For Quick Alerts
ALLOW NOTIFICATIONS  
For Daily Alerts

ಸೇಬುಹಣ್ಣನ್ನು ತ್ವಚೆಯ ಆರೈಕೆಗೆ ಹೀಗೂ ಬಳಸಿಕೊಳ್ಳಬಹುದು

By Arshad
|

ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಸುಭಾಷಿತವಾಗಿದೆ. ದೇಹದ ಆರೋಗ್ಯದೊಂದಿಗೇ ಇದು ತ್ವಚೆಯ ಆರೈಕೆಯನ್ನೂ ಸಮರ್ಥವಾಗಿ ನಿರ್ವಹಿಸುತ್ತದೆ. ನಿಸರ್ಗ ಮಾನವರ ಆರೋಗ್ಯಕ್ಕಾಗಿ ನೀಡಿರುವ ಹಲವಾರು ಅದ್ಭುತಗ ಆಹಾರಗಳಲ್ಲಿ ಸೇಬು ಸಹಾ ಒಂದು. ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ಪೋಷಾಕಾಂಶಗಳು ಸೇಬಿನಲ್ಲಿವೆ. ಹಲವಾರು ವಿಟಮಿನ್ನುಗಳು ಹಾಗೂ ಖನಿಜಗಳು ದೇಹದ ಆರೋಗ್ಯಕ್ಕೆ ಪೂರಕವಾಗಿವೆ. ಇದರಲ್ಲಿರುವ ಪೋಷಕಾಂಶಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಜೀರ್ಣಕ್ರಿಯೆ

ಉತ್ತಮಗೊಳಿಸುತ್ತದೆ ಹಾಗೂ ಆಳದಿಂದ ತ್ವಚೆಗೆ ಪೋಷಣೆಯನ್ನು ಒದಗಿಸುತ್ತದೆ. ಇವೆಲ್ಲವನ್ನೂ ನಾವು ಈಗಾಗಲೇ ಅರಿತಿರಬಹುದು. ಆದರೆ ಸೇಬುಹಣ್ಣಿನಿಂದ ತ್ವಚೆಯ ಆರೈಕೆಯನ್ನೂ ಪಡೆಯಬಹುದೆಂದು ಇದಕ್ಕೂ ಮುನ್ನ ನಿಮಗೆ ಗೊತ್ತಿತ್ತೇ? ಮಹಿಳೆಯರು ತಮ್ಮ ತ್ವಚೆಯ ಆರೋಗ್ಯದ ಬಗ್ಗೆ ಇತರರಿಗಿಂತಲೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಸ್ಪಾಗಳಿಗೆ ಹೋಗಿ ಫೇಶಿಯಲ್ ಸೇವೆಯನ್ನೂ ಪಡೆದುಕೊಳ್ಳುತ್ತಾರೆ. ಎಲ್ಲಾ ರೀತಿಯಿಂದಲೂ ತಮ್ಮ ಸೌಂದರ್ಯ ಅತ್ಯುತ್ತಮವಾಗಿ ಪ್ರಕಟಗೊಳ್ಳಬೇಕೆಂಬ ಬಯಕೆ ಇರುತ್ತದೆ. ಆದರೆ ಪ್ರಬಲ ರಾಸಾಯನಿಕಗಳು ಹಾಗೂ ಪ್ರಸಾಧನಗಳ ಬಗ್ಗೆ ಅರಿವೂ ಈಗ ಹೆಚ್ಚುತ್ತಿದ್ದು ಹೆಚ್ಚಿನವರು ನೈಸರ್ಗಿಕ ಪ್ರಸಾಧನಗಳತ್ತ ಒಲವು ತೋರುತ್ತಿದ್ದಾರೆ.

ಆರೋಗ್ಯ ರಕ್ಷಣೆಗೆ ನಿಸರ್ಗಮಾತೆಯ ಬಳಿ ಹಲವಾರು ನೈಸರ್ಗಿಕ ಪ್ರಸಾಧನಗಳಿವೆ. ತ್ವಚೆಯ ಕಾಳಜಿ, ಆರೋಗ್ಯದ ರಕ್ಷಣೆ, ಕೂದಲ ಪೋಷಣೆ ಎಲ್ಲವಕ್ಕೂ ನಿಸರ್ಗದ ಬಳಿಕ ಉತ್ತರವಿದೆ. ಮಹಿಳೆಯರ ಬಹುತೇಕ ಎಲ್ಲಾ ಸೌಂದರ್ಯದ ಕಾಳಜಿಯ ವಿಷಯದಲ್ಲಿ ನಿಸರ್ಗದ ಬಳಿ ಸೂಕ್ತ ಪರಿಹಾರವಿದೆ. ಉದಾಹರಣೆಗೆ ತ್ವಚೆಯ ಆರೋಗ್ಯವನ್ನು ಪರಿಗಣಿಸಿದಾಗ ನಿಸರ್ಗದ ಕೊಡುಗೆಗಳಾದ ಹಣ್ಣು ಮತ್ತು ಹೂವುಗಳು ಹಲವಾರು ತ್ವಚೆಯ ತೊಂದರೆಗಳಿಗೆ ಸೂಕ್ತ ಪರಿಹಾರ ಒದಗಿಸುತ್ತವೆ. ಚಿಕ್ಕ ಮೊಡವೆಯಿಂದ ತೊಡಗಿ ತ್ವಚೆಯ ನೆರಿಗೆಗಳವರೆಗೆ ಮಹಿಳೆಯರು ಎದುರಿಸುವ ತೊಂದರೆಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಅತ್ಯಂತ ದುಬಾರಿ ಪ್ರಸಾಧನಕ್ಕೂ ಮೀರಿದ ಆರೈಕೆಯನ್ನು ಈ ನೈಸರ್ಗಿಕ ವಿಧಾನದ ಮೂಲಕ ನೀಡುತ್ತದೆ. ಹಣ್ಣುಗಳಲ್ಲಿ ಹಲವಾರು ಖನಿಜಗಳು ಮೇಳೈಸಿದ್ದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತವೆ.

ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ

ನಾವೆಲ್ಲರೂ ಕಿತ್ತಳೆ, ಸ್ಟ್ರಾಬೆರಿ, ಬಾಳೆಹಣ್ಣು, ಪಪ್ಪಾಯಿ ಮೊದಲಾದ ಹಣ್ಣುಗಳ ಆರೋಗ್ಯಕರ ಹಾಗೂ ಸೌಂದರ್ಯವರ್ಧಕ ಗುಣವನ್ನು ಅರಿತೇ ಇದ್ದೇವೆ. ಆದರೆ ಸೇಬುಹಣ್ಣಿನ ಸೌಂದರ್ಹವರ್ಧಕ ಗುಣವನ್ನು ಮಾತ್ರ ಕಡೆಗಣಿಸಿದ್ದೇವೆ. ಸೇಬಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದೆ. ಇದು ಚರ್ಮದ ಜೀವಕೋಶದ ಅಂಗವಾದ ಕೊಲ್ಯಾಜೆನ್ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ಈ ಮೂಲಕ ಚರ್ಮದ ಸೆಳೆತ ಹೆಚ್ಚಲು ನೆರವಾಗುತ್ತದೆ ಹಾಗೂ ಈ ಸೆಳೆತ ತಾರುಣ್ಯದ ಸಂಕೇತವಾಗಿದೆ.

ಸೇಬುಗಳಲ್ಲಿರುವ ತಾಮ್ರ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅತಿನೇರಳೆ ಕಿರಣಗಳಿಗೆ ಒಂದು ತಡೆಯಂತೆ ಕಾರ್ಯನಿರ್ವಹಿಸುತ್ತದೆ. ಸೇಬಿನಲ್ಲಿರುವ ವಿಟಮಿನ್ ಎ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಬನ್ನಿ, ಸೇಬನ್ನು ಸೌಂದರ್ಯವರ್ಧಕವಾಗಿ ಹೇಗೆ ಬಳಸಬಹುದು ಎಂಬ ಕೆಲವು ವಿಧಾನಗಳನ್ನು ನೋಡೋಣ...

ದಣಿದ ತ್ವಚೆಯ ಆರೈಕೆಗಾಗಿ

ದಣಿದ ತ್ವಚೆಯ ಆರೈಕೆಗಾಗಿ

ಸೇಬುಗಳಲ್ಲಿರುವ ಹಲವಾರು ವಿಟಮಿನ್ನುಗಳು ನಿಸ್ತೇಜಗೊಂಡ ಹಾಗೂ ದಣಿದ ತ್ವಚೆಯನ್ನು ತಕ್ಷಣವೇ ಪುನಃಶ್ಚೇತನಗೊಳಿಸಲು ನೆರವಾಗುತ್ತವೆ. ನಿತ್ಯದ ಕಾರ್ಯಗಳಲ್ಲಿ ದಣಿದ ತ್ವಚೆಗೆ ಆರೈಗೆ ನೀಡುವ ನಿಟ್ಟಿನಲ್ಲಿ ಸೇಬು ಹಣ್ಣನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸುವ ವಿಧಾನ ಹೀಗಿದೆ:

ಅಗತ್ಯವಿರುವ ಸಾಮಾಗ್ರಿಗಳು

ಒಂದು ಸೇಬುಹಣ್ಣು

ಕೊಂಚ ನೀರು

ವಿಧಾನ:

1) ಮೊದಲು ಸೇಬುಹಣ್ಣನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಸಿಪ್ಪೆ ಸಹಿತ ಬ್ಲೆಂಡರಿನಲ್ಲಿ ಗೊಟಾಯಿಸಿ

2) ಕನಿಷ್ಟ ಪ್ರಮಾಣದ ನೀರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿ ಅರೆಯಿರಿ.

3) ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ತೆಳುವಾಗಿ ಹಚ್ಚಿ ಹದಿನೈದು ನಿಮಿಷ

ಒಣಗಲು ಬಿಡಿ.

4) ಬಳಿಕ ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ, ಸೋಪು ಉಪಯೋಗಿಸಬೇಡಿ.

ತ್ವಚೆಯ ಬಣ್ಣ ಏಕಪ್ರಕಾರವಾಗಿರಲು

ತ್ವಚೆಯ ಬಣ್ಣ ಏಕಪ್ರಕಾರವಾಗಿರಲು

ಸೇಬು ಹಣ್ಣಿನಲ್ಲಿರುವ ಟ್ಯಾನಿಕ್ ಆಮ್ಲ ತ್ವಚೆಯ ಬಣ್ಣ ಏಕಪ್ರಕಾರವಾಗಿರಲು ನೆರವಾಗುತ್ತದೆ. ಈ ವಿಧಾನದಿಂದ ತ್ವಚೆಯ ಬಣ್ಣ ಏಕಪ್ರಕಾರವಾಗಿರಲು ಹಾಗೂ ಸೌಮ್ಯವಾಗಿರಲು ಸಾಧ್ಯವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

ಒಂದು ಸೇಬು ಹಣ್ಣಿನ ಸಿಪ್ಪೆ

ಒಂದು ಚಿಕ್ಕಚಮಚ ಜೇನು

ವಿಧಾನ:

1) ಸೇಬಿನ ಸಿಪ್ಪೆಯನ್ನು ಸುಲಿದು ಬ್ಲೆಂಡರಿನಲ್ಲಿ ನುಣ್ಣಗೆ ಅರೆಯಿರಿ

2) ಬಳಿಕ ಜೇನು ಬೆರೆಸಿ ಮಿಶ್ರಣ ಮಾಡಿ.

3) ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ತೆಳುವಾಗಿ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ.

4) ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದು ಒರೆಸಿಕೊಳ್ಳಿ, ಸೋಪು ಉಪಯೋಗಿಸಬೇಡಿ.

ಮೊಡವೆಗಳಿಗಾಗಿ ಸೇಬಿನ ಬಳಕೆ

ಮೊಡವೆಗಳಿಗಾಗಿ ಸೇಬಿನ ಬಳಕೆ

ಸೇಬಿನಲ್ಲಿ ಅಲ್ಪ ಪ್ರಮಾಣದಲ್ಲಿ ನೈಸರ್ಗಿಕ ಸ್ಯಾಲಿಸಿಲಿಕ್ ಆಮ್ಲವಿದೆ. ಈ ಆಮ್ಲ ಮೊಡವೆಗಳನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಹಾಗೂ ಮೊಡವೆ ಕಲೆಯಿಲ್ಲದಂತೆ ಮಾಗಿಸುವಲ್ಲಿ ನೆರವಾಗುತ್ತದೆ. ಅಲ್ಲದೇ ಒಂದು ವೇಳೆ ಮೊಡವೆ ಒಡೆದಿದ್ದರೂ ಈ ವಿಧಾನದಿಂದ ತ್ವಚೆ ಮೊದಲಿನ ಕಳೆಯನ್ನು ಪಡೆಯುತ್ತದೆ ಹಾಗೂ ಕಲೆಯೂ ಉಳಿಯುವುದಿಲ್ಲ.

ಅಗತ್ಯವಿರುವ ಸಾಮಾಗ್ರಿಗಳು:

ಒಂದು ಸೇಬು

ಒಂದು ಚಿಕ್ಕ ಚಮಚ ಜೇನು

½ ಚಿಕ್ಕ ಚಮಚ ಲಿಂಬೆ ರಸ

ವಿಧಾನ:

1) ಮೊದಲು ಇಡಿಯ ಸೇಬುಹಣ್ಣನ್ನು ಮಿಕ್ಸಿಯಲ್ಲಿ ಅರೆದು ಹಿಂಡಿ ರಸ ಸಂಗ್ರಹಿಸಿ.

2) ಈ ರಸಕ್ಕೆ ಜೇನು ಮತ್ತು ಲಿಂಬೆರಸ ಬೆರೆಸಿ ಮಿಶ್ರಣ ಮಾಡಿ

3) ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ತೆಳುವಾಗಿ ಹಚ್ಚಿ ಇಪ್ಪತ್ತು ನಿಮಿಷ ಒಣಗಲು ಬಿಡಿ.

4) ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದು ಒರೆಸಿಕೊಳ್ಳಿ, ಸೋಪು ಉಪಯೋಗಿಸಬೇಡಿ.

5) ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸಿ.

ಒಣಚರ್ಮಕ್ಕಾಗಿ ಸೇಬಿನ ಆರೈಕೆ

ಒಣಚರ್ಮಕ್ಕಾಗಿ ಸೇಬಿನ ಆರೈಕೆ

ಸೇಬು ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ವಿಶೇಷವಾಗಿ ಒಣಚರ್ಮದವರಿಗೆ ನೈಸರ್ಗಿಕ ಆರ್ದ್ರತೆನೀಡುವ ಮೂಲಕ ಹೆಚ್ಚಿನ ಆರೈಕೆ ಒದಗಿಸುತ್ತದೆ. ಈ ಮುಖಲೇಪದ ಬಳಕೆಯಿಂದ ಒಣಚರ್ಮಕ್ಕೂ ಆರ್ದ್ರತೆ ಹಾಗೂ ಆರೈಕೆ ದೊರಕುವ ಮೂಲಕ ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆ ಪಡೆಯಬಹುದು.

ಅಗತ್ಯವಿರುವ ಸಾಮಾಗ್ರಿಗಳು:

½ ಸೇಬುಹಣ್ಣು

ಒಂದು ಚಿಕ್ಕ ಚಮಚ ಪುಡಿಮಾಡಿದ ಓಟ್ಸ್ ರವೆ

ಒಂದು ಚಿಕ್ಕ ಚಮಚ ಜೇನು

1 ಮೊಟ್ಟೆಯ ಬಿಳಿಭಾಗ

ವಿಧಾನ:

1) ಮೊದಲು ಸೇಬನ್ನು ಚಿಕ್ಕದಾಗಿ ತುರಿಯಿರಿ.

2) ಇದಕ್ಕೆ ಓಟ್ಸ್ ರವೆ ಪುಡಿ, ಜೇನು ಮತ್ತು ಮೊಟ್ಟೆಯ ಬಿಳಿಭಾಗ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ

3) ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಒಣತ್ವಚೆಯ ಮೇಲೆ ಹಚ್ಚಿ ಹತ್ತು ನಿಮಿಷ ಒಣಗಲು ಬಿಡಿ.

4) ಬಳಿಕ ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ, ಸೋಪು ಉಪಯೋಗಿಸಬೇಡಿ.

English summary

What Happens When We Use Apple On Skin

Fruits are a powerhouse of various minerals which can benefit our skin greatly. While all of us are aware of the beauty benefits of oranges, strawberries, banana and papaya, there is one more fruit worth mentioning in this list - Apples. Here are a few amazing ways in which you can use apples to have a great healthy skin:
X
Desktop Bottom Promotion