವಚೆಯ ಸೆಳೆತವನ್ನು ಹೆಚ್ಚಿಸುವ ಗುಣವಿದೆ ಹಾಗೂ ಸಡಿಲಗೊಂಡಿದ್ದ ಚರ್ಮವನ್ನು ಸೆಳೆದು ಸಹಜವರ್ಣ ನೀಡುವ ಮೂಲಕ ಸೂಕ್ಷ್ಮ ಗೆರೆಗಳನ್ನು ಇಲ್ಲವಾಗಿಸುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಕೊಂಚ ಎಲೆಕೋಸಿನ ಎಲೆಗಳನ್ನು ನುಣ್ಣಗೆ ಅರೆದು ಹಿಂಡಿ ರಸವನ್ನು ಸಂಗ್ರಹಿಸಿ.

ಒಂದು ದೊಡ್ಡಚಮಚದಷ್ಟು ಈ ರಸಕ್ಕೆ ಒಂದು ಚಿಕ್ಕ ಚಮಚ ಜೇನು ಬೆರೆಸಿ.

ಈ ಮಿಶ್ರಣದಿಂದ ಕುತ್ತಿಗೆಯನ್ನು ಮೇಲಿನ ವಿಧಾನದಂತೆಯೇ ಐದು ನಿಮಿಷ ಮಸಾಜ್ ಮಾಡಿ. ಸುಮಾರು ಹದಿನೈದು ನಿಮಿಷವಾದರೂ ಹಾಗೇ ಒಣಗಲು ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಉತ್ತಮ ಪರಿಣಾಮಕ್ಕೆ ಈ ವಿಧಾನವನ್ನು ವಾರಕ್ಕೆರಡು ಬಾರಿ ಪುನರಾವರ್ತಿಸಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಈ ಎಣ್ಣೆಯಲ್ಲಿ ವಿಟಮಿನ್ ಇ ಹಾಗೂ ಎ ಹೇರಳವಾಗಿದ್ದು ಚರ್ಮದ ಜೀವಕೋಶಗಳನ್ನು ಸರಿಪಡಿಸಿ, ತೇವಾಂಶ ಒದಗಿಸಿ ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತವೆ. ಈ ಮೂಲಕ ನೆರಿಗೆಯೂ ಇಲ್ಲವಾಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಒಂದು ದೊಡ್ಡ ಚಮಚ ಆಲಿವ್ ಎಣ್ಣೆಯನ್ನು ಒಂದು ಚಿಕ್ಕಚಮಚ ಗ್ಲಿಸರಿನ್ ನೊಂದಿಗೆ ಬೆರೆಸಿ.

ಈ ಮಿಶ್ರಣವನ್ನು ಮೇಲಿನ ವಿಧಾನದಂತೆಯೇ ಮಸಾಜ್ ಮಾಡಿ ಹಚ್ಚಿಕೊಳ್ಳಿ.

ರಾತ್ರಿ ಮಲಗುವ ಮುನ್ನ ಈ ಮಸಾಜ್ ನಿರ್ವಹಿಸಿ ಮರುದಿನ ಬೆಳಿಗ್ಗೆ ತೊಳೆದುಕೊಳ್ಳಿ.

ಉತ್ತಮ ಪರಿಣಾಮಕ್ಕಾಗಿ ನಿತ್ಯವೂ ಈ ವಿಧಾನ ಅನುಸರಿಸಿ. ಒಂದೇ ವಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಬಾದಾಮಿ

ಬಾದಾಮಿ

ಬಾದಾಮಿಗಳಲ್ಲಿ ವಿಟಮಿನ್ ಇ, ಸತು, ಕಬ್ಬಿಣ, ಫೋಲಿಕ್ ಆಮ್ಲ ಹಾಗೂ ಓಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿವೆ. ಇವೆಲ್ಲವೂ ಚರ್ಮದಡಿಯಲ್ಲಿ ಮಾಯವಾಗಿದ್ದ ಕೊಬ್ಬನ್ನು ಮತ್ತೆ ತುಂಬಿಕೊಳ್ಳುವಂತೆ ಮಾಡಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತವೆ ಹಾಗೂ ಮೃದುವಾದ ತ್ವಚೆ ಹಾಗೂ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ

ಬಳಕೆಯ ವಿಧಾನ:

ಬಳಕೆಯ ವಿಧಾನ:

ನಾಲ್ಕು ಬಾದಾಮಿಗಳನ್ನು ಹಾಲಿನೊಂದಿಗೆ ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿಕೊಳ್ಳುವಷ್ಟು ದಪ್ಪನಾದ ದ್ರಾವಣವಾಗಿಸಿ.

ಈ ಮಿಶ್ರಣವನ್ನು ಕುತ್ತಿಗೆಯ ಮೇಲೆ ಲೇಪಿಸಿ ಸುಮಾರು ಅರ್ಧ ಘಂಟೆ ಹಾಗೇ ಒಣಗಲು ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಮ್ಮೆಯಾದರೂ ಈ ಮನೆಮದ್ದನ್ನು ಪುನರಾವರ್ತಿಸಿ.

Most Read: ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ ಕಾಂತಿಯುತವಾಗಿರುತ್ತದೆ

ಟೊಮೇಟೊ

ಟೊಮೇಟೊ

ಇದರಲ್ಲಿರುವ ಬೀಟಾ ಕ್ಯಾರೋಟೀನ್, ಲ್ಯೂಟಿನ್ ಮತ್ತು ಲೈಕೋಪೀನ್ ಚರ್ಮಕ್ಕೆ ಎದುರಾಗುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳನ್ನು ನಿಷ್ಫಲಗೊಳಿಸಿ ಈಗಾಗಲೇ ಘಾಸಿಗೊಂಡಿದ್ದ ಚರ್ಮದ ಜೀವಕೋಶಗಳನ್ನು ಸರಿಪಡಿಸಿ ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಒಂದು ಚಿಕ್ಕ, ಚೆನ್ನಾಗಿ ಹಣ್ಣಾದ ಟೊಮಾಟೋವಿನ ತಿರುಳನ್ನು ಸಂಗ್ರಹಿಸಿ ಒಂದು ಚಿಕ್ಕ ಚಮಚ ಗುಲಾಬಿ ನೀರು ಮತ್ತು ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ ಸೇರಿಸಿ ನುಣ್ಣಗೆ ಅರೆಯಿರಿ.

ಈ ಮಿಶ್ರಣವನ್ನು ಕುತ್ತಿಗೆಗೆ ತೆಳುವಾಗಿ ಹಚ್ಚಿಕೊಂಡು ಪೂರ್ಣವಾಗಿ ಒಣಗುವವರೆಗೂ ಹಾಗೇ ಬಿಡಿ.

ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಟವೆಲ್ ಒತ್ತಿ ಒರೆಸಿಕೊಳ್ಳಿ.

ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

English summary

Simple Treatments,to get of Neck Wrinkles with in one week!

Most people complain of having wrinkles on their face. But do you know these folds or creases can appear on neck as well? Yes, many people have excess skin on their neck which can manifest itself in the form of double chin or ugly lines that run horizontally from one side of your neck to the other as a result of build-up of fat or loosening of skin on the neck. Besides, the skin on the neck is more susceptible to signs of ageing as it’s thinner than the skin on your face.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more