ಬ್ಯೂಟಿ ಟಿಪ್ಸ್: ತ್ವಚೆಯ ಸೌಂದರ್ಯಕ್ಕೆ ಬೆಣ್ಣೆ ಬಳಸಿ ನೋಡಿ!

By Hemanth
Subscribe to Boldsky

ಚರ್ಮದ ಆರೋಗ್ಯವು ಸರಿಯಾಗಿದ್ದರೆ ಸೌಂದರ್ಯವು ಎದ್ದು ಕಾಣುವುದು. ಇದರಿಂದ ಚರ್ಮದ ಆರೈಕೆ ಮಾಡುವುದು ಅತೀ ಅಗತ್ಯ. ಕೆಲವರ ಚರ್ಮವು ಒಣಗಿ, ನಿಸ್ತೇಜವಾಗಿ ಕಾಣಿಸುವುದು. ಇಂತಹ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಮಾಡದೇ ಇದ್ದರೆ ಆಗ ಸಮಸ್ಯೆಯು ತೀವ್ರವಾಗುವುದು ಮತ್ತು ಚರ್ಮದಲ್ಲಿ ತುರಿಕೆ ಮತ್ತು ಇತರ ಕೆಲವು ಸೋಂಕುಗಳ ಕಾಣಿಸಿಕೊಳ್ಳಬಹುದು. ಚರ್ಮವು ಕಿತ್ತು ಬರುವುದು ಕೂಡ ದೊಡ್ಡ ಸಮಸ್ಯೆಯಾಗುವುದು. ಅದರಲ್ಲೂ ಅದು ಮುಖದ ಮೇಲೆ ಕಾಣಿಸಿಕೊಂಡರೆ ಆಗ ಸೌಂದರ್ಯವು ಹಾಳಾಗಿ ಹೋಗುವುದು. ಮಾಯಿಶ್ಚರೈಸರ್ ಹಚ್ಚಿಕೊಂಡರೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗಬಹುದು. ಆದರೆ ನೀವು ಅಡುಗೆ ಮನೆಯಲ್ಲಿರುವ ಮನೆಮದ್ದನ್ನು ಬಳಸಿಕೊಂಡರೆ ಅದರಿಂದ ಯಾವುದೇ ಅಡ್ಡಪರಿಣಾಮಗಳು ನಿಮ್ಮ ಚರ್ಮದ ಮೇಲೆ ಆಗದು ಮತ್ತು ಚರ್ಮವು ಕಾಂತಿ ಹಾಗೂ ಸುಂದರವಾಗಿ ಕಾಣುವುದು.

butter face masks

ಬೆಣ್ಣೆಯು ಚರ್ಮಕ್ಕೆ ಲಾಭಕಾರಿ ಹೇಗೆ?

ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಎ ಹೊಂದಿರುವಂತಹ ಬೆಣ್ಣೆಯು ನಯ, ಮೊಶ್ಚಿರೈಸ್, ಕಾಂತಿಯುತ ಮತ್ತು ಸುಂದರ ಚರ್ಮ ಪಡೆಯಲು ನೆರವಾಗುವುದು. ಇದರಿಂದ ಫೇಸ್ ಮಾಸ್ಕ್ ನಲ್ಲಿ ಬೆಣ್ಣೆ ಬಳಸಿಕೊಳ್ಳಿ.

ಕಾಂತಿಯುತ ತ್ವಚೆಗೆ ಬೆಣ್ಣೆ ಬಳಸುವ ಮೂರು ವಿಧಾನಗಳು

1) ಬೆಣ್ಣೆ ಮತ್ತು ಬಾಳೆಹಣ್ಣಿನ ಫೇಸ್ ಮಾಸ್ಕ್

ಬೆಣ್ಣೆ ಮತ್ತು ಬಾಳೆಹಣ್ಣಿನ ಮಿಶ್ರಣವು ಮುಖಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಅದರಲ್ಲಿಯೂ ಬಾಳೆಹಣ್ಣು ಶಿಥಿಲಗೊ೦ಡಿರುವ ತ್ವಚೆಯನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ಹಾಗೂ ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನೆರವಾಗುತ್ತದೆ. ಬಾಳೆಹಣ್ಣುಗಳು ಒ೦ದು ಉತ್ತಮ ಊಟಕ್ಕೆ ಸರಿಸಮಾನವಾಗಿರುವುದರೊ೦ದಿಗೆ, ಅವು ನಿಮ್ಮ ತ್ವಚೆಯ ಪಾಲಿಗೂ ಕೂಡಾ ಒ೦ದು ಪರಿಪೂರ್ಣವಾದ ಆಹಾರಕ್ರಮಗಳೇ ಆಗಿವೆ. ಇತರ ನೈಸರ್ಗಿಕ ಉತ್ಪನ್ನಗಳೊಡನೆ ಬೆರೆಸಿದಲ್ಲಿ, ಬಾಳೆಹಣ್ಣುಗಳು ಅತ್ಯುತ್ತಮ ಫೇಸ್ ಪ್ಯಾಕ್ ಗಳ ರೂಪದಲ್ಲಿ ಪ್ರಯೋಜನಕಾರಿಯಾಗುತ್ತವೆ. ಅವು ತ್ವಚೆಯ ತೇವಾ೦ಶ ನಷ್ಟವನ್ನು ತಡೆಹಿಡಿದು, ತ್ವಚೆಯನ್ನು ಜಲಪೂರಣವಾಗಿರಿಸುತ್ತವೆ.

ಬೇಕಾಗುವ ಸಾಮಗ್ರಿಗಳು

 • 1 ಹಣ್ಣಾದ ಬಾಳೆಹಣ್ಣು
 • 1 ಚಮಚ ಉಪ್ಪುಬೆರೆಸದ ಬೆಣ್ಣೆ

ತಯಾರಿಸುವ ವಿಧಾನ?

ಹಣ್ಣಾಗಿರುವ ಬಾಳೆಹಣ್ಣು ತೆಗೆದುಕೊಳ್ಳಿ ಮತ್ತು ಅದನ್ನು ಹಿಚುಕಿಕೊಂಡು ಪೇಸ್ಟ್ ಮಾಡಿ. ಇದನ್ನು ಮಿಕ್ಸಿಗೆ ಹಾಕಿಕೊಂಡು ಪೇಸ್ಟ್ ಮಾಡಬಹುದು. ಇದನ್ನು ಬೆಣ್ಣೆ ಜತೆಗೆ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

ಬಳಸುವ ವಿಧಾನ

ಇದನ್ನು ತುಂಬಾ ಸರಳವಾಗಿ ಹಚ್ಚಿಕೊಳ್ಳಬಹುದು. ಇದನ್ನು ತುಂಬಾ ನಯವಾಗಿರುವ ಬ್ರಷ್ ತೆಗೆದುಕೊಂಡು ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಇದನ್ನು ಚರ್ಮವು ಹೀರಿಕೊಳ್ಳಲು ಬಿಡಿ. 15 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ. ಒಣಗಲು ಬಿಡಿ ಮತ್ತು ಮೊಶ್ಚಿರೈಸರ್ ಹಚ್ಚಿಕೊಳ್ಳಿ. ವಾರದಲ್ಲಿ ಒಂದು ಸಲ ಬಳಸಿಕೊಂಡರೆ ಒಳ್ಳೆಯ ಫಲಿತಾಂಶ ಪಡೆಯಬಹುದು.

2. ಸೌತೆಕಾಯಿ ಮತ್ತು ಬೆಣ್ಣೆಯ ಫೇಸ್ ಮಾಸ್ಕ್

ತ್ವಚೆಯಲ್ಲಿ ಕಿರಿಕಿರಿ, ಕೆಂಪಾಗುವುದು ಅಥವಾ ಅಲರ್ಜಿ ಇದ್ದರೆ ಇದು ಒಳ್ಳೆಯ ರೀತಿ ಕೆಲಸ ಮಾಡುವುದು. ಇನ್ನು ಸೌತೆಕಾಯಿ ಬಗ್ಗೆ ಹೇಳುವುದಾದರೆ, ಹೆಚ್ಚಿನವರು ಇದು ನಿಮ್ಮ ದೇಹದ ಆರೋಗ್ಯಕ್ಕೆ ಮಾತ್ರ ಉಪಯೋಗಿಯೆಂದು ಹಲವರು ತಿಳಿದಿದ್ದಾರೆ. ಆದರೆ ಅದರಿಂದ ಮುಖದ ತ್ವಚೆಯ ಅಂದವನ್ನು ಹೆಚ್ಚಿಸಲೂ ಸಹ ಬಳಸುತ್ತಾರೆಂದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಬೇಕಾಗುವ ಸಾಮಗ್ರಿಗಳು

 • ½ ಸೌತೆಕಾಯಿ
 • 1 ಚಮಚ ಉಪ್ಪುರಹಿತ ಬೆಣ್ಣೆ

ತಯಾರಿಸುವ ವಿಧಾನ

ಸೌತೆಕಾಯಿ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ರುಬ್ಬಿಕೊಂಡು ರಸ ತೆಗೆಯಿರಿ. ಇದಕ್ಕೆ ಉಪ್ಪುರಹಿತ ಬೆಣ್ಣೆ ಹಾಕಿ ಮತ್ತು ಪೇಸ್ಟ್ ಮಾಡಲು ಸರಿಯಾಗಿ ಮಿಶ್ರಣ ಮಾಡಿ.

ಬಳಸುವ ವಿಧಾನ

ಒಂದು ಶುದ್ಧ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ಸೌತೆಕಾಯಿ ಜ್ಯೂಸ್ ಮತ್ತು ಒಂದು ಚಮಚ ಬೆಣ್ಣೆ ಹಾಕಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ. 20 ನಿಮಿಷ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ನಯ, ಬಿಗಿ ಮತ್ತು ಕಾಂತಿಯುತ ಚರ್ಮಕ್ಕಾಗಿ ವಾರದಲ್ಲಿ 2-3 ಸಲ ಇದನ್ನು ಬಳಸಿಕೊಳ್ಳಿ.

3. ರೋಸ್ ವಾಟರ್ ಮತ್ತು ಬೆಣ್ಣೆಯ ಫೇಸ್ ಮಾಸ್ಕ್

ಚರ್ಮವು ನಿಸ್ತೇಜವಾಗಿದ್ದರೆ ಆಗ ನೀವು ಈ ಫೇಸ್ ಮಾಸ್ಕ್ ನ್ನು ಬಳಸಿಕೊಳ್ಳಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು. ರೋಸ್ ವಾಟರ್ ಹಾಕಿಕೊಂಡರೆ ಚರ್ಮವು ತೇವಾಂಶದಿಂದ ಇರುವುದು ಮತ್ತು ಮೊಶ್ಚಿರೈಸ್ ಆಗಿರುವುದು.

ಬೇಕಾಗುವ ಸಾಮಗ್ರಿಗಳು

 • 1 ಚಮಚ ರೋಸ್ ವಾಟರ್
 • 1 ಚಮಚ ಉಪ್ಪುರಹಿತ ಬೆಣ್ಣೆ

ತಯಾರಿಸುವ ವಿಧಾನ

ರೋಸ್ ವಾಟರ್ ಮತ್ತು ಉಪ್ಪುರಹಿತ ಬೆಣ್ಣೆಯನ್ನು ಒಂದು ಶುದ್ಧವಾಗಿರುವ ಸಣ್ಣ ಪಾತ್ರೆಗೆ ಹಾಕಿಕೊಂಡು ಮಾಸ್ಕ್ ತಯಾರಿಸಿಕೊಳ್ಳಿ. ಗುಲಾಬಿ ದಳಗಳನ್ನು ಹಾಕಿಕೊಂಡು ರೋಸ್ ವಾಟರ್ ತಯಾರಿಸಬಹುದು. ಇಲ್ಲವಾದಲ್ಲಿ ನೀವು ರೆಡಿಮೇಡ್ ರೋಸ್ ವಾಟರ್ ಬಳಸಿ. ಇನ್ನು ರೋಸ್ ವಾಟರ್ ಬಗ್ಗೆ ಹೇಳುವುದಾದರೆ ಮುಖ ಸೌಂದರ್ಯ ವರ್ಧಿಸಲು ಹಾಗೂ ತ್ವಚೆಯ ಆರೈಕೆಯ ಹಲವಾರು ಬಗೆಯ ಸೌಂದರ್ಯ ವರ್ಧಕಗಳಲ್ಲಿ ರೋಸ್ ವಾಟರ್ ಯಾನೆ ಗುಲಾಬಿ ನೀರನ್ನು ಬಳಸುತ್ತಾರೆ. ಕೆಲವೊಂದು ಥೆರಪಿ ಹಾಗೂ ಸ್ಪಾಗಳಲ್ಲಿ ಇದನ್ನು ಬಳಸುತ್ತಾರೆ. ಇದು ತುಂಬಾ ಅಗ್ಗದ ದರ ಹಾಗೂ ಸುಲಭವಾಗಿ ಸಿಕ್ಕಿದರೂ ಇದರ ಗುಣಗಳನ್ನು ಕಡೆಗಣಿಸಲಾಗಿದೆ. ಇದನ್ನು ಕೇವಲ ಸೌಂದರ್ಯ ವರ್ಧಕಗಳಲ್ಲಿ ಮಾತ್ರವಲ್ಲದೆ, ಇಂದು ಅಡುಗೆ ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ರೋಸ್ ವಾಟರ್ ನ ಸುವಾಸನೆ ನಮ್ಮ ಮನಸ್ಸನ್ನು ಖುಷಿಪಡಿಸುತ್ತದೆ. ಅಲ್ಲದೇ ಮುಖದ ಮೇಲಿನ ಕಲೆಗಳನ್ನು ನಿವಾರಿಸಲು ಹಾಗೂ ಮೊಡವೆಗಳನ್ನು ದೂರ ಓಡಿಸಲು ಫೇಸ್ ಪ್ಯಾಕ್‌ನ ಪೌಡರ್ ಜತೆಗೆ ರೋಸ್ ವಾಟರ್ ನ್ನು ಸೇರಿಸಿ ಹಚ್ಚಬೇಕು. ಅದರಲ್ಲೂ ಮಳೆಗಾಲದಲ್ಲಿ ಫೇಸ್ ಪ್ಯಾಕ್ ನೊಂದಿಗೆ ಇದನ್ನು ಬಳಕೆ ಮಾಡಿದಾಗ ಇದು ತುಂಬಾ ನೆರವಾಗುತ್ತದೆ.

ಬಳಸುವ ವಿಧಾನ

ಒಂದು ಹತ್ತಿ ಉಂಡೆ ಬಳಸಿಕೊಂಡು ಅದನ್ನು ರೋಸ್ ವಾಟರ್ ಮತ್ತು ಬೆಣ್ಣೆಯ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಇದನ್ನು ಶುಚಿಗೊಳಿಸಿದ ಮುಖ ಹಾಗೂ ಕುತ್ತಿಗೆ ಮೇಲೆ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಲಿಕ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆದು ಒರೆಸಿಕೊಳ್ಳಿ. ಮೊಶ್ಚಿರೈಸರ್ ಹಚ್ಚಿಕೊಂಡು ಸ್ವಲ್ಪ ಮಸಾಜ್ ಮಾಡಿ. ಮಲಗುವ ಮೊದಲು ವಾರದಲ್ಲಿ 3-4 ಸಲ ಹೀಗೆ ಮಾಡಿಕೊಳ್ಳಿ.

ನಿಮಗೆ ಮೇಲಿನ ಮನೆಮದ್ದುಗಳು ಪ್ರಯೋಜನಕಾರಿ ಎಂದು ಅನಿಸಿದರೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ. ಸೌಂದರ್ಯದ ಟಿಪ್ಸ್ ಗಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ನಮ್ಮನ್ನು ಫಾಲೋ ಮಾಡಿ.

For Quick Alerts
ALLOW NOTIFICATIONS
For Daily Alerts

  English summary

  Ways To Use Butter For Glowing Skin

  Peeling skin often makes us worry especially when it appears on face.To some extent applying your regular moiturisers can stop this dry skin from face. But what if you have a better solution to this just in your own kitchen? Butter can help you in solving this issue of dry skin. Try these to get a glowing skin at home.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more