For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಕಲ್ಲಂಗಡಿ ಫೇಶಿಯಲ್ ಮಾಡಿಕೊಂಡು ಬಳಸಿ

|

ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾದರೆ ಫೇಶಿಯಲ್, ಸ್ಕ್ರಬ್ ಇತ್ಯಾದಿಗಳನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಫೇಶಿಯಲ್ ಗಳು ಅದರ ದರಕ್ಕೆ ಅನುಗುಣವಾಗಿ ಒಳ್ಳೆಯ ಗುಣಮಟ್ಟದ್ದಾಗಿರುವುದು. ಆದರೆ ತಿಂಗಳಿಗೆ ಒಮ್ಮೆಯಾದರೂ ಹಣ್ಣುಗಳ ಫೇಶಿಯಲ್ ಮಾಡಿಕೊಂಡರೆ ಅದರಿಂದ ಮೊಡವೆ, ಬೊಕ್ಕೆ, ಕಪ್ಪು ಕಲೆಗಳು, ಬಿಸಿಲಿನಿಂದ ಆಗಿರುವ ಕಲೆ ಇತ್ಯಾದಿಗಳು ನಿವಾರಣೆಯಾಗುವುದು.

Watermelon

ಫೇಶಿಯಲ್ ನಿಂದ ರಕ್ತಸಂಚಾರವು ಉತ್ತಮವಾಗಿ ಅದರಿಂದ ಮುಖದ ಸ್ನಾಯುಗಳು ಆರಾಮವಾಗಿರಲು ನೆರವಾಗುವುದು. ಈ ಲೇಖನದಲ್ಲಿ ನಾವು ನಿಮಗೆ ಕಲ್ಲಂಗಡಿ ಹಣ್ಣಿನಿಂದ ಮಾಡಬಹುದಾದ ಫೇಶಿಯಲ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಲ್ಲಂಗಡಿ ಹಣ್ಣಿನಲ್ಲಿ ಶೇ. 90ರಷ್ಟು ನೀರಿನಾಂಶವಿದೆ ಮತ್ತು ಇದು ಚರ್ಮದ ನೈಸರ್ಗಿಕ ಮೊಶ್ಚಿರೈಸರ್ ಕಾಪಾಡುವುದು. ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಕಲ್ಲಂಗಡಿ ಹಣ್ಣು ಚರ್ಮಕ್ಕೆ ಪುನರ್ಶ್ಚೇತನ ನೀಡುವುದು ಮತ್ತು ಇದರಿಂದ ವಯಸ್ಸಾಗುವ ಲಕ್ಷಣ ನಿಧಾನವಾಗುವುದು. ಕಲ್ಲಂಗಡಿ ಹಣ್ಣಿನ ಫೇಶಿಯಲ್ ಮಾಡುವುದು ಹೇಗೆ ಎಂದು ನೀವು ತಿಳಿಯುತ್ತಾ ಸಾಗಿ...

ಮೊದಲ ಹಂತ: ಸ್ವಚ್ಛಗೊಳಿಸುವುದು

ಮೊದಲ ಹಂತ: ಸ್ವಚ್ಛಗೊಳಿಸುವುದು

ಫೇಶಿಯಲ್ ನಲ್ಲಿ ಮೊದಲನೇ ಹಂತವೆಂದರೆ ಅದು ಸ್ವಚ್ಛಗೊಳಿಸುವುದು. ಇಲ್ಲಿ ಕಲ್ಲಂಗಡಿ ಜ್ಯೂಸ್ ಮತ್ತು ತೆಂಗಿನೆಣ್ಣೆ ಬಳಸಿಕೊಂಡು ಚರ್ಮವನ್ನು ಸ್ವಚ್ಛಗೊಳಿಸಬೇಕು. ಒಂದು ಪಿಂಗಾಣಿಯಲ್ಲಿ ಎರಡು ಚಮಚ ಕಲ್ಲಂಗಡಿ ಜ್ಯೂಸ್ ಮತ್ತು ಒಂದು ಚಮಚ ತೆಂಗಿನೆಣ್ಣೆ ಹಾಕಿ ಮಿಶ್ರಣ ಮಾಡಿ. ಒಂದು ಹತ್ತಿ ಉಂಡೆ ತೆಗೆದುಕೊಂಡು ಅದನ್ನು ಈ ಮಿಶ್ರಣದಲ್ಲಿ ಅದ್ದಿಕೊಂಡು, ಸಂಪೂರ್ಣ ಮುಖಕ್ಕೆ ಉಜ್ಜಿಕೊಳ್ಳಿ. ಇದರ ಬಳಿಕ ಒಣ ಟವೆಲ್ ಬಳಸಿಕೊಂಡು ಮುಖವನ್ನು ಒರೆಸಿಕೊಳ್ಳಿ ಮತ್ತು ಈ ನಿಮ್ಮ ಚರ್ಮವು ಎರಡನೇ ಹಂತಕ್ಕೆ ತಯಾರಾಗಿದೆ.

Most Read: ಟೂತ್‌ಪೇಸ್ಟ್ ಬಳಸಿ ಕೂಡ ಮೊಡವೆ ಹಾಗೂ ಬ್ಲ್ಯಾಕ್ ಹೆಡ್ಸ್ ನಿವಾರಿಸಬಹುದು!

ಎರಡನೇ ಹಂತ: ಹಬೆಯಾಡಿಸುವುದು(ಸ್ಟೀಮಿಂಗ್)

ಎರಡನೇ ಹಂತ: ಹಬೆಯಾಡಿಸುವುದು(ಸ್ಟೀಮಿಂಗ್)

ಫೇಶಿಯಲ್ ನಲ್ಲಿ ಸ್ಟೀಮಿಂಗ್ ತುಂಬಾ ಮಹತ್ವದ ಘಟ್ಟ. ಇದು ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಮೊಡವೆ ಹಾಗೂ ಬೊಕ್ಕೆಗಳು ಉಂಟು ಮಾಡುವಂತಹ ಕೊಳೆ ಹಾಗೂ ಕಲ್ಮಶವನ್ನು ಹೊರಗೆ ಹಾಕುವುದು. ಇದೇ ವೇಳೆ ಇದು ಚರ್ಮವನ್ನು ಮೃದುವಾಗಿಸುವುದು. ಸ್ಟೀಮರ್ ಬಳಸಿಕೊಂಡು ಸ್ಟೀಮ್ ಮಾಡಬಹುದು ಅಥವಾ ಬಿಸಿ ನೀರು ತೆಗೆದುಕೊಂಡು 2-5 ನಿಮಿಷ ಕಾಲ ಟವೆಲ್ ಮುಚ್ಚಿ ಮುಖಕ್ಕೆ ಅದರ ಆವಿಯನ್ನು ತೆಗೆದುಕೊಳ್ಳಿ.

ಮೂರನೇ ಹಂತ: ಸ್ಕ್ರಬ್

ಮೂರನೇ ಹಂತ: ಸ್ಕ್ರಬ್

ಫೇಶಿಯಲ್ ನ ಮೂರನೇ ಹಂತವು ಸ್ಕ್ರಬ್ ಆಗಿದೆ. ಇದರಿಂದ ಚರ್ಮದ ಸತ್ತ ಕೋಶಗಳನ್ನು ತೆಗೆಯಲು ನೆರವಾಗುವುದು. ಇದರಿಂದ ಆರೋಗ್ಯಕಾರಿ ಹಾಗೂ ಹೊಳೆಯುವ ಚರ್ಮವು ನಿಮ್ಮದಾಗುವುದು. ಇದಕ್ಕಾಗಿ ಕಲ್ಲಂಗಡಿಯ ಸ್ಕ್ರಬ್ ನ್ನು ತಯಾರಿಸಿಕೊಳ್ಳಿ.

ಇದಕ್ಕಾಗಿ ನಿಮಗೆ ಎರಡು ಚಮಚ ಕಲ್ಲಂಗಡಿ ಜ್ಯೂಸ್, 1/2 ಚಮಚ ಅಕ್ಕಿ ಹುಡಿ ಮತ್ತು1/2 ಚಮಚ ಬೇಕಿಂಗ್ ಸೋಡಾ ಬೇಕಾಗಿದೆ. ಎಲ್ಲವನ್ನು ಒಂದು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಕೈಬೆರಳುಗಳನ್ನು ಬಳಸಿಕೊಂಡು ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿಕೊಳ್ಳಿ. 3-5 ನಿಮಿಷ ಕಾಲ ಹೀಗೆ ಮಾಡಿ. ಇದರ ಬಳಿಕ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಸ್ಕ್ರಬ್ ಮಾಡುವುದರಿಂದ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ತೆಗೆದುಹಾಕಲಾಗುತ್ತದೆ.

ನಾಲ್ಕನೇ ಹಂತ: ಮಸಾಜ್

ನಾಲ್ಕನೇ ಹಂತ: ಮಸಾಜ್

ಸ್ಕ್ರಬ್ ಮಾಡಿದ ಬಳಿಕ ಮುಂದಿನ ಹಂತ ಮುಖಕ್ಕೆ ಮಸಾಜ್ ಮಾಡುವುದು. ಮಸಾಜ್ ಮಾಡುವ ಕಾರಣದಿಂದಾಗಿ ರಕ್ತ ಪರಿಚಲನೆಯು ಸುಧಾರಣೆಯಾಗುವುದು. ಇದಕ್ಕಾಗಿ ಒಂದು ಸ್ವಚ್ಛವಾಗಿರುವ ಪಿಂಗಾಣಿಗೆ ಎರಡು ಚಮಚ ಕಲ್ಲಂಗಡಿ ಜ್ಯೂಸ್, 1 ಚಮಚ ಜೇನುತುಪ್ಪ, 1 ಚಮಚ ಲಿಂಬೆರಸ ಮತ್ತು 3-4 ಹನಿ ಬಾದಾಮಿ ಎಣ್ಣೆ ಹಾಕಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ಮೆತ್ತಗೆ ಮಸಾಜ್ ಮಾಡಿ. 5-6 ನಿಮಿಷ ಕಾಲ ಹೀಗೆ ಮಾಡಿ.

ಐದನೇ ಹಂತ: ಫೇಸ್ ಮಾಸ್ಕ್

ಐದನೇ ಹಂತ: ಫೇಸ್ ಮಾಸ್ಕ್

ಕಲ್ಲಂಗಡಿ ಹಣ್ಣಿನ ಫೇಶಿಯಲ್ ನ ಅಂತಿಮ ಹಂತ ಇದಾಗಿದೆ. ಮೊದಲನೇಯದಾಗಿ ಕಲ್ಲಂಗಡಿ ಹಣ್ಣಿನ ತಿರುಳನ್ನು ಹಿಚುಕಿಕೊಳ್ಳಿ. ಇದರ ಎರಡು ಚಮಚವನ್ನು ಪಿಂಗಾಣಿಗೆ ಹಾಕಿ. ಇದಕ್ಕೆ ಒಂದು ಚಮಚ ಕಡಲೆಹಿಟ್ಟು ಮತ್ತು 1 ಚಮಚ ತಣ್ಣಗಿನ ಹಾಲು ಹಾಕಿ. ಎಲ್ಲವನ್ನು ಜತೆಯಾಗಿ ರುಬ್ಬಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಒಣಗಲು ಬಿಡಿ. 20 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

English summary

Watermelon Facial At Home For Glowing Skin

Watermelon helps in treating most of your skin issues, such as fading away dark spot, blemishes, skin tan, etc. Watermelon has about 90% of water that helps in retaining the natural moisture of the skin. Being a rich source of antioxidants, watermelon helps in rejuvenating the skin and thus slowing down the process of ageing.
X
Desktop Bottom Promotion