For Quick Alerts
ALLOW NOTIFICATIONS  
For Daily Alerts

ಮುಖದ ಅಂದ ಹೆಚ್ಚಿಸಲು ಮೊಸರು ಹಾಗೂ ಲಿಂಬೆರಸದ ಫೇಸ್ ಪ್ಯಾಕ್

|

ಮುಖದ ಸೌಂದರ್ಯ ಕಾಪಾಡಿಕೊಳ್ಳಬೇಕೆಂದರೆ ಹಲವಾರು ರೀತಿಯ ಸಮಸ್ಯೆಗಳನ್ನು ದಾಟಿ ಮುಂದೆ ಸಾಗಬೇಕು. ಸೌಂದರ್ಯದ ಆರೈಕೆಯು ಅತೀ ಸೂಕ್ಷ್ಮ ಹಾಗೂ ಪ್ರಮುಖ ವಿಚಾರ. ಮುಖದ ಮೇಲೆ ನೆರಿಗೆ, ಮೊಡವೆ, ಕಪ್ಪು ಕಲೆಗಳು ಮತ್ತು ಚರ್ಮ ಕೆಂಪಾಗುವ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇದರಲ್ಲಿ ಪ್ರಮುಖವಾಗಿರುವುದು ಎಂದರೆ ಬಿಸಿಲಿಗೆ ಮೈಯೊಡ್ಡುವುದು ಮತ್ತು ಇದನ್ನು ನಾವು ಯಾವಾಗಲೂ ಕಡೆಗಣಿಸುತ್ತಲೇ ಇರುತ್ತೇವೆ. ಈ ಲೇಖನದಲ್ಲಿ ಕೆಲವೊಂದು ತ್ವಚೆಯ ಸಮಸ್ಯೆಗಳಿಗೆ ಪರಿಹಾರವನ್ನು ಹೇಳಿಕೊಡಲಿದ್ದೇವೆ.

ಮೊಸರು ಮತ್ತು ಲಿಂಬೆಯಿಂದ ಮಾಡಿರುವಂತಹ ಪ್ಯಾಕ್ ಅನ್ನು ನೀವು ಬಳಸಿಕೊಳ್ಳಬಹುದು. ಈ ಎರಡನ್ನು ಹೆಚ್ಚಾಗಿ ಹಲವಾರು ಸೌಂದರ್ಯವರ್ಧಕಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವು ಸಮೃದ್ಧವಾಗಿದ್ದು, ಇದು ಚರ್ಮಕ್ಕೆ ಅದ್ಭುತವನ್ನು ಉಂಟು ಮಾಡಲಿದೆ. ಲಿಂಬೆಯು ನಿಮ್ಮ ಚರ್ಮಕ್ಕೆ ಕಾಂತಿ ಹಾಗೂ ಕಲೆರಹಿತವಾಗಿ ಮಾಡುವುದು. ಇವೆರಡನ್ನು ಯಾವ ರೀತಿಯಿಂದ ಬಳಸಿಕೊಳ್ಳುವುದು ಎಂದು ನೀವು ತಿಳಿಯಿರಿ....

 ನಿಮಗೆ ಏನೇನು ಬೇಕು?

ನಿಮಗೆ ಏನೇನು ಬೇಕು?

*2 ಚಮಚ ಮೊಸರು

*2 ಚಮಚ ಲಿಂಬೆರಸ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಒಂದು ಶುದ್ಧ ಪಾತ್ರೆ ತೆಗೆದುಕೊಂಡು ಅದಕ್ಕೆ ಮೊಸರನ್ನು ಹಾಕಿ. ಇದಕ್ಕೆ ತಾಜಾ ಲಿಂಬೆಯ ರಸ ಹಾಕಿ ಮತ್ತು ಎರಡನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ.

ಹಚ್ಚಿಕೊಳ್ಳುವುದು ಹೇಗೆ?

ಹಚ್ಚಿಕೊಳ್ಳುವುದು ಹೇಗೆ?

ಮೊಸರು ಮತ್ತು ಲಿಂಬೆಯ ಫೇಸ್ ಪ್ಯಾಕ್ ನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಇದನ್ನು ಮುಖದಲ್ಲಿ ಮಸಾಜ್ ಮಾಡಿಕೊಳ್ಳಿ. ಇದು ಕಣ್ಣಿಗೆ ತಾಗದಂತೆ ಎಚ್ಚರಿಕೆ ವಹಿಸಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಚರ್ಮವು ಇದನ್ನು ಸರಿಯಾಗಿ ಹೀರಿಕೊಳ್ಳಲಿ. 20 ನಿಮಿಷ ಬಿಟ್ಟು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.ಅಂತಿಮವಾಗಿ ಮೊಶ್ಚಿರೈಸರ್ ಹಚ್ಚಿಕೊಳ್ಳಿ ಮತ್ತು ಇದು ಚರ್ಮವನ್ನು ತೇವಾಂಶದಿಂದ ಇಡುವುದು. ವಾರದಲ್ಲಿ 2-3 ಸಲ ಇದನ್ನು ಬಳಸಿಕೊಂಡರೆ ಆಗ ನಿಮಗೆ ಕಾಂತಿಯುತ ಮತ್ತು ಕಲೆರಹಿತವಾಗಿರುವ ತ್ವಚೆ ನೀಡುವುದು.

ಮೊಸರಿನ ಲಾಭಗಳು

ಮೊಸರಿನ ಲಾಭಗಳು

ಮೊಸರಿನಲ್ಲಿ ಸತು, ಕ್ಯಾಲ್ಸಿಯಂ ಮತ್ತು ಪ್ರಮುಖವಾಗಿ ಲ್ಯಾಕ್ಟಿಕ್ ಆಮ್ಲವಿದ್ದು, ಚರ್ಮಕ್ಕೆ ಇವುಗಳು ಅದ್ಭುತವಾಗಿ ಕೆಲಸ ಮಾಡುವುದು. ಕಾಲಜನ್ ಉತ್ಪತ್ತಿಯನ್ನು ಹೆಚ್ಚು ಮಾಡಿ ಚರ್ಮವು ಬಿಗಿಯಾಗುವಂತೆ ಮಾಡುವುದು ಮತ್ತು ಇದರಿಂದ ಚರ್ಮವು ಯೌವನಯುತ ಮತ್ತು ಸುಂದರವಾಗಿ ಕಾಣುವುದು. ಇದರಲ್ಲಿ ಇರುವಂತಹ ನಂಜುನಿರೋಧಕ ಗುಣಗಳು ಚರ್ಮವನ್ನು ಯಾವುದೇ ರೀತಿಯ ಉರಿಯೂತ, ಸೊಂಕು, ಕಲೆಗಳು ಇತ್ಯಾದಿಯಿಂದ ಪರಿಣಾಮಕಾರಿಯಾಗಿ ರಕ್ಷಿಸುವುದು. ಇನ್ನು ಮೊಸರಿನಲ್ಲಿರುವ ಪ್ರೋಟೀನುಗಳು ಮುಖದ ಚರ್ಮಕ್ಕೆ ಕಾಂತಿ ಮತ್ತು ಸೆಳೆತವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ಸತುವಿನಲ್ಲಿ ಉರಿಯೂತ ನಿವಾರಕ ಗುಣಗಳಿರುವ ಕಾರಣ ಇದು ಚರ್ಮದ ಉರಿಯಿಂದ ರಕ್ಷಿಸುತ್ತದೆ ಹಾಗೂ ಚರ್ಮದ ಜೀವಕೋಶಗಳ ಬೆಳವಣಿಗೆಗೂ ನೆರವಾಗುತ್ತದೆ. ಅಲ್ಲದೇ ಚರ್ಮದ ಕೆಳಪದರದಲ್ಲಿರುವ ಮೇದಸ್ಸಿನ ಗ್ರಂಥಿಗಳು ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ಉತ್ಪಾದಿಸಲು ಸತು ಅಗತ್ಯವಾಗಿದೆ. ಇದರಿಂದ ಮೊಡವೆಗಳು ಮೂಡದಿರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ನಯವಾದ, ಕಾಂತಿಯುಕ್ತ ಮುಖದ ಚರ್ಮ ಹೊಂದಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಮೊಸರಿನಲ್ಲಿರುವ ಕ್ಯಾಲ್ಸಿಯಂ ಚರ್ಮದ ಬೆಳವಣಿಗೆಗೆ ಮತ್ತು ಸವೆದು ಹೋದ ಜೀವಕೋಶಗಳ ಬದಲಿಗೆ ಹೊಸ ಜೀವಕೋಶಗಳು ಬೆಳೆಯಲು ನೆರವಾಗುತ್ತದೆ. ಅಲ್ಲದೇ ಮೊಸರಿನಲ್ಲಿ ಹೇರಳವಾಗಿರುವ ವಿವಿಧ ವಿಟಮಿನ್ನುಗಳು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಇನ್ನು ಮೊಸರನ್ನು ಬಿಸಿಲಿನಿಂದ ಆಗಿರುವ ಕಲೆಗಳು ಮತ್ತು ಸುಟ್ಟ ಗಾಯ. ಕಪ್ಪು ಕಲೆಗಳ ನಿವಾರಣೆ ಹಾಗೂ ಚರ್ಮವನ್ನು ಬಿಳಿಗೊಳಿಸಲು ಇದು ಪರಿಣಾಮಕಾರಿ. ಇದು ನೈಸರ್ಗಿಕ ಬ್ಲೀಚಿಂಗ್ ಆಗಿ ಕೆಲಸ ಮಾಡಿ ಚರ್ಮದ ಸತ್ತಕೋಶಗಳನ್ನು ತೆಗೆದು, ಚರ್ಮವು ಆರೋಗ್ಯಕಾರಿ ಮತ್ತು ಶುದ್ಧವಾಗಿರುವಂತೆ ನೋಡಿಕೊಳ್ಳುವುದು.

ಲಿಂಬೆಯ ಲಾಭಗಳು

ಲಿಂಬೆಯ ಲಾಭಗಳು

ಸಿಟ್ರಸ್ ಗುಣವನ್ನು ಹೊಂದಿರುವ ಲಿಂಬೆಹಣ್ಣು ಹಲವಾರು ರೀತಿಯಿಂದ ನಮ್ಮ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದರಲ್ಲಿ ಕೆಲವೊಂದು ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರ ಹೊರತಾಗಿ ಲಿಂಬೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಿಕೊಳ್ಳಬಹುದಾಗಿದೆ. ಹೌದು, ನಿಮ್ಮ ಸೌಂದರ್ಯದ ಆರೈಕೆಯಲ್ಲಿ ಲಿಂಬೆಯನ್ನು ಫೇಸ್ ಪ್ಯಾಕ್ ಹಾಗೂ ಮಾಸ್ಕ್ ಆಗಿ ಬಳಸಬಹುದು. ಇದರಿಂದ ನಿಮ್ಮ ಸೌಂದರ್ಯವೃದ್ಧಿಯಾಗುವುದು. ಇನ್ನು ವರ್ಷದ ಹೆಚ್ಚಿನ ಋತುಗಳಲ್ಲಿ ಕಂಡುಬರುವಂತಹ ನಿಂಬೆಹಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಸ್ವಲ್ಪ ಹುಳಿ ಸ್ವಭಾವ ಹೊಂದಿರುವ ಕಾರಣದಿಂದಾಗಿ ಹೆಚ್ಚಿನವರು ನಿಂಬೆಹಣ್ಣಿನ ರಸದಿಂದ ದೂರ ಉಳಿಯುತ್ತಾರೆ. ಇದರಲ್ಲಿ ವಿಟಮಿನ್ ಸಿ ಅಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಇದನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಲಿಂಬೆಹಣ್ಣನ್ನು ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಬಳಸಬಹುದು. ನಮಗೆಲ್ಲರಿಗೂ ತಿಳಿದಿರುವಂತೆ ಲಿಂಬೆಯು ಸಿಟ್ರಸ್ ಹಣ್ಣು ಮತ್ತು ಇದರಲ್ಲಿ ವಿಟಮಿನ್ ಸಿ ಇದೆ. ಇದು ನೈಸರ್ಗಿಕವಾಗಿ ಬ್ಲೀಚಿಂಗ್ ಕೆಲಸ ಮಾಡುವುದು ಮತ್ತು ಚರ್ಮವು ಕಾಂತಿಯುತವಾಗಿ ಮಾಡುವುದು. ಇದು ಕಲೆಗಳ ನಿವಾರಣೆ ಮಾಡುವುದು ಮತ್ತು ಸತ್ತ ಚರ್ಮದ ಕೋಶಗಳನ್ನು ಕಿತ್ತುಹಾಕಿ ಚರ್ಮದ ಬಣ್ಣ ಉತ್ತಮಪಡಿಸುವುದು.

ನೀವು ಪಾಲಿಸಬೇಕಾದ ಕೆಲವು ಸೂಚನೆಗಳು

ನೀವು ಪಾಲಿಸಬೇಕಾದ ಕೆಲವು ಸೂಚನೆಗಳು

• ನೀವು ಇದನ್ನು ರಾತ್ರಿ ವೇಳೆ ಬಳಸಿದರೆ ಆಗ ಬಿಸಿಲಿಗೆ ಮೈಯೊಡ್ಡುವುದು ತಪ್ಪುವುದು.

• ಪರಿಣಾಮ ತಿಳಿಯಲು ನೀವು ಈ ಫೇಸ್ ಪ್ಯಾಕ್ ನ್ನು ನಿಯಮಿತವಾಗಿ ಬಳಸಿ.

• ಇದನ್ನು ಬಳಸುವ ಮೊದಲು ನೀವು ಬೇರೆ ಭಾಗಕ್ಕೆ ಹಚ್ಚಿಕೊಂಡು ಪರೀಕ್ಷೆ ಮಾಡಿ. ಯಾಕೆಂದರೆ ಕೆಲವರಿಗೆ ಲಿಂಬೆಯಿಂದ ಚರ್ಮಕ್ಕೆ ಅಲರ್ಜಿಯಾಗಬಹುದು ಮತ್ತು ಸೂಕ್ಷ್ಮ ಚರ್ಮದವರಿಗೆ ಕಿರಿಕಿರಿಯಾಗಬಹುದು.

• ನೀವು ಇದನ್ನು ಬಳಸುವಾಗ ಮೊಸರಿಗೆ ಬೇರೆ ಯಾವುದೇ ರೀತಿಯ ಸಾಮಗ್ರಿ ಬಳಸದಿರುವುದನ್ನು ದೃಢಪಡಿಸಿ.

• ಪ್ಯಾಕ್ ಬದಲು ನೀವು ಸ್ಕ್ರಬ್ ಮಾಡಲು ಬಯಸುವಿರಾದರೆ ಆಗ ನೀವು ಓಟ್ ಮೀಲ್ ಮತ್ತು ಜೇನುತುಪ್ಪ ಬಳಸಿಕೊಳ್ಳಿ ಮತ್ತು ಸ್ಕ್ರಬ್ ಮಾಡಿ.

• ಈ ಪ್ಯಾಕ್ ಹಚ್ಚಿಕೊಳ್ಳುವ ಮೊದಲು ಮುಖವನ್ನು ಬಿಸಿ ನೀರಿನಿಂದ ತೊಳೆಯಿರಿ.

• ಬಿಸಿನೀರು ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಪ್ಯಾಕ್ ನ್ನು ಸರಿಯಾಗಿ ಹೀರಿಕೊಳ್ಳಲು ನೆರವಾಗುವುದು. ತಾಜಾ ಲಿಂಬೆ ಬಳಸಿದರೆ ಆಗ ಒಳ್ಳೆಯ ಫಲಿತಾಂಶ ಪಡೆಯಬಹುದು.

English summary

Yogurt And Lemon Face Mask Recipes-Secret to Glowing Skin

Our facial skin is prone to a lot of issues like wrinkles, acne, dark spots, redness, etc. One major reason is because it is more exposed to the sun and we fail to take care of it most of the times. Today we are here with a solution for almost all of your issues related to facial skin. And the solution is a pack made of lemon and yogurt.
X
Desktop Bottom Promotion