For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು ಹೆಸರುಕಾಳಿನ ಫೇಸ್ ಪ್ಯಾಕ್

By Deepu
|

ಬೇಸಿಗೆಯ ದಿನಗಳು ಪ್ರಾರಂಭವಾಗಿವೆ. ಈ ಸಮಯದಲ್ಲಿ ಪ್ರಖರ ಬಿಸಿಲು, ಸೆಖೆ, ಧೂಳಿನಿಂದ ತ್ವಚೆಯನ್ನು ಕಾಪಾಡಲು ಕೆಲವು ನೈಸರ್ಗಿಕ ಪ್ರಸಾದನಗಳನ್ನು ಬಳಸುವುದು ಅಗತ್ಯವಾಗಿದ್ದು ಇಂತಹ ಒಂದು ಮುಖ್ಯ ವಿಧಾನವನ್ನು ಇಂದು ವಿವರಿಸಲಾಗಿದೆ. ಮಾರುಕಟ್ಟೆಯಲ್ಲಿ ಬಿಸಿಲಿನ ಝಳದಿಂದ ಪಾರಾಗಲು ನೂರಾರು ರಾಸಾಯನಿಕ ಆಧಾರಿತ ದುಬಾರಿ ಪ್ರಸಾಧನಗಳಿವೆ ಆದರೆ ಇವು ಒಳ್ಳೆಯದು ಮಾಡುವುದಕ್ಕಿಂತ ಅಡ್ಡಪರಿಣಾಮಗಳ ಮೂಲಕ ದೀರ್ಘಕಾಲದಲ್ಲಿ ಕೆಡುಕು ಮಾಡುವುದೇ ಹೆಚ್ಚು.

ವಿಶೇಷವಾಗಿ ಮುಖಚ ಕೋಮಲ ತ್ವಚೆಗೆ ಇವು ಹೆಚ್ಚಿನ ಕೆಡುಕನ್ನುಂಟುಮಾಡಬಹುದು. ಆದ್ದರಿಂದ ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭಿಸುವ ನೈಸರ್ಗಿಕ ಸಾಮಾಗ್ರಿಗಳೇ ತ್ವಚೆಗೆ ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಹೆಸರು ಕಾಳು ಇಂತಹ ಒಂದು ಉತ್ತಮ ಸಾಮಾಗ್ರಿಯಾಗಿದ್ದು ಈ ಬೇಸಿಗೆಯಲ್ಲಿ ನಿಮ್ಮ ಮುಖದ ತ್ವಚೆಯ ರಕ್ಷಣೆಗೆ ಇದರ ಬಳಕೆಯನ್ನು ಏಕೆ ಮಾಡಬಾರದು?

ಹೆಸರು ಕಾಳು ಯಾವುದೇ ಬಗೆಯ ತ್ವಚೆಗೆ ಸೂಕ್ತವಾಗಿದೆ ಹಾಗೂ ತ್ವಚೆಯನ್ನು ತಂಪಾಗಿರಿಸಿ ಚರ್ಮದ ಒಳಭಾಗದಲ್ಲಿ ಕೀವು ತುಂಬಿಕೊಳ್ಳದಂತೆ, ತನ್ಮೂಲಕ ಮೊಡವೆಗಳಾಗದಂತೆ ತಡೆಯುತ್ತದೆ. ಹೆಸರು ಕಾಳನ್ನು ಮೊದಲು ನುಣ್ಣಗೆ ಅರೆದು ತಣ್ಣನೆಯ ಹಸಿ ಹಾಲು, ಗುಲಾಬಿ ನೀರು ಅಥವಾ ಕುಡಿಯುವ ನೀರಿನೊಂದಿಗೆ ಬೆರೆಸಿ ನೇರವಾಗಿ ಮುಖಲೇಪದ ರೂಪದಲ್ಲಿ ಹಚ್ಚಬಹುದು. ಈ ಮುಖಲೇಪನ ಹಲವಾರು ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಬನ್ನಿ, ಈ ಮುಖಲೇಪ ಏನೆಲ್ಲಾ ಪ್ರಯೋಜನ ಒದಗಿಸುತ್ತದೆ ಎಂಬುದನ್ನು ನೋಡೋಣ...

ಹೆಸರು ಕಾಳು ಮತ್ತು ಅರಿಶಿನ ಫೇಸ್ ಪ್ಯಾಕ್

ಹೆಸರು ಕಾಳು ಮತ್ತು ಅರಿಶಿನ ಫೇಸ್ ಪ್ಯಾಕ್

ಎರಡು ಟೀ.ಚಮಚ ಹೆಸರುಕಾಳನ್ನು ಒಂದು ಚಿಟಿಕೆ ಅರಿಶಿನದ ಜೊತೆಗೆ ಬೆರೆಸಿಕೊಳ್ಳಿ. ಇದಕ್ಕೆ ಕೆಲವು ಹನಿ ಹಾಲನ್ನು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖದ ಮತ್ತು ಕುತ್ತಿಗೆಗೆ ಲೇಪಿಸಿಕೊಂಡು 20 ನಿಮಿಷ ಬಿಡಿ. ಇದು ಒಣಗಿದ ಮೇಲೆ ಇದನ್ನು ಚೆನ್ನಾಗಿ ತೊಳೆಯಿರಿ.

ಶುಷ್ಕ ತ್ವಚೆಯ ಆರೈಕೆಗಾಗಿ

ಶುಷ್ಕ ತ್ವಚೆಯ ಆರೈಕೆಗಾಗಿ

ಹೆಸರು ಬೇಳೆಯ ಪೇಸ್ಟ್ ಅನ್ನು ತ್ವಚೆಯ ಮೇಲೆ ನೇರವಾಗಿ ಲೇಪಿಸಿಕೊಳ್ಳುವ ಪ್ರಕ್ರಿಯೆಯು ಶುಷ್ಕ ತ್ವಚೆಗೆ ಚೇತೋಹಾರಿಯಾಗಿರುತ್ತದೆ ಹಾಗೂ ತನ್ಮೂಲಕ ತ್ವಚೆಯು ಕಳೆದುಕೊ೦ಡಿದ್ದ ತೇವಾ೦ಶವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ತ್ವಚೆಯ ಜೀವಕೋಶಗಳನ್ನು ಪುನರುಜ್ಜೀವನ ಗೊಳಿಸುವ೦ತಹ ವಿಟಮಿನ್ ಹಾಗೂ ಕಿಣ್ವಗಳಿ೦ದ ಹೆಸರು ಬೇಳೆಯು ಕೂಡಿದ್ದು, ಇವು ತ್ವಚೆಯ ತೇವಾ೦ಶವನ್ನು ಹಾಗೆಯೇ ಹಿಡಿದಿರಿಸಿಕೊಳ್ಳಲು ಪೂರಕವಾಗಿವೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಎರಡು ಟೀ ಚಮಚಗಳಷ್ಟು ಹೆಸರು ಬೇಳೆಯನ್ನು ಒ೦ದಿಷ್ಟು ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಮಾರನೆಯ ಬೆಳಗ್ಗೆ ಹೆಸರು ಬೇಳೆಯನ್ನು ಅರೆದು ಜರಿಜರಿಯಾದ ಪೇಸ್ಟ್ ನ ರೂಪಕ್ಕೆ ತನ್ನಿರಿ ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ ಇಪ್ಪತ್ತು ನಿಮಿಷಗಳ ಕಾಲ ಆ ಪೇಸ್ಟ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಳಿಸಿರಿ ಹಾಗೂ ತದನ೦ತರ ಪೇಸ್ಟ್ ಅನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಬಿಡಿರಿ. ನಿಮ್ಮ ಶುಷ್ಕ ತ್ವಚೆಯು ಜಲಪೂರಣಗೊಳ್ಳುವ೦ತಾಗಲು ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಿರಿ.

ಚರ್ಮದ ಹೊಳಪು ಹೆಚ್ಚಿಸಲು

ಚರ್ಮದ ಹೊಳಪು ಹೆಚ್ಚಿಸಲು

50 ಗ್ರಾಂನಷ್ಟು ಹೆಸರುಕಾಳನ್ನು ಒಂದು ರಾತ್ರಿ ನೀರಿನಲ್ಲಿ ಹಾಕಿ ನೆನಸಿಡಿ. ಮಾರನೇ ದಿನ ಬೆಳಿಗ್ಗೆ ಅದನ್ನು ಮಿಕ್ಸಿ ಅಥವಾ ಗ್ರೈಂಡರ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟಿಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಮಿಕ್ಸ್ ಮಾಡಿದ ಕೂಡಲೇ ಮುಖಕ್ಕೆ ಅಪ್ಲೈ ಮಾಡಿ., ಸುಮಾರು ಹದಿನೈದರಿಂದ ಇಪತ್ತು ನಿಮಿಷ ಹಾಗೆಯೇ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಈ ಪ್ಯಾಕ್ ಅಪ್ಲೈ ಮಾಡಿ ಮತ್ತು ಕಾಂತಿಯುತವಾದ ಹೊಳಪಿನ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

ಡ್ರೈ ಸ್ಕಿನ್ ಸಮಸ್ಯೆ ಇರುವವರಿಗೆ

ಡ್ರೈ ಸ್ಕಿನ್ ಸಮಸ್ಯೆ ಇರುವವರಿಗೆ

ತೇವಾಂಶ ಕಳೆದುಕೊಂಡು ಶುಷ್ಕಗೊಳ್ಳುವ ತ್ವಚೆಯುಳ್ಳವರಿಗೆ ಹೆಸರುಕಾಳು ಹೇಳಿ ಮಾಡಿಸಿದ ಒಂದು ಪರಮೌಷಧಿ. ಇದ್ರಲ್ಲಿ ವಿಟಮಿನ್ ಮತ್ತು ಎಝೈಮ್ ಅಂಶಗಳು ಚರ್ಮದ ತೇವಾಂಶವನ್ನು ಉಳಿಸುವಲ್ಲಿ ನೆರವಾಗುತ್ತೆ. ಎರಡು ಟೇಬಲ್ ಸ್ಪೂನ್ ಆಗುವಷ್ಟು ಹೆಸರುಕಾಳನ್ನು ರಾತ್ರಿಯೇ ಹಾಲಿನಲ್ಲಿ ನೆನಸಿಡಿ. ಮರುದಿನ ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಯಾವುದೇ ಇತರೆ ವಸ್ತುಗಳನ್ನು ಮಿಶ್ರಣ ಮಾಡುವ ಅಗತ್ಯವಿಲ್ಲ. ಪೇಸ್ಟ್ ತಯಾರಿಸಿದ ಕೂಡಲೇ ನಿಮ್ಮ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಅಪ್ಲೈ ಮಾಡ್ಕೊಳ್ಳಿ. ಸುಮಾರು 20 ನಿಮಿಷದ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೆ ಮೂರು ಬಾರಿ ಮಾಡಿದ್ರೆ ನಿಮ್ಮ ಶುಷ್ಕ ತ್ವಚೆ ನಿವಾರಣೆಯಾಗಿ ಹೈಡ್ರೇಟ್ ಆಗಲು ನೆರವಾಗುತ್ತೆ.

ಮುಖದಲ್ಲಿನ ಕೂದಲು ನಿವಾರಣೆಗೆ

ಮುಖದಲ್ಲಿನ ಕೂದಲು ನಿವಾರಣೆಗೆ

ಹೆಸರುಕಾಳು ನಿಮ್ಮ ಚರ್ಮವನ್ನು ತಿಳಿಗೊಳಿಸಿ, ಮುಖದಲ್ಲಿ ಅನಗತ್ಯವಾಗಿ ಬೆಳೆದಿರುವ ಕೂದಲನ್ನು ತೆಗೆಯಲು ಕೂಡ ಹೆಸರುಕಾಳನ್ನು ಬಳಕೆ ಮಾಡಬಹುದು. ಅದ್ರಲ್ಲೂ ಬಾಯಿ ಮತ್ತು ಕೆನ್ನೆಯ ಭಾಗದಲ್ಲಿ ಬೆಳೆಯುವ ಹೆಚ್ಚುವರಿ ಕೂದಲನ್ನು ತೆಗೆಯಲು ಇದು ಸಹಕಾರಿ. ಸುಮಾರು ನೂರು ಗ್ರಾಂನಷ್ಟು ಹೆಸರುಕಾಳನ್ನು ರಾತ್ರಿಯೇ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಅದನ್ನು ಗ್ರೈಂಡ್ ಮಾಡ್ಕೊಳ್ಳಿ. ಈ ಪೇಸ್ಟಿಗೆ ಎರಡು ಟೇಬಲ್ ಸ್ಪೂನ್ ಗಂಧದ ಪುಡಿ ಮತ್ತು ಎರಡು ಟೇಬಲ್ ಸ್ಪೂನ್ ಕಿತ್ತಲೆ ಸಿಪ್ಪೆಯ ಪುಡಿಯನ್ನು ಸೇರಿಸಿ.ನಂತರ ಅದಕ್ಕೆ ಕೆಲವು ಹನಿಗಳಷ್ಟು ಅಥವಾ ಪೇಸ್ಟ್ ತಯಾರಿಸಿಕೊಳ್ಳಲು ಸಹಕಾರಿಯಾಗುವಷ್ಟು ಹಾಲನ್ನು ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಅಪ್ಲೈ ಮಾಡಿ. ವೃತ್ತಾಕಾರದಲ್ಲಿ ಮುಖವನ್ನು ಸ್ಕ್ರಬ್ ಮಾಡ್ಕೊಳ್ಳಿ. ಕೆಲವು ನಿಮಿಷಗಳವರೆಗೆ ಸ್ಕ್ರಬ್ ಮಾಡಿದ ನಂತ್ರ ಮುಖವನ್ನು ತಣ್ಣನೆಯ ನೀರಿನಲ್ಲಿ ತೊಳೆಯಿರಿ.. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿದ್ರೆ ಫಲಿತಾಂಶ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು.

ಮೊಡವೆ ಕಲೆಗಳನ್ನು ತೆಗೆಯಲು

ಮೊಡವೆ ಕಲೆಗಳನ್ನು ತೆಗೆಯಲು

ಬಳಸಿ ಹೆಸರುಕಾಳು ಚರ್ಮದ ರಂದ್ರಗಳು ಜಿಡ್ಡಿನಂಶ ಮತ್ತು ಧೂಳಿನಿಂದ ಮುಚ್ಚಿಹೋಗುವುದನ್ನು ತಡೆದು ಚರ್ಮದ ಸರಾಗ ಉಸಿರಾಟಕ್ಕೆ ನೆರವು ನೀಡುವ ಸಾಮರ್ಥ್ಯ ಹೆಸರುಕಾಳಿಗಿದೆ. ಚರ್ಮದಲ್ಲಿರುವ ಕೊಳಕುಗಳನ್ನು ತೆಗೆದುಹಾಕಿ ಫ್ರೆಶ್ ಆಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡುವ ಸಾಮರ್ಥ್ಯ ಹೆಸರುಕಾಳಿಗಿದೆ. ಕಾಲು ಕಪ್ ನಷ್ಟು ಹೆಸರುಕಾಳನ್ನು ರಾತ್ರಿಯೆ ನೆನೆಹಾಕಿ ಬೆಳಿಗ್ಗೆ ಪೇಸ್ಟ್ ತಯಾರಿಸಿಕೊಳ್ಳಿ.. ಅದಕ್ಕೆ ಮನೆಯಲ್ಲೇ ತಯಾರಿಸಿದ ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಮಿಕ್ಸ್ ಮಾಡಿ. ಈ ಪೇಸ್ಟನ್ನು ಚರ್ಮದ ಮೇಲ್ಮುಖವಾಗಿ ಮಸಾಜ್ ಮಾಡಿ. ವಾರಕ್ಕೆ ಮೂರು ಬಾರಿ ಈ ಪೇಸ್ಟ್ ತಯಾರಿಸಿಕೊಂಡು ಹಚ್ಚಿಕೊಳ್ಳಿ. ಮುಖದ ಮೊಡವೆಗಳು ಹೇಳಹೆಸರಿಲ್ಲದಂತೆ ಮಾಯವಾಗದೇ ಇದ್ರೆ ಆಮೇಲೆ ಹೇಳಿ..

ಎಣ್ಣೆಚರ್ಮಕ್ಕೆ

ಎಣ್ಣೆಚರ್ಮಕ್ಕೆ

ಮುಖದ ಮೇಲೆ ಎಣ್ಣೆಜಿಡ್ಡು ಹೆಚ್ಚೇ ಆಗಿದ್ದರೆ ಇದಕ್ಕೆ ಹೆಸರುಕಾಳು ಸೂಕ್ತವಾದ ಆರೈಕೆ ಒದಗಿಸುತ್ತದೆ. ಇದಕ್ಕಾಗಿ ಹೆಸರುಕಾಳಿನ ಪುಡಿಯನ್ನು ಗುಲಾಬಿನೀರಿನೊಂದಿಗೆ ಬೆರೆಸಿ ದಪ್ಪನೆಯ ಲೇಪನವಾಗಿಸಿ ಈ ಲೇಪನವನ್ನು ದಪ್ಪನಾಗಿ ಹಚ್ಚಿ ಸುಮಾರು ಅರ್ಧಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ತ್ವಚೆಯನ್ನು ಬಿಳಿಚಿಸಲು

ತ್ವಚೆಯನ್ನು ಬಿಳಿಚಿಸಲು

ತ್ವಚೆಯ ವರ್ಣ ಸಹಜವರ್ಣಕ್ಕಿಂತಲೂ ಗಾಢವಾಗಿದ್ದರೆ ಇದನ್ನು ಮತ್ತೆ ಸಹಜವರ್ಣಕ್ಕೆ ತರಲು ಹೀಗೆ ಮಾಡಿ: ಎರಡು ದೊಡ್ಡಚಮಚ ಹೆಸರುಕಾಳಿನ ಪುಡಿ, ಒಂದು ಚಿಕ್ಕ ಚಮಚ ಲಿಂಬೆರಸ ಮತ್ತು ಕೊಂಚ ನೀರನ್ನು ಬೆರೆಸಿ ಮುಖದ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ. ಸುಮಾರು ಅರ್ಧಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

English summary

wonderful benefits of Green Gram On Face In Summer

Green gram is one of the best natural ingredients you can use on your face in the summer. It is naturally pure and is best suited for any skin type. Moreover, green gram also helps to keep your skin cool thus not allowing you to develop pimples and other sort of skin problems. To use this green gram, mix it well with milk, water or rose water. Use this green gram face pack for your skin in summer to get rid of various problems. Here is what green gram does to your face, take a look...
Story first published: Wednesday, April 11, 2018, 16:41 [IST]
X
Desktop Bottom Promotion