For Quick Alerts
ALLOW NOTIFICATIONS  
For Daily Alerts

ಹಿಮಾಲಯನ್ ಉಪ್ಪಿನ ಪ್ರಯೋಜನಗಳ ಬಗ್ಗೆ ಕೇಳಿದರೆ ಅಚ್ಚರಿಗೊಳ್ಳುವಿರಿ!

By Arshad
|

ಹಿಮಾಲಯದಲ್ಲಿ ಉಪ್ಪು ಹೇಗೆ ಬಂತು? ಮಿಲಿಯಾಂತರ ವರ್ಷಗಳ ಹಿಂದೆ ಇಲ್ಲಿ ಸಮುದ್ರವಿದ್ದು ಭಾರತ ಭೂಖಂಡ ಬಡಿದು ಹಿಮಾಲಯದ ಪರ್ವತಗಳು ಉದ್ಭವವಾದ ನಡುವಿನಲ್ಲಿ ಸಮುದ್ರದ ಭಾಗವೊಂದು ಪರ್ವತಗಳ ಜೊತೆಗೇ ಮೇಲೆದ್ದು ಬಂದು ಕಾಲಕ್ರಮೇಣ ಒಣಗಿ ಉಪ್ಪು ಅತಿಶೀತದಲ್ಲಿ ಹೆಪ್ಪುಗಟ್ಟಿಹೋಗಿತ್ತು. ಇದೇ ಕೆಂಪುಪ್ಪು. ಜೋರ್ಡಾನ್ ನಲ್ಲಿರುವ ಮೃತಸಮುದ್ರ (ಡೆಡ್ ಸೀ) ಸಹಾ ಇದೇ ಹಂತದಲ್ಲಿರುವ ಒಂದು ಸಮುದ್ರವಾಗಿದೆ. ಈ ಉಪ್ಪು ಜಗತ್ತಿನ ಅತ್ಯಂತ ಶುದ್ದ ಉಪ್ಪು ಎಂದು ಪರಿಗಣಿಸಲಾಗುತ್ತದೆ. ಈ ಉಪ್ಪಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಆದರೆ ತ್ವಚೆ ಮತ್ತು ಕೂದಲಿಗೆ ಈ ಉಪ್ಪು ನೀಡುವ ಆರೈಕೆಯ ಬಗ್ಗೆ ಕೆಲವು ವ್ಯಕ್ತಿಗಳು ಮಾತ್ರವೇ ಅರಿತಿದ್ದಾರೆ.

ಈ ಕೆಂಪು ಉಪ್ಪಿನಲ್ಲಿರುವ ಕೆಲವು ವಿಶಿಷ್ಟ ಖನಿಜಗಳೇ ಉಪ್ಪಿಗೆ ಈ ಗುಲಾಬಿಮಿಶ್ರಿತ ಕೆಂಪು ಬಣ್ಣ ಬರಲು ಕಾರಣವಾಗಿದ್ದು ಕೂದಲ ಬೆಳವಣಿಗೆ ಹಾಗೂ ತ್ವಚೆಯ ಕಾಂತಿ ಮತ್ತು ಆರೋಗ್ಯ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಈ ಲವಣವನ್ನು ಅಡುಗೆಗೆ ರುಚಿ ನೀಡುವ ಉಪ್ಪಿಗಿಂತಲೂ ಮಿಗಿಲಾಗಿ ಒಂದು ಬಗೆಯ ಸೌಂದರ್ಯವರ್ಧಕವಾಗಿಯೇ ಹೆಚ್ಚು ಬಳಕೆಯಾಗುತ್ತದೆ. ಹೇಗೆ? ಬನ್ನಿ, ನೋಡೋಣ:

Himalayan Pink Salt

ಹಿಮಾಲಯನ್ ಉಪ್ಪಿನ ಮಹತ್ವ ಹಾಗೂ ಆರೋಗ್ಯದ ಮಹಾತ್ಮೆ

ಹಿಮಾಲಯದ ಕೆಂಪುಪ್ಪು ಎಂದರೇನು?

ಮೊದಲೇ ತಿಳಿಸಿದಂತೆ ಈ ಉಪ್ಪು ಹಿಮಾಲಯದ ತಪ್ಪಲಿನಲ್ಲಿರುವ ಕೆಲವು ಬೆಟ್ಟಗಳ ಬುಡದಲ್ಲಿ ಸಿಗುತ್ತದೆ. ಇದರಲ್ಲಿ ಪ್ರಮುಖವಾಗಿ ಸೋಡಿಯಂ ಕ್ಲೋರೈಡ್ ಇದ್ದು ಅಲ್ಪ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಮೆಗ್ನೇಶಿಯಂ ಇವೆ.

ತ್ವಚೆಯ ತೊಂದರೆಗಳ ಚಿಕಿತ್ಸೆಗಾಗಿ ಕೆಂಪುಪ್ಪಿನ ಬಳಕೆ

ಸಾವಿರಾರು ವರ್ಷಗಳಿಂದ ಕೆಂಪುಪ್ಪನ್ನು ಸಾಮಾನ್ಯ ತ್ವಚೆಯ ತೊಂದರೆಗಳು ಹಾಗೂ ಕೂದಲಿನೆ ತೊಂದರೆಗಳ ಪರಿಹಾರಕ್ಕಾಗಿ ಬಳಸುತ್ತಾ ಬರಲಾಗಿದೆ. ಈ ಉಪ್ಪನ್ನು ಬಳೈಸ್ದ ಮನೆಮದ್ದುಗಳು ಸಮರ್ಥವಾಗಿದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಸುರಕ್ಷಿತವಾಗಿವೆ. ಅಲ್ಲದೇ ಅಗ್ಗವೂ ಆಗಿದ್ದು ಯಾವುದೇ ರಾಸಾಯನಿಕಗಳಿಲ್ಲದ್ದಾಗಿದ್ದು ಉತ್ತಮವಾದ ಆರೈಕೆ ಒದಗಿಸುತ್ತವೆ. ಈ ಮೂಲಕ ದೀರ್ಘಕಾಲದ ಬಳಕೆಯಿಂದ ಕೃತಕ ರಾಸಾಯನಿಕಗಳು ಎಸಗುವ ಹಾನಿಯಿಂದ ತಡೆದಂತಾಗುತ್ತದೆ.

ಹಿಮಾಲಯದ ಕೆಂಪು ಉಪ್ಪಿನ ಪ್ರಯೋಜನಗಳು

1. ಸ್ನಾನದ ಮೂಲಕ ವಿಷವಸ್ತುಗಳ ನಿವಾರಣೆಈ ಉಪ್ಪಿನ

ಹಿಮಾಲಯದ ಕೆಂಪು ಉಪ್ಪಿನಲ್ಲಿರುವ ಖನಿಜಗಳು ಮತ್ತು ಪೋಷಕಾಂಶಗಳಿಗೆ ತ್ವಚೆಯಲ್ಲಿರುವ ಕಲ್ಮಶಗಳನ್ನು ನಿವಾರಿಸುವ ಶಕ್ತಿ ಬೇರಾವುದೇ ಪ್ರಸಾದನದಲ್ಲಿ ಸಿಗಲಾರದು. ಈ ಉಪ್ಪನ್ನು ಸ್ನಾನದ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವ ಮೂಲಕ ಚರ್ಮದಲ್ಲಿರುವ ಕೊಳೆ ಮತ್ತು ಕಲ್ಮಶಗಳು ನಿವಾರಣೆಯಾಗುತ್ತದೆ.

2. ಬಿಸಿಲಿನ ಝಳಕ್ಕೆ ನಲುಗಿದ ಚರ್ಮವನ್ನು ಶೀಘ್ರವೇ ಗುಣಪಡಿಸುತ್ತದೆ

ಈ ಉಪ್ಪಿನಲ್ಲಿರುವ ಶಮನಕಾರಿ ಮತ್ತು ಗುಣಪಡಿಸುವ ಗುಣಗಲು ಬಿಸಿಲಿನ ಝಳಕ್ಕೆ ನಲುಗಿದ ಚರ್ಮವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತದೆ. ಈ ಉಪ್ಪನ್ನು ಸಾಮಾನ್ಯವಾಗಿ ಸ್ಪಾ ಗಳಲ್ಲಿ ಬಳಸಲಾಗುತ್ತದೆ. ಈ ಉಪ್ಪು ಸುಲಭವಾಗಿ ತ್ವಚೆಯ ಸೂಕ್ಷ್ಮರಂಧ್ರಗಳಿಂದ ಇಳಿದು ಕೆಳಪದರಗಳಿಗೆ ತಲುಪುತ್ತದೆ. ತನ್ಮೂಲಕ ತ್ವಚೆಗೆ ಆಳದಿಂದ ಆರೈಕೆ ನೀಡಿ ಶೀಘ್ರವೇ ಚರ್ಮ ಹೊಸತನವನ್ನು ಪಡೆಯಲು ಹಾಗೂ ಬಿಸಿಲಿನ ಪ್ರಭಾವದಿಂದ ಹೊರಬರಲು ನೆರವಾಗುತ್ತದೆ.

3. ಮೊಡವೆಗಳ ವಿರುದ್ದ ಹೋರಾಡುತ್ತದೆ

ಹಿಮಾಲಯದ ಕೆಂಪು ಉಪ್ಪು ಮೊಡವೆಗಳನ್ನು ಬುಡಸಹಿತ ನಿವಾರಿಸಲು ಸರ್ಮರ್ಥವಾಗಿದ್ದು ಮೊಡವೆಗಳು ಮೂಡಲು ಕಾರಣವಾದ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುತ್ತದೆ. ಮುಚ್ಚಿದ್ದ ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆದು ಚರ್ಮ ಉಸಿರಾಡಲು ನೆರವಾಗುತ್ತದೆ ಹಾಗೂ ಕಲ್ಮಶಗಳನ್ನು ಒಳಗಿನಿಂದ ಹೊರದೂಡಿ ಸ್ವಚ್ಛಗೊಳಿಸುತ್ತದೆ. ಇದೇ ಕಾರಣಕ್ಕೆ ಈ ಲವಣಬೆರೆತ ನೀರನ್ನು ಟೋನರ್ ಬದಲಿಗೆ ಬಳಸಬಹುದು.

4. ಆಮ್ಲೀಯ-ಕ್ಷಾರೀಯ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ

ತ್ವಚೆ ಆರೋಗ್ಯಕರವಾಗಿರಬೇಕಾದರೆ ತ್ವಚೆಯ ಆಮ್ಲೀಯ-ಕ್ಷಾರೀಯ ಮಟ್ಟ ಅಥವಾ ಪಿ ಎಚ್ ಮಟ್ಟವೂ ಸಮತೋಲನದಲ್ಲಿರುವುದು ಅಗತ್ಯವಾಗಿದೆ. ಈ ಕಾರ್ಯವನ್ನು ಹಿಮಾಲಯದ ಕೆಂಪುಪ್ಪು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತದೆ. ಈ ಉಪ್ಪಿನಲ್ಲಿರುವ ಖನಿಜಗಳು ಮತ್ತು ಪೋಷಕಾಂಶಗಳು ಪಿ ಎಚ್ ಮಟ್ಟವನ್ನು ಸಮತೋಲನದಲ್ಲಿರಿಸಿ ತ್ವಚೆಯ ಆರೋಗ್ಯವನ್ನು ವೃದ್ದಿಸುತ್ತದೆ.

5. ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ.

ತ್ವಚೆಯ ಹೊರಪದರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ಇದರ ಗುಣಪಡಿಸುವ ಗುಣಗಳು ನೆರವಾಗುತ್ತವೆ. ಪರಿಣಾಮವಾಗಿ ತ್ವಚೆ ನುಣುಪು ಹಾಗೂ ಮೃದುತ್ವವನ್ನು ಪಡೆಯುತ್ತದೆ. ಲವಣದ ನೀರು ತ್ವಚೆಯ ಸೂಕ್ಷ್ಮರಂಧ್ರಗಳಿಂದ ಆಳಕ್ಕೆ ಇಳಿದು ಒಳಪದರಗಳಿಂದ ಕಲ್ಮಶ ಹಾಗೂ ಹೊರಪದರದಿಂದ ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ. ಈ ಕಾರ್ಯಕ್ಕಾಗಿ ಈ ಉಪ್ಪನ್ನು ಬಳಸುವುದು ಸುರಕ್ಷಿತವಾಗಿದ್ದು ತ್ವಚೆ ಸಹಜವರ್ಣ ಪಡೆಯಲು ಹಾಗೂ ಮೃದುತ್ವವನ್ನು ಪಡೆಯಲು ನೆರವಾಗುತ್ತದೆ.

6. ಟೋನರ್ ನಂತೆ ಬಳಸಿ:

ಈ ಲವಣದಲ್ಲಿರುವ ಪೊಟ್ಯಾಶಿಯಂ, ಮೆಗ್ನೀಶಿಯಂ, ಕಬ್ಬಿಣ ಹಾಗೂ ಸೋಡಿಯಂ ಮೊದಲಾದ ಖನಿಜಗಳು ಇದನ್ನೊಂದು ಉತ್ತಮವಾದ ಟೋನರ್ ಆಗಿಸಲು ನೆರವಾಗುತ್ತವೆ. ಈ ಲವಣ ಬೆರೆತ ನೀರನ್ನು ಟೋನರ್ ನಂತೆ ಬಳಸುವ ಮೂಲಕ ತ್ವಚೆಯಲ್ಲಿ ಆರ್ದ್ರತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

7. ತಲೆಹೊಟ್ಟು ನಿವಾರಿಸುತ್ತದೆ

ಈ ಉಪ್ಪಿನ ಬಳಕೆಯಿಂದ ಕೇವಲ ತ್ವಚೆಗೆ ಮಾತ್ರವಲ್ಲ, ನಿವಾರಿಸಲು ಕಠಿಣವಾದ ತಲೆಹೊಟ್ಟಿನ ನಿವಾರಣೆಗೂ ನೆರವಾಗುತ್ತದೆ. ಕೆಂಪುಪ್ಪಿನ ನೀರಿನಿಂದ ತೊಳೆದುಕೊಳ್ಳುವ ಮೂಲಕ ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ತಲೆಹೊಟ್ಟು ಸುಲಭವಾಗಿ ನಿವಾರಣೆಯಾಗಲು ಸಾಧ್ಯವಾಗುತ್ತದೆ.

8. ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ

ಈ ಉಪ್ಪಿನಲ್ಲಿರುವ ಖನಿಜಗಳು ಕೂದಲ ಬುಡಗಳಿಂದ ಹೆಚ್ಚುವರಿ ಎಣ್ಣೆಯಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಸಾಮಾನ್ಯವಾಗಿ ಕೂದಲ ಬುಡದಲ್ಲಿರುವ ಎಣ್ಣೆಯಂಶ ಹೆಚ್ಚಾದರೆ ಇದು ತ್ವಚೆ ಮತ್ತು ಕೂದಲುಗಳಲ್ಲಿ ಅತಿ ಹೆಚ್ಚಿನ ಜಿಡ್ಡಿನಂಶ ಉಳಿದು ಧೂಳು ಅಂಟಿಕೊಳ್ಳಲು ಕಾರಣವಾಗುತ್ತದೆ. ಕೆಂಪುಪ್ಪು ಈ ಹೆಚ್ಚುವರಿ ಎಣ್ಣೆಯಂಶವನ್ನು ಹೀರಿಕೊಳ್ಳುವ ಮೂಲಕ ಜಿಡ್ಡು ಇಲ್ಲದಂತಾಗಿಸಿ ಕೂದಲ ಕಾಂತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

9. ಕೂದಲ ರಚನೆಯನ್ನು ಉತ್ತಮಗೊಳಿಸುತ್ತದೆ

ಹಿಮಾಲಯದ ಕೆಂಪುಪ್ಪಿನ ಗುಣದ ಕಾರಣದಿಂದಾಗಿಯೇ ಹಲವಾರು ಕೂದಲಿಗೆ ಸಿಂಪಡಿಸುವ ಸ್ಪ್ರೇಗಳಲ್ಲಿ ಪ್ರಮುಖ ಅಂಶವನ್ನಾಗಿ ಸೇರಿಸಲಾಗುತ್ತದೆ. ಈ ಗುಣ ಕೂದಲ ರಚನೆಯನ್ನು ಉತ್ತಮಗೊಳಿಸಿ ಏಕರೂಪದ ಮತ್ತು ನುಣುಪಾಗಿದ್ದರೂ ದೃಢವಾದ ಕೂದಲು ಪಡೆಯಲು ನೆರವಾಗುತ್ತದೆ.

10. ಸುಗಂಧಕಾರಕವಾಗಿಯೂ ಬಳಸಬಹುದು

ಈ ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ದೇಹದ ಹಲವು ಭಾಗಗಳಲ್ಲಿ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಶರೀರದ ದುರ್ಗಂಧ ನಿವಾರಿಸಲು ನೆರವಾಗುತ್ತದೆ. ಈ ಗುಣದಿಂದಾಗಿ ಹಿಮಾಲಯದ ಕೆಂಪುಪ್ಪನ್ನು ಕೆಲವಾರು ಸುಗಂಧದ್ರವ್ಯಗಳಲ್ಲಿ ಪ್ರಮುಖ ಅಂಶವಾಗಿ ಸೇರಿಸಲಾಗುತ್ತದೆ. ಇದು ಸುರಕ್ಷಿತ ಮತ್ತು ಫಲಕಾರಿಯಾಗಿದ್ದು ಈ ಉಪ್ಪನ್ನು ಬೆರೆಸಿದ ನೀರನ್ನು ಸುಗಂಧದ್ರವ್ಯದಂತೆಯೂ ಬಳಸಬಹುದಾಗಿದೆ.

11. ಸತ್ತ ಜೀವಕೋಶಗಳನ್ನು ನಿವಾರಿಸುತ್ತದೆ.

ಸತ್ತ ಜೀವಕೋಶಗಳು ತ್ವಚೆಯ ಹೊರಪದರಕ್ಕೆ ಅಂಟಿಕೊಂಡಿದ್ದು ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಈ ಪದರ ಹೆಚ್ಚು ದಪ್ಪವಾದರೆ ಒಣಗಿ ಬಿರಿಯುವ ಮೂಲಕ ಚರ್ಮವನ್ನೂ ಹರಿದು ಈ ಭಾಗ ಮಾಗಿದ ಬಳಿಕ ತ್ವಚೆ ಹೆಚ್ಚು ಹೆಚ್ಚು ಒರಟಾಗುತ್ತಾ ಹೋಗುತ್ತದೆ. ಸತ್ತ ಜೀವಕೋಶಗಳು ಹೆಚ್ಚು ಹೆಚ್ಚು ಸಂಗ್ರಹವಾದಷ್ಟೂ ತ್ವಚೆಯೂ ಹೆಚ್ಚು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾ ಸಾಗುತ್ತದೆ. ಆದರೆ ಹಿಮಾಯಲದ ಕೆಂಪುಪ್ಪು ಬಳಸಿ ಈ ಸತ್ತ ಜೀವಕೋಶಗಳನ್ನು ಸುಲಭವಾಗಿ ನಿವಾರಿಸಿ ಈ ತೊಂದರೆಗಳಿಂದ ಪಾರಾಗುವ ಜೊತೆಗೇ ಮತ್ತೆ ಸತ್ತ ಜೀವಕೋಶಗಳು ಅಷ್ಟು ಸುಲಭವಾಗಿ ಜಮೆಯಾಗದಂತೆ ತಡೆಯುತ್ತದೆ.

ಉಪ್ಪಿನಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದೇ?

Read more about: beauty skincare
English summary

Wonderful Benefits of Himalayan Salt

Himalayan pink salt is often touted as the purest salt on earth. It is a wondrous ingredient that offers innumerable health and beauty benefits. And while most people are well aware of the many health benefits of this salt, there are very few who know about the ways in which it can work wonders on the state of skin and hair. This pink-hued salt is a wondrous skin and hair care ingredient as it contains minerals and nutrients that can boost skin and hair's health whilst fighting off unsightly problems. This salt is a powerhouse ingredient that deserves a spot in your beauty routine.
Story first published: Monday, August 27, 2018, 12:08 [IST]
X
Desktop Bottom Promotion