For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಬೇಕೇ? ಮೊಸರು-ಲಿಂಬೆಯ ಫೇಸ್ ಪ್ಯಾಕ್ ಪ್ರಯತ್ನಿಸಿ

|

ಹೆಣ್ಣಿಗೆ ಸೌಂದರ್ಯ ಎಂಬುದು ಒಮ್ಮೆಮ್ಮೊ ವರವೂ ಹೌದು ಶಾಪವೂ ಹೌದು. ನಿಮ್ಮ ತ್ವಚೆಯ ಕಾಳಜಿಯನ್ನು ನೀವು ಉತ್ತಮವಾಗಿ ಮಾಡಿದರೆ ಅದು ವರದಾನವಾಗಿ ಮಾರ್ಪಡುತ್ತದೆ, ಅದೇ ರೀತಿ ಕಾಳಜಿ ಮಾಡದೇ ಇದ್ದರೆ ಆ ಸೌಂದರ್ಯ ಶಾಪವಾಗಿ ಕಾಡುತ್ತದೆ. ಹೌದು ಉತ್ತಮ ತ್ವಚೆಯನ್ನು ಪಡೆದುಕೊಳ್ಳುವುದು ವರವಾಗಿದ್ದರೂ ಅದನ್ನು ಪೋಷಣೆ ಮಾಡುವುದೂ ನಮ್ಮ ಕರ್ತವ್ಯವಾಗಿದೆ.

ಇಂದಿನ ಕಲುಷಿತ ವಾತಾವರಣದಲ್ಲಿ ತ್ವಚೆಗೆ ರಾಸಾಯನಿಕ ಕ್ರೀಮ್‌ಗಳನ್ನು ಬಳಕೆ ಮಾಡುವುದಕ್ಕಿಂತ ಬದಲಿಗೆ ನೈಸರ್ಗಿಕ ವಿಧಾನಗಳನ್ನು ಬಳಸಿ ತ್ವಚೆಯನ್ನು ಪೋಷಣೆ ಮಾಡಬೇಕು. ಇದರಿಂದ ತ್ವಚೆಯ ಆರೋಗ್ಯ ಹದಗೆಡುವುದಿಲ್ಲ. ಬಿಸಿಲು ಮತ್ತು ವಾತಾವರಣದ ಹಾನಿಯಿಂದ ತ್ವಚೆಯನ್ನು ನೀವು ಸನ್‌ಸ್ಕ್ರೀನ್ ಇಲ್ಲವೇ ಇತರ ಲೋಶನ್‌ಗಳಿಂದ ರಕ್ಷಿಸಿದರೂ ಮನೆಯಲ್ಲೇ ಮಾಡಿಕೊಳ್ಳಬಹುದಾದ ನೈಸರ್ಗಿಕ ಮಾಸ್ಕ್‌ಗಳನ್ನು ಹಚ್ಚಿಕೊಂಡು ಸ್ವಚ್ಛವಾದ ಸುಕ್ಕು ರಹಿತ ತ್ವಚೆಯನ್ನು ಪಡೆದುಕೊಳ್ಳಬಹುದು.

ಈ ಮಾಸ್ಕ್‌ ತಯಾರಿಸಲು ನೀವು ಗಂಟೆಗಳ ಕಾಲ ಸಮಯ ವ್ಯಯಿಸಬೇಕಾಗಿಲ್ಲ. ಕೆಲವೇ ನಿಮಿಷದಲ್ಲಿ ತಯಾರಿಸಿಕೊಂಡು ಸ್ವಲ್ಪ ಹೊತ್ತು ಮುಖದಲ್ಲಿ ಹಾಗೆಯೇ ಬಿಟ್ಟು ನಂತರ ತೊಳೆದುಕೊಂಡರೆ ಸಾಕು. ತ್ವಚೆಯಲ್ಲಿರುವ ಕೊಳಕು, ಮೊಡವೆ, ನೆರಿಗೆ, ಬ್ಲ್ಯಾಕ್ ಹೆಡ್ಸ್ ಮೊದಲಾದ ಸಮಸ್ಯೆಗಳು ಮಂಗಮಾಯ ವಾಗುವುದು ಖಂಡಿತ. ಲಿಂಬೆ ಮತ್ತು ಮೊಸರಿನ ಈ ಫೇಸ್ ಮಾಸ್ಕ್ ನಿಮಗೆ ಉತ್ತಮ ಫಲಿತಾಂಶವನ್ನು ನೀಡುವುದು ಖಂಡಿತ. ಹೆಚ್ಚಿನ ಸೌಂದರ್ಯ ಉತ್ಪನ್ನಗಳಲ್ಲಿ ಈ ವಸ್ತುಗಳನ್ನು ಬಳಸುತ್ತಾರೆ. ಮೊಸರು ಲ್ಯಾಕ್ಟಿಕ್ ಆ್ಯಸಿಡ್ ಅನ್ನು ಹೊಂದಿದ್ದು ಲಿಂಬೆಯು ತ್ವಚೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸುವ ಸಂಜೀವಿನಿಯಾಗಿದೆ. ಇದರಿಂದ ನಿಮ್ಮ ತ್ವಚೆ ಪ್ರಕಾಶಮಾನವಾಗಿ ಬೆಳಗುವುದು ಖಂಡಿತ. ಹಾಗಿದ್ದರೆ ಈ ಎರಡೂ ವಸ್ತುಗಳನ್ನು ಬಳಸಿಕೊಂಡು ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ....

ಬೇಕಾಗಿರುವ ಸಾಮಾಗ್ರಿಗಳು

ಬೇಕಾಗಿರುವ ಸಾಮಾಗ್ರಿಗಳು

*2 ಚಮಚ ಮೊಸರು

*3 ಚಮಚ ಲಿಂಬೆ ರಸ

ಸಿದ್ಧಪಡಿಸುವುದು ಹೇಗೆ?

ಸಿದ್ಧಪಡಿಸುವುದು ಹೇಗೆ?

ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೊಸರು ಹಾಕಿ. ನಂತರ ತಾಜಾ ಲಿಂಬೆ ರಸ ಬೆರೆಸಿ, ಎರಡನ್ನೂ ಮಿಶ್ರ ಮಾಡಿ.

ಹಚ್ಚುವುದು ಹೇಗೆ?

ನಿಮ್ಮ ಮುಖ ಮತ್ತು ಕತ್ತಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ವೃತ್ತಾಕಾರವಾಗಿ ಮುಖದಲ್ಲಿ ಮಸಾಜ್ ಮಾಡಿ. ನಿಮ್ಮ ಕಣ್ಣುಗಳಿಗೆ ಇದನ್ನು ಹಚ್ಚದಿರಿ. 20 ನಿಮಿಷ ಈ ಪ್ಯಾಕ್ ಮುಖದಲ್ಲಿ ಹಾಗೆಯೇ ಇರಲಿ. ಚೆನ್ನಾಗಿ ಪ್ಯಾಕ್ ಹೀರಿಕೊಳ್ಳಲಿ.

20 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ತ್ವಚೆಯನ್ನು ಹೈಡ್ರೇಟ್ ಮಾಡಲು ಮಾಯಿಶ್ಚರೈಸರ್ ಹಚ್ಚಿ.

ವಾರದಲ್ಲಿ 2-3 ಬಾರಿ ಈ ಮಾಸ್ಕ್ ಅನ್ನು ಹಚ್ಚಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ನಾಜೂಕಾದ ತ್ವಚೆಯನ್ನು ನೀವು ಪಡೆದುಕೊಳ್ಳುವುದು ಖಂಡಿತ.

ಮೊಸರಿನ ಪ್ರಯೋಜನಗಳು

ಮೊಸರಿನ ಪ್ರಯೋಜನಗಳು

ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ಅಷ್ಟೇ ಅಲ್ಲದೆ ಮೊಸರಿನಲ್ಲಿ ಜಿಂಕ್, ಕ್ಯಾಲ್ಶಿಯಂ, ಲ್ಯಾಕ್ಟಿಕ್ ಆ್ಯಸಿಡ್ ಇದರಲ್ಲಿದೆ. ಇದು ನಿಮ್ಮ ತ್ವಚೆಯ ವಿಷಯಕ್ಕೆ ಬಂದಾಗ ಮೊಸರು ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡುವ ಕಾರ್ಯವನ್ನು ಮೊಸರು ಮಾಡುತ್ತದೆ ಹಾಗೂ ಮೃತಕೋಶವನ್ನು ಇದು ನಿವಾರಣೆ ಮಾಡುತ್ತದೆ. ನೆರಿಗೆ ಮತ್ತು ತ್ವಚೆಯ ಇತರ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ನಿಮ್ಮ ತ್ವಚೆಯನ್ನು ಯುವತ್ವದಿಂದ ನಳನಳಿಸುವಂತೆ ಮಾಡುವಲ್ಲಿ ಮೊಸರು ಪ್ರಧಾನವಾಗಿದೆ. ಇದರಲ್ಲಿರುವ ಆ್ಯಂಟಿಸೆಪ್ಟಿಕ್ ಅಂಶಗಳು ತ್ವಚೆಯ ಯಾವುದೇ ಸೋಂಕು, ಮೊಡವೆ, ನೆರಿಗೆಗಳಿಂದ ಸಂರಕ್ಷಿಸುತ್ತದೆ.

ಲಿಂಬೆಯ ಪ್ರಯೋಜನಗಳು

ಲಿಂಬೆಯ ಪ್ರಯೋಜನಗಳು

ಬೀಜವಿಲ್ಲದಿದ್ದತೆ ಲಿಂಬೆಯಂತಹ ಔಷಧಿ ಇನ್ನೊಂದಿರುತ್ತಿರಲಿಲ್ಲ, ತೊಟ್ಟಿಲ್ಲದಿದ್ದರೆ ಬದನೆಯಂತಹ ವಿಷ ಇನ್ನೊಂದಿರುತ್ತಿರಲಿಲ್ಲ ಎಂದು ಹಳ್ಳಿಯ ಜನತೆ ಗಾಢವಾಗಿ ನಂಬಿದ್ದಾರೆ. ಲಿಂಬೆಯಲ್ಲಿರುವ ಗುಣಗಳನ್ನು ನೂರಾರು ರೂಪದಲ್ಲಿ ಬಳಸಬಹುದು. ಆರೋಗ್ಯದ ವಿಷಯದಲ್ಲಂತೂ ಲಿಂಬೆಯ ಬಳಕೆ ಬಹಳಷ್ಟಿದೆ. ಚರ್ಮದ ಆರೈಕೆ, ಜೀರ್ಣಕ್ರಿಯೆ, ತೂಕ ಇಳಿಸಲು ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇದರ ಉಪಯೋಗಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆದುಬಿಡಬಹುದು. ನಮೆಗಲ್ಲಾ ತಿಳಿದಿರುವಂತೆ ಲಿಂಬೆಯು ಸಿಟ್ರಸ್ ಹಣ್ಣಾಗಿದ್ದು ವಿಟಮಿನ್ ಸಿ ಅನ್ನು ಒಳಗೊಂಡಿದೆ. ಇದು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಎಂದೆನಿಸಿದ್ದು ಕಲೆಗಳನ್ನು ನಿವಾರಿಸಿ ಕೊಳಕನ್ನು ಹೋಗಲಾಡಿಸಿ ಶುಭ್ರ ಸ್ವಚ್ಛ ತ್ವಚೆಯನ್ನು ದಯಪಾಲಿಸುತ್ತದೆ. ಮೃತಕೋಶಗಳ ನಿವಾರಣೆಯಲ್ಲೂ ಲಿಂಬೆಯದು ಎತ್ತಿದ ಕೈಯಾಗಿದೆ. ತ್ವಚೆಯಲ್ಲಿರುವ ಮೊಡವೆ ಇನ್ನಿತರ ಯಾವುದೇ ಸಮಸ್ಯೆಯನ್ನು ಲಿಂಬೆ ನಿವಾರಿಸುತ್ತದೆ. ಕಣ್ಣುಗಳ ಕೆಳಗಿರುವ ಕಪ್ಪು ವರ್ತುಲವನ್ನು ಇದು ಹೋಗಲಾಡಿಸುತ್ತದೆ. ನಿಮ್ಮ ತ್ವಚೆಯನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುತ್ತದೆ.

ಲಿಂಬೆ ಹಣ್ಣಿನ ಇನ್ನಷ್ಟು ಪ್ರಯೋಜನಗಳು

ಲಿಂಬೆ ಹಣ್ಣಿನ ಇನ್ನಷ್ಟು ಪ್ರಯೋಜನಗಳು

ಒಂದು ಲಿಂಬೆಯ ಸಿಪ್ಪೆಯನ್ನು ಪ್ರತ್ಯೇಕಿಸಿ ಸುಮಾರು ಎರಡರಿಂದ ಮೂರು ದಿನಗಳ ಕಾಲ ಒಣಗಿಸಿ. ಸಿಪ್ಪೆ ಪೂರ್ಣವಾಗಿ ಒಣಗಿದ ಬಳಿಕ ಇದನ್ನು ಕುಟ್ಟಿ ಪುಡಿ ಮಾಡಿ. ಬಳಿಕ ಒಂದು ಚಿಕ್ಕಚಮಚ ಲಿಂಬೆರಸದೊಂದಿಗೆ ಒಂದು ಚಿಕ್ಕಚಮಚ ಈ ಸಿಪ್ಪೆಯ ಪುಡಿಯನ್ನು ಬೆರೆಸಿ. ಇದಕ್ಕೆ ಒಂದು ಹನಿ ಜೇನನ್ನು ಬೆರೆಸಿ. ಈ ಲೇಪವನ್ನು ಮುಖಕ್ಕೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಕಪ್ಪನೆಯ ಒರಟು ಚರ್ಮದ ಸಮಸ್ಯೆ ಇದ್ದರೆ

ಕಪ್ಪನೆಯ ಒರಟು ಚರ್ಮದ ಸಮಸ್ಯೆ ಇದ್ದರೆ

ನಿಮ್ಮ ಕೈಗಳು ನಿಮ್ಮ ಮುಖದಷ್ಟೇ ಜನರ ಕಣ್ಣಿಗೆ ಕಾಣುವ ಒಂದು ಅಂಗವಾಗಿರುತ್ತದೆ. ಹಾಗಾಗಿ ಇದನ್ನು ಸಹ ನೀವು ಕಡೆಗಣಿಸದೆ, ಅಗತ್ಯವಾದ ಆರೈಕೆಯನ್ನು ಆಗಾಗ ಮಾಡುತ್ತಿರಬೇಕು. ನಿಮ್ಮ ಕೈಗಳಿಗೆ ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಲಿಂಬೆರಸವನ್ನು ಬೆರೆಸಿದ ಮಿಶ್ರಣವನ್ನು ಲೇಪಿಸಿ, ಮಸಾಜ್ ಮಾಡುತ್ತ ಬನ್ನಿ. ನಿಮ್ಮ ಕೈಗಳು ಮೃದು ಮತ್ತು ಶುಭ್ರವಾಗುವುದನ್ನು ನೀವೇ ನೋಡುವಿರಿ. ಇದು ಹಠಮಾರಿಯಂತೆ ಕೂತ ಮೊಣಕೈನ ಕಪ್ಪನೆಯ ಒರಟು ಚರ್ಮವನ್ನು ಸಹ ಹೋಗಲಾಡಿಸುತ್ತದೆ

ಪಾಲಿಸಬೇಕಾದ ಕೆಲವು ಸೂಚನೆಗಳು

ಪಾಲಿಸಬೇಕಾದ ಕೆಲವು ಸೂಚನೆಗಳು

* ಈ ಪ್ಯಾಕ್ ಅನ್ನು ರಾತ್ರಿ ವೇಳೆಯಲ್ಲಿ ಹಚ್ಚಿ ಇದರಿಂದ ಹೊರಗೆ ಸೂರ್ಯನ ಬೆಳಕಿಗೆ ಇದು ಪ್ರದರ್ಶನಗೊಳ್ಳುವುದಿಲ್ಲ.

* ಇದನ್ನು ಹಚ್ಚಿಕೊಳ್ಳುವ ಮುನ್ನ ಲಿಂಬೆಯಿಂದ ತ್ವಚೆಗೆ ಯಾವುದೇ ರೀತಿಯ ಹಾನಿ ಇಲ್ಲ ಎಂಬುದನ್ನು ಖಾತ್ರಿಪಡಿಸಿ.

* ನೀವು ಬಳಸುವ ಮೊಸರು ತಾಜಾ ಆಗಿರಲಿ

* ಪ್ಯಾಕ್ ಬದಲಿಗೆ ನಿಮಗೆ ಸ್ಕ್ರಬ್ ಬೇಕು ಎಂದಾದಲ್ಲಿ ಓಟ್‌ಮೀಟ್ ಮತ್ತು ಜೇನನ್ನು ಈ ಮಿಶ್ರಣಕ್ಕೆ ಸೇರಿಸಿ ಹಾಗೂ ಸ್ಕ್ರಬ್‌ನಂತೆ ಇದನ್ನು ಬಳಸಿ.

* ಈ ಪ್ಯಾಕ್ ಹಚ್ಚಿದ ನಂತರ ಶುದ್ಧನೀರಿನಿಂದ ಅಂದರೆ ತಣ್ಣೀರು ಬಳಸಿ ಮುಖ ತೊಳೆದುಕೊಳ್ಳಿ. ಬೆಚ್ಚಗಿನ ನೀರು ತ್ವಚೆಯ ಪೋರ್ಸ್‌ಗಳನ್ನು ತೆರೆಯುತ್ತದೆ ಮತ್ತು ಪ್ಯಾಕ್ ಇದರಿಂದ ಸರಿಯಾಗಿ ಅನ್ವಯವಾಗುವುದಿಲ್ಲ.

*ತಾಜಾ ಲಿಂಬೆ ರಸವನ್ನು ಬಳಸಲು ಮರೆಯದಿರಿ.

English summary

Yogurt And Lemon Face Pack For Perfect Skin

Our facial skin is prone to a lot of issues like wrinkles, acne, dark spots, redness, etc. One major reason is because it is more exposed to the sun and we fail to take care of it most of the times. Today we are here with a solution for almost all of your issues related to facial skin. And the solution is a pack made of lemon and yogurt.
X
Desktop Bottom Promotion